Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಬ್ಯೂಟಿಫುಲ್ ಕ್ಲಿಯೋಪಾತ್ರಳಂತೆ ನೀವು ಕಂಗೊಳಿಸಬೇಕಾ?
ಆಕೆಯಂತೆ ನಾನೂ ಕಾಣಬೇಕು ಅಂತ ಎಷ್ಟೊ ಜನ ಯಾರನ್ನೋ ನೋಡಿ ಅಂದುಕೊಳ್ಳೋದಿದೆ. ಆಕೆಯಂತೆ ಕಾಣಲು ನಾನೇನು ಮಾಡಬೇಕು ಅಂತ ಕೆಲವರು ಇನ್ಯಾರನ್ನೋ ನೋಡಿ ಲೆಕ್ಕಾಚಾರ ಹಾಕ್ತಾರೆ.. ಅದರಲ್ಲೂ ಬ್ಯೂಟಿ ಹೆಸರಿನಲ್ಲಿ ಪಾಪುಲರ್ ಆದವರನ್ನು ಕಾಪಿ ಮಾಡೋದು ಸರ್ವೇಸಾಮಾನ್ಯ. ಈಗಿನ ಕಾಲದಲ್ಲಿ ಹಿರೋಯಿನ್ಸ್ ಗಳನ್ನು ಫಾಲೋ ಮಾಡೋ ಅದೆಷ್ಟೋ ಅಭಿಮಾನಿಗಳಿದ್ದಾರೆ. ತನ್ನ ಇಷ್ಟದ ಹೀರೋಯಿನ್ ಯಾವ ರೀತಿಯ ಡ್ರೆಸ್ ಮಾಡ್ತಾರೆ, ಅವರೆಂತ ಮೇಕಪ್ ಮಾಡ್ಕೊಂಡಿದ್ದಾರೆ, ಆಕೆಯ ಜ್ಯುವೆಲರಿ ಹೇಗಿದೆ ಅಂತ ಫಾಲೋ ಮಾಡೋ ಮಂದಿಗೇನು ಕಡಿಮೆ ಇಲ್ಲ. ಆದ್ರೆ ಹಿಂದೆಲ್ಲ ರಾಣಿಯರು ಇಂತಹ ಟ್ರೆಂಡ್ ಉಳಿಸಿಕೊಂಡಿದ್ರು. ರಾಣಿಯರು ಮಾಡಿಕೊಳ್ಳುವ ಮೇಕಪ್, ಅವರ ಸ್ಟೈಲ್ ಜನಮಾನಸದಲ್ಲಿ ಉಳಿದು ಬಿಡುತ್ತಾ ಇತ್ತು.
ಕ್ಲಿಯೋಪಾತ್ರ.. ಈ ಹೆಸರನ್ನು ಎಷ್ಟು ಮಂದಿ ಕೇಳಿದ್ದೀರೋ ಗೊತ್ತಿಲ್ಲ.. ಇತಿಹಾಸ ಓದಿದವ್ರಿಗೆ ಈ ಹೆಸರಿನ ಪರಿಚಯವಿರುತ್ತೆ. ಈಕೆ ಈಜಿಪ್ಟ್ ದೇಶದ ರಾಣಿ. ಸೌಂದರ್ಯ ರಾಶಿ ಹೊದ್ದು ಬಂದಿದ್ದಾಳೆ ಅಂತಲೇ ಜನ ಈಕೆಯನ್ನು ಪರಿಗಣಿಸಿದ್ದರು..ಈಕೆಯ ಜಮಾನದಲ್ಲಿ ಇಡೀ ವಿಶ್ವದಲ್ಲಿ ಈಕೆಯಷ್ಟು ಸುಂದರವಾಗಿರುವವರು ಮತ್ತೊಬ್ಬರಿಲ್ಲ ಅನ್ನೋದು ಈಜಿಪ್ಟಿಯನ್ನರ ನಂಬಿಕೆಯಾಗಿತ್ತು.ಕೇವಲ ಸೌಂದರ್ಯದಿಂದಷ್ಟೇ ಅಲ್ಲ. ಈಕೆ ಆಗಿನ ಕಾಲದಲ್ಲಿ ತನ್ನ ಮೇಕಪ್ ನಿಂದ ಎಲ್ಲರನ್ನು ಸೆಳೆದಿದ್ದವಳು.

ಈಕೆಯ ಮೇಕಪ್ ಇಂದಿಗೂ ಜನಜನಿತ. ಹಾಗಾದ್ರೆ ಕ್ಲಿಯೋಪಾತ್ರಳಂತೆ ಕಾಣಲು ನೀವು ಹೇಗೆ ಮೇಕಪ್ ಅಪ್ ಮಾಡ್ಕೊಬೇಕು ಅನ್ನೋದನ್ನು ನಾವ್ ಹೇಳ್ತೀವಿ .. ಎಲ್ಲಕ್ಕೂ ಮೊದಲು ಮಾಡ್ಬೇಕಾಗಿರುವ ಕೆಲಸ ಮುಖವನ್ನು ಕೈಯಿಂದ ಕ್ಲೀನ್ ಮಾಡೋದು. ಮುಖ ಕ್ಲೀನ್ ಆದ ನಂತ್ರ ಎಲ್ಲಕ್ಕೂ ಮೊದಲಿಗೆ ಡಾರ್ಕ್ ಸರ್ಕಲ್ ಕವರ್ ಮಾಡ್ಬೇಕು. ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲಕ್ಕೆ ಕ್ರೀಮ್ ಅಪ್ಲೈ ಮಾಡಿ.. ಸ್ಕಿನ್ ಟೋನ್‌ಗೆ ತಕ್ಕಂತೆ ಕೆನ್ನೆಯಿಂದ ಮೇಕಪ್ ಆರಂಭಿಸಿ. ಅಪಾಯಕ್ಕೆ ಆಹ್ವಾನ ನೀಡುವ ನಿಮ್ಮ ಮೇಕಪ್ ಕಿಟ್ ಬಗ್ಗೆ ಎಚ್ಚರ
*ಮೊದಲು ಕೆನ್ನೆಗೆ ಕ್ರೀಮ್ ಅಪ್ಲೈ ಮಾಡಿ ಸ್ಕಿನ್ ಟೋನ್ ಮ್ಯಾಚ್ ಆಗುವಂತೆ ನೋಡಿಕೊಳ್ಳಿ. ತದನಂತರ ಗಲ್ಲ, ಹಣೆಗೆ ಕ್ರೀಮ್ ಅಪ್ಲೈ ಮಾಡಿ. ನಂತ್ರ ಚೀಕ್ ಸ್ವಲ್ಪ ರೆಡ್ಡಿಶ್ ಟೋನ್ ಆಗುವಂತೆ ನೋಡಿಕೊಳ್ಳಿ. ನಿಮ್ಮಲ್ಲಿರುವ ಮೇಕಪ್ ಮೆಟಿರಿಯಲ್ ನಲ್ಲಿ ಚೀಕ್ ರೋಸ್ ಹೊರತು ಪಡಿಸಿ ಯಾವ ಕ್ರೀಮ್ ಹೆಚ್ಚು ರೆಡ್ಡಿಶ್ ಲುಕ್ ನೀಡಲು ಸಾಧ್ಯವೋ ಅದ್ರಿಂದ ಸ್ವಲ್ಪ ಕೆನ್ನೆಯನ್ನು ಕೆಂಬಣ್ಣಕ್ಕೆ ಮಾಡ್ಕೊಳ್ಳಿ. ಕಣ್ಣಿನ ಮೇಲ್ಭಾಗಕ್ಕೆ ವೈಟಿಶ್ ಶೇಡ್‌ನ ಹೈಲೆಟ್‌ನಿಂದ ಡಾರ್ಕ್ ಸರ್ಕಲ್ ಕವರ್ ಮಾಡಿ.. ಕ್ಲಿಯೋಪಾತ್ರ ಮೇಕಪ್ಪಿನ ಮುಖ್ಯ ಅಂಶ ಅಂದ್ರೆ ಕಣ್ಣಿನ ಮೇಕಪ್... ಕಣ್ಣಿನ ಮೇಲ್ಭಾಗಕ್ಕೆ ಗೋಲ್ಡನ್ ಶೇಡಿನ ಐಶಾಡೋ ಅಪ್ಲೈ ಮಾಡಿ. ಕ್ಲಿಯೋಪಾತ್ರಳಂತೆ ಕಾಣಲು ಚಿನ್ನದ ಬಣ್ಣದ ಐ ಶಾಡೋ ಹೈಲೆಟ್ ಆಗೋದು..ಬ್ರಷ್ನಿಂದ ಅಪ್ಲೈ ಮಾಡಿದ ನಂತ್ರ ಸ್ವಲ್ಪ ಕೈಬೆರಳಿನಿಂದ ಐಶಾಡೋ ಶೇಪ್ ಅಡ್ಜೆಸ್ಟ್ ಮಾಡಿಕೊಳ್ಳಿ.
*ಇನ್ನು ಐಶಾಡೋ ಆದ ನಂತ್ರ ಕಾಜಲ್ ಹಚ್ಚುವ ಸಮಯ ಕಣ್ಣಿನ ಮೇಲ್ಭಾಗಕ್ಕೆ ಮೊದಲು ಕಾಜಲ್ ಹಚ್ಚಿ.. ನಂತ್ರ ಐ ಲೈನರ್ ಬಳಸಿ ಚೂಪಾದ ಶೇಪಿನಂತೆ ಕಣ್ಣಿನ ಅಲಂಕಾರ ಮಾಡ್ಬೇಕು. ಐ ಲೈನರ್ ಶೇಪ್ ಚೂಪಾಗಿ ಇರಬೇಕು ಅಂತ ರೂಲ್ಸ್ ಇದೆ. ಯಾಕಂದ್ರೆ ಆಕೆ ಕಣ್ಣಿನ ಮೇಕಪ್ಪಿನಲ್ಲಿ ಈ ವಿಚಿತ್ರ ಚೂಪಾಗಿ ಹಚ್ಚಿಕೊಳ್ಳುವ ಕಾಜಲ್ ನಿಂದಲೇ ಫೇಮಸ್ ಆದವಳು..ಈಗಲೂ ರೆಟ್ರೋ ಲುಕ್ ನಲ್ಲಿ ಇದು ಫೇಮಸ್ ಅನ್ನಿಸಿದೆ. ನಂತ್ರ ಕಣ್ಣಿನ ಕೆಳಭಾಗಕ್ಕೂ ಕಾಜಲ್ ಅಪ್ಲೈ ಮಾಡಿ. ಮೈನಡುಗಿಸುವ ಮೇಕಪ್ ಹಿಂದಿರುವ ಕರಾಳ ಸತ್ಯ!
*ರೆಪ್ಪೆಗಳಿಗೆ ಮಸ್ಕರಾ ಅಪ್ಲೈ ಮಾಡಿ, ಹಾಗೂ ಐಬ್ರೂಗೊಂದು ಶೇಪ್ ನೀಡಿ.. ನಂತ್ರ ಸ್ವಲ್ಪ ಮೋಸ ಮಾಡುವ ಕೆಲ್ಸ. ಅಂದ್ರೆ ಕಣ್ಣಿನ ರೆಪ್ಪೆಗಳಿಗೆ ಆರ್ಟಿಫಿಶಿಯಲ್ ರೆಪ್ಪೆಗಳನ್ನು ಸೇರಿಸಿ ಅಡ್ಜೆಸ್ಟ್ ಮಾಡಿ.
ಲಾಸ್ಟ್ ಬಟ್ ನಾಟ್ ಲೀಸ್ಟ್.. ಲಿಪ್‌ಸ್ಟಿಕ್ ಅಪ್ಲೈ ಮಾಡಿ. ನಿಮಗಿಷ್ಟವಾದ ಲಿಪ್ ಸ್ಟಿಕ್ ಅಪ್ಲೈ ಮಾಡಬಹುದಾದ್ರೂ ರೆಡ್ ಲಿಪ್ ಸ್ಟಿಕ್ ಹೆಚ್ಚು ಸೂಕ್ತವೆನಿಸುತ್ತೆ. ಟ್ರೈ ಮಾಡಿ ನೋಡಿ.. ಇಷ್ಟು ಮಾಡಿಕೊಂಡ್ರೆ ಕ್ಲಿಯೋಪಾತ್ರ ಮೇಕಪ್ ರೆಡಿ. ಕ್ಯೂಟ್ ಎಂಡ್ ಬ್ಯೂಟಿಫುಲ್ ಅನ್ನಿಸೋ ಮೇಕಪ್ ಇದು.. ಪಾರ್ಟಿಗೆ ಸ್ಯೂಟ್ ಆಗುತ್ತೆ. ಫ್ಯಾಷನ್ ಶೋಗಳಿಗೆ ಮ್ಯಾಚ್ ಆಗುವ ಮೇಕಪ್ ಇದು...



Click it and Unblock the Notifications


