ಮುಖದಲ್ಲಿ ಮೊಡವೆಯೇ? ಹಾಗಾದರೆ ಮೇಕಪ್ ಹೀಗಿರಲಿ

By Manu

ಶುಭ ಸಮಾರಂಭಗಳಿಗೆ ಮೇಕಪ್ ಮಾಡಿಕೊಳ್ಳುವುದು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮೇಕಪ್ ನಿಮ್ಮ ಸೌಂದರ್ಯವನ್ನು ಇನ್ನಷ್ಟು ವೃದ್ಧಿಸುವಂತೆ ಮಾಡುತ್ತದೆ. ಆದರೆ ಜಿಡ್ಡಿನ ಮುಖ ಇರುವವರಿಗೆ ಈ ಮೇಕಪ್ ಇನ್ನಿಲ್ಲದ ಸಮಸ್ಯೆಯನ್ನು ಉಂಟುಮಾಡುತ್ತದೆ. ನಿಮ್ಮ ತೈಲ ಗ್ರಂಥಿಗಳಲ್ಲಿ ಮೆದೋಗ್ರಂಥಿಗಳ ಸ್ರಾವ ನಿರ್ಮಾಣದಿಂದ ಮೊಡವೆ ಉತ್ಪತ್ತಿಯಾಗುತ್ತದೆ. ಮೇಕಪ್ ಹಚ್ಚಿಕೊಳ್ಳುವುದು ನಿಮ್ಮ ರಂಧ್ರಗಳನ್ನು ಅಡ್ಡಿಪಡಿಸಿ ಪರಿಸ್ಥಿತಿಯನ್ನು ಇನ್ನಷ್ಟು ಕಳಪೆ ಮಾಡುತ್ತದೆ. ಹಣೆಯ ಮೇಲಿನ ಮೊಡವೆಗೆ ಪವರ್ ಫುಲ್ ಮನೆಮದ್ದು

ಇಂತ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇ? ಅಥವಾ ಮೊಡವೆ ಮುಖ ಇರುವವರು ಮೇಕಪ್ ಮಾಡಿಕೊಳ್ಳಲೇಬಾರದೇ ಎಂಬ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಬಹುದು. ಅದಕ್ಕೆಂದೇ ಪರಿಹಾರಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ನಿಮ್ಮ ಮೇಕಪ್ ಉತ್ಪನ್ನಗಳನ್ನು ಆರಿಸುವಾಗ ಕೊಂಚ ಜಾಗ್ರತೆ ವಹಿಸಿದರೆ ಸಾಕು ನೀವು ಅಂದವಾದ ಸೌಂದರ್ಯವನ್ನು ಪಡೆದುಕೊಳ್ಳಬಹುದಾಗಿದೆ. ಮೊಡವೆಯು ಒಡೆದರೆ ಆತಂಕ ಪಡಬೇಡಿ, ಈ ವಿಧಾನ ಅನುಸರಿಸಿ

ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಮೊಡವೆ ರಹಿತ ತ್ವಚೆ ಇದ್ದರೂ ಮೇಕಪ್ ಮಾಡಿಕೊಳ್ಳಬಹುದಾಗಿದೆ.ಅಂತೆಯೇ ಯಾವುದೇ ಸಮಾರಂಭದಲ್ಲಿ ಕೂಡ ನೀವು ಸೌಂದರ್ಯವತಿಯಾಗಿ ಕಂಗೊಳಿಸುತ್ತೀರಿ. ನಿಜಕ್ಕೂ ಇಲ್ಲಿ ನಾವು ನೀಡಿರುವ ಸಲಹೆಗಳು ಪ್ರಯೋಜನಕಾರಿ ಎಂದೆನಿಸಿದ್ದು ನಿಮ್ಮ ಈ ಸಮಸ್ಯೆಗೆ ಉತ್ತಮ ಪರಿಹಾರವನ್ನು ನೀಡುವಂತಿದೆ. ಬನ್ನಿ ಅದೇನು ಎಂಬುದನ್ನು ನೋಡೋಣ....

ಕ್ಲೀನ್ ಬ್ರಶ್‎ಗಳ ಬಳಕೆ

ಕ್ಲೀನ್ ಬ್ರಶ್‎ಗಳ ಬಳಕೆ

ಕೈಗಳನ್ನು ಬಳಸುವುದು ಬ್ಯಾಕ್ಟೀರಿಯಾಗಳನ್ನು ಬೆಳೆಸಬಹುದು ಮತ್ತು ಇನ್ನಷ್ಟು ಜಿಡ್ಡನ್ನು ಉಂಟುಮಾಡಬಹುದು. ಯಾವಾಗಲೂ ಕ್ಲೀನ್ ಬ್ರಶ್‎ಗಳನ್ನು ಬಳಸಿ ಮತ್ತು ಸ್ಪಾಂಜ್‎ಗಳನ್ನು ಉಪಯೋಗಿಸಿ ಮೇಕಪ್ ಹಚ್ಚಿಕೊಳ್ಳಿ. ಈ ಉತ್ಪನ್ನಗಳು ಚೆನ್ನಾಗಿ ತ್ವಚೆಗೆ ಹೊಂದಿಕೆಯಾಗಿ ಮೊಡವೆಗಳನ್ನು ಉಂಟುಮಾಡುವುದಿಲ್ಲ ಅಂತೆಯೇ ರಂಧ್ರಗಳಿಗೆ ಅಡ್ಡಿಪಡಿಸುವುದಿಲ್ಲ.

ನಿಮ್ಮ ಬ್ರಶ್‎ಗಳನ್ನು ಯಾವಾಗಲೂ ಸ್ವಚ್ಛವಾಗಿಡಿ

ನಿಮ್ಮ ಬ್ರಶ್‎ಗಳನ್ನು ಯಾವಾಗಲೂ ಸ್ವಚ್ಛವಾಗಿಡಿ

ಮೊಡವೆ ಇರುವ ತ್ವಚೆಗೆ ಪಾಲಿಸಬೇಕಾದ ಸಲಹೆ ಇದಾಗಿದೆ. ನಿಮ್ಮ ಬ್ರಶ್‎ಗಳನ್ನು ನೀವು ನಿಯಮಿತವಾಗಿ ಸ್ವಚ್ಛ ಮಾಡುತ್ತಿಲ್ಲ ಎಂದಾದಲ್ಲಿ ಬ್ರಶ್‭‎ನ ಕೂದಲಿನಲ್ಲಿ ಮೇಕಪ್ ಅಂಟಿಕೊಂಡಿರುತ್ತದೆ ಮತ್ತು ಕೊಳೆ ಸೇರಿಕೊಳ್ಳುತ್ತದೆ. ಇದರಿಂದ ಮೇದೋಗ್ರಂಥಿಗಳ ಸ್ರಾವ ಹೆಚ್ಚಾಗುತ್ತದೆ. ಆದ್ದರಿಂದ ಮೊಡವೆ ರಹಿತ ತ್ವಚೆ ಪಡೆಯಲು ಬ್ರಶ್ ಅನ್ನು ನಿಯಮಿತವಾಗಿ ತೊಳೆದುಕೊಳ್ಳಿ.

ಈ ಟಿಪ್ಸ್ ನೆನಪಿರಲಿ

ಈ ಟಿಪ್ಸ್ ನೆನಪಿರಲಿ

ಯಾವುದೇ ಮೇಕಪ್ ಉತ್ಪನ್ನಗಳನ್ನು ಅವುಗಳ ಭಾಗಗಳನ್ನು ಪರಿಶೀಲಿಸದೇ ಖರೀದಿಸಬೇಡಿ. ಅವುಗಳ ಹಂತಗಳನ್ನು ಪರಿಶೀಲಿಸಿದಾಗ ಅಲ್ಲಿರುವ ಗುರುತುಗಳನ್ನು ನಿಮಗೆ ಕಾಣಬಹುದು. ಅಂದರೆ ಪ್ಯಾರಬನ್ ಮುಕ್ತವಲ್ಲದ, ಕೊಮಿಯೊಡೊಜೆನಿಕ್ ಅಲ್ಲದ ಸಲ್ಫೇಟ್ ಮತ್ತು ಜಿಡ್ಡು ರಹಿತ ಹೀಗಿದ್ದಲ್ಲಿ ಮಾತ್ರವೇ ಅವುಗಳನ್ನು ಖರೀದಿಸಿ. ತೆಂಗಿನ ಬೆಣ್ಣೆ, ಲಾರಿಕ್ ಆಸಿಡ್, ಉಣ್ಣೆಕೊಬ್ಬು, ಐಸೊಪ್ರೊಪೈಲ್, ಐಸೊಡರೇಟ್ ಮೊದಲಾದವುಗಳನ್ನು ಒಳಗೊಂಡಿರುವ ಸೌಂದರ್ಯ ಉತ್ಪನ್ನಗಳನ್ನು ಖರೀದಿಸಬೇಡಿ.

ತೆಳುವಾಗಿ ಮೇಕಪ್ ಹಚ್ಚಿ

ತೆಳುವಾಗಿ ಮೇಕಪ್ ಹಚ್ಚಿ

ಮೊಡವೆ ಇರುವ ತ್ವಚೆಗೆ ಉತ್ತಮ ಮೇಕಪ್ ಸಲಹೆ ಬೇಕು ಎಂದಾದಲ್ಲಿ ತೆಳುವಾಗಿ ಇದರ ಬಳಕೆ ಮಾಡಿ. ಗೆರೆಗಳನ್ನು ನಿವಾರಿಸಿಕೊಳ್ಳಲು ಸಣ್ಣ ಮತ್ತು ತೆಳು ಸ್ಟ್ರೋಕ್‎ಗಳನ್ನು ಹಚ್ಚಿ. ಮೇಕಪ್ ಅನ್ನು ಗಾಢವಾಗಿ ಹಚ್ಚಿಕೊಳ್ಳುವುದು ಮೊಡವೆಗಳನ್ನು ಇನ್ನಷ್ಟು ಎದ್ದುಗಾಣಿಸಬಹುದು.

ಸಮಯ ತೆಗೆದುಕೊಳ್ಳಿ

ಸಮಯ ತೆಗೆದುಕೊಳ್ಳಿ

ಮೊಡವೆ ಇರುವ ತ್ವಚೆಗೆ ಮೇಕಪ್ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕು. ಫೌಂಡೇಶನ್‎ನ ಪ್ರಥಮ ಕೋಟ್ ಅನ್ನು ಹಚ್ಚಿಕೊಂಡ ನಂತರ, ಸ್ವಲ್ಪ ನಿಮಿಷ ಕಾಯಿರಿ. ಮೇಕಪ್ ಚೆನ್ನಾಗಿ ಕೂರಲಿ ನಂತರ ಎರಡನೇ ಕೋಟ್ ಹಚ್ಚಿ. ಇದರಿಂದ ಡಲ್‎ನೆಸ್ ಇರುವುದಿಲ್ಲ ಮತ್ತು ಕಿರಿಕಿರಿ ನೀವು ಹೊಂದುವುದಿಲ್ಲ.

ಹೊಳಪಿಲ್ಲದ ಉತ್ಪನ್ನಗಳನ್ನು ಬಳಸಿ

ಹೊಳಪಿಲ್ಲದ ಉತ್ಪನ್ನಗಳನ್ನು ಬಳಸಿ

ಮೊಡವೆ ಇರುವ ತ್ವಚೆಗಾಗಿ ಮೇಕಪ್ ಮಾಡಿಕೊಳ್ಳಲು ಇದು ಉತ್ತಮ ಸಲಹೆಯಾಗಿದೆ. ಕಾನ್ಸಿಲರ್ ಅನ್ನು ಹಚ್ಚಿಕೊಳ್ಳುವಾಗ ಹೊಳಪಿಲ್ಲದ ಉತ್ಪನ್ನಗಳನ್ನು ಹಚ್ಚಿ. ಯಾವುದೇ ಹೊಳೆಯುವ ಉತ್ಪನ್ನಗಳು ನಿಮ್ಮ ಸಮಸ್ಯೆಯನ್ನು ಎದ್ದುಗಾಣಿಸಬಹುದು, ಆದ್ದರಿಂದ ಹೊಳೆಯುವ ಉತ್ಪನ್ನಗಳನ್ನು ನಿಮ್ಮ ಕಣ್ಣುಗಳ ಅಡಿಯಲ್ಲಿ ಹಚ್ಚಿ.

ಪ್ರೈಮರ್ ಬಳಸಿ

ಪ್ರೈಮರ್ ಬಳಸಿ

ಮೊಡವೆಯುಳ್ಳ ತ್ವಚೆಯನ್ನು ನೀವು ಪಡೆದುಕೊಂಡಿದ್ದೀರಿ ಎಂದಾದಲ್ಲಿ, ಬ್ರ್ಯಾಂಡೆಡ್ ಪ್ರೈಮರ್ ನಿಮ್ಮ ಸಮಸ್ಯೆಯನ್ನು ಹೋಗಲಾಡಿಸಬಹುದು. ಯಾವುದೇ ಮೊಡವೆ ಅಥವಾ ಕೆಂಪು ಗುಳ್ಳೆಗಳನ್ನು ಇದು ಕವರ್ ಮಾಡುತ್ತದೆ. ನಿಮ್ಮ ತ್ವಚೆಯ ಸಮಸ್ಯೆಗಳನ್ನು ಅಡಗಿಸಿ ಕಾಂತಿಯುಕ್ತ ಮುಖಾರವಿಂದವನ್ನು ಮೇಕಪ್ ಮಾಡುವಾಗ ನಿಮಗೆ ದಯಪಾಲಿಸುತ್ತದೆ.

ಮಲಗುವ ಮುನ್ನ ಮೇಕಪ್ ಅಳಿಸಿ

ಮಲಗುವ ಮುನ್ನ ಮೇಕಪ್ ಅಳಿಸಿ

ಮೊಡವೆ ಇರುವ ತ್ವಚೆಯುಳ್ಳವರು ಇದನ್ನು ಪಾಲಿಸಲೇಬೇಕು. ನೀವು ಮಲಗುವ ಮುನ್ನ ಮೇಕಪ್ ತೆಗೆದಿಲ್ಲ ಎಂದಾದಲ್ಲಿ ನಿಮ್ಮ ಮೊಡವೆ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುವುದು ಖಂಡಿತ. ಯಾವಾಗಲೂ ಮೇಕಪ್ ತೆಗೆಯಿರಿ ಮತ್ತು ಸಾಕಷ್ಟು ನೀರು ಕುಡಿದು ನಿದ್ರಿಸಿ.

X
Desktop Bottom Promotion