Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೇಕಪ್ ತೊಡೆದುಹಾಕಲು ಇಲ್ಲಿದೆ ಸರಳ ಟಿಪ್ಸ್
ಯಾವುದೇ ಸಮಾರಂಭಕ್ಕೆ ಹೋದರೂ ಅಲ್ಲಿ ನಿಮ್ಮ ಮನಸ್ಸನ್ನು ಆಕರ್ಷಿಸುವುದು ಮೇಕಪ್ ತೊಟ್ಟು ಅತ್ತಿಂದಿತ್ತ ಓಡಾಡುವ ಸುಂದರಿಯರು. ಇಂದು ಮೇಕಪ್ ಎನ್ನುವುದು ಹರೆಯದ ಹುಡುಗಿಯರಿಂದ ಹಿಡಿದು ಐವತ್ತರ ಗಡಿ ದಾಟಿರುವವರಿಗೂ ಇಂದು ಬೇಕೇ ಬೇಕು. ಭಗವಂತ ನೀಡಿರುವ ಅಂದಕ್ಕೆ ಈ ಮೇಕಪ್‌ಗಳು ಟಚಪ್‌ನಂತೆ ಕೆಲಸ ಮಾಡಿ ಸೌಂದರ್ಯವನ್ನು ಎದ್ದುಗಾಣಿಸುವಂತೆ ಮಾಡುತ್ತದೆ. ಅದರಲ್ಲಿ ಇನ್ನೂ ಕೆಲವರು ಮೇಕಪ್ ಗೀಕಪ್ ನಮಗೇನೂ ಬೇಡ ಇದ್ದ ಸೌಂದರ್ಯವೇ ಸಾಕು ಎನ್ನುವವರೂ ಇದ್ದಾರೆ. ಅಂತೂ ಮೇಕಪ್ ಮಾಡುವುದು ಇಂದಿನ ಆಧುನಿಕ ಯುಗದಲ್ಲಿ ತಪ್ಪೇನೂ ಅಲ್ಲ.

ಆದರೆ ರಾಸಾಯನಿಕಗಳನ್ನೇ ನೀವು ತ್ವಚೆಗೆ ಹೊದ್ದುಕೊಳ್ಳುವುದರಿಂದ ಆದಷ್ಟು ಶೀಘ್ರವೇ ಮುಖದಿಂದ ಇದನ್ನು ನಿವಾರಿಸುವ ಪ್ರಯತ್ನಗಳನ್ನು ನೀವು ಮಾಡಲೇಬೇಕು. ಸಮಾರಂಭದಿಂದ ಬಂದು ಮೇಕಪ್ ಹೊತ್ತ ಮೊಗದಿಂದಲೇ ನೀವು ಮಲಗಿದಿರಿ ಎಂದಾದಲ್ಲಿ ಮರುದಿನ ಉಂಟಾಗುವ ಅಪಾಯಕ್ಕೆ ನಿಮ್ಮನ್ನು ನೀವೇ ತೆರೆದುಕೊಂಡಂತೆ. ಹಾಗಿದ್ದರೆ ಮುಖದ ಸೌಂದರ್ಯ ಕೆಡುವ ಮುನ್ನವೇ ಮೇಕಪ್ ಅನ್ನು ನಿವಾರಿಸಿಕೊಳ್ಳುವ ಸುಲಭ ಪರಿಹಾರಗಳನ್ನು ನೀವೇ ಕಂಡುಕೊಳ್ಳಿ. ಮನೆಯಲ್ಲೇ ದೊರೆಯುವ ಸಾಮಾಗ್ರಿಗಳನ್ನು ಬಳಸಿಕೊಂಡು ಮೇಕಪ್ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ. ಅದು ಏನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡಲಿದ್ದೇವೆ ಮುಂದೆ ಓದಿ...
ಕ್ಲೆನ್ಸರ್ ಬಳಕೆ
ಮೇಕಪ್ ತೆಗೆಯುವಲ್ಲಿ ಕ್ಲೆನ್ಸರ್ ಹೆಚ್ಚು ಪರಿಣಾಮಕಾರಿ. ನಿಮ್ಮ ತ್ವಚೆಗೆ ಸರಿಹೊಂದುವ ಕ್ಲೆನ್ಸರ್ ಖರೀದಿಸಿ, ಹತ್ತಿಯಿಂದ ಕ್ಲೆನ್ಸರ್ ಅದ್ದಿಕೊಂಡು ಒರೆಸಿ ಸುಲಭವಾಗಿ ಮೇಕಪ್ ತೆಗೆಯಬಹುದು.
ಆಲೀವ್ ಆಯಿಲ್
ಕಣ್ಣಿನ ಮೇಕಪ್ ತೆಗೆಯಲು ಹತ್ತಿಗೆ ಕೊಬ್ಬರಿ ಅಥವಾ ಆಲಿವ್ ಎಣ್ಣೆ ಸೋಕಿಸಿ ಒರೆಸಿ ನೀರು ಹಾಕಿಕೊಂಡು ಐ ಶ್ಯಾಡೊ, ಐ ಲೈನರ್ ಮತ್ತು ಮಸ್ಕಾರ ಹೋಗುವವರೆಗೂ ತೊಳೆದುಕೊಳ್ಳಬೇಕು. ಮಕ್ಕಳಿಗೆ ಬಳಸುವ ಎಣ್ಣೆಯನ್ನೂ ಕೂಡ ಕಣ್ಣಿನ ಮೇಕಪ್ ತೆಗೆಯಲು ಬಳಸಬಹುದು. ಅಲ್ಲದೆ ಸೂಕ್ಷ್ಮ ಮತ್ತು ಡ್ರೈ ಸ್ಕಿನ್ ಹೊಂದಿರುವವರಿಗೆ ಇದು ಅತ್ಯುತ್ತಮವಾಗಿದೆ. ಆಲೀವ್ ಆಯಿಲ್ ಚಿಕಿತ್ಸಾ ಗುಣಗಳನ್ನು ಒಳಗೊಂಡಿರುವುದರಿಂದ ಮೇಕಪ್‌ನಿಂದ ಉಂಟಾಗುವ ಯಾವುದೇ ಕಿರಿಕಿರಿಗೆ ಇದು ತಕ್ಕ ಔಷಧವಾಗಿದೆ. ಜೊತೆಗೆ ಹರಳೆಣ್ಣೆ ಅಥವಾ ಜೊಜೊಬಾ ಎಣ್ಣೆಯನ್ನು ಹಚ್ಚಿಕೊಳ್ಳಬಹುದು.
ಹಾಲು
ಮೇಕಪ್ ತೆಗೆಯಲು ನೈಸರ್ಗಿಕ ಅಂಶವೆಂದರೆ ಮೊದಲು ತಣ್ಣಗಿನ ನೀರಿನಿಂದ ಮುಖ ತೊಳೆದುಕೊಂಡು ಹಾಲು ಅಥವಾ ಮೊಸರನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ ಕೆಲ ನಿಮಿಷದ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡರೆ ತ್ವಚೆ ತಾಜಾ ಆಗಿ, ಮೇಕಪ್ ಒಂದಿಷ್ಟೂ ಉಳಿಯದೆ ಹೋಗುತ್ತದೆ.
ವ್ಯಾಸಲೀನ್



Click it and Unblock the Notifications



