Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಮದುವೆಯ ದಿನದ ಅಲಂಕಾರ ಹಿತವಾಗಿ ಮಿತವಾಗಿರಲಿ
ನಿಮ್ಮ ವಿವಾಹ ದಿನ ಸಮೀಪಿಸುತ್ತಿದೆಯೇ? ಹೆಣ್ಣಿನ ಜೀವನದಲ್ಲಿ ಮಹತ್ತರ ಘಟ್ಟವಾದ ವಿವಾಹಕ್ಕೆ ಹೆಚ್ಚಿನ ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಜೀವನದ ಮಹತ್ತರ ದಿನವಾದ ಮದುವೆ ದಿನ ಮದುಮಗಳು ಸಪ್ಪೆಯಾಗಿ ಕಂಡರೆ ಅದು ಬಾಳಿನುದ್ದಕ್ಕೂ ಆಕೆಯನ್ನು ಕಾಡಬಹುದು. ನಿತ್ಯದಂತೆ ಈ ದಿನದಂದು ಸಾಧಾರಣವಾಗಿ ಅಲಂಕಾರ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಅತಿಯಾಗಿ ಅಲಂಕಾರ ಮಾಡಿಕೊಳ್ಳುವುದೂ ಕೂಡ ನಿಮ್ಮ ಸೌಂದರ್ಯವನ್ನು ಹಾಳು ಮಾಡಬಹುದು.
ಹೆಣ್ಣಿಗೆ ತನ್ನ ಮದುವೆಯ ಕನಸು ಚಿಕ್ಕಂದಿನಿಂದಲೇ ಇರುತ್ತದೆ. ದೊಡ್ಡವರಾದಂತೆ ಈ ಕನಸಿಗೆ ಇನ್ನಷ್ಟು ರೆಕ್ಕೆಪುಕ್ಕೆಗಳು ಹುಟ್ಟಿಕೊಂಡು ಆಸೆ ಹೆಮ್ಮೆರವಾಗುತ್ತದೆ. ಅದಕ್ಕೆ ತಕ್ಕಂತೆ ಇತರೆ ಮದುವೆಗಳಲ್ಲಿ ಮದುವಣಗಿತ್ತಿಯರ ಒನಪು ಒಯ್ಯಾರವನ್ನು ನೋಡಿ ಅವರಂತೆಯೇ ಇಲ್ಲಾ ಅವರಿಗಿಂತಲೂ ಚೆನ್ನಾಗಿ ತಾವು ಸಿದ್ಧರಾಗಬೇಕು ಎಂಬುದು ಮನದಲ್ಲಿ ಸುಳಿಯುತ್ತದೆ. ಆದರೆ ಈ ದಿನ ನೀವು ಸುಂದರಿಯಾಗಿ ಕಾಣಬೇಕು ಎಂಬುದು ನಿಮ್ಮ ಆಸೆಯಾಗಿದ್ದರೆ ಕನಿಷ್ಠ ಪಕ್ಷ ಕೆಲವೊಂದು ಮೇಕಪ್ ಟಿಪ್ಸ್ಗಳನ್ನು ನೀವು ತಿಳಿದರಬೇಕು.
ಮೇಕಪ್ ಬ್ರಶ್ ಹಿಡಿಯುವ ಸಾಮಾನ್ಯ ಜ್ಞಾನ ನಿಮ್ಮಲ್ಲಿದೆ ಎಂದಾದಲ್ಲಿ ಅಂತೆಯೇ ಯಾವ ವಿಧದ ಮೇಕಪ್ ನಿಮ್ಮ ತ್ವಚೆಗೆ ಸೂಕ್ತ ಎಂಬ ಮೂಲ ಅಂಶ ನಿಮಗೆ ಗೊತ್ತಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡುವ ಕೆಲವು ಸಲಹೆಗಳನ್ನು ನಿಮಗೆ ಪಾಲಿಸಬಹುದು. ಇಲ್ಲಾ ಮೇಕಪ್ನಲ್ಲಿ ಅನುಭವ ಪಡೆದುಕೊಂಡಿರುವ ಸ್ನೇಹಿತರು ಮತ್ತು ಸಂಬಂಧಿಕರ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಮತ್ತೇಕೆ ತಡ ಕೆಳಗಿನ ಸ್ಲೈಡರ್ಗಳಲ್ಲಿ ನೀಡಿರುವ ಸಲಹೆಗಳನ್ನು ಅರಿತು ನಿಮ್ಮ ಮದುವೆಯ ಅಲಂಕಾರವನ್ನು ಮಾಡಿಕೊಳ್ಳಿ....

ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ
ಯಾವುದೇ ಮೇಕಪ್ ಉತ್ಪನ್ನಗಳನ್ನು ಮುಖಕ್ಕೆ ಹಚ್ಚಿಕೊಳ್ಳುವ ಮುನ್ನ ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ಕ್ಲೆನ್ಸರ್ನಿಂದ ನಿಮ್ಮ ಮುಖ ಸ್ವಚ್ಛಗೊಳಿಸಿ. ಉಗುರುಬೆಚ್ಚನೆಯ ನೀರಿನಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ನಿಮ್ಮ ಮುಖವನ್ನು ತೊಳೆಯಿರಿ. ಉಗುರು ಬೆಚ್ಚನೆಯ ನೀರು ರಂಧ್ರಗಳನ್ನು ಸ್ವಚ್ಛಮಾಡಿ ಒಳಗಿನಿಂದಲೇ ಕೊಳೆಯನ್ನು ಹೋಗಲಾಡಿಸುತ್ತದೆ. ನಂತರ ರಂಧ್ರವನ್ನು ಮುಚ್ಚುವುದಕ್ಕಾಗಿ ತಣ್ಣಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಬೇಸ್ ಮೇಕಪ್ ಮಾಡಿಕೊಳ್ಳಿ
ಸರಳ ಮದುವಣಗಿತ್ತಿಯ ಮೇಕಪ್ನಲ್ಲಿ ಇದು ಪ್ರಥಮ ಹಂತವಾಗಿದೆ. ನಿಮ್ಮ ತ್ವಚೆಗೆ ಕಾಂತಿಯನ್ನು ತರಲು ಬೇಸ್ ಮೇಕಪ್ ಅನ್ನು ಮಾಡಿಕೊಳ್ಳಿ.ನಿಮ್ಮ ತ್ವಚೆಯನ್ನು ಮಾಯಿಶ್ಚರೈಸ್ ಮಾಡುವ ಬಣ್ಣದ ಮಾಯಿಶ್ಚರೈಸರ್ ಅನ್ನು ಬಳಸಬಹುದು.

ಪ್ರೈಮರ್ ಮತ್ತು ಫೌಂಡೇಶನ್
ಇದೀಗ, ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳುವ 2 ನಿಮಿಷಗಳಿಗೆ ಮುಂಚೆ ಪ್ರೈಮರ್ ಅನ್ನು ಹಚ್ಚಿ. ಇದು ಫೌಂಡೇಶನ್ ಮತ್ತು ಕೋನ್ಸಿಲರ್ ಅನ್ನು ಅವುಗಳ ಜಾಗದಲ್ಲಿ ಹಿಡಿದಿಡುತ್ತದೆ. ಚರ್ಮದ ಕೊಳೆ ಮತ್ತು ಕಲೆಗಳನ್ನು ನಿವಾರಿಸಲು ಕೋನ್ಸಿಲರ್ ಸಹಕಾರಿ. ಮೇಟ್ ಫಿನಿಶ್ನೊಂದಿಗೆ ಫೌಂಡೇಶನ್ ಬಳಸಿ. ಮಿಶ್ರ ಮಾಡುವುದನ್ನು ಮರೆಯದಿರಿ.

ಹೈಲೈಟರ್ ಬಳಸಿ
ನಿಮ್ಮನ್ನು ಸುಂದರಿಯನ್ನಾಗಿಸುವ ಸರಳ ಬ್ರೈಡಲ್ ಮೇಕಪ್ ಅನ್ನು ಎದುರು ನೋಡುತ್ತಿದ್ದೀರಾ? ಕೆನ್ನೆಯ ಮೂಳೆಗಳಿಗೆ ಹೈಲೈಟರ್ ಅನ್ನು ಬಳಸಲು ಮರೆಯದಿರಿ. ಹೈಲೈಟರ್ ಅನ್ನು ಕೆನ್ನೆಯ ಮೂಳೆಗಳು, ಹುಬ್ಬು ಮತ್ತು ಮೂಗಿನ ಮೇಲೆ ಹಚ್ಚಿಕೊಳ್ಳಿ.

ಬ್ಲಶರ್ ಬಳಸಿ
ನಿಮ್ಮ ತ್ವಚೆಯ ಬಣ್ಣಕ್ಕೆ ಸರಿಹೊಂದುವಂತೆ ಅದನ್ನು ಸರಿಹೊಂದಿಸಿ ನಿಮ್ಮ ದಿರಿಸಿನ ಬಣ್ಣಕ್ಕೂ ಇದು ಪೂರಕವಾಗಿರಲಿ. ವೃತ್ತಾಕಾರವಾಗಿ ಬ್ಲಶರ್ ಅನ್ನು ಬಳಸಿ ಮತ್ತು ಕಣ್ಣುಗಳಿಗೆ ಅಭಿಮುಖವಾಗಿ ಅದನ್ನು ಹರಡಿ. ಅಂತೆಯೇ ಮೇಲ್ಮುಖ ಸ್ಟ್ರೋಕ್ಸ್ ಅನ್ನು ಯಾವಾಗಲೂ ಬಳಸಿ ಅದನ್ನು ಎದ್ದುಗಾಣಿಸಿ ನಿಮಗೆ ಬ್ರೋನ್ಸರ್ ಅನ್ನು ಬಳಸಬಹುದು.

ಕಣ್ಣಿನ ಮೇಕಪ್
ಕಣ್ಣಿನ ಮೇಕಪ್ ಮಾಡದೆಯೇ ಸಂಪೂರ್ಣ ಮೇಕಪ್ ಮುಗಿಯಲು ಸಾಧ್ಯವಿಲ್ಲ. ನಿಮ್ಮ ಕಣ್ಣುಗುಡ್ಡೆ ಮತ್ತು ಕಣ್ಣಿನ ಆಕಾರಕ್ಕೆ ತಕ್ಕಂತೆ ಕಣ್ಣಿನ ಮೇಕಪ್ ಮಾಡಿ. ನಿಮ್ಮ ಮೈಬಣ್ಣಕ್ಕೆ ಹೊಂದುವ ಐ ಶ್ಯಾಡೋ ಬಣ್ಣ ಆರಿಸಿ. ಐಲೈನರ್ ಮತ್ತು ಮಸ್ಕರಾದ ಅಗತ್ಯ ನಿಮಗಿದೆ. ಅಂತೆಯೇ ಬೇಸಿಗೆಯಲ್ಲಿ ವಾಟರ್ ಪ್ರೂಫ್ ಸಾಮಾಗ್ರಿಗಳು ಒಳ್ಳೆಯದು.

ತುಟಿಯ ಅಲಂಕಾರ
ತುಟಿಯ ಅಲಂಕಾರ ಅತಿಮುಖ್ಯವಾಗಿರುವುದರಿಂದ ನಿಮ್ಮ ದಿರಿಸಿಗೆ ಹೊಂದುವ ತುಟಿಯ ಮೇಕಪ್ ಅನ್ನು ನೀವು ಮಾಡಿಕೊಳ್ಳಬೇಕು. ನಂತರ ಶ್ಯಾಡೋವನ್ನು ಆರಿಸಿ. ತುಟಿಯ ಆಕಾರಕ್ಕೆ ತಕ್ಕಂತೆ ಅದಕ್ಕೆ ಬಣ್ಣ ಹಚ್ಚಿ. ಹೆಚ್ಚಿನ ಬಣ್ಣವನ್ನು ತೆಗೆಯಲು ಟಿಶ್ಯೂವನ್ನು ಬಳಸಿ. ಲಿಪ್ ಗ್ಲಾಸ್ ಬಳಸಲು ಮರೆಯದಿರಿ.

ಮೇಕಪ್ ಅತಿಯಾಗಿ ಮಾಡಬೇಡಿ
ನಿಮ್ಮ ಮೇಕಪ್ ಅನ್ನು ಅತಿಯಾಗಿ ಎಂದಿಗೂ ಮಾಡಿಕೊಳ್ಳಬೇಡಿ. ಕಪ್ಪನೆಯ ಕಣ್ಣುಗಳು ನಿಮ್ಮದಾಗಿದ್ದಲ್ಲಿ ತುಟಿಗಳ ಬಣ್ಣವನ್ನು ತಿಳಿಯಾಗಿಸಿ. ನಿಮ್ಮ ಮದುವೆಯ ದಿನವಾಗಿರುವುದರಿಂದ ಈ ದಿನ ನೀವು ಸುಂದರವಾಗಿ ಕಾಣುವುದು ಅತ್ಯವಶ್ಯಕವಾಗಿದೆ. ಅತಿಯಾದ ಮೇಕಪ್ ನಿಮ್ಮ ಮುಖದ ಅಂದವನ್ನು ಹಾಳುಮಾಡಬಹುದು.



Click it and Unblock the Notifications