Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇಸಿಗೆಯ ಬಿಸಿಗೆ ಕರಗಿ ಹೋಗದಿರಲಿ ನಿಮ್ಮ ಅಲಂಕಾರ
ಹೆಣ್ಣಿಗೆ ಅಲಂಕಾರವೇ ಭೂಷಣ ಎಂಬ ಮಾತಿನಂತೆ ಸ್ತ್ರೀಗೆ ಅಲಂಕಾರ ಅತಿ ಮಹತ್ವದ್ದಾಗಿದೆ. ಅನಾದಿ ಕಾಲದಿಂದಲೂ ಅಲಂಕಾರಕ್ಕೆ ಸ್ತ್ರೀಯರು ಹೆಚ್ಚಿನ ಮಹತ್ವವವನ್ನು ನೀಡುತ್ತಿದ್ದುದಕ್ಕೆ ಸಾಕ್ಷಿಯಾಗಿ ಅವರು ಬಳಸುತ್ತಿದ್ದ ಪ್ರಸಾಧನ ಸಾಮಾಗ್ರಿಗಳು ನಿಲುಗನ್ನಡಿಗಳು ಲಭ್ಯವಾಗಿದ್ದು ಆ ಕಾಲದಲ್ಲಿ ರಾಣಿಯರು, ಸಖಿಯರು ರಾಜಕುವರಿಯರು ಅಲಂಕಾರದ ವಿಷಯದಲ್ಲಿ ಎಷ್ಟು ಕಾಳಜಿಯನ್ನು ವಹಿಸುತ್ತಿದ್ದರು ಎಂಬುದನ್ನು ನಮಗೆ ಕಂಡುಕೊಳ್ಳಬಹುದಾಗಿದೆ.
ಯಾವುದೇ ಸಭೆ ಸಮಾರಂಭವಿರಲಿ ಅದಕ್ಕಾಗಿ ಕೆಲವು ಗಂಟೆಗಳ ಅಲಂಕಾರವಾದರೂ ಮಹಿಳೆಯರು ಮಾಡಿಯೇ ಮಾಡುತ್ತಾರೆ. ಪುರುಷರು ಕೂಡ ಮಹಿಳೆಯರ ಈ ಅಲಂಕಾರ ಪ್ರವೃತ್ತಿಗೆ ಹಾಸ್ಯ ಮಾಡುವುದೂ ಇದ್ದೇ ಇದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮಹಿಳೆಯರು ಮಾತ್ರ ಅಲಂಕಾರ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದೇ ಇಲ್ಲ. ಎಲ್ಲಾ ಕಾಲಕ್ಕೂ ಸೂಕ್ತವಾಗಿ ಹೊಂದುವ ಅಲಂಕಾರ ಜ್ಞಾನವನ್ನು ಮಹಿಳೆಯರು ಹೊಂದಿರಬೇಕಾಗುತ್ತದೆ. ಹೇಳಿ ಕೇಳಿ ಇದು ಬೇಸಿಗೆ ನೀವು ಎಷ್ಟೇ ಅಂದವಾಗಿ ಮುತುವರ್ಜಿಯಿಂದ ಅಲಂಕರಿಸಿದ್ದರೂ ದೇಹದಲ್ಲಿನ ಬೆವರು ಅದನ್ನು ಒಂದೇ ನಿಮಿಷಕ್ಕೆ ಕರಗಿಸಿ ಬಿಡುತ್ತದೆ. ಹಾಗಿದ್ದರೆ
ಈ ಕಾಲದಲ್ಲಿ ಅಲಂಕಾರ ಮಾಡಬಾರದು ಎಂದು ನಾವು ಹೇಳುತ್ತಿಲ್ಲ ಅಲಂಕಾರ ಮಾಡುವ ಮುನ್ನ ಬೇಸಿಗೆಗೆ ಬದ್ಧ ವೈರಿ ಎಂದೆನಿಸಿರುವ ಕೆಲವೊಂದು ಅಲಂಕಾರಿಕ ಉತ್ಪನ್ನಗಳನ್ನು ನೀವು ಬಳಸದೇ ಇದ್ದರೆ ಆಯಿತು. ಅವುಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ. ಬನ್ನಿ ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿರುವ ಮಾಹಿತಿಗಳನ್ನು ಅರಿತುಕೊಂಡು ನಿಮ್ಮ ಅಲಂಕಾರವನ್ನು ಮಾಡಿ....

ಗಾಢವಾದ ಫೌಂಡೇಶನ್
ಹೆಚ್ಚು ಕ್ರೀಮ್ ಉಳ್ಳ ಫೌಂಡೇಶನ್ ಬಳಕೆಯನ್ನು ಈ ಕಾಲದಲ್ಲಿ ಮಾಡದಿರಿ. ನಿಮ್ಮ ಮುಖದಲ್ಲಿ ಬೆವರನ್ನುಂಟು ಮಾಡುವ ಇದು ಗಟ್ಟಿಯಾಗಿ ಮುಖದಲ್ಲಿ ಅಂಟಿಕೊಂಡು ಬಿಡುತ್ತದೆ. ಬದಲಿಗೆ ಹವಾಮಾನಕ್ಕೆ ಹೊಂದುವ ತೆಳುವಾದ ಮಾಯಿಶ್ಚರೈಸರ್ ಬಳಸಿ.

ಹೆಚ್ಚಿನ ಐಶ್ಯಾಡೋ ಮತ್ತು ಮಸ್ಕರಾ
ಬೇಸಿಗೆಯಲ್ಲಿ, ಆದಷ್ಟು ಮಸ್ಕರಾವನ್ನು ಜಲಪ್ರತಿರೋಧಕ ಮತ್ತು ಹಗುರವಾಗಿರಿಸಿಕೊಳ್ಳಿ. ಹೆಚ್ಚಿನ ಐಶ್ಯಾಡೋ ಮತ್ತು ಮಸ್ಕರಾವನ್ನು ಕಣ್ಣಿಗೆ ಹಚ್ಚಿಕೊಳ್ಳುವುದರಿಂದ ಬೆವರು ತಾಗಿ ಅದು ಕಲಸಿ ಹೋಗಬಹುದು. ಐ ಕರ್ಲರ್ ಅನ್ನು ಬಳಸಿಕೊಂಡು ನಿಮ್ಮ ಕಣ್ರೆಪ್ಪೆಗಳನ್ನು ಹದವಾಗಿ ತೀಡಿಕೊಳ್ಳಿ ಸಾಕು.

ಲಿಪ್ ಗ್ಲಾಸ್
ಬೇಸಿಗೆಯಲ್ಲಿ ಲಿಪ್ ಗ್ಲಾಸ್ ಬಳಸುವುದರಿಂದ ನಿಮ್ಮ ತುಟಿ ಒಣಗಿ ಹೋಗುವುದು ಮತ್ತು ಕಲೆಗಳುಂಟಾಗಬಹುದು. ಹೆಚ್ಚು ಎಸ್‌ಪಿಎಫ್ ಇರುವ ಲಿಪ್ ಬಾಮ್ ಅನ್ನು ಬಳಸಿ ತುಟಿಗಳನ್ನು ಸಂರಕ್ಷಿಸಿ.

ಹಳೆಯ ಸನ್ ಸ್ಕ್ರೀನ್
ಬರಿಯ ಪರಿಮಳಕ್ಕೆ ಮಾರುಹೋಗಿ ಕಳೆದ ವರ್ಷ ನೀವು ಖರೀದಿಸಿರುವ ಸನ್ ಸ್ಕ್ರೀನ್ ಬಳಸುವುದು ಸೂಕ್ತವಾಗಿರುವುದಿಲ್ಲ. ಅವಧಿ ಮುಗಿದ ನಂತರ ಯುವಿ ಕಿರಣಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಸನ್ ಸ್ಕ್ರೀನ್ ಲೋಶನ್ ಕಳೆದುಕೊಂಡಿರುತ್ತದೆ. ಪ್ರತೀ ವರ್ಷ ಹೊಸ ಸನ್ ಸ್ಕ್ರೀನ್ ಲೋಶನ್‌ಗಳನ್ನೇ ಬಳಸಿ

ಗಾಢವಾದ ಪರಿಮಳ
ಬೇಸಿಗೆಯಲ್ಲಿ ಹೆಚ್ಚಿನ ಉಷ್ಣವು ನಿಮ್ಮ ಸುಗಂಧ ದ್ರವ್ಯಗಳಲ್ಲಿರುವ ಪರಿಮಳವನ್ನು ಇನ್ನೂ ಗಾಢವಾಗಿಸುತ್ತದೆ. ಆದ್ದರಿಂದ ತೀಕ್ಷ್ಣ ಪರಿಮಳಕ್ಕಿಂತ ತಾಜಾ ಮತ್ತು ಮೃದು ಸುಗಂಧವಿರುವ ಸುಗಂಧ ದ್ರವ್ಯಗಳನ್ನು ಖರೀದಿಸಿ. ಅಂತೆಯೇ ಆದಷ್ಟು ಸೂರ್ಯನ ಬಿಸಿಲಿನಿಂದ ನಿಮ್ಮ ಸುಗಂಧ ದ್ರವ್ಯಗಳನ್ನು ದೂರವಿರಿಸಿ.



Click it and Unblock the Notifications
