Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಅವಧಿ ಮುಗಿದ ಸೌಂದರ್ಯ ಸಾಧನದ ವ್ಯಾಮೋಹ ಬಿಟ್ಟುಬಿಡಿ
ಇಂದಿನ ಯವಜನತೆ ತನ್ನ ತ್ವಚೆಯ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ನಾನಾ ಬಗೆಯ ಫೇಸ್ ಕ್ರೀಂ, ಪೌಡರ್, ಲಿಪ್‌ಸ್ಟಿಕ್, ಐ ಲೈನರ್, ಇನ್ನೂ ಏನೇನೋ ಸಾಧನಗಳಿಗೆ ಮೊರೆ ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
ದುಬಾರಿ ಬೆಲೆ ತೆತ್ತು ಖರೀದಿಸಿದ ಸಾಧನದಿಂದ ನಮ್ಮ ತ್ವಚೆ ಇನ್ನಷ್ಟು ಅಂದವಾಗಿರುತ್ತದೆ ಎಂಬ ಭ್ರಮೆಯಿಂದ ಇನ್ನಷ್ಟು ಕೃತಕ ರಾಸಾಯನಿಕಗಳಿಗೆ ದಾಸರಾಗುತ್ತಿದ್ದೇವೆ. ಆದರೆ ಇಂತಹ ಸಾಧನಗಳಿಂದ ಮುಖಕ್ಕೆ ಮೇಕಪ್ ಮಾಡುವ ಮುಂಚೆ ಸ್ವಲ್ಪ ಆಲೋಚಿಸಿ! ಸಾಮಾನ್ಯವಾಗಿ ನಾವು ಬಳಸುವ ಸೌಂದರ್ಯವರ್ಧಕ ಸಾಧಗಳಲ್ಲಿ ಕಡಿಮೆ ಗುಣಮಟ್ಟದ ರಾಸಾಯನಿಕ ಪದಾರ್ಥಗಳನ್ನು ಬಳಸಿರುತ್ತಾರೆ. ಹಾಗಾಗಿ ಇದು ತ್ವಚೆಯ ಸಮಸ್ಯೆಗೆ ಪ್ರಮುಖ ಕಾರಣವಾಗಿಬಿಡುತ್ತದೆ. ಕಣ್ಣಿಗೆ 10 ಬಗೆಯಾಗಿ ಕಾಜಲ್ ಹಚ್ಚುವ ವಿಧಾನ
ಮತ್ತೊಂದು ಮುಖ್ಯ ಸಲಹೆಯೆಂದರೆ ಅವಧಿ ಮುಗಿದ ಮೇಕಪ್ ಸಾಧನಗಳನ್ನು ಬಳಸಿದರೆ ನಿಮಗೆ ಕೆಟ್ಟ ಮತ್ತು ಹಾನಿಕಾರಕ ಪರಿಣಾಮಗಳಾಗುವುದರಿಂದ ಕೂಡಲೇ ಎಸೆದುಬಿಡಿ. ಮೊದಲನೆಯದಾಗಿ, ಅವಧಿ ಮುಗಿದ ವಸ್ತುಗಳು ಕೆಲಸಮಾಡುವುದಿಲ್ಲ ಮತ್ತು ಯಾವ ಫಲಿತಾಂಶವನ್ನು ತೋರಿಸುವುದಿಲ್ಲ. ಎರಡನೆಯದಾಗಿ, ನಾವು ಬಹಳ ಹಳೆಯ ಮೇಕಪ್ ಸಾಧನಗಳನ್ನು ಬಳಸಿದರೆ ನಮ್ಮ ತ್ವಚೆಯ ಚರ್ಮಕ್ಕೆ ಅಲರ್ಜಿ, ಶಾಶ್ವತ ಕಲೆಗಳು, ಉರಿಯೂತ ಮತ್ತು ಚರ್ಮದ ಸಿಪ್ಪೆಸುಲಿಯವದಕ್ಕೆ ಕಾರಣಗಳಾಗಬಹುದು.

ಚರ್ಮದ ಸೋಂಕಿಗೆ ಗುರಿಯಾಗಬಹುದು
ಮೇಕಪ್‌ಗಳನ್ನು ತಯಾರಿಸುವಾಗ ಅವುಗಳಲ್ಲಿ ಬ್ಯಾಕ್ಟೀರಿಯ ಬೆಳೆವಣಿಗೆಯನ್ನು ತಡೆಗಟ್ಟಲು ಸಂರಕ್ಷಕಗಳನ್ನು ಸೇರಿಸುತ್ತಾರೆ.ಆದ್ದರಿಂದ ಮೇಕಪ್ ಬಳಸುವ ಅವಧಿ ಮುಗಿದ ನಂತರ ಬ್ಯಾಕ್ಟೀರಿಯ ಬೆಳೆಯುವುದಕ್ಕೆ ಪ್ರಾರಂಭವಾಗುತ್ತದೆ. ಆದಾಗ್ಯೂ ನೀವು ಅಂತಹ ಮೇಕಪ್‌ಗಳನ್ನು ಬಳಸಿದಲ್ಲಿ ನಿಮ್ಮ ಮುಖದ ಚರ್ಮಕ್ಕೆ ವಿವಿಧ ಸೋಂಕುಗಳು ತಗಲಿ ಆಕ್ರಮಣಮಾಡುವುದಕ್ಕೆ ನೀವೇ ಆಹ್ವಾನ ಮಾಡಿ ಕೊಟ್ಟಂತಾಗುತ್ತದೆ

ಸಾಂದ್ರತೆ ಮತ್ತು ಸ್ಥಿರತೆಯ ಬದಲಾವಣೆಗಳು
ಅವಧಿಮುಗಿದ ನಂತರ ಅವುಗಳಲ್ಲಿರುವ ವಸ್ತುಗಳ ಸಾಂದ್ರತೆ ಮತ್ತು ಸ್ಥಿರತೆಗಳಲ್ಲಿ ಬದಲಾವಣೆಗಳಾಗುತ್ತವೆ. ಉದಾಹರಣೆಗೆ, ನಿಮ್ಮ ದ್ರವದಮೂಲ ತಳಹದಿ (Foundation) ಒಣಗಿಹೋಗುತ್ತದೆ, ಮಸ್ಕರ ಮತ್ತು ದ್ರವಮೂಲದ ಐ ಲೈನರ್ ಹೆಪ್ಪುಗಟ್ಟಿ ಒರಟಾಗಿಬಿಡುತ್ತದೆ. ಹೀಗಾದಾಗ ಅದರ ಅವಧಿಮುಗಿದಿದೆಯೆಂದು ಅರ್ಥಮಾಡಿಕೊಳ್ಳಬೇಕು ಮತ್ತು ಬಳಕೆಗೆ ಅನರ್ಹವಾಗಿದೆಯೆಂದು ಖಾತರಿಗೊಳ್ಳುತ್ತದೆ.

ಅದರಲ್ಲಿರುವ ಪದಾರ್ಥಗಳು ವಿಭಜನೆಯಾಗುತ್ತವೆ
ಅವಧಿ ಮುಗಿದ ಮೇಕಪ್ ಬಳಸಿದರೆ ನಿಮ್ಮ ಚರ್ಮಕ್ಕೆ ಪರಿಣಾಮಕಾರಿ ಆಗುವುದಿಲ್ಲ. ನೀವು ಸೂರ್ಯಕಿರಣಗಳಿಂದ ರಕ್ಷಣೆಪಡೆಯುವ ಇಂತಹ ಮೇಕಪ್ ತಳಹದಿಯನ್ನು ಉಪಯೋಗಿಸುತ್ತಿದ್ದರೆ ಅದು ನಿಮಗೆ ಸೂರ್ಯ ಕಿರಣಗಳಿಂದ ರಕ್ಷಣೆ ನೀಡುವುದಿಲ್ಲ.

ಚರ್ಮದ ಉರಿಯೂತ
ಅವಧಿ ಮುಗಿದ ಮೇಕಪ್ ಬಳಸುವುದರಿಂದ ನಿಮ್ಮ ಚರ್ಮಕ್ಕೆ ಉರಿಯೂತ ತಗಲುವುದಲ್ಲದೆ ಅದು ತೀವ್ರವಾಗಬಹುದು.ಈ ಸ್ಥಿತಿಗೆ ಸಂಪರ್ಕ ತೊಗಲುರಿತವೆಂದು ಕರೆಯುತ್ತಾರೆ. ಚರ್ಮ ಉದ್ರೇಕಗೊಂಡು ತುರಿಕೆಯೂ ಆರಂಭವಾಗುತ್ತದೆ, ಆಗ ತಕ್ಷಣ ನೀವು ಚರ್ಮ ತಜ್ಞರನ್ನು ಚಿಕಿತ್ಸೆಗೆ ಕಾಣಬೇಕಾಗುತ್ತದೆ. ಇದು ಅವಧಿ ಮುಗಿದ ಮೇಕಪ್ ಬಳಸುವ ಅಡ್ಡ ಪರಿಣಾಮಗಳಲ್ಲೊಂದಾಗಿದೆ.

ಚರ್ಮದ ಅಲರ್ಜಿಗಳು
ಚರ್ಮದ ಅನೇಕ ಅಲರ್ಜಿಗಳಾದ ತುರಿಕೆಗಳು, ಗುಳ್ಳೆಗಳು ಮತ್ತು ಊತಗಳು ಉಂಟಾಗಬಹುದು. ಈ ಅಲರ್ಜಿಗಳ ಜೊತೆಯಲ್ಲಿ ತೀವ್ರ ಚರ್ಮಸೋಂಕು ಬಂದು ಕೀವು ಕಟ್ಟಲು ಕಾರಣವಾಗಬಹುದು.

ಲಿಪ್‍ಸ್ಟಿಕ್ ಬಳಕೆ
ಲಿಪ್‍ಸ್ಟಿಕ್ ಬಣ್ಣ ಗುಂದುವುದು ಬಣ್ಣ ಗುಂದುವ ಪ್ರಕ್ರಿಯೆಯು ಪ್ರಮುಖವಾಗಿ ನಿಮ್ಮ ಅವಧಿ ಮುಗಿದ ಲಿಪ್‍ಸ್ಟಿಕ್‌ಗಳ ಮೇಲೆ ಹೆಚ್ಚಾಗಿ ನಡೆಯುತ್ತದೆ. ಏಕೆಂದರೆ ಇವುಗಳನ್ನು ನೀವು ಎರಡೆರೆಡು ಬಾರಿ ಅದ್ದಿ ತೆಗೆಯುತ್ತಿರುತ್ತೀರಿ. ತಜ್ಞರು ಇವುಗಳನ್ನು ಆರು ತಿಂಗಳಿಗೊಮ್ಮೆ ಬದಲಾಯಿಸಬೇಕು ಎಂದು ಸಲಹೆ ಮಾಡುತ್ತಾರೆ. ಏಕೆಂದರೆ ಈ ಅವಧಿಯ ಒಳಗಾಗಿ ಮಾತ್ರ ನೀವು ಇದನ್ನು ಬಳಸಬಹುದು. ಇದಕ್ಕೂ ಮೀರಿದಾಗ ಇದರಲ್ಲಿ ಬ್ಯಾಕ್ಟೀರಿಯಾಗಳು ಬೆಳವಣಿಗೆಯಾಗುವ ಅಪಾಯ ಹೆಚ್ಚಿರುತ್ತದೆ. ಆಗ ನಿಮಗೆ ನೆಗಡಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಇದರಿಂದ ನಿಮಗೆ ದೊರೆಯುವ ಪ್ರಯೋಜನವೆಂದರೆ, ಆ ಮೂಲಕ ನೀವು ಹೊಸ ಹೊಸ ಬಣ್ಣಗಳನ್ನು ಪ್ರಯತ್ನಿಸಬಹುದು.

ಮೇಕಪ್ ಟಿಪ್ಸ್
ನಿಮ್ಮ ಮೇಕಪ್‌ನ ಅವಧಿ ಮುಗಿದಿದ್ದರೆ ನಿಮ್ಮ ಮೇಕಪ್ ಕಿಟ್‍ನ ಮೇಲೆ ದಿನಾಂಕಗಳನ್ನು ನಮೂದಿಸಿದ್ದರೆ, ನೀವು ನಿಜಕ್ಕೂ ಅದೃಷ್ಟಶಾಲಿಗಳು. ಆ ಉತ್ಪನ್ನದ ಮೇಲೆ ಏನಾದರೂ ನಮೂದಿಸಿದ್ದರೆ ಒಮ್ಮೆ ಕಣ್ಣಾಡಿಸಿ. ಅದರಿಂದಲೇ ನೀವು ಆ ಉತ್ಪನ್ನದ ಬಗ್ಗೆ ಊಹೆ ಮಾಡಬಹುದು. ಆ ಉತ್ಪನ್ನವು ಬೇರ್ಪಡದಿದ್ದರು, ಬಣ್ಣಗುಂದದಿದ್ದರೂ ಅಥವಾ ಕೆಟ್ಟ ವಾಸನೆ ಬರದಿದ್ದರು ಸಹ ಅವಧಿಯನ್ನು ಮೀರಿದ್ದರೆ, ಬೇರೆ ಯೋಚನೆ ಮಾಡದೆ ಅದನ್ನು ಬದಲಾಯಿಸಿ.



Click it and Unblock the Notifications











