Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಟ್ಟು ಬೋಲ್ಟು ಲೂಸು ಅನ್ಕೋಬೇಡಿ, ಇದು ಸ್ಟೈಲು ಕಣ್ರೀ..!
ನಟ್ಟು, ಬೋಲ್ಟು, ಸ್ಪಾನರ್, ಸ್ಕ್ರೂ.. ಇದೆಲ್ಲ ಯಾವುದೋ ಇಂಜಿನ್ ರಿಪೇರಿ ಮಾಡೋದಕ್ಕೆ ಬೇಕಾಗುವ ವಸ್ತುಗಳು.. ಆದ್ರೆ ನಮ್ಮ ಲೇಡಿಸ್ ಇವುಗಳನ್ನೂ ಬಿಡಲ್ಲ. ಇದನ್ನೂ ಜ್ಯುವೆಲರಿ ಮಾಡ್ಕೊಂಡು ಬಿಡ್ತಾರೆ. " ರಿ ಸುಮ್ನೆ ಏನೇನೋ ಓಳು ಬಿಡ್ಬೇಡ್ರೀ, ಅಂತದ್ದನ್ನೆಲ್ಲ ಯಾರ್ ಹಾಕ್ಕೊತ್ತಾರೆ. ನಿಮ್ಗೇನು ತಲೆಕೆಟ್ಟಿದ್ಯಾ?" ಅಂತ ನೀವೇನಾದ್ರೂ ಕೇಳ್ತಾ ಇದ್ರೆ ಅದ್ರಲ್ಲಿ ಆಶ್ಚರ್ಯ ಏನಿಲ್ಲ ಬಿಡಿ. ಆದ್ರೆ ಇಂತಹ ಆಭರಣಗಳಿವೆ ಅಂದ್ರೆ ನೀವು ನಂಬಲೇಬೇಕು. ಎಷ್ಟೋ ಮಹಿಳೆಯರು ಇಂತಹ ಆಭರಣಗಳನ್ನು ತೊಟ್ಟು ಮಿಂಚ್ತಾರೆ
ಅಯ್ಯೋ ಬಿಡ್ರೀ, ಈ ಹೆಂಗಸರೋ ಸಿಕ್ಕಿದ್ದನ್ನೆಲ್ಲ ತೊಟ್ಕೊಂಡು ಸ್ಟೈಲ್ ಮಾಡಿಬಿಡ್ತಾರೆ ಅಂತ ನೀವೇನಾದ್ರೂ ಅಂದುಕೊಳ್ತಾ ಇದ್ರೆ, ಎಸ್ ಯು ಆರ್ ರೈಟ್.. ಲೇಡಿಸ್ಸೇ ಹಾಗೆ.. ಲೇಡಿಸ್ಸೇ ಹಾಗೆ ಅನ್ನೋದಕ್ಕಿಂತ ಈ ಫ್ಯಾಷನ್ ದುನಿಯಾನೇ ಹಾಗೆ. ಆಗಾಗ ಏನೇನಾದ್ರೂ ಕಿತಾಪತಿ ಫ್ಯಾಷನ್ ಕ್ರಿಯೇಟ್ ಮಾಡಿ ಟ್ರೆಂಡ್ ಹೆಸ್ರಲ್ಲಿ ಮೋಡಿ ಮಾಡಿಬಿಡುತ್ತೆ.

ಅಲ್ಲ ನಟ್ಟು, ಬೋಲ್ಟು, ಸ್ಪಾನರ್, ಸ್ಕ್ರೂ ಬಳಸಿ ಮಾಡೋ ಆಭರಣಗಳನ್ನು ತೊಟ್ರೆ ನಿಜಕ್ಕೂ ಚೆನ್ನಾಗಿರತ್ತಾ ಅಂತ ನೀವೇನಾದ್ರೂ ಕೇಳಿದ್ರೆ, ಹೂಂ ರೀ, ತುಂಬಾ ಚೆನ್ನಾಗಿರುತ್ತೆ ಅಂದುಬಿಡ್ತಾರೆ ನಮ್ಮ ಲೇಡಿಸ್.. ಯಾಕಂದ್ರೆ ಸ್ಟೈಲ್ ಮಾಡೋ ಲೇಡಿಸ್ಗೆ ಇವು ಫರ್ಫೆಕ್ಟ್ ಆಗಿ ಮ್ಯಾಚ್ ಆಗುವಂತಿರುತ್ತೆ..ಹಾಗಂತ ಸಿಕ್ಕಸಿಕ್ಕ ಕಡೆ, ಕಂಡಕಂಡ ಡ್ರೆಸ್ಸಿಗೆ ತೊಟ್ರೆ ವ್ಯಾಕ್ ಅನ್ನೋ ಹಾಗೆ ಇರುತ್ತೆ. ಸ್ವಲ್ಪ ಸ್ಟೈಲ್ ಫಾರ್ಮುಲಾ ಗೊತ್ತಿರೋರು ಇಂತಹ ಆಭರಣಗಳನ್ನು ತೊಟ್ಟು ಬಿಂದಾಸ್ ಆಗಿ ಕಾಣಿಸ್ತಾರೆ..
ಯಾವ ಡ್ರೆಸ್ಗಳಿಗೆ ಮ್ಯಾಚ್ ಆಗುತ್ತೆ?
ಎಲ್ಲಾ ಡ್ರೆಸ್ಗಳಿಗೂ ಇವು ಸ್ಯೂಟ್ ಆಗಲ್ಲ. ಬಟ್ ಮಾರ್ಡನ್ ಡ್ರೆಸ್ಗಳಿಗೆ ಮ್ಯಾಚ್ ಆಗುತ್ತೆ. ಕೆಲವು ಸಿಂಪಲ್ ಆಗಿರೋದ್ರಿಂದ ಡೈಲಿ ವೇರ್ಗಳಿಗೂ ಮ್ಯಾಚ್ ಮಾಡ್ಕೊಬಹುದು.. ಏನೋ ಸ್ಟೈಲು ಅಂತ ಪಾರ್ಟಿಫಂಕ್ಷನ್ಗೆಲ್ಲ ತೊಟ್ಕೊಂಡು ಹೋಗ್ಬೇಡಿ.. ಇವಳ್ಯಾವಳ್ ಇವ್ಳು? ನಟ್ಟುಬೋಲ್ಟ್ನೆಲ್ಲ ಪಾರ್ಟಿಗೆ ಹಾಕ್ಕೊಂಡು ಬಂದಿದ್ದಾಳಲ್ಲ ಸ್ವಲ್ಪ ನಟ್ಟುಬೋಲ್ಟು ಲೋಸ್ ಇರಬೇಕು ಅಂತ ನೋಡಿದವ್ರು ಮಾತಾಡ್ಕೊಂಡ್ರೆ ಅದಕ್ಕೆ ನೀವೇ ಕಾರಣರಾಗಿರ್ತೀರಿ..
ಹೌದು, ಹೆಚ್ಚಿನ ಸಂದರ್ಬದಲ್ಲಿ ಈ ನಟ್ಟುಬೋಲ್ಟ್ ಅನ್ನೋ ಪದ ರಿಪೇರಿ ಕೆಲ್ಸ ಹೊರತುಪಡಿಸಿದ್ರೆ ಲೂಸ್ ಅನ್ನೋ ಪದಕ್ಕೆ ಪರ್ಯಾಯವಾಗೇ ಬಳಕೆ ಆಗುತ್ತೆ. ಬಟ್ ಫ್ಯಾಷನ್ ದುನಿಯಾದಲ್ಲಿ ಹಾಗಲ್ಲ. ದಿಸ್ ಈಸ್ನಟ್ ಎಂಡ್ ಬೋಲ್ಟ್ ಜ್ಯುವೆಲರಿ ಯು ನೋ? ಅಂತ ಸ್ಟೈಲ್ ಆಗಿ ಹೇಳೋದಕ್ಕೂ ಯ್ಯೂಸ್ ಆಗುತ್ತೆ.. ವಾವ್ ಅವ್ಳ ಜ್ಯುವೆಲರಿ ನೋಡು ಅಂತ ಇನ್ನೊಬ್ಬರು ಕಣ್ಣುಕುಕ್ಕಿ ನೋಡೋದಕ್ಕೂ ಬಳಕೆಯಾಗುತ್ತೆ.
ಯಾವೆಲ್ಲ ಶೇಡ್‌ನಲ್ಲಿ ಲಭ್ಯವಿರುತ್ತೆ?
ತೀರಾ ಬೆಳೆಬಾಳುವ ಆಭರಣಗಳು ಇವಲ್ಲ. ಕಡಿಮೆ ಬೆಲೆಗೆ ಸಿಗುತ್ತೆ. ವೈಟ್ ಮೆಟಲ್, ಬ್ಲಾಕ್ ಮೆಟಲ್, ಕೆಲವೇ ಕೆಲವು ಗೋಲ್ಡನ್ ಶೇಡ್ಗಳಲ್ಲಿ ಲಭ್ಯವಿರುತ್ತೆ. ನಾನು ಎಲ್ಲಾ ಫ್ಯಾಷನ್ಗೂ ಸೈ ಅನ್ನುವವರು ನೀವಾದ್ರೆ ಖಂಡಿತ ಇಂತಹ ಆಭರಣಗಳನ್ನು ಕೊಂಡುಕೊಳ್ಳಬಹುದು..ಕೆಲವು ಬೋಲ್ಟ್ಗಳನ್ನು ಥ್ರೆಡ್ ನಲ್ಲಿ ಸುತ್ತಿ ನೆಕ್ಲೆಸ್ ಕೂಡ ತಯಾರಿಸಿರ್ತಾರೆ. ನಿಜಕ್ಕೂ ಇವು ನೋಡೋದಕ್ಕೆ ಮತ್ತು ತೊಡೋದಕ್ಕೆ ಸಖತ್ ಆಗಿರುತ್ತೆ. ಇನ್ನು ಯಾವ ಆಭರಣ ಇರಲ್ಲ ಕೇಳಿ.. ಇಯರಿಂಗ್, ನೆಕ್ಲೆಸ್, ಫಿಂಗರ್ ರಿಂಗ್, ಎಲ್ಲವೂ ಇರುತ್ತೆ. ಇನ್ನು ಡಿಸೈನ್ ಕೂಡ ವ್ಯತ್ಯಾಸವಿರುತ್ತೆ. ನೀವು ಯಾವುದನ್ನು ಆಯ್ಕೆ ಮಾಡ್ಕೊಂಡು ಹೇಗೆ ತೊಡ್ತೀರಿ ಅನ್ನೋದರ ಮೇಲೆ ನೀವು ಹೇಗೆ ಕಾಣ್ತೀರಿ ಅನ್ನೋದು ಕೂಡ ಡಿಪೆಂಡ್ ಆಗುತ್ತೆ. ಒಟ್ಟಿನಲ್ಲಿ ಫ್ಯಾಷನ್ ಪ್ರಿಯರ ಆಕ್ಸಸರಿ ಬಾಕ್ಸ್ನಲ್ಲಿ ಈ ಹೊಸ ಆಕ್ಸಸರಿಗಳನ್ನು ಸೇರಿಸಿಕೊಳ್ಳಬಹುದು..ಆಗಾಗ ತೊಡೋದಕ್ಕೆ ಮಸ್ತಾಗಿರುತ್ತೆ.



Click it and Unblock the Notifications

