Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇಕಪ್ ಪುರಾಣ: ಮಹಿಳೆಯರ ಗೋಳು ಕೇಳುವವರು ಯಾರು?
ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲಿ ಪುರುಷರಿಗೆ ಸಮಾನರಾಗಿ ದುಡಿಯುತ್ತಿದ್ದಾರೆ. ಬೆಳಗಿನ ಕೆಲಸಕ್ಕೆ ಹೋಗುವ ಧಾವಂತದಲ್ಲಿ ನಿತ್ಯದ ಅಲಂಕಾರವನ್ನೂ ಮುಗಿಸಿ ಹೊರಡುವುದು ಎಲ್ಲಾ ಉದ್ಯೊಗಸ್ಥ ಮಹಿಳೆಯರಿಗೆ ದೊಡ್ಡ ಸವಾಲು. ಅದರಲ್ಲೂ ಮಕ್ಕಳಿದ್ದವರಿಗಂತೂ ಬೆಳಗಿನ ಒಂದೊಂದು ಕ್ಷಣವೂ ಅತ್ಯಂತ ಅಮೂಲ್ಯವಾಗಿರುತ್ತದೆ. ಅಂತಹ ಸಮಯದಲ್ಲಿ ಬೇರೇನಾದರೂ ಕೆಲಸ ಬಂದರೆ ತಲೆ ಚಿಟ್ಟು ಹಿಡಿಯುವುದು ಖಂಡಿತ. ಅತಿಯಾದ ಮೇಕಪ್ ಕೂಡ ತ್ವಚೆಗೆ ಶತ್ರುವಾಗಬಹುದು
ಕೆಲವೊಮ್ಮೆ ರಾತ್ರಿ ಯಾವುದೋ ಸಮಾರಂಭಕ್ಕೆ ಹೋಗಿದ್ದು ಬರಲು ತಡವಾದಾಗ ಬೆಳಗೆ ಇಟ್ಟ ಅಲಾರಾಂ ಅನ್ನು ಯಾವಾಗ ಬಂದ್ ಮಾಡಿ ಮಲಗಿದ್ದರೋ ಗೊತ್ತಿಲ್ಲ, ಎದ್ದಾಗ ಹೊರಡಲಿಕ್ಕೆ ತುಂಬಾ ಕಡಿಮೆ ಸಮಯ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಕ್ಷಿಪ್ರವಾಗಿ ಅಲಂಕಾರ ಮಾಡಿಕೊಳ್ಳಬೇಕೆಂದರೆ ಅದಕ್ಕೆ ಅಪಾರ ಸಹನೆ ಮತ್ತು ಚಾಕಚಕ್ಯತೆ ಅಗತ್ಯ. ಕಾಲೇಜು ಹುಡುಗಿಯರಿಗೆ ಹೇಳಿ ಮಾಡಿಸಿದ ಸೌಂದರ್ಯದ ಟಿಪ್ಸ್!
ಅಲಂಕರಿಸಿಕೊಳ್ಳದೇ ಹೋದರೆ, ಸೂಕ್ತವಾದ ಉಡುಗೆಗಳನ್ನು ತೊಡದೇ ಹೋದರೆ, ತಲೆ ಬಾಚದೇ ಇದ್ದರೆ, ಸಮರ್ಪಕವಾದ ಬಣ್ಣಗಳ ಜೊತೆಗಳನ್ನು ಆರಿಸದೇ ಹೋದರೆ ಇಡಿಯ ದಿನ ಮುಜುಗರದಲ್ಲಿಯೇ ಇರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಹೇಗೆ ನಿಮ್ಮ ಅಲಂಕಾರವನ್ನು ಕ್ಷಿಪ್ರವಾಗಿ ಮತ್ತು ಉತ್ತಮ ರೀತಿಯಲ್ಲಿ ಮಾಡಬೇಕೆಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ....

ಸಲಹೆ 1: ಮೊದಲು ಬಿಬಿ ಕ್ರೀಂ ಉಪಯೋಗಿಸಿ
ಹೌದು, ಮೊದಲು ಬಿಬಿ ಕ್ರೀಂ ಉಪಯೋಗಿಸಿ, ಸಮಯವಿಲ್ಲದಿದ್ದಾಗ ಫೌಂಡೇಶನ್ ತಂಟೆಗೇ ಹೋಗಬೇಡಿ. ಏಕೆಂದರೆ ಫೌಂಡೇಶನ್ ಮುಖದ ಮೇಲೆ ಸರಿಯಾಗಿ ಲೇಪಿಸುವುದು ಸಮಯ ಹಿಡಿಯುವ ಮತ್ತು ತಾಳ್ಮೆಯ ಕೆಲಸವಾಗಿದೆ. ಧಾವಂತದಲ್ಲಿ ದಪ್ಪ-ತೆಳುವಾದರೆ ಅದರ ಮೇಲೆ ಕೂರುವ ಮೇಕಪ್ ಅಧ್ವಾನವಾಗಿದ್ದು ಭಾರೀ ಮುಜುಗರಕ್ಕೆ ಕಾರಣವಾಗಬಹುದು. ಬದಲಿಗೆ ಬಿಬಿ ಕ್ರೀಂ ಥಟ್ಟನೇ ಇಡಿಯ ಮುಖಕ್ಕೆ ತೆಳುವಾಗಿ ಒರೆಸಿದಂತೆ ಹಚ್ಚಿಬಿಡಿ.

ಸಲಹೆ 2: ಹೈಡ್ರೇಟಿಂಗ್ ಸೋಪು ಉಪಯೋಗಿಸಿ
ಹೈಡ್ರೇಟಿಂಗ್ ಸೋಪು ಉಪಯೋಗಿಸಿ ಮಾಯಿಶ್ಚರೈಸಲ್ ಮತ್ತು ಎಕ್ಫೋಲಿಯೇಟರ್ ಗಳನ್ನು ಒಂದಾದ ಮೇಲೊಂದರಂತೆ ಬಳಸುವ ಬದಲು ಇವೆರಡೂ ಗುಣಗಳಿರುವ ಹೈಡ್ರೇಟಿಂಗ್ ಸೋಪೊಂದನ್ನು ಬಳಸಿ. ಇದರಿಂದ ಸಮಯದ ಜೊತೆಗೆ ಹಣವೂ ಉಳಿತಾಯವಾಗುತ್ತದೆ.

ಸಲಹೆ 3: ಮಲಗುವ ಮುನ್ನ ತಲೆ ತೊಳೆದುಕೊಳ್ಳಿ
ಎಷ್ಟೇ ತಡವಾಗಿ ರಾತ್ರಿ ಮನೆಗೆ ಬಂದಿದ್ದರೂ ಮಲಗುವ ಮುನ್ನ ಸಿಂಕಿನಲ್ಲಿ ತಲೆಗೂದಲನ್ನು ತೊಳೆದುಕೊಂಡಿದ್ದರೆ ಬೆಳಿಗ್ಗೆ ಸ್ನಾನ ಕೂಡಲೇ ಮುಗಿಸಲು ಸಾಧ್ಯವಾಗುತ್ತದೆ. ಅಲ್ಲದೇ ಬೆಳಗೆ ಈ ಕೂದಲನ್ನು ಬಾಚಲು ಮತ್ತು ಸಿಂಗರಿಸಿಕೊಳ್ಳಲು ಯಾವುದೇ ತಕರಾರು ಎದುರಾಗುವುದಿಲ್ಲ.

ಸಲಹೆ 4: ಹೊಸ ಪಾದರಕ್ಷೆಯಾದರೆ ವ್ಯಾಸೆಲಿನ್ ಹಚ್ಚಿ
ಒಂದು ವೇಳೆ ಹೊಸ ಚಪ್ಪಲಿ ಅಥವಾ ಶೂ ಕೊಂಡುಕೊಂಡಿದ್ದು ಇಂದು ಹಾಕಿಕೊಂಡು ಹೋಗಲೇಬೇಕಿದ್ದರೆ ಅಗತ್ಯವಿರಲೀ ಇಲ್ಲದಿರಲಿ, ಒಳಭಾಗಗಳಲ್ಲಿ (ವಿಶೇಷವಾಗಿ ಬೆರಳುಗಳು ತಗಲುವ ಭಾಗ ಮತ್ತು ಅಂಚುಗಳಲ್ಲಿ) ವ್ಯಾಸೆಲಿನ್ ಅಥವಾ ಪೆಟ್ರೋಲಿಯಂ ಜೆಲ್ಲಿ ಹಚ್ಚಿ. ಇದರಿಂದ ಶೂ ಒಳಭಾಗ ಸೌಮ್ಯವಾಗಿದ್ದು ಕಚ್ಚದು. ಇಲ್ಲದಿದ್ದರೆ ಕೊಂಚ ದೂರ ಹೋಗುವ ಮೊದಲೇ ಹಲವೆಡೆ ಕಚ್ಚಿ ಗಾಯಗಳಾಗುವುದೂ ಪಾದಗಳ ಕೆಳಗೆ ಗುಳ್ಳೆಗಳು ಏಳುವುದೂ ಆಗುತ್ತದೆ.

ಸಲಹೆ 5: ಕಾಲಿನಲ್ಲಿ ಬಿರುಕಿದ್ದರೆ ಮಲಗುವ ಮುನ್ನ ವ್ಯಾಸೆಲಿನ್ ಸವರಿ
ಒಂದು ವೇಳೆ ನಿಮ್ಮ ಪಾದಗಳಲ್ಲಿ ಬಿರುಕಿದ್ದು ಮರುದಿನದ ಹೊಸ ಚಪ್ಪಲಿ ಅನಾನುಕೂಲವಾಗುವಂತಿದ್ದರೆ ರಾತ್ರಿ ಮಲಗುವ ಮುನ್ನ ಹಿಮ್ಮಡಿಗಳಿಗೆ ವ್ಯಾಸೆಲಿನ್ ಹಚ್ಚಿ ಕಾಲುಚೀಲ ಧರಿಸಿ ಮಲಗಿ. ಇದರಿಂದ ಮರುದಿನ ಶೂ ತೊಟ್ಟ ಬಳಿಕ ಬಿರುಕುಗಳಲ್ಲಿ ನೋವಾಗುವುದಿಲ್ಲ.

ಸಲಹೆ 6: ಡಿಯೋಡೊರೆಂಟ್ ಹಚ್ಚುವ ಮುನ್ನ ವ್ಯಾಸೆಲಿನ್ ಹಚ್ಚಿ
ಒಂದು ವೇಳೆ ಮೈ ಹೆಚ್ಚು ಬೆವರುವ ಮೂಲಕ ಬೆವರಿನ ವಾಸನೆ ಬರುವ ಶರೀರ ನಿಮ್ಮದಾಗಿದ್ದರೆ ಡಿಯೋಡೊರೆಂಟ್ ಬಳಸಿಯೇ ಇರುತ್ತೀರಿ. ಆದರೆ ಇದನ್ನು ಬಳಸುವ ಮುನ್ನ ಎಲ್ಲಿ ಹಚ್ಚಿಕೊಳ್ಳುವಿರೋ ಅಲ್ಲಿ ಕೊಂಚ ವ್ಯಾಸೆಲಿನ್ ಹಚ್ಚಿಕೊಂಡ ಬಳಿಕ ಸ್ಪ್ರೇ ಮಾಡಿಕೊಂಡರೆ ಇದರ ಪ್ರಭಾವ ಸರಿಸುಮಾರು ಇಡಿಯ ದಿನ ಇರುತ್ತದೆ.

ಸಲಹೆ 7: ಫೌಂಡೇಶನ್ ಗಾಢವಾಗಿದ್ದರೆ ಮಾಯಿಶ್ಚರೈಸರ್ ಮಿಶ್ರಣ ಮಾಡಿ
ಒಂದು ವೇಳೆ ನಿಮಗೆ ಫೌಂಡೇಶನ್ ಮಾಡುವಷ್ಟು ಸಮಯವಿದೆ ಎಂದಿದ್ದರೆ ಮತ್ತು ಪೌಂಡೇಶನ್ ಬಣ್ಣ ಕೊಂಚ ಗಾಢವಾಗಿದೆ ಅನ್ನಿಸಿದರೆ ಕೊಂಚ ಮಾಯಿಶ್ಚರೈಸರ್ ದ್ರವವನ್ನು ಇದಕ್ಕೆ ಮಿಶ್ರಣ ಮಾಡಿ. ಇದು ಬಣ್ಣವನ್ನು ತಿಳಿಗೊಳಿಸುವುದು ಮಾತ್ರವಲ್ಲ ಹಚ್ಚಲೂ ಸುಲಭವಾಗಿಸುವುದು.

ಸಲಹೆ 8: ತುಟಿಗಳು ಉಬ್ಬಿದಂತಿರಲು ಕೊಂಚ ಪೆಪ್ಪರ್ಮೆಂಟ್ ಎಣ್ಣೆ ಬಳಸಿ
ಒಂದು ವೇಳೆ ತುಟಿಗಳು ತೀರ ಒಳಗೆ ಹೋಗಿದಂತಿದ್ದರೆ ನಿಮ್ಮ ಲಿಪ್ ಸ್ಟಿಕ್ ಅಥವಾ ಲಿಪ್ ಗ್ಲಾಸ್ ಹಚ್ಚುವ ಮುನ್ನ ಒಂದೆರಡು ಹನಿ ಪೆಪ್ಪರ್ಮೆಂಟ್ ಎಣ್ಣೆ (ಪುದಿನಾ ಎಣ್ಣೆ) ಹಾಕಿ ಹಚ್ಚಿದರೆ ತುಟಿಗಳು ಕೊಂಚ ಉಬ್ಬಿದಂತಾಗಿ ಸೌಂದರ್ಯವನ್ನು ಹೆಚ್ಚಿಸುತ್ತದೆ.



Click it and Unblock the Notifications