Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇಹದ ಅಂದ-ಚೆಂದ ಇಮ್ಮಡಿಸಲು ಸರಳ ಟಿಪ್ಸ್
ಸೌಂದರ್ಯವೇ ಭಾಗ್ಯ ಎನ್ನುವ ಇತ್ತೀಚಿನ ದಿನಗಳಲ್ಲಿ, ನಿಮ್ಮ ಸೌಂದರ್ಯ ಹೆಚ್ಚಿಸಲು ಅದೇ ಹಳೆಯ ವಾಡಿಕೆಯ ವಿಧಾನಗಳನ್ನು ಪಕ್ಕಕ್ಕಿಟ್ಟು, ನಾವು ಹೇಳುವ ಹೆಚ್ಚು ಪರಿಣಾಮಕಾರಿಯಾದಂತಹ ಕೆಲವು ಸಲಹೆಗಳನ್ನು ಬಳಕೆ ಮಾಡಿ. ಈ ಸಲಹೆಗಳು ಬಹು ಸರಳ ಮತ್ತು ಶೀಘ್ರವಾದ ಫಲಿತಾಂಶ ಪಡೆಯುತ್ತೀರಿ.
ಹೌದು, ಈಗ ಕಾಲ ಬದಲಾಗಿದೆ ಸಮಯ ವ್ಯರ್ಥ ಮಾಡಲು ಯಾರೂ ಇಚ್ಛಿಸುವುದಿಲ್ಲ. ರಾಸಾಯನಿಕ ಸೌಂದರ್ಯವರ್ಧಕಗಳನ್ನು ಹೊರತುಪಡಿಸಿ ಪ್ರಾಕೃತಿಕವಾದಂತಹ ಸುಲಭವಾಗಿ ಅನುಸರಿಸುವ ಪದ್ಧತಿಯನ್ನು ಎಲ್ಲರೂ ಇಚ್ಛಿಸುತ್ತಿದ್ದಾರೆ. ನೀವು ಕಂಡಿರದ ಪರಿಣಾಮಕಾರಿಯಾದ ಸರಳವಾಗಿ ಅನುಸರಿಸಬಹುದಾದ ಕೆಲವು ಸಲಹೆಗಳನ್ನು ಸಮಗ್ರವಾಗಿ ಈ ಅಂಕಣದಲ್ಲಿ ನೀಡಲಾಗಿದೆ. ಇಂತಹ ಬ್ಯೂಟಿ ಟಿಪ್ಸ್ ಯಾವಾಗಲೂ ನಿಮ್ಮ ಪಾಕೆಟ್‌ನಲ್ಲಿರಲಿ!
ಇದು ಬಹಳ ಸರಳವಾಗಿದ್ದು, ರಜಾದಿನಗಳಲ್ಲಿ ಮಾಡಬಹುದಾಗಿದ್ದು ನಿಮ್ಮ ಸಮಯವನ್ನು ಉಳಿತಾಯ ಮಾಡಲಿದೆ. ಒಂದು ವೇಳೆ ನೀವು ಸೌಂದರ್ಯವರ್ಧಕಗಳನ್ನು ಅಥವಾ ಮೇಕಪ್ ವಸ್ತುಗಳನ್ನು ಕೊಂಡೊಯ್ಯಲು ಆಗದಿದ್ದ ಸಂದರ್ಭಗಳಲ್ಲಿ ಈ ಸಲಹೆಗಳನ್ನು ಅನುಸರಿಸಬಹುದಾಗಿದೆ. ಈ ಸಲಹೆಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಓದಿ...

ರಜಾದಿನದಲ್ಲಿ ಸುಲಭವಾಗಿ ಮಾಡಬಹುದಾದ ಸ್ಕ್ರಬ್
ನಾವು ನಮ್ಮ ಚರ್ಮವನ್ನು ಎಷ್ಟೇ ಕಾಳಜಿಯಿಂದ ಕಾಪಾಡಲು ಪ್ರಯತ್ನಿಸಿದರೂ ಸೂರ್ಯನ ಕಡು ಬಿಸಿಲು ಅಥವಾ ಯು ವಿ ಕಿರಣಗಳು ನಮ್ಮ ಚರ್ಮವನ್ನು ಸುಟ್ಟು ಹಾನಿಗೊಳಪಡಿಸಿಬಿಡುತ್ತವೆ.ಸನ್ ಸ್ಕ್ರೀನ್ ಲೋಶನ್ ಬಳಸುವುದರಿಂದ ಮೇಲಿನ ಹಾನಿಯನ್ನು ತಡೆದಂತೆ ಎನ್ನಿಸಿದರೂ ಕೂಡ ಒಳಗಾದ ಪರಿಣಾಮವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಲಿಂಬು ಮತ್ತು ಸಕ್ಕರೆ ಸ್ಕ್ರಬ್ ಬಳಕೆಯಿಂದ ಟ್ಯಾನ್ ಆಗಿರುವುದನ್ನು ಹೋಗಲಾಡಿಸಿ ತ್ವಚೆ ಹೊಳೆಯುವಂತೆ ಮಾಡಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರಜಾದಿನದಲ್ಲಿ ಸುಲಭವಾಗಿ ಮಾಡಬಹುದಾದ ಸ್ಕ್ರಬ್
ಬೇಕಾಗುವ ಸಾಮಗ್ರಿಗಳು:
*5 ಕಪ್ ಹರಳು ಸಕ್ಕರೆ
*2 ಕಪ್ ಆಲಿವ್ ಆಯಿಲ್
*ಲಿಂಬೆಹಣ್ಣು 2 ಚಮಚ
*ಜೇನುತುಪ್ಪ ಸಕ್ಕರೆ ಮತ್ತು ಆಲಿವ್ ಎಣ್ಣೆಯನ್ನು ಮಿಶ್ರ ಮಾಡಿ. ಇದಕ್ಕೆ ಲಿಂಬೆ ಮತ್ತು ಜೇನುತುಪ್ಪ ಹಾಕಿ.ಇದನ್ನು ಸರಿಯಾಗಿ ಮಿಶ್ರಮಾಡಿ ಸ್ನಾನ ಮಾಡಿದ ನಂತರ ಟ್ಯಾನ್ ಆದ ಚರ್ಮಕ್ಕೆ ಹಚ್ಚಿ.ನಿಧಾನವಾಗಿ ತಿಕ್ಕಿ ಜೋರಾಗಿ ಒತ್ತಿ ತಿಕ್ಕುವುದರಿಂದ ಚರ್ಮ ಹಾನಿಗೊಳಗಾಳುವ ಸಾಧ್ಯತೆ ಇರುತ್ತದೆ.ಇದರಲ್ಲಿ ಬಳಸಲಾಗಿರುವ ಜೇನುತುಪ್ಪ ತೇವಾಂಶವನ್ನು ಕಾಪಾಡುತ್ತದೆ ಇದರಿಂದ ಇದನ್ನು ಹಚ್ಚಿ ತೊಳೆದ ನಂತರ ಮುಖ ಒಣಗಿ ಒರಟಾಗಿ ಕಾಣುವುದಿಲ್ಲ.

ಸುಲಭವಾದ ಕೂದಲ ಪೋಷಣೆ
ಲಿಂಬೆರಸವನ್ನು ಕೂದಲಿಗೆ ಬಳಸುವುದು ಹೆಚ್ಚು ಪರಿಣಾಮಕಾರಿ ವಿಧಾನ. ಸ್ವಾಭಾವಿಕ ಕೇಶರಾಶಿಗೆ ಲಂಬೆರಸ ಹೆಚ್ಚು ಉಪಯೋಗಿ. ಕೂದಲನ್ನು ಅಂದಗೊಳಿಸಲು, ಒಂದು ಚಮಚ ಲಿಂಬೆರಸವನ್ನು ಒಂದು ಚಮಚ ನೀರಿನೊಂದಿಗೆ ಬೆರೆಸಿ ಕೂದಲೆಳೆಗಳಿಗೆ ಹಚ್ಚಿ ಬಿಸಿಲಿನ ಕಿರಣಗಳಿಗೆ ಒಡ್ಡಬೇಕು. ಬಿಸಿಲಿನ ಶಾಖಕ್ಕೆ ಲಿಂಬೆರಸದ ಆಸಿಡ್ ಪ್ರತಿಕ್ರಿಯಿಸಿ ಕೂದಲನ್ನು ಇನ್ನಷ್ಟು ಕಾಂತಿಯುಕ್ತಗೊಳಿಸುತ್ತದೆ.

ಪ್ರಾಕೃತಿಕ ಶಾಂಪೂ ಮತ್ತು ಕೂದಲ ಪೋಷಣೆ
ಸಾಮಾನ್ಯವಾಗಿ ಶಾಂಪೂ ಕೊರತೆಯುಂಟಾದಲ್ಲಿ ಯೋಚಿಸದಿರಿ. ಕೂದಲನ್ನು ನೆನೆಸಿ, ಮೊಟ್ಟೆಯ ಬಿಳಿ ತಿರುಳನ್ನು ಕೂದಲಿಗೆ ಹಚ್ಚಿ ನಯವಾಗಿ ಉಜ್ಜಿದಾಗ ಅದರಿಂದ ಬರುವ ನೊರೆಯಿಂದ ಕೂದಲ ಕಾಂತಿ ಹೆಚ್ಚುತ್ತದೆ. ಅಲ್ಲದೆ ಕೂದಲನ್ನು ಹೆಚ್ಚು ಉಜ್ವಲಗೊಳಿಸಲು 4 ಚಮಚ ವಿನೆಗರ್ ರಸವನ್ನು 1 ಚಮಚ ನೀರಿಗೆ ಬೆರೆಸಿ, ಇದಕ್ಕೆ ಉತ್ತಮ ಸುಗಂಧ ಎಣ್ಣೆಯನ್ನು ಸ್ವಲ್ಪ ಸೇರಿಸಿ ಕೂದಲಿಗೆ ಹಚ್ಚಿ. ಇದು ನಿಮ್ಮ ಕೂದಲುಗಳ ಕಾಂತಿಯನ್ನು ಹೆಚ್ಚಿಸುವುದಲ್ಲದೆ, ಕೇಶ ಆರೋಗ್ಯಕರವಾಗಿಡಲು ಸಹಕಾರಿಯಾಗಲಿದೆ.

ಸದೃಢ ಉಗುರುಗಳು
ಸಾಮಾನ್ಯವಾಗಿ ಕಬ್ಬಿಣಾಂಶದ ಕೊರತೆಯಿಂದ ಬಹುತೇಕ ಉಗುರಿನ ಸಮಸ್ಯೆಗಳು ಉದ್ಭವಿಸುತ್ತವೆ. ಆ ಸಮಸ್ಯೆಗಳು ಉಗುರನ್ನು ಮತ್ತಷ್ಟು ನಾಜೂಕನ್ನಾಗಿಸುತ್ತವೆ. ಒಂದು ವೇಳೆ ನಿಮಗೆ ತೆಳುವಾದ ಅಥವಾ ಮೃದುವಾದ ಉಗುರುಗಳಿದ್ದಲ್ಲಿ, ಉತ್ತಮ ಗುಣಮಟ್ಟದ ಅಡುಗೆ ಸೋಡ ಮತ್ತು ಲಿಂಬೆ ರಸ ಸೇರಿಸಿ ಪೇಸ್ಟ್ ಮಾಡಿ. ಪ್ರತಿದಿನ ಇದನ್ನು ಉಗುರುಗಳಿಗೆ ಹಚ್ಚಿ. ಇದು ಸಂಪೂರ್ಣವಾಗಿ ಉಗುರಿನ ಹಳದಿ ಬಣ್ಣವನ್ನು ಹೋಗಲಾಡಿಸಿ ಉಗುರನ್ನು ಇನ್ನಷ್ಟು ಸದೃಢಗೊಳಿಸುತ್ತದೆ.
ಇನ್ನೊಂದು ಉತ್ತಮ ವಿಧಾನವೆಂದರೆ ಆಲಿವ್ ಎಣ್ಣೆಯ ಆರ್ದ್ರತೆ ನೀಡುವ ಗುಣ ಉಗುರು ಮತ್ತು ಉಗುರಿನ ಹಿಂಭಾಗದ ಚರ್ಮಕ್ಕೆ ಆರ್ದ್ರತೆ ನೀಡುವ ಮೂಲಕ ಉಗುರ ಬುಡಕ್ಕೆ ಉತ್ತಮ ಪೋಷಣೆ ನೀಡುತ್ತದೆ. ಇದು ಉಗುರಿನ ಹೊಳಪಿಗೆ ನೆರವಾಗಿ, ಉಗುರನ್ನು ಇನ್ನಷ್ಟು ಸದೃಢವನ್ನಾಗಿಸುತ್ತದೆ. ಇದಕ್ಕಾಗಿ ಬೆರಳ ತುದಿಗಳಿಗೆ ಕೊಂಚ ಆಲಿವ್ ಎಣ್ಣೆ ಹಚ್ಚಿ ನಯವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಒಂದೊಂದಾಗಿ ಎಲ್ಲಾ ಬೆರಳುಗಳಿಗೆ ಮಸಾಜ್ ಮಾಡಿ.

ದಂತದ ಕಾಂತಿ ಹೆಚ್ಚಿಸಲು ಸ್ಟ್ರಾಬೆರ್ರಿ ಬಳಸಿ
ಸ್ಟ್ರಾಬೆರ್ರಿ ಹಣ್ಣನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ರೀತಿಯಾಗಿ ಮಾಡಿಕೊಂಡು ಟೂತ್ ಬ್ರಶ್‌ನ ಸಹಾಯದಿಂದ ನಿಮ್ಮ ಹಲ್ಲುಗಳನ್ನು 2 ನಿಮಿಷಗಳ ಕಾಲ ಚೆನ್ನಾಗಿ ಉಜ್ಜಿಕೊಳ್ಳಿ, ನಂತರ ಸ್ಟ್ರಾಬೆರ್ರಿಯ ಆಸಿಡ್ ಅಂಶವನ್ನು ಹೋಗಲಾಡಿಸಲು ಬಾಯಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇದನ್ನು ಪ್ರತಿದಿನ ಎರಡು ಬಾರಿ ಮಾಡಿದಲ್ಲಿ ಹಲ್ಲುಗಳ ಬಿಳುಪು ಹೆಚ್ಚಿ ಹಲ್ಲುಗಳ ಕಾಂತಿ ಇಮ್ಮಡಿಯಾಗುತ್ತದೆ.



Click it and Unblock the Notifications