Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಣ್ಣಿನ ಮೇಕಪ್: ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ!
ಕಣ್ಣುಗಳು ಅತಿ ಸೂಕ್ಷ್ಮವಾದ ಅಂಗಗಳಾಗಿದ್ದು ಅತಿ ಜತನದಿಂದ ಕಾಪಾಡಿಕೊಂಡು ಬರಬೇಕಾಗಿದೆ. ಸೌಂದರ್ಯವನ್ನು ಹೆಚ್ಚಿಸುವ ಭರದಲ್ಲಿ ತ್ವಚೆಗೆ ಬಳಸುವ ಮೇಕಪ್ ಅಥವಾ ಸೌಂದರ್ಯ ಪ್ರಸಾಧನಗಳು ಅಕಾಸ್ಮಾತ್ತಾಗಿ ಕಣ್ಣಿಗೆ ಬಿದ್ದರೆ ಕಣ್ಣುಗಳಲ್ಲಿ ಉರಿ, ಸೋಂಕು ಮತ್ತಿತರ ತೊಂದರೆಗಳನ್ನು ಉಂಟುಮಾಡಬಹುದು. ಮಹಿಳೆಗೆ ಮೇಕಪ್ ಸಾಧನಗಳ ಮೇಲೆ ಏಕೆ ಅಷ್ಟೊಂದು ಪ್ರೀತಿ?
ಅಲ್ಲದೇ ಸರಿಯಾದ ಪ್ರಸಾಧನಗಳನ್ನು ಮತ್ತು ಸರಿಯಾದ ರೀತಿಯಲ್ಲಿ ಉಪಯೋಗಿಸದಿದ್ದರೆ ಕಣ್ಣುಗಳ ಆರೋಗ್ಯವೂ ಕೆಡಬಹುದು. ಆದ್ದರಿಂದ ನಿಮ್ಮ ಮೇಕಪ್ ಪ್ರಸಾಧನಗಳನ್ನು ಕೊಳ್ಳುವ ಮೊದಲು ಅವುಗಳ ಗುಣಮಟ್ಟ ಅತ್ಯುತ್ತಮವಾಗಿದೆ ಹಾಗೂ ನಿಮ್ಮ ಚರ್ಮಕ್ಕೆ ಸೂಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.
ಕೆಲವರಿಗೆ ಈ ಪ್ರಸಾಧನಗಳಲ್ಲಿರುವ ಕೆಲವು ರಾಸಾಯನಿಕಗಳು ಅಲರ್ಜಿಕಾರಕವಾಗಿದ್ದು ಇವುಗಳನ್ನು ಪರೀಕ್ಷಿಸದೇ ಕಣ್ಣುಗಳಿಗೆ ಹಚ್ಚಿಕೊಂಡರೆ ಅದರಿಂದಾಗುವ ಪರಿಣಾಮ ಭೀಕರವಾಗಬಹುದು. ಮದುಮಗಳ ಅಂದದ ಕಣ್ಣಿನ ಚೆಂದ ಹೆಚ್ಚಿಸಲು ಸೂಕ್ತ ಸಲಹೆಗಳು
ಒಬ್ಬರಿಗೆ ಬಳಸಿದ ಮೇಕಪ್ ಉಪಕರಣಗಳನ್ನು ನಿಮ್ಮ ಮೇಲೆ ಉಪಯೋಗಿಸಿದಾಗಲೂ ಸೋಂಕು ಹರಡುವ, ಅದರಲ್ಲೂ ಕಣ್ಣುಗಳ ಮೂಲಕ ಸೋಂಕು ಹರಡುವ ಸಂಭವ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ನೀವು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ..

ಹಳೆಯ ಮಸ್ಕಾರಾವನ್ನು ತ್ಯಜಿಸಿ
ಕಣ್ಣುಗಳಿಗೆ ಹಚ್ಚುವ ಮಸ್ಕಾರ ಅಥವಾ ಕಣ್ಣುರೆಪ್ಪೆಗಳಿಗೆ ಕಪ್ಪುಬಣ್ಣ ನೀಡುವ ಪ್ರಸಾಧನ ಬಳಸಲು ತೊಡಗಿನಂದಿನಿಂದ ಗರಿಷ್ಟ ಮೂರು ತಿಂಗಳ ಒಳಗೆ ಮಾತ್ರ ಉಪಯೋಗಿಸಿ ಎಂದು ಚರ್ಮತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ನೀವೊಬ್ಬರೇ ಉಪಯೋಗಿಸುವುದಾದರೂ ಅದರಲ್ಲಿರುವ ಅತಿಸೂಕ್ಷ್ಮ ಕ್ರಿಮಿಗಳು ಈ ಮೂರು ತಿಂಗಳಲ್ಲಿ ಅಭಿವೃದ್ಧಿ ಹೊಂದಿ ಬಳಿಕ ಮಸ್ಕಾರಾ ಮೂಲಕ ಕಣ್ಣುಗಳಿಗೆ ದಾಟಿಕೊಳ್ಳುವ ಕ್ಷಮತೆ ಪಡೆದಿರುತ್ತವೆ. ಆದ್ದರಿಂದ ಮೂರು ತಿಂಗಳ ಬಳಿಕ ಹಳೆಯ ಮಸ್ಕಾರಕ್ಕೆ ನಮಸ್ಕಾರ ಹೊಡೆದು ಹೊಸ ಮಸ್ಕಾರ ಪಡೆಯಿರಿ

ಐ-ಲೈನರ್ ಬಳಸುವಾಗ ಕೊಂಚ ಅಂತರವಿರಲಿ
ಐ-ಲೈನರ್ ಎಂಬ ಕಾಡಿಗೆಯ ಪೆನ್ಸಿಲ್ ಬಳಸುವಾಗ ಅತಿ ಹೆಚ್ಚು ದಟ್ಟನೆ ಮತ್ತು ಪೂರ್ಣವಾಗಿ ಆವರಿಸಿಕೊಳ್ಳುವಂತೆ ಹಚ್ಚಬೇಡಿ. ಏಕೆಂದರೆ ಅತಿ ಹೆಚ್ಚಿನ ಪ್ರಮಾಣದ ಐ ಲೈನರ್ ಕಣ್ಣು ಮುಚ್ಚಿದಾಗ ಒಂದಕ್ಕೊಂದು ಅಂಟಿಕೊಂಡು ಕಣ್ಣು ತೆರೆಯಲು ದುಸ್ತರವಾಗಬಹುದು. ಒಣಗಲು ಹೆಚ್ಚಿನ ಸಮಯ ತೆಗೆದುಕೊಂಡು ಧೂಳು ಕೂರಲು ಕಾರಣವಾಗಬಹುದು.

ನಿಮ್ಮ ಪ್ರಸಾಧನಗಳನ್ನು ಹಂಚಿಕೊಳ್ಳಬೇಡಿ
ನಿಮ್ಮ ಇತರ ವೈಯಕ್ತಿಯ ವಸ್ತುಗಳಾದ ಸೋಪು, ಹಲ್ಲುಜ್ಜುವ ಬ್ರಶ್ ಗಳಂತೆಯೇ ನಿಮ್ಮ ಸೌಂದರ್ಯ ಪ್ರಸಾಧನ ವಸ್ತುಗಳು ಸಹಾ ಪ್ರತ್ಯೇಕವಾಗಿರಲಿ.ಅದರಲ್ಲೂ ಕಣ್ಣಿಗೆ ಹಚ್ಚುವ ವಸ್ತುಗಳು ಮತ್ತು ಉಪಕರಣಗಳನ್ನು ಅಪ್ಪಿತಪ್ಪಿಯೂ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಡಿ. ಏಕೆಂದರೆ ಪ್ರತಿಯೊಬ್ಬರ ಮೈಯಲ್ಲೂ ಇರುವ ಅತಿಸೂಕ್ಷ್ಮ ಕ್ರಿಮಿಗಳು ಈ ಸಲಕರಣೆಗಳ ಮೂಲಕ ನಿಮ್ಮ ದೇಹವನ್ನೂ ಆವರಿಸಿ ಅರೋಗ್ಯವನ್ನು ಕೆಡಿಸಬಹುದು. ಅಂತೆಯೇ ನಿಮ್ಮ ದೇಹದ ಕ್ರಿಮಿಗಳನ್ನು ಅವರಿಗೂ ದಾಟಿಸಬಹುದು.

ಸುರಕ್ಷಿತವೆನಿಸಿದ ಪ್ರಸಾಧನಗಳನ್ನೇ ಕೊಳ್ಳಿರಿ
ಯಾವುದೇ ಪ್ರಸಾಧನಗಳನ್ನು ಕೊಳ್ಳುವ ಮೊದಲು ಅದರಲ್ಲಿ ಕೃತಕ ಸುವಾಸನೆ, ಸಂರಕ್ಷಕ (preservative), ಕೃತಕ ಬಣ್ಣ ನೀಡುವ ಡೈ ಮತ್ತಿತರ ಹಾನಿಕಾರಕ ರಾಸಾಯನಿಕಗಳು ಇಲ್ಲವೆಂದು ದೃಢಪಡಿಸಿಕೊಳ್ಳಿ. ಹೊಸ ಪ್ರಸಾದನವನ್ನು ಮೊದಲು ದೇಹದ ಇತರ ಭಾಗ ಅಂದರೆ ಮೊಣಕೈಗೆ ಹಚ್ಚಿ ಅದು ನಿಮ್ಮ ಚರ್ಮಕ್ಕೆ ಅಲರ್ಜಿಕಾರಕವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಬಳಿಕವೇ ಕಣ್ಣು ಮತ್ತು ಮುಖದ ಮೇಲೆ ಪ್ರಯೋಗಿಸಿ. ನೆನಪಿರಲಿ: ಉತ್ತಮ ಪ್ರಸಾಧನಕ್ಕೆ ಸುವಾಸನೆಯ ಅಗತ್ಯವಿಲ್ಲ!

ಪ್ರತಿಬಾರಿ ಮೇಕಪ್‌ಗೂ ಮೊದಲು ಕೈಗಳನ್ನು ತೊಳೆದುಕೊಳ್ಳಿ
ಸಾಮಾನ್ಯವಾಗಿ ಅಲಂಕಾರ ಮಾಡಿಕೊಳ್ಳುವ ಧಾವಂತದಲ್ಲಿ ಹೆಚ್ಚಿನವರು ಯಾವುದೋ ಕೆಲಸ ಮಾಡುತ್ತಿದ್ದು ಥಟ್ಟನೇ ಅಲಂಕಾರಕ್ಕೆ ಇಳಿದುಬಿಡುತ್ತಾರೆ. ಅಲ್ಲದೇ ಆ ಹೊತ್ತಿನಲ್ಲಿ ಶೌಚಾಲಯ ಲಭ್ಯವಿಲ್ಲದೇ ಇರುವುದು, ಜನಜಂಗುಳಿಯಲ್ಲಿ ಕೈತೊಳೆಯಲು ಸಾಧ್ಯವಾಗದಿರುವುದರಿಂದ ಅಸಡ್ಡೆ ತೋರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪ್ರತಿಬಾರಿ ಮೇಕಪ್‌ಗೂ ಮೊದಲು ಕೈಗಳನ್ನು ತೊಳೆದುಕೊಳ್ಳಿ
ಇಂತಹ ಸಮಯದಲ್ಲಿ ಕೊಂಚ ಕಷ್ಟವಾದರೂ ಸರಿ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ಅಗತ್ಯ. ಒಂದು ವೇಳೆ ನೀರು ಸಿಗುವ ಸಾಧ್ಯತೆ ಕಡಿಮೆಯಿದ್ದು ಸಮಯಾಭಾವವಿದ್ದರೆ ಮಾರುಕಟ್ಟೆಯಲ್ಲಿ ಸಿಗುವ hand sanitizer ಎಂಬ ಸಿದ್ಧ ಮಾರ್ಜಕವನ್ನು ಬಳಸಿ ಕೈಗಳನ್ನು ಕ್ರಿಮಿರಹಿತವಾಗಿಸಿಕೊಳ್ಳಿ. ಕೈತೊಳೆಯದೇ ಕಣ್ಣುಗಳಿಗೆ ಹಚ್ಚಿಕೊಳ್ಳುವ ಯಾವುದೇ ಪ್ರಸಾಧನ ಸೋಂಕು ಮತ್ತಿತರ ತೊಂದರೆಗಳನ್ನು ತಂದೊಡ್ಡಬಹುದು.

ಮಸ್ಕಾರಾವನ್ನು ರೆಪ್ಪೆಗಳ ತುದಿಗೆ ಮಾತ್ರ ಹಚ್ಚಿ
ಮಸ್ಕಾರಾ ಹಚ್ಚುವ ವೇಳೆ ಬಣ್ಣವು ಕೂದಲುಗಳ ಬುಡದ ಚರ್ಮಕ್ಕೆ ತಾಕದೇ ಕೂದಲ ಮಧ್ಯಭಾಗದಿಂದ ತುದಿಗಳವರೆಗೆ ಮಾತ್ರ ಲೇಪನವಾಗುವಂತೆ ಹಚ್ಚಿ. ಏಕೆಂದರೆ ಕಣ್ಣುರೆಪ್ಪೆಗಳ ಕೂದಲ ಬುಡಗಳು ಅತಿ ಸೂಕ್ಷ್ಮವಾಗಿದ್ದು ಮಸ್ಕಾರದಲ್ಲಿರುವ ಅತಿ ಸೂಕ್ಷ್ಮ ಕ್ರಿಮಿಗಳು ಸೋಂಕು ಉಂಟುಮಾಡಬಹುದು.



Click it and Unblock the Notifications