Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಸೌಂದರ್ಯ ರಹಸ್ಯ, ಅದೂ ಬರೀ ಒಂದೇ ನಿಮಿಷದಲ್ಲಿ!
ಬಹುತೇಕ ಸಂದರ್ಭಗಳಲ್ಲಿ ನಾವು ನಮ್ಮ ಲುಕ್ ಅನ್ನು ಮತ್ತಷ್ಟು ಚಂದ ಕಾಣಿಸಿಕೊಳ್ಳಲು ಬಯಸುತ್ತೇವೆಯಾದರೂ, ಸಮಯಾವಕಾಶದ ಕೊರತೆಯಿಂದ ಅದನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರಲ್ಲಿಯೂಕಾಲಾವಕಾಶ ಕಡಿಮೆಯಿದ್ದಲ್ಲಿ, ಮೇಕಪ್ ಹಾಕಿಕೊಳ್ಳಲು ಪುರುಸೊತ್ತು ಎಲ್ಲಿರುತ್ತದೆ. ಸಾಮಾನ್ಯವಾಗಿ ಕಣ್ಣಿನ ಮೇಕಪ್ ಮತ್ತು ನೇಲ್ ಪಾಲಿಶ್ ಹಾಕಿಕೊಳ್ಳಲು ಹೆಚ್ಚು ಸಮಯಾವಕಾಶ ಬೇಕಾಗುತ್ತದೆ.
ಏಕೆಂದರೆ ಇವುಗಳಿಗೆ ಅಧಿಕವಾದ ನಿಖರತೆಯ ಅವಶ್ಯಕತೆ ಇರುತ್ತದೆ. ಇದನ್ನು ಮುತುವರ್ಜಿಯಿಂದ ಹಾಕದಿದ್ದರೆ, ಅವುಗಳಿಂದ ನಿಮ್ಮ ಕಣ್ಣು ಮತ್ತು ಉಗುರುಗಳು ಸೌಂದರ್ಯವನ್ನು ಕಳೆದುಕೊಂಡು ಕಳೆಗುಂದುತ್ತವೆ. ಅದೇ ರೀತಿ ಮುಖಕ್ಕೆ ಸಂಪೂರ್ಣವಾಗಿ ಮೇಕಪ್ ಹಾಕಲು ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ. ಅಷ್ಟು ಕಾಲ ಅದನ್ನು ಸರಿಯಾಗಿ ಹಾಕಿಕೊಂಡರೆ ಮಾತ್ರ ಮುಖದ ಅಂದ ಇಮ್ಮಡಿಗೊಳ್ಳುತ್ತದೆ. ನಿಮಿಷಾರ್ಧದಲ್ಲಿ ತ್ವಚೆಯ ಕಾಂತಿ ಹೆಚ್ಚಿಸುವ ಇರಾದೆಯೇ?
ಆದರೆ ಈಗ ನೀವು ಈ ವಿಷಯಕ್ಕಾಗಿ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ನಿಮಗಾಗಿ ನಾವು ಶೀಘ್ರವಾಗಿ ಮೇಕಪ್ ಮಾಡಿಕೊಳ್ಳಲು ನಾವು ನಿಮಗೆ ಕೆಲವೊಂದು ಸಲಹೆಗಳನ್ನು ಇಂದು ನೀಡುತ್ತಿದ್ದೇವೆ. ಈ ಶೀಘ್ರವಾಗಿ ಮಾಡಿಕೊಳ್ಳಬಹುದಾದ ಮೇಕಪ್ ಹೆಚ್ಚು ಸಮಯ ಕೇಳುವ ಮೇಕಪ್‌ಗಿಂತ ಸ್ವಲ್ಪ ಹೆಚ್ಚೇ ಎನ್ನಬಹುದಾದ ಸೌಂದರ್ಯವನ್ನು ನಿಮಗೆ ನೀಡುತ್ತದೆ.
ಉದಾ: ನಿಮ್ಮ ಉಗುರಿನ ತುದಿಗೆ ನೇಲ್ ಪಾಲಿಶ್ ಅಂಟಿಕೊಳ್ಳುತ್ತದೆ ಎಂದಲ್ಲಿ, ನೇಲ್ ಪಾಲಿಶ್ ಹಚ್ಚಿಕೊಳ್ಳುವ ಮೊದಲು ಉಗುರಿನ ಸುತ್ತ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿಕೊಳ್ಳಿ. ಇದರಿಂದ ಬಣ್ಣ ಅಕ್ಕ ಪಕ್ಕ ಅಂಟಿಕೊಳ್ಳುವುದಿಲ್ಲ. ಇಂತಹ ಹಲವಾರು ಸಲಹೆಗಳು ಇವೆ. ಅವುಗಳು ಯಾವುವು ಎಂದು ತಿಳಿದುಕೊಳ್ಳಲು ಮುಂದೆ ಓದಿ. ಮೇಕಪ್ ಪುರಾಣ: ಮಹಿಳೆಯರ ಗೋಳು ಕೇಳುವವರು ಯಾರು?

ತುಟಿಗಳಿಗಾಗಿ ಸರಳ ಸಲಹೆಗಳು
ತುಟಿಯ ತುದಿಯಲ್ಲಿ ಮತ್ತು ಮೇಲ್ತುಟಿಯ ಮೇಲೆ ಸ್ವಲ್ಪ ಕನ್ಸೀಲರನ್ನು ಲೇಪಿಸಿ. ಲಿಪ್‌ಸ್ಟಿಕ್ ಹಚ್ಚುವ ಮೊದಲು ಅದನ್ನು ಅಕ್ಕ-ಪಕ್ಕಕ್ಕೆ ವಿಸ್ತರಿಸುವಂತೆ ಉಜ್ಜಿಕೊಳ್ಳಿ. ಆಗ ಅದರ ಮೇಲೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳಿ, ಲಿಪ್‌ಸ್ಟಿಕ್ ಹಚ್ಚಿಕೊಂಡ ಮೇಲೆ ಲಿಪ್ ಲೈನರ್ ಹಚ್ಚಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಕ್ವಿಕ್ ಸ್ಮೋಕಿ ಐಸ್
ಸ್ಮೋಕಿ ಐಸ್ ಎಂಬುದು ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ಮೇಕಪ್ ಆಗಿರುತ್ತದೆ. ಕ್ವಿಕ್ ಸ್ಮೋಕಿ ಐಸ್ ಎಂಬುದು ಒಂದು ನಿಮಿಷದಲ್ಲಿ ಮಾಡಿಕೊಳ್ಳುವ ಮೇಕಪ್ ಹಾಗಿರುತ್ತದೆ. ಇದಕ್ಕಾಗಿ ಕ್ರೀಮ್ ಅಥವಾ ಜೆಲ್ ಲೈನರ್ ಬಳಸಿ ಸಾಕು. ಸಾಮಾನ್ಯವಾಗಿ ಲೇಪಿಸುವಂತೆ ಜೆಲ್ ಲೈನರ್ ಅನ್ನು ಬೆರಳ ತುದಿಯಿಂದ ಲೇಪಿಸಿ. ನಿಮ್ಮ ಐಶಾಡೋ ಜೊತೆಗೆ ಬ್ಲೆಂಡ್ ಮಾಡಿ.

ನೇಲ್ ಪಾಲಿಶ್ ಅಕ್ಕ-ಪಕ್ಕ ಬಳಿದುಕೊಳ್ಳುವುದನ್ನು ತಡೆಯುವುದು ಹೇಗೆ
ನೇಲ್ ಪಾಲಿಶ್ ಲೇಪಿಸುವಾಗ ಇದೊಂದು ಸಾಮಾನ್ಯ ಸಮಸ್ಯೆ. ನೇಲ್ ಪಾಲಿಶ್ ಹಾಕಿಕೊಳ್ಳುವಾಗ ಉಗುರಿನಿಂದ ಅಕ್ಕ-ಪಕ್ಕ ಬಳಿದುಕೊಳ್ಳುವುದು ಮಾಮೂಲಿ. ಇದನ್ನು ತಪ್ಪಿಸಲು, ಉಗುರಿಗೆ ನೇಲ್ ಪಾಲಿಶ್ ಹಚ್ಚಿಕೊಳ್ಳುವ ಮೊದಲು ಪೆಟ್ರೋಲಿಯಂ ಜೆಲ್ಲಿ ಅನ್ನು ಲೇಪಿಸಿಕೊಳ್ಳಿ. ಇದರ ಮೇಲೆ ನೇಲ್ ಪಾಲಿಶ್ ಲೇಪಿಸಿಕೊಳ್ಳಿ.

ನಿದ್ದೆಯಿಂದ ಮಂಕಾದ ಮುಖವನ್ನು ಮರೆಸಲು ಸೌಂದರ್ಯ ಸಲಹೆ
ಬೆಳಗ್ಗೆ ಎದ್ದ ಕೂಡಲೆ ನಿಮ್ಮ ಮುಖವು ತಾಜಾ ಆಗಿ ಕಾಣಿಸಿಕೊಳ್ಳಬೇಕು ಎಂದು ಯಾರು ತಾನೇ ಬಯಸುವುದಿಲ್ಲ. ಒಂದು ವೇಳೆ ನೀವು ಸರಿಯಾಗಿ ನಿದ್ದೆ ಮಾಡಲಿಲ್ಲವಾದಲ್ಲಿ, ನಿಮ್ಮ ತ್ವಚೆಯು ಸಹ ಇದರಿಂದ ಮಂಕಾಗುತ್ತದೆ. ಇದಕ್ಕಾಗಿ ಕನ್ಸೀಲರ್ ಅನ್ನು ಬಳಸಿ. ಕಣ್ಣಿನ ಒಳ ವೃತ್ತಗಳ ಸುತ್ತ ಲೇಪಿಸಿ, ಇದರಿಂದ ಕಣ್ಣುಗಳು ಮತ್ತೆ ಲವಲವಿಕೆಯಿಂದ ಕಾಣಿಸಿಕೊಳ್ಳುತ್ತವೆ.

ಊದಿಕೊಂಡ ಕಣ್ಣುಗಳಿಗಾಗಿ ಬೆಚ್ಚಗಿನ ಮಸಾಜ್
ಒಂದು ವೇಳೆ ನಿಮ್ಮ ಕಣ್ಣುಗಳು ಊದಿಕೊಂಡರೆ ಅದಕ್ಕೆ ಶೀಘ್ರ ಸಲಹೆ ಒಂದಿದೆ. ಸ್ವಲ್ಪ ಉಪ್ಪನ್ನು ಬೆಚ್ಚಗಿನ ನೀರು ಇರುವ ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿ, ನಿಮ್ಮ ಕಣ್ಣುಗಳ ಮೇಲೆ ಮಸಾಜ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಊದಿಕೊಂಡ ಕಣ್ಣುಗಳ ಸಮಸ್ಯೆ ದೂರವಾಗುತ್ತದೆ.



Click it and Unblock the Notifications
