Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಮೈನಡುಗಿಸುವ ಮೇಕಪ್ ಹಿಂದಿರುವ ಕರಾಳ ಸತ್ಯ!
ಸೌಂದರ್ಯ ಎಂಬುದು ಹೆಣ್ಣಿಗೆ ಭೂಷಣ. ಅಲಂಕಾರ ಪ್ರಿಯಳೂ ಆಗಿರುವ ನಾರಿಯ ಸಹಜ ಸೌಂದರ್ಯವನ್ನು ಇಮ್ಮಡಿಗೊಳಿಸುವುದು ಸೌಂದರ್ಯ ಪ್ರಸಾಧನಗಳಾಗಿವೆ. ಕಣ್ಣಿಗೆ ಕಣ್ಣುಗಪ್ಪು, ತುಟಿಗೆ ತೆಳುವಾಗಿ ಲೇಪಿಸಿದ ಲಿಪ್‌ಸ್ಟಿಕ್, ಮುಖದಲ್ಲಿ ಮಿರುಗುವ ಕಾಂಪ್ಯಾಕ್ಟ್ ಮೆರುಗು, ಐ ಲ್ಯಾಶಸ್ ಹೀಗೆ ಆಧುನಿಕ ಸ್ತ್ರೀಯರ ಸೌಂದರ್ಯ ಸಾಧನಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಆದರೆ ಈ ಸಾಮಾಗ್ರಿಗಳು ಪರಿಣಾಮಕಾರಿಯಾದರು ಸಹ ಅಷ್ಟೇ ಅಪಾಯಕಾರಿ ಎಂಬುದನ್ನು ಮರೆಯಬಾರದು. ಸೌಂದರ್ಯವರ್ಧಕಗಳು ಸ್ತ್ರೀಯ ಅಂದವನ್ನು ಇಮ್ಮಡಿಗೊಳಿಸುತ್ತವೆ. ಆದರೆ ಅದೇ ಸಮಯದಲ್ಲಿ ಇವುಗಳಲ್ಲಿರುವ ಅಪಾಯಕಾರಿ ರಾಸಾಯನಿಕಗಳು ತ್ವಚೆಯ ಆರೋಗ್ಯವನ್ನು ಹಾಳು ಮಾಡುತ್ತವೆ. ಹಲವಾರು ಸೌಂದರ್ಯವರ್ಧಕಗಳು ಮತ್ತು ಮೇಕಪ್ ಉತ್ಪನ್ನಗಳು ತ್ವಚೆಯ ಮೇಲೆ ಘೋರ ಪರಿಣಾಮವನ್ನು ಉಂಟು ಮಾಡುತ್ತವೆಯೆಂದು ಅಧ್ಯಯನಗಳಿಂದ ಧೃಡಪಟ್ಟಿದೆ. ಮೇಕಪ್ ಕಿಟ್ ಅನ್ನು ವ್ಯವಸ್ಥಿತವಾಗಿರಿಸಲು ಟಾಪ್ ಸಲಹೆಗಳು
ಹೌದು ಇತ್ತೀಚಿನ ದಿನಗಳಲ್ಲಿ ಮೇಕಪ್ ಇಲ್ಲದೆ ಯಾರೂ ಕೂಡ ಹೊರ ಹೊರಡುವುದಿಲ್ಲ, ಯಾವುದೇ ಕಾರ್ಯಕ್ರಮ, ಅಥವಾ ಮದುವೆ ಸಮಾರಂಭಕ್ಕೆ ಹೋಗಬೇಕಾದರೂ ಕೂಡ ಸಾಕಷ್ಟು ಬಾರಿ ಕನ್ನಡಿ ಮುಂದೆ ನಿಂತು ಮೇಕಪ್‌ನ ಮೊರೆಹೋಗುತ್ತಾರೆ, ಅದರಲ್ಲೂ ಹುಡುಗಿಯರಂತೂ ಕೇಳುವುದೇಬೇಡ, ಆದರೆ ಇದರ ಪರಿಣಾಮ ಮಾತ್ರ ನೇರವಾಗಿ ನಿಮ್ಮ ತ್ವಚೆ ಹಾಗೂ ಆರೋಗ್ಯದ ಮೇಲೆ ಬೀಳುತ್ತದೆ. ಮೇಕಪ್ ಕುರಿತು ಸರಿಯಾದ ಕಾಳಜಿವಹಿಸದಿದ್ದರೆ ಈ ಸಂಗಾತಿಯೇ ನಿಮ್ಮ ಶತ್ರು ಆಗುವುದರಲ್ಲಿ ಸಂಶಯವಿಲ್ಲ! ಅದಕ್ಕಾಗಿ ನಾವು ಇಲ್ಲಿ ನಿಮಗಾಗಿ ನಿಮ್ಮ ತ್ವಚೆಗೆ ಹಾನಿಯುಂಟು ಮಾಡುವ ಸೌಂದರ್ಯವರ್ಧಕಗಳ ಮತ್ತು ಮೇಕಪ್ ಉತ್ಪನ್ನಗಳ ಪಟ್ಟಿಯನ್ನು ನೀಡಿದ್ದೇವೆ, ಮುಂದೆ ಓದಿ...
ಕಾಡಿಗೆ

ನೇಲ್ ಪಾಲಿಶ್
ಟಾಲ್ಕಂ ಪೌಡರ್
ಹೇರ್ ಕಲರ್ ಮತ್ತು ಹೇರ್‌ಡೈಗಳು
ನಿಮ್ಮ ಕೂದಲಿಗೆ ಬಣ್ಣವನ್ನು ಬಳಿದುಕೊಳ್ಳುವ ಮೊದಲು ಅವುಗಳಿಂದ ನಿಮ್ಮ ಕೂದಲಿನ ಮೇಲೆ ಉಂಟಾಗುವ ಅಲರ್ಜಿಯ ಪರಿಣಾಮಗಳ ಬಗ್ಗೆ ಮೊದಲು ಯೋಚಿಸಿ. ಇದರಿಂದ ಕೂದಲು ಉದುರುವಿಕೆ, ಕೂದಲು ಸುಟ್ಟು ಹೋಗುವುದು, ಒಡೆದ ಕೂದಲು, ಮುಖದ ಮೇಲೆ ಬಾವುಗಳುಂಟಾಗುವುದು, ಉಸಿರಾಟದ ತೊಂದರೆಗಳು ಉಂಟಾಗುವ ಸಾಧ್ಯತೆಗಳು ಇವೆ. ಹೇರ್ ಡೈಗಳಲ್ಲಿ ಹಲವಾರು ರಾಸಾಯನಿಕಗಳು ಇದ್ದು, ಅವುಗಳಿಂದ ಮಾನವನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳುಂಟಾಗುತ್ತವೆಯೆಂದು ತಿಳಿದು ಬಂದಿದೆ.
ಡಿಯೋಡ್ರೆಂಟ್
ವೈಜ್ಞಾನಿ ಅಧ್ಯಯನಗಳ ಪ್ರಕಾರ ಡಿಯೋಡ್ರೆಂಟ್‌ಗಳಲ್ಲಿರುವ ಅಂಶಗಳು ನಿಮ್ಮ ತ್ವಚೆ ಮತ್ತು ದೇಹಕ್ಕೆ ಹಾನಿಯುಂಟು ಮಾಡುತ್ತವೆ. ಎಲ್ಲರಿಗು ತಿಳಿದ ವಿಚಾರವೇನೆಂದರೆ ಡಿಯೋಡ್ರೆಂಟ್‌ಗಳು ಚರ್ಮದಲ್ಲಿ ತುರಿಕೆಯನ್ನುಂಟು ಮಾಡುತ್ತವೆ (ಏಕೆಂದರೆ ಇವುಗಳಲ್ಲಿ ಆಲ್ಕೋಹಾಲ್ ಇರುತ್ತದೆ) ಮತ್ತು ಕೆಂಪಗೆ ಗುಳ್ಳೆಗಳನ್ನುಂಟು ಮಾಡುತ್ತವೆ. ಇದು ತುರಿಕೆಯನ್ನು ಹೆಚ್ಚು ಮಾಡಿ, ಕೊನೆಗೆ ಚರ್ಮದ ಬುಡದವರೆಗೆ ತುರಿಕೆ ಹಬ್ಬುವಂತೆ ಮಾಡುತ್ತವೆ.
ಸುಗಂಧ ದ್ರವ್ಯಗಳು
ಸೌಂದರ್ಯವರ್ಧಕಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇವೆ ಎಂದು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ. ಸುಗಂಧ ದ್ರವ್ಯದಲ್ಲಿ ಸಹ ರಾಸಾಯನಿಕಗಳು ಇವೆ. ಈ ಸುಗಂಧ ದ್ರವ್ಯಗಳು ಫ್ಯಾಬ್ರಿಕ್ ಸಾಫ್ಟನರ್ಸ್, ಲಾಂಡ್ರಿ ಡಿಟರ್ಜೆಂಟ್‍ಗಳು, ಪರ್ಸನಲ್ ಕೇರ್ ಉತ್ಪನ್ನಗಳು, ಪರ್ಫ್ಯೂಮ್ಸ್, ಏರ್ ಫ್ರೆಶ್‍ನರ್ಸ್ ಮತ್ತು ಇನ್ನಿತರ ಉತ್ಪನ್ನಗಳು ಆರೋಗ್ಯ ಮತ್ತು ಪರಿಸರದ ಸಮಸ್ಯೆಗಳಿಗೆ ತಮ್ಮ ಕೊಡುಗೆಯನ್ನು ನೀಡುತ್ತವೆ..!



Click it and Unblock the Notifications




