Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ರಾಹುಲ್ ಮಿಶ್ರಾ ಸೀರೆಯಲ್ಲಿ ಸ್ಟನ್ನಿಂಗ್ ವಿದ್ಯಾ ಬಾಲನ್
ತಮ್ಮದೇ ಆದ ಸ್ಟೈಲ್ ಪಾಯಿಂಟ್‌ನಿಂದ ನಿಮ್ಮನ್ನು ಬೆಚ್ಚು ಬೀಳಿಸುವ ಸುಂದರಿ ವಿದ್ಯ ಬಾಲನ್. ಒಮ್ಮೊಮ್ಮೆ ತಮ್ಮ ದೇಹಕ್ಕೆ ಹೊಂದಿಕೆಯಾಗದ ಧಿರಿಸುಗಳನ್ನು ಧರಿಸಿ ಅವರು ನಿಮ್ಮನ್ನು ಸ್ತಂಬೀಭೂತಗೊಳಿಸಿದರೆ ಇನ್ನು ಕೆಲವೊಮ್ಮೆ ಸೀರೆಯಲ್ಲಿ ಅತ್ಯಾಕರ್ಷಕ ಸುಂದರಿ ಎಂದೆನಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಒಂದು ಟಾಕ್ ಶೋನಲ್ಲಿ ನಮಗೆ ಸೀರೆಯಲ್ಲಿ ವಿದ್ಯಾ ಬಾಲನ್ ದರ್ಶನ ನೀಡಿದರು.
ಸರಳವಾದ ಕಾಟನ್ ಸೀರೆಯಲ್ಲಿ ವಿದ್ಯಾ ಕಂಡುಬಂದಿದ್ದರು. ಆರೇಂಜ್, ಹಳದಿ ಮತ್ತು ನೇರಳೆ ಬಾರ್ಡರ್ ಅನ್ನು ಹೊಂದಿದ್ದ ಸೀರೆ ರಾಹುಲ್ ಮಿಶ್ರಾ ವಿನ್ಯಾಸದ್ದಾಗಿದೆ. ಸೀರೆಯು ಸರಳವಾಗಿದ್ದರೂ ಬಳಸಿದ ಬಣ್ಣದಿಂದ ಅದಕ್ಕೊಂದು ಡಿಫರೆಂಟ್ ಲುಕ್ ಬಂದಿತ್ತು. ಬೇಸಿಗೆ-ಸ್ನೇಹಿ ಸೀರೆಯ ಧರಿಸುವಿಕೆಯು ವಿದ್ಯಾರನ್ನು ಇನ್ನಷ್ಟು ಸ್ಟೈಲಿಶ್ ಮತ್ತು ಸೂಪರ್ಬ್‌ಗೊಳಿಸಿದೆ. For More Pics
ಹಸಿರು ಧಿರಿಸಿನಲ್ಲಿ ಕಂಗೊಳಿಸಿದ ವಿದ್ಯಾ ಬಾಲನ್

ಸೀರೆಯ ರವಿಕೆ ಕೂಡ ಆಕರ್ಷಕವಾಗಿ ಕಂಡುವಂದಿದ್ದು ಹಾಫ್ ಸ್ಲೀವ್ ರವಿಕೆ ಸ್ಟೈಲ್ ಅನ್ನು ಇವರು ಆಯ್ದುಕೊಂಡಿದ್ದಾರೆ. ನಮ್ಮ ಮಟ್ಟಿಗೆ ಬೇರೆ ಬಣ್ಣವನ್ನು ಕೂಡ ರವಿಕೆಗೆ ಅವರು ಆಯ್ಕೆಮಾಡಬಹುದಾಗಿತ್ತು ಎಂದಾಗಿದೆ.
ಡಿಸೈನ್ ಕೂಡ ಅಷ್ಟೊಂದು ಆಕರ್ಷಕವಾಗಿಲ್ಲ ಎಂಬುದು ನಮ್ಮ ಅನಿಸಿಕೆಯಾಗಿದೆ. ಈ ಧಿರಿಸಿಗೆ ತಕ್ಕಂತೆ ಅವರು ಆಮ್ರಪಾಲಿ ಆಭರಣಗಳನ್ನು ಧರಿಸಿದ್ದಾರೆ. ಸಿಲ್ವರ್ ಜುಮುಕಿ ಮತ್ತು ಬಳೆಗಳು ಸೀರೆಗೆ ಹೆಚ್ಚಿನ ಶೋಭೆಯನ್ನು ತಂದಿವೆ.
ಎಂದಿನಂತೆ ಇಂದೂ ಕೂಡ ಹೆಚ್ಚಿನ ಉಂಗುರಗಳನ್ನು ಧರಿಸಿರುವ ವಿದ್ಯಾ ಇನ್ನಷ್ಟು ಆಕರ್ಷಕರಾಗಿ ಕಾಣುತ್ತಿದ್ದಾರೆ. ಆಕೆಯ ಹೇರ್‌ಸ್ಟೈಲ್ ಸಿಂಪಲ್ ಆಗಿ ಸಾಂಪ್ರದಾಯಕವಾಗಿದೆ.
ಹೆಚ್ಚಾಗಿ ಆಕೆ ಪಿನ್ ಹಾಕಿ ಅರ್ಧಕ್ಕೆ ಎತ್ತಿಕಟ್ಟಿದಂತೆ ತಮ್ಮ ಕೂದಲನ್ನು ಶೃಂಗರಿಸಿಕೊಳ್ಳುತ್ತಾರೆ. ಸರಳ ಪಿಂಕ್ ಬಣ್ಣದ ಬಿಂದಿಯನ್ನು ತೊಟ್ಟಿರುವ ವಿದ್ಯಾ ಹೆಚ್ಚಿನ ಮೇಕಪ್ ಅನ್ನು ಮಾಡಿಕೊಂಡಿಲ್ಲ. ಅನುಪಮ್ ಖೇರ್ ಅವರ ಶೋಗೆ ವಿದ್ಯಾರ ಈ ಶೃಂಗಾರ ಬಿಗ್ ಹಿಟ್ ಎಂದರೂ ತಪ್ಪಲ್ಲ.
ಪಾಯಲ್ ಸಿಂಗಾಲ್ ವಿನ್ಯಾಸದ ಸೀರೆಯಲ್ಲಿ ವಿದ್ಯಾಬಾಲನ್
ವಿದ್ಯಾ ಸಾಕಷ್ಟು ಫ್ಯಾಶನ್ ತಪ್ಪುಗಳನ್ನು ಮಾಡಿದ್ದರೂ ಆಕೆಯ ಸೀರೆ ಈ ತಪ್ಪುಗಳನ್ನು ಮುಚ್ಚಿ ಹಾಕುವಲ್ಲಿ ಆಕೆಗೆ ಸಹಾಯ ಮಾಡುತ್ತದೆ. ಸೀರೆಯಲ್ಲಿ ಇನ್ನಷ್ಟು ಸುಂದರಿ ಮತ್ತು ಆಕರ್ಷಕವಾಗಿ ಕಾಣುವ ವಿದ್ಯಾರನ್ನು ಸೀರೆಯಲ್ಲಿ ಸೋಲಿಸಲು ಯಾರಿಗೂ ಸಾಧ್ಯವಿಲ್ಲ ಎಂಬುದು ಬಾಲಿವುಡ್ ಮಾತು.



Click it and Unblock the Notifications
