Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಸಿರು ಧಿರಿಸಿನಲ್ಲಿ ಕಂಗೊಳಿಸಿದ ವಿದ್ಯಾ ಬಾಲನ್
ಮುಂಬೈನಲ್ಲಿ ನಡೆದ ಸಿಟಿಲೈಟ್ ಸ್ಕ್ರೀನಿಂಗ್‌ನಲ್ಲಿ ವಿದ್ಯಾ ಹಸಿರು ಅನಾರ್ಕಲಿ ಧಿರಿಸಿನಲ್ಲಿ ಸುಂದರಿಯಾಗಿದ್ದರು. ಯಾವಾಗಲೂ ಡ್ರೆಸ್ಸಿಂಗ್ ವಿಷಯದಲ್ಲಿ ಸ್ವಲ್ಪ ಅಸಡ್ಡೆ ತೋರುತ್ತಿದ್ದ ವಿದ್ಯಾ ಈ ಬಾರಿ ಅನಾರ್ಕಲಿಯಲ್ಲಿ ಮುದ್ದಾಗಿ ಕಾಣುತ್ತಿದ್ದರು.
ಪಾಯಲ್ ಸಿಂಗಾಲ್ ವಿನ್ಯಾಸದ ಸೀರೆಯಲ್ಲಿ ವಿದ್ಯಾಬಾಲನ್
ತಮ್ಮ ಪತಿ ಸಿದ್ಧಾರ್ಥ್‌ರೊಂದಿಗೆ ಕಾಣಿಸಿಕೊಂಡ ವಿದ್ಯಾ ತುಂಬಾ ಸ್ಟೈಲಿಶ್ ಆಗಿ ಕಂಡುಬಂದಿದ್ದರು. ಆಕೆಯ ಈ ನೋಟ ಇಷ್ಟು ಸುಂದರವಾಗಲು ಕಾರಣ ಪತಿ ಸಿದ್ಧಾರ್ಥ್ ಎಂಬುದು ಮೂಲಗಳ ಮಾಹಿತಿಯಾಗಿದೆ. ಸಿದ್ಧಾರ್ಥ್ ಕೂಡ ಕೆಂಪು ಕುರ್ತಾದಲ್ಲಿ ಮದುಮಗನಂತೆ ಕಂಗೊಳಿಸುತ್ತಿದ್ದರು.
ಸರಳವಾಗಿ ಸುಂದರಿಯಾಗಿದ್ದ ವಿದ್ಯಾ ಕೊಂಚ ದಪ್ಪಗಾದಂತೆ ಕಾಣುತ್ತಿದ್ದರು. ಸುಂದರ ನಗುವನ್ನು ಚೆಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಪುಳಕಿತಗೊಳಿಸಿದರು ಈ ಪ್ರತಿಭಾವಂತ ನಟಿ. ಆಕೆಯ ಇನ್ನಷ್ಟು ಸ್ಟೈಲಿಶ್ ನೋಟಗಳನ್ನು ಕಣ್ತುಂಬಿಕೊಳ್ಳಲು ಸ್ಲೈಡ್‌ನತ್ತ ನೋಟ ಹರಿಸಿ.

ಹಸಿರು ಬ್ಯೂಟಿ:
ಹಸಿರು ಬಣ್ಣದ ಅನಾರ್ಕಲಿಯನ್ನು ಧರಿಸಿದ್ದ ವಿದ್ಯಾ ಸಿಂಪಲ್ ಹಾಗೂ ಸೂಪರ್ ಆಗಿದ್ದರು. ಪ್ರಿಂಟೆಡ್ ಚೂಡಿದಾರ್ ಕುರ್ತಾ ಆಕೆಗೆ ಹೊಸ ನೋಟವನ್ನು ನೀಡಿತ್ತು.

ಆಕೆಯ ಹೇರ್‌ಕಟ್:
ಆಕೆಯ ಹೇರ್‌ಸ್ಟೈಲ್ ಕುರ್ತಾಗೆ ಹೇಳಿಮಾಡಿಸಿದಂತಿದೆ. ಸರಳವಾಗಿ ಇಳಿಬಿಟ್ಟ ಕೂದಲು ಸಿಂಪಲ್ ತನವನ್ನು ತೋರಿಸಿದೆ.

ಫ್ಯಾನ್ಸಿ ಸ್ಲಿಪ್ಪರ್:
ಸಿಟಿಲೈಟ್ಸ್ ಸ್ಕ್ರೀನಿಂಗ್‌ನಲ್ಲಿ ಸರಳವಾದ ಚಪ್ಪಲಿಗಳನ್ನು ಧರಿಸಿ ಧಿರಿಸಿಗೆ ತಕ್ಕಂತೆ ಆಯ್ಕೆಮಾಡಿಕೊಂಡಿದ್ದಾರೆ.

ಮೇಕಪ್:
ಸರಳ ಹಾಗೂ ಕನಿಷ್ಟ ಮೇಕಪ್ ಅನ್ನು ಮಾಡಿಕೊಂಡು ಸಿಟಿಲೈಟ್ ಸ್ಕ್ರೀನಿಂಗ್‌ಗೆ ಆಗಮಿಸಿದ್ದ ವಿದ್ಯಾ ಕಣ್ಣಿಗೆ ಹಬ್ಬವನ್ನುಂಟು ಮಾಡಿದ್ದಾರೆ. ಆಕೆಯ ಕೆಂಪು ತುಟಿಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು.

ಆಭರಣಗಳು:
ಕಪ್ಪು ಬಳೆಗಳನ್ನು ಧರಿಸಿ ವಿದ್ಯಾ ತಮ್ಮ ಉಡುಗೆಗೆ ಸರಳತೆಯ ಚೌಕಟ್ಟನ್ನು ನೀಡಿದ್ದಾರೆ.

ವಿದ್ಯಾರ ಹ್ಯಾಂಡ್‌ಬ್ಯಾಗ್:
ಆಕೆಯ ಕೆಂಪು ಬಣ್ಣದ ಬ್ಯಾಗ್ ಧಿರಿಸಿಗೆ ಚೆನ್ನಾಗಿ ಒಪ್ಪುವಂಥದ್ದು. ಆಕೆಯ ಪತಿ ಕೂಡ ವಿದ್ಯಾರ ಬ್ಯಾಗ್ ಅನ್ನು ಇಷ್ಟಪಟ್ಟಿದ್ದಾರಂತೆ.

ವಿದ್ಯಾ ಮತ್ತು ಆಕೆಯ ಪತಿ:
ಇಬ್ಬರೂ ಜೋಡಿಗಳು ಸಿಟಿಲೈಟ್ ಸ್ಕ್ರೀನಿಂಗ್ ಕಾರ್ಯಕ್ರಮದಲ್ಲಿ ಸ್ಟೈಲಿಶ್ ಆಗಿ ಕಂಡುಬಂದಿದ್ದಾರೆ. ಇವರುಗಳು ಆರಿಸಿದ ಬಣ್ಣ ಪ್ರೀತಿಯ ಸಂಕೇತದಂತಿವೆ.



Click it and Unblock the Notifications
