Latest Updates
-
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ!
ಅನಾರ್ಕಲಿ ಧಿರಿಸಿನಲ್ಲಿ ಮುದ್ದು ಮುದ್ದು ವಿದ್ಯಾ ಬಾಲನ್!
ಸೀರೆಯಲ್ಲಿ ನಮಗೆ ಹೆಚ್ಚು ಸುಂದರಿಯಾಗಿ ಕಾಣುವ ನಟಿ ಯಾರೆಂದರೆ ಥಟ್ಟನೆ ನೆನಪಿಗೆ ಬರುವುದು ವಿದ್ಯಾ ಬಾಲನ್ ಎಂಬ ಪ್ರತಿಭಾವಂತ ನಟಿ. ರೇಖಾ ಕೂಡ ಸೀರೆಯಲ್ಲಿ ಪರ್ಫೆಕ್ಟ್ ಆಗಿ ಮನಸೆಳೆಯುವವರೇ ಆದರೆ ವಿದ್ಯಾರ ಸೀರೆಯ ಸ್ಟೈಲ್ ಅನ್ನು ಯಾರಿಗೂ ನಕಲಿಸಲಾಗುವುದಿಲ್ಲ ಮತ್ತು ಅವರಿಗೆ ಪ್ರತಿಸ್ಪರ್ಧಿಯೇ ಇಲ್ಲ!
ಪಾಯಲ್ ಸಿಂಗಾಲ್ ವಿನ್ಯಾಸದ ಸೀರೆಯಲ್ಲಿ ವಿದ್ಯಾಬಾಲನ್
ಬಾಬಿ ಜಾಸೂಸ್ ಮೂವಿ ಟ್ರೇಲರ್ ಕಾರ್ಯಕ್ರಮದಲ್ಲಿ ಕೊಂಚ ಡಿಫರೆಂಟ್ ಆಗಿ ವಿದ್ಯಾ ಬಾಲನ್ ಕಂಡುಬಂದಿದ್ದರು. ಅನಿತಾ ಡೋಂಗ್ರೆ ವಿನ್ಯಾಸದ ಡಿಸೈನರ್ ಅನಾರ್ಕಲಿಯಲ್ಲಿ ವಿದ್ಯಾ ಅಪ್ರತಿಮರಾಗಿದ್ದರು. ಅನಾರ್ಕಲಿ ಧಿರಿಸು ಪಿಂಕ್ ಪ್ಲೇನ್ ಕಲರ್‌ನಲ್ಲಿದ್ದು ಹೊಳೆಯುವ ಟಿಕ್ಲಿ ವರ್ಕ್ ಅನ್ನು ಕುತ್ತಿಗೆ ಬಳಿ ಹೊಂದಿತ್ತು. ಅನಾರ್ಕಲಿ ಪ್ಯಾಂಟ್ ತುಂಬಾ ಲೂಸಾಗಿದ್ದು ವಿದ್ಯಾರಿಗೆ ಡಿಫರೆಂಟ್ ಲುಕ್ ಅನ್ನು ನೀಡಿದೆ.
ಇಷ್ಟೇ ಅಲ್ಲದೆ ವಿದ್ಯಾರಿಗೆ ಸೀರೆಯಲ್ಲದೆ ಕೆಲವೊಂದು ಡ್ರೆಸ್‌ಗಳೂ ತುಂಬಾ ಚೆನ್ನಾಗಿ ಹೊಂದಿಕೆಯಾಗಿದ್ದು ನಮ್ಮ ದೃಷ್ಟಿ ಅವರಿಗೆ ತಾಕುವಂತೆ ಮಾಡಿದೆ. ಅನಾರ್ಕಲಿಯಲ್ಲಿ ಸಾಧಾರಣವಾಗಿ ಕಂಡುಬಂದಿರುವ ವಿದ್ಯಾರ ಇನ್ನಷ್ಟು ಲುಕ್ ಅನ್ನು ನೋಡಲು ಸ್ಲೈಡ್ ತಿರುಗಿಸಿ For More Pics
ಹಸಿರು ಧಿರಿಸಿನಲ್ಲಿ ಕಂಗೊಳಿಸಿದ ವಿದ್ಯಾ ಬಾಲನ್

ಅನಿತಾ ಡೋಂಗ್ರೆ ಅನಾರ್ಕಲಿಯಲ್ಲಿ ವಿದ್ಯಾ
ಅನಿತಾ ಡೋಂಗ್ರೆ ವಿನ್ಯಾಸದ ಈ ಅನಾರ್ಕಲಿ ಧಿರಿಸು ವಿದ್ಯಾರಿಗೆ ಅಷ್ಟೇನೂ ಹೊಂದುವಂತಿರಲಿಲ್ಲ. ಅನಾರ್ಕಲಿ ಬಣ್ಣ ಮಾತ್ರ ಸೂಪರ್ ಆಗಿದ್ದರೂ ಇನ್ನಷ್ಟು ಸ್ಟೈಲಿಶ್ ಆಗಿರಬೇಕಿತ್ತು ಎಂಬುದು ನಮ್ಮ ವಿಚಾರ.

ಆಕೆಯ ಮೇಕಪ್
ಸಹಜ ಸುಂದರಿಯಾಗಿರುವ ವಿದ್ಯಾರ ಮೇಕಪ್ ಸರಳತನವನ್ನು ಎದ್ದು ತೋರಿಸುತ್ತಿತ್ತು. ಬಾಬ್ಬಿ ಜಾಸೂಸ್ ಮೂವಿ ಟ್ರೇಲರ್‌ನಲ್ಲಿ ಆಕೆಯ ನಗು ಆಕೆಯ ಅಂದವನ್ನು ಹೆಚ್ಚಿಸಿತ್ತು.

ಸುಂದರ ಕಿವಿಯಾಭರಣ
ಆಕೆಯ ಕಿವಿಯಾಭರಣ ಗೊಲೆಚ್ಚಾ ಜ್ಯುವೆಲ್ಸ್‌ನಿಂದ ಸಿದ್ಧಪಡಿಸಿದಂತವು. ವಿವಿಧ ಬಣ್ಣದಿಂದ ವೈವಿಧ್ಯಮಯವಾಗಿರುವ ಕಿವಿಯಾಭರಣ ಸುಂದರವಾಗಿದೆ.

ಆಕೆಯ ಕೇಶವಿನ್ಯಾಸ
ಎಲ್ಸಾ ಬ್ರೈಡ್ ಅನ್ನು ಟ್ರೈ ಮಾಡುತ್ತಿರುವ ಸೆಲೆಬ್ರಿಟಿಗಳು ಅದನ್ನೇ ಟ್ರೇಡ್ ಮಾರ್ಕನ್ನಾಗಿಸಿಕೊಂಡಿದ್ದಾರೆ. ವಿದ್ಯಾರ ಕೇಶವಿನ್ಯಾಸ ಅವರ ಧಿರಿಸಿಗೆ ಸೂಕ್ತವಾಗಿದೆ.

ಆಕೆಯ ಉಂಗುರ
ಆಕೆ ಧರಿಸಿದ ಮದುವೆಯ ಉಂಗುರ ಅನಾರ್ಕಲಿ ಧಿರಿಸಿಗೆ ಹೇಳಿ ಮಾಡಿಸಿದಂತಿದೆ.

ಕಣ್ಣುಗಳು
ಬಾಬ್ಬಿ ಜಾಸೂಸ್ ಮೂವಿ ಟ್ರೇಲರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾ ತಮ್ಮ ಧಿರಿಸಿಗೆ ತಕ್ಕಂತೆ ಮೇಕಪ್ ಮಾಡಿಕೊಂಡಿದ್ದರು, ಕಣ್ಣಿಗೆ ತಿಳಿಯಾದ ಕಾಡಿಗೆ ಹಚ್ಚಿ ತುಟಿಗೆ ಹೊಳೆಯುವ ಲಿಪ್‌ಸ್ಟಿಕ್ ಹಚ್ಚಿದ್ದರು. ಮತ್ತು ಮೂಗಿನ ನತ್ತು ಕೂಡ ಅನಾರ್ಕಲಿಗೆ ಪರ್ಫೆಕ್ಟ್ ಕಾಂಬಿನೇಶನ್ ಆಗಿದೆ.



Click it and Unblock the Notifications
