Latest Updates
-
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ?
ರೋಹಿತ್ ವರ್ಮಾ ಬ್ರೈಡಲ್ ಗೌನ್‌ನಲ್ಲಿ ಮಿಂಚಿದ ಸನ್ನಿ
ರೋಹಿತ್ ವರ್ಮಾ ವಿನ್ಯಾಸದ ಬ್ರೈಡಲ್ ಗೌನ್‌ನಲ್ಲಿ ಸ್ಟನ್ನಿಂಗ್ ಸನ್ನಿ ಲಿಯೋನ್ ಕಣ್ಣು ಕೋರೈಸುವಂತೆ ಕಂಡುಬಂದರು. ಬ್ರೈಟ್ ಗೋಲ್ಡನ್, ಕೆಂಪು ಹೆವೀ ಗೌನ್‌ನಲ್ಲಿ ಏಂಜಲ್‌ನಂತೆ ಕಂಡುಬಂದ ಸನ್ನಿ ಮಂತ್ರಮುಗ್ಧಗೊಳಿಸುವಂತ್ತಿದ್ದರು.
ಫಿಯರ್ ಫೈಲ್ಸ್‌ನಲ್ಲಿ ಫಿಯರ್‌ಲೆಸ್ ಸನ್ನಿಲಿಯೋನ್!
ಭಾರತೀಯ ಟೇಸ್ಟ್‌ನಲ್ಲಿ ಸನ್ನಿ ಗೊಂಬೆಯಂತೆ ಕಂಡುಬಂದ ಸನ್ನಿ ಬ್ರೈಡಲ್ ಗೌನ್‌ನಲ್ಲಿ ಮನಮೋಹಕಿಯಾಗಿದ್ದರು. ಗೌನ್‌ನಲ್ಲಿ ಅಂಟಿಸಿದ್ದ ಮಿನುಗು ಬೊಟ್ಟುಗಳು ದೀಪದ ಬೆಳಕಿಗೆ ಹೊಳೆಯುತ್ತಾ ಕಣ್ಣು ಕೋರೈಸುವಂತಿತ್ತು. ಗೌನ್‌ನಲ್ಲಿ ಭಾರೀ ವಿನ್ಯಾಸವಿದ್ದು ಈವರೆಗೆ ನಾವು ಕಾಣದೇ ಇರುವ ನೋಟವನ್ನು ಗೌನ್ ನೀಡಿದೆ.

ಗೌನ್‌ನ ಬೋಡಿಯಲ್ಲಿರುವ ಎಂಬ್ರಾಯ್ಡಿರಿ ವರ್ಕ್ ಎಲ್ಲರ ಕಣ್ಮನ ಸೆಳೆಯುವಂತಿತ್ತು. ಪ್ಲಂಗಿಂಗ್ ನೆಕ್‌ಲೈನ್ ಅನ್ನು ಹೊಂದಿರುವ ಗೌನ್ ಸನ್ನಿಯ ಪರ್ಫೆಕ್ಟ್ ದೇಹವಿನ್ಯಾಸಕ್ಕೆ ತಕ್ಕಂತಿದೆ. ರಾಂಪ್‌ನಲ್ಲಿ ಹೆಜ್ಜೆಯನ್ನು ಹಾಕುತ್ತಿದ್ದರೂ ಸನ್ನಿ ತಮ್ಮ ಸುಂದರ ನಗುವನ್ನು ಚೆಲ್ಲಲು ಮರೆತಿಲ್ಲ.
ಚಿತ್ತಾರದ ಉಡುಗೆಯಲ್ಲಿ ಕಣ್ಸೆಳೆದ ಸನ್ನಿಲಿಯೋನ್
ರೋಹಿತ್ ವರ್ಮಾ ಗೌಡ್ ಪೂರ್ತಿಯಾಗಿ ಕೆಂಪು ಕೆಂಪು ಬಣ್ಣದಲ್ಲಿ ಮಿಂಚಿದೆ. ಗೌನ್ ಕೆಳಭಾಗದಲ್ಲಿ ಕೆಂಪು ಬಣ್ಣವನ್ನು ಹೊಂದಿ ಶೋಭಾಯಮಾನವಾಗಿತ್ತು. ರಾತ್ರಿಯ ವಾತಾವರಣಕ್ಕೆ ಬೆಳದಿಂಗಳ ಬೆಳಕನ್ನು ಚೆಲ್ಲಿರುವ ಗೌನ್ ಸನ್ನಿಯ ನಗುವಿನ ಝಲಕ್‌ನೊಂದಿಗೆ ದೇದೀಪ್ಯಮಾನವಾಗಿದೆ.
ಸನ್ನಿ ತಮ್ಮ ಈ ಗೌನ್‌ಗೆ ಯಾವುದೇ ಆಭರಣವನ್ನು ಧರಿಸದಿರುವುದು ಸ್ವಲ್ಪ ಬೋರಿಂಗ್ ಲುಕ್ ಅನ್ನು ನೀಡುವಂತಿತ್ತು. ಚಿನ್ನದ ಆಭರಣಗಳನ್ನು ಸನ್ನಿ ಧರಿಸದಿರುವುದು ಬ್ರೈಡಲ್ ಗೌನ್‌ಗೆ ಮ್ಯಾಚಿಂಗ್ ಆಗಿದೆ.
ಸನ್ನಿ ತಮ್ಮ ಕೇಶವಿನ್ಯಾಸವನ್ನು ಮೆಸ್ಸಿ ಬನ್ ಮಾದರಿಯಲ್ಲಿ ಅಲಂಕರಿಸಿದ್ದು ಕಣ್ಣಿಗೆ ಕಪ್ಪು ಕಾಡಿಗೆಯನ್ನು ಹಚ್ಚಿ ಸುಂದರಿಯಾಗಿದ್ದಾರೆ. ಕೆನ್ನೆಗೆ ಪಿಂಕ್ ಬ್ಲಶ್ ಅನ್ನು ಹಚ್ಚಿ ತುಟಿಗೆ ಲಿಪ್‌ಸ್ಟಿಕ್ ಅನ್ನು ಹಚ್ಚಿದ್ದ ಸನ್ನಿ ಮುದ್ದಾಗಿ ಕಾಣುತ್ತಿದ್ದರು. ಒಟ್ಟಾರೆ ಸನ್ನಿ ರಾಂಪ್‌ನಲ್ಲಿ ನಡೆದು ಬಂದ ರೀತಿ ಸ್ಟೈಲಿಶ್ ಆಗಿದ್ದು ನೆರೆದವರ ಮನಸ್ಸನ್ನು ಸನ್ನಿ ಕದ್ದದ್ದಂತೂ ನಿಜ.



Click it and Unblock the Notifications
