Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಧೋತಿ ಸೀರೆಯಲ್ಲಿ ಕಂಗೊಳಿಸಿದ ಸೋನಂ ಕಪೂರ್
ಬಾಲಿವುಡ್‌ನಲ್ಲಿ ಖ್ಯಾತಿವೆತ್ತಿರುವ ಸ್ಟೈಲ್ ರಾಣಿಯರಲ್ಲಿ ಮೊದಲ ಸ್ಥಾನವನ್ನು ಗಳಿಸುವವರು ಸೋನಂ ಕಪೂರ್. ಗಜಲ್ ಆಲ್ಬಮ್ 'ಕುಚ್ ದಿಲ್ ನೆ ಕಹಾ' ಲಾಂಚ್‌ನಲ್ಲಿ ಬಿಳಿ ಹಾಗೂ ಕಪ್ಪು ತರುಣ್ ತಾಹಿಲಾನಿ ಧೋತಿ ಸೀರೆಯನ್ನು ಧರಿಸಿ ಸೋನಂ ಫ್ಯಾಶನ್ ಸೆನ್ಸ್ ಅನ್ನು ಇನ್ನೊಮ್ಮೆ ಪ್ರದರ್ಶಿಸಿದರು. ತರುಣ್ ತಹಿಲಾನಿ ಧೋತಿ ಸೀರೆಯನ್ನುಟ್ಟಿದ್ದ ಸೋನಂ ತುಂಬಾ ವಿಭಿನ್ನವಾಗಿ ಕಂಡು ಬರುತ್ತಿದ್ದರು. ಸರಳ ಮೇಕಪ್ ಮತ್ತು ಚೆರ್ರಿ ತುಟಿ ಬಣ್ಣವನ್ನು ಹಾಕಿದ್ದ ಸೋನಂ ಸುಂದರ ನಗುವನ್ನು ಪ್ರದರ್ಶಿಸಿದರು.
ಇನ್ನಷ್ಟು ಫೋಟೊ ಗ್ಯಾಲರಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸೋನಂ ಕಪೂರ್ ಅವರ ಫೋಟೊ ಗ್ಯಾಲರಿ
ತೆಳುವಾದ ಕಪ್ಪು ಬ್ಲೌಸ್ ಸೀರೆಗೆ ಮನಮೋಹಕವಾಗಿತ್ತು. ತಮ್ಮ ಅಂದವಾದ ಬೆನ್ನಿನ ಪ್ರದರ್ಶನವನ್ನು ನಟಿ ಈ ಬ್ಲೌಸ್‌ನಲ್ಲಿ ಮಾಡಿದ್ದಾರೆ. ಸಾಂಪ್ರದಾಯಿಕ ಕೇಶ ಶೃಂಗಾರವನ್ನು ಮಾಡಿಕೊಂಡಿದ್ದು ಸುಂದರ ಕ್ಲಚ್ ಮತ್ತು ಸ್ಟ್ರಾಪಿ ಸ್ಯಾಂಡಲ್ಸ್ ಹಾಗೂ ಸುಂದರ ನೆಕ್‌ಲೇಸ್ ಸೋನಂ ಈ ಧೋತಿ ಸೀರೆಗೆ ಧರಿಸಿದ್ದಾರೆ. ಸೋನಂ ನ ಫ್ಯಾಶನ್ ಸೆನ್ಸ್ ಅನ್ನು ಹತ್ತಿರದಲ್ಲಿ ನೋಡೋಣ ಬನ್ನಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫೆಮಿನಾದಲ್ಲಿ ಮಿಂಚಿದ ಇಬ್ಬರು ತಾರೆಯರು

ತರುಣ್ ತಿಹಲಾನಿ ವಿನ್ಯಾಸದಲ್ಲಿ:
ಗಜಲ್ ಆಲ್ಬಂ ಲಾಂಚ್‌ನಲ್ಲಿ ಸೋನಂ ಧೋತಿ ಸೀರೆಯಲ್ಲಿ ಸುಂದರಿಯಾಗಿದ್ದರು. ಸೀರೆಯ ಬಣ್ಣಗಳ ಮಿಶ್ರಣ ಹಾಟ್ ಆಗಿತ್ತು. ತೆಳುವಾದ ತೋಳಿಲ್ಲದ ರವಿಕೆ ಸೀರೆಗೆ ಉತ್ತಮ ಕಾಂಬಿನೇಶನ್ ಆಗಿತ್ತು.

ಸುಂದರ ತೆಳುವಾದ ಬ್ಲೌಸ್:
ತರುಣ್ ತಿಹಲಾನಿ ಧೋತಿ ಸೀರೆಯೊಂದಿಗೆ ತೆಳುವಾದ ಬ್ಲೌಸ್‌ನಲ್ಲಿ ಸೋನಂ ಇನ್ನಷ್ಟು ಸುಂದರಿಯಾಗಿದ್ದರು. ತಮ್ಮ ಸುಂದರ ಬೆನ್ನಿನ ಪ್ರದರ್ಶನವನ್ನು ನಟಿ ಮಾಡಿದ್ದಾರೆ.

ಸ್ಯಾಂಡಲ್ಸ್:
ಸ್ಟ್ರಾಪಿ ಸ್ಯಾಂಡಲ್ಸ್ ಅನ್ನು ಸೀರೆಗೆ ಮ್ಯಾಚಿಂಗ್ ಆಗಿ ಧರಿಸಿದ್ದ ಸೋನಂ ತಮ್ಮ ಲುಕ್ ಅನ್ನು ಪೂರ್ಣಗೊಳಿಸಿದ್ದಾರೆ.

ಆಕೆಯ ಮೇಕಪ್:
ಕುಚ್ ದಿಲ್ ನೆ ಕಹಾ ಆಲ್ಬಮ್ ಬಿಡುಗಡೆ ಸಮಾರಂಭದಲ್ಲಿ ಸೋನಂ ಮಾಡಿಕೊಂಡಿದ್ದ ಮೇಕಪ್ ಸೂಕ್ತ ಮತ್ತು ನಮ್ಮನ್ನು ಆಕರ್ಷಿಸಿದ್ದಂತೂ ಸುಳ್ಳಲ್ಲ. ಆಕೆಯ ಚೆರ್ರಿ ಲಿಪ್‌ಸ್ಟಿಕ್ ಸೋನಂಗೆ ಇನ್ನಷ್ಟು ಶೋಭೆಯನ್ನು ತಂದುಕೊಟ್ಟಿದ್ದು ನಮ್ಮ ಕಣ್ಣನ್ನು ಕೀಳದಷ್ಟು ಸೌಂದರ್ಯವತಿಯಾಗಿದ್ದರು ಆಕೆ.

ಆಭರಣಗಳು:
ಆಕೆಯ ನೋಟವನ್ನು ಇನ್ನಷ್ಟು ಭಾರವಾಗಿಸುವ ಸುಂದರ ಒಡವೆಯನ್ನು ಧರಿಸಲು ಖಂಡಿತ ಮರೆತಿಲ್ಲ. ಧೋತಿ ಸೀರೆಗೆ ಈ ನೆಕ್‌ಲೆಸ್ ವಿಶಿಷ್ಟ ಮೆರುಗನ್ನು ತಂದುಕೊಟ್ಟಿದೆ.

ಆಕೆಯ ಕ್ಲಚ್:
ಹೆಣ್ಣಿಗೆ ಎಂದಿಗೂ ತನ್ನ ಪರ್ಸ್ ತೀರಾ ಅಗತ್ಯ. ಬೋಟ್ಟೆಗಾ ವಿನ್ನೆಟಾ ಕ್ಲಚ್ ಆಕೆಯ ಲುಕ್ ಅನ್ನು ಪರಿಪೂರ್ಣವಾಗಿಸಿದೆ. ಆಕೆಯ ಸ್ಟೈಲ್ ನಿಮಗಿಷ್ಟವಾಯಿತೇ?

ದಕ್ಷಿಣ ಭಾರತೀಯ ಹೇರ್‌ಸ್ಟೈಲ್:
ದಕ್ಷಿಣ ಭಾರತೀಯ ಹೇರ್‌ಸ್ಟೈಲ್‌ನಲ್ಲಿ ಸೋನಂ ನಿಜಕ್ಕೂ ಮನಮೋಹಕಿಯಾಗಿದ್ದರು. ಆಕೆಯ ಕೂದಲನ್ನು ಹಿಂದಕ್ಕೆ ಸೇರಿಸಿ ತುರುಬು ಕಟ್ಟಲಾಗಿದೆ. ಈ ಕೇಶವಿನ್ಯಾಸ ನಿಜಕ್ಕೂ ಸೋನಂಗೆ ಚಿಕ್ ಆಗಿ ತೋರುತ್ತಿದೆ.



Click it and Unblock the Notifications
