Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ನಿಮ್ಮ ಅವಧಿ ಮುಗಿದ ಮೇಕಪ್‌ನಿಂದ ದಯವಿಟ್ಟು ದೂರವಿರಿ!
ನಿಮ್ಮ ಮೇಕಪ್ ಮಾಡಿಕೊಳ್ಳುವ ವಸ್ತುಗಳನ್ನು ಬದಲಾಯಿಸಿಕೊಳ್ಳಲು ಸಹ ಸೂಚನೆಗಳು ಇವೆಯೇ? ಎಂಬ ವಿಚಾರ ನಿಮ್ಮಲ್ಲಿ ಅಚ್ಚರಿಯನ್ನುಂಟು ಮಾಡಬಹುದು. ಹೌದು ಅವಧಿ ಮುಗಿದ ಮೇಕಪ್‌ಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಷ್ಟೇ ಅಲ್ಲ, ಇವು ನಿಮ್ಮ ತ್ವಚೆಯು ಒಡೆಯುವ ಹಾಗೆ ಮಾಡಿ, ತುರಿಕೆ ಇನ್ನಿತರ ಸಮಸ್ಯೆಗಳನ್ನುಂಟು ಮಾಡುತ್ತದೆ.
ಸುಂದರವಾದ ಮುಖವನ್ನು ಹೊಂದಲು ಮೇಕಪ್ ಮಾಡಿಕೊಳ್ಳಬೇಕು. ಆದರೆ ಕೆಲವೊಂದು ಸೂಚನೆಗಳು ನಿಮ್ಮ ಮೇಕಪ್ ಸಾಮಗ್ರಿಯನ್ನು ಬದಲಾಯಿಸಲು ಸೂಚಿಸುತ್ತವೆ. ಇವುಗಳನ್ನು ಕಡೆಗಣಿಸದಿದ್ದರೆ ನಿಮ್ಮ ಅಂದ- ಚಂದಕ್ಕೆ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ.

ಒಂದೇ ಸೌಂದರ್ಯವರ್ಧಕಗಳನ್ನು ಬಳಸಬೇಡಿ
ಕೆಲವೊಂದು ಸೌಂದರ್ಯವರ್ಧಕಗಳು ವರ್ಷಾನುಗಟ್ಟಲೆ ಬಾಳಿಕೆ ಬರುತ್ತವೆ, ಆದರೆ ಕಣ್ಣಿನ ಮೇಕಪ್‌ಗಳು ತೆರೆದ ದಿನದಿಂದ ಕೇವಲ ಎರಡು-ಮೂರು ತಿಂಗಳುಗಳ ಕಾಲ ಮಾತ್ರ ಉತ್ತಮ ಸ್ಥಿತಿಯಲ್ಲಿರುತ್ತವೆ. ಇದಕ್ಕೂ ಮೇಲೆ ನೀವು ಬಳಸಿದಲ್ಲಿ ನಿಮ್ಮ ಕಣ್ಣಿನ ಇನ್‍ಫೆಕ್ಷನ್‍ಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ. ಮಸ್ಕರ ಸಹ ಅತ್ಯಂತ ಕಡಿಮೆ ಬಾಳಿಕೆಯ ಕಾಲವನ್ನು ಹೊಂದಿರುತ್ತದೆ. ಒಂದು ಹೊಸ ಟ್ಯೂಬ್ ಅನ್ನು ನೀವು ತೆರೆದ ಮೇಲೆ ಕೆಲವೇ ತಿಂಗಳಲ್ಲಿ ಅದನ್ನು ಬಳಸದಿದ್ದರು ಬಿಸಾಡಬೇಕಾಗುತ್ತದೆ. ನೀವು ಈ ಉತ್ಪನ್ನಗಳನ್ನು ತಂದು ತೆರೆದ ದಿನವೇ ಅದರ ಮೇಲೆ ದಿನಾಂಕ ನಮೂದಿಸಿ. ಕೆಲವು ತಿಂಗಳುಗಳಾದ ನಂತರ ಅವುಗಳ ಬದಲಿಗೆ ಇನ್ನೊಂದು ಉತ್ಪನ್ನವನ್ನು ತರಲು ಮರೆಯಬೇಡಿ.

ಇದು ವಾಸನೆ ಬರುತ್ತದೆ
ಇದು ದ್ರವ ಮತ್ತು ಪೌಡರ್ ಉತ್ಪನಗಳೆರಡಕ್ಕು ಅನ್ವಯಿಸುತ್ತದೆ. ಕಾಲ ಕ್ರಮೇಣ ಈ ಉತ್ಪನ್ನಗಳಲ್ಲಿ ಬ್ಯಾಕ್ಟೀರಿಯಾಗಳು ಮನೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಆಗ ಅವುಗಳನ್ನು ಬಳಸುವುದರಿಂದ ತ್ವಚೆಯ ಸಮಸ್ಯೆಗಳು ಮತ್ತು ಸೋಂಕಿಗೆ (ಇನ್‍ಫೆಕ್ಷನ್‍ಗೆ) ಗುರಿಯಾಗಬೇಕಾಗುತ್ತದೆ. ಆದ್ದರಿಂದ ಮುಂಜಾಗರೂಕತೆ ಕ್ರಮವಾಗಿ ಇವುಗಳಿಂದ ದೂರವಿದ್ದರೆ ನಿಮಗೆ ಒಳ್ಳೆಯದು.

ಸ್ವರೂಪ ಬದಲಾಗುವುದು
ನಿಮ್ಮ ಕೆನೆ ಭರಿತ ಲಿಪ್‍ಸ್ಟಿಕ್ ಇದ್ದಕ್ಕಿದ್ದಂತೆ ಮುದ್ದೆಯಾಗಬಹುದು ಅಥವಾ ನಿಮ್ಮ ಐಲೈನರ್ ನವಿರಾಗಿ ಗೆರೆಯೆಳೆಯುವುದನ್ನು ನಿಲ್ಲಿಸಿಬಿಡಬಹುದು. ಆಗ ನೀವು ವಿಧಿಯಿಲ್ಲದೆ ಹೊಸತನ್ನು ಕೊಳ್ಳಲು ಹೋಗುವಿರಿ. ಇದಕ್ಕೆ ಕಾರಣ ನಿಮ್ಮ ಸೌಂದರ್ಯ ಉತ್ಪನ್ನಗಳಲ್ಲಿನ ಸ್ವರೂಪ ಅಂದರೆ ಟೆಕ್ಸ್‌ಚರ್ ಬದಲಾಗುವ ಸಮಸ್ಯೆಯೇ ಆಗಿದೆ. ಅದು ತನ್ನ ಬಾಳಿಕೆಯ ಕಾಲದಲ್ಲಿ ಚೆನ್ನಾಗಿ ಬಾಳಿಕೆ ಬರುತ್ತದೆ ನಂತರ ಅದರ ಸ್ವರೂಪವೇ ಬದಲಾಗಿ ಬಿಡುತ್ತದೆ. ಕೆಲವೊಮ್ಮೆ ಈ ಬದಲಾವಣೆಗಳು ನಿಮಗೆ ಕೋಪ ತರಿಸಬಹುದು ಅಷ್ಟೇ, ಆದರೆ ಕೆಲವು ಸಲ ಇವು ನಿಮ್ಮ ತ್ವಚೆಗೆ ಹಾನಿಯನ್ನುಂಟು ಮಾಡಬಹುದು. ಅಷ್ಟು ಮಾಡಿಕೊಳ್ಳುವ ಬದಲು ಇದನ್ನು ಬದಲಾಯಿಸಿ ಸಾಕು!

ಬಣ್ಣ ಗುಂದುವುದು
ಬಣ್ಣ ಗುಂದುವ ಪ್ರಕ್ರಿಯೆಯು ಪ್ರಮುಖವಾಗಿ ನಿಮ್ಮ ಅವಧಿ ಮುಗಿದ ಲಿಪ್ ಲಿಪ್‍ಸ್ಟಿಕ್‌ಗಳ ಮೇಲೆ ಹೆಚ್ಚಾಗಿ ನಡೆಯುತ್ತದೆ. ಏಕೆಂದರೆ ಇವುಗಳನ್ನು ನೀವು ಎರಡೆರೆಡು ಬಾರಿ ಅದ್ದಿ ತೆಗೆಯುತ್ತಿರುತ್ತೀರಿ. ತಜ್ಞರು ಇವುಗಳನ್ನು ಆರು ತಿಂಗಳಿಗೊಮ್ಮೆ ಬದಲಾಯಿಸಬೇಕು ಎಂದು ಸಲಹೆ ಮಾಡುತ್ತಾರೆ. ಏಕೆಂದರೆ ಈ ಅವಧಿಯ ಒಳಗಾಗಿ ಮಾತ್ರ ನೀವು ಇದನ್ನು ಬಳಸಬಹುದು. ಇದಕ್ಕೂ ಮೀರಿದಾಗ ಇದರಲ್ಲಿ ಬ್ಯಾಕ್ಟೀರಿಯಾಗಳು ಬೆಳವಣಿಗೆಯಾಗುವ ಅಪಾಯ ಹೆಚ್ಚಿರುತ್ತದೆ. ಆಗ ನಿಮಗೆ ನೆಗಡಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಇದರಿಂದ ನಿಮಗೆ ದೊರೆಯುವ ಪ್ರಯೋಜನವೆಂದರೆ, ಆ ಮೂಲಕ ನೀವು ಹೊಸ ಹೊಸ ಬಣ್ಣಗಳನ್ನು ಪ್ರಯತ್ನಿಸಬಹುದು.

ಇದು ಬೇರ್ಪಡುತ್ತದೆ
ದ್ರವ ರೂಪದ ಮೇಕಪ್ ಉತ್ಪನ್ನಗಳ ದೊಡ್ಡ ಸಮಸ್ಯೆಯೆಂದರೆ ಬೇರ್ಪಡುವಿಕೆ. ಫೌಂಡೇಶನ್‍ನಂತಹ ಮೇಕ್-ಅಪ್ ಉತ್ಪನ್ನವು ಇದರ ಸಮಸ್ಯೆಗೆ ಒಳಗಾಗುತ್ತದೆ. ಆಗ ನೀವು ಇವುಗಳನ್ನು ಮರು ಯೋಚಿಸದೆ ಎಸೆಯುವುದೊಂದೇ ಮಾರ್ಗ ಉಳಿಯುವುದು. ದಿನ ನಿತ್ಯದ ಆರೋಗ್ಯದ ದೃಷ್ಟಿಯಿಂದ ಹೀಗೆ ಅವಧಿ ಮುಗಿದ ಫೌಂಡೇಶನ್ ಅನ್ನು ಎಸೆಯುವುದೇ ಒಳ್ಳೆಯದು. ಇಲ್ಲವಾದಲ್ಲಿ ಇನ್‍ಫೆಕ್ಷನ್ ಮತ್ತು ಅನೇಕ ರೀತಿಯ ಕಾಯಿಲೆಗಳು ನಿಮ್ಮನ್ನು ಭಾದಿಸಬಹುದು. ಇವು ಕೇವಲ ಎರಡು ಉದಾಹರಣೆ ಮಾತ್ರ ಎನ್ನುವುದನ್ನು ನೀವು ಮರೆಯಬಾರದು. ಯಾವಾಗ ನಿಮ್ಮ ಸೌಂದರ್ಯವರ್ಧಕ ಉತ್ಪನ್ನವು ಬೇರ್ಪಟ್ಟಿರುತ್ತೋ, ಆಗ ನೀವು ಅದನ್ನು ಬಳಸದೆ ಎಸೆದುಬಿಡಿ, ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿಕೊಳ್ಳಿ.

ಅವಧಿ ಮುಗಿದಿದ್ದರೆ
ನಿಮ್ಮ ಮೇಕಪ್ ಕಿಟ್‍ನ ಮೇಲೆ ದಿನಾಂಕಗಳನ್ನು ನಮೂದಿಸಿದ್ದರೆ, ನೀವು ನಿಜಕ್ಕೂ ಅದೃಷ್ಟಶಾಲಿಗಳು. ಆ ಉತ್ಪನ್ನದ ಮೇಲೆ ಏನಾದರೂ ನಮೂದಿಸಿದ್ದರೆ ಒಮ್ಮೆ ಕಣ್ಣಾಡಿಸಿ. ಅದರಿಂದಲೇ ನೀವು ಆ ಉತ್ಪನ್ನದ ಬಗ್ಗೆ ಊಹೆ ಮಾಡಬಹುದು. ಆ ಉತ್ಪನ್ನವು ಬೇರ್ಪಡದಿದ್ದರು, ಬಣ್ಣಗುಂದದಿದ್ದರೂ ಅಥವಾ ಕೆಟ್ಟ ವಾಸನೆ ಬರದಿದ್ದರು ಸಹ ಅವಧಿಯನ್ನು ಮೀರಿದ್ದರೆ, ಬೇರೆ ಯೋಚನೆ ಮಾಡದೆ ಅದನ್ನು ಬದಲಾಯಿಸಿ.



Click it and Unblock the Notifications











