Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಎಮ್‌ಸಿಕ್ಯೂ ಡ್ರೆಸ್‌ನಲ್ಲಿ ಮೋಡಿ ಮಾಡಿದ ಪ್ರಿಯಾಂಕ
ಎನ್‌ಡಿ ಟಿವಿ ಲಾಂಚ್‌ನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದ ಬಾಲಿವುಡ್ ದಿವಾ ಪ್ರಿಯಾಂಕ ಸ್ಲಿಮ್ ಡ್ರೆಸ್‌ನಲ್ಲಿ ಮತ್ತಷ್ಟು ಯಂಗ್ ಆಗಿ ಕಾಣುತ್ತಿದ್ದರು. ತನ್ನ ಸ್ಟೈಲ್ ಸೆನ್ಸ್‌ಗೆ ಹೆಸರಾಗಿರುವ ಈ ಬಿಲ್ಲಿ ಪ್ರತಿಯೊಂದು ಶೋನಲ್ಲೂ ವಿಭಿನ್ನವಾಗಿ ಕಾಣಬಲ್ಲ ಸುಂದರಿ.
ಎನ್‌ಡಿ ಟಿವಿ ಲಾಂಚ್‌ನಲ್ಲಿ ಪ್ರಿಯಾಂಕ ನೀಲಿ ಬಣ್ಣದ ಮೊಣಕಾಲುದ್ದದ ಡ್ರೆಸ್ ಧರಿಸಿದ್ದರು. ದೇಹವನ್ನು ಅಪ್ಪಿಕೊಂಡಂತಿದ್ದ ಅಲೆಕ್ಸಾಂಡರ್ ಮೆಕ್ವೀನ್ ಮೊಣಕಾಲುದ್ದದ ಡ್ರೆಸ್ ಪ್ರಿಯಾಂಕನ ಕರ್ವೀ ಫಿಗರ್‌ಗೆ ಹೇಳಿ ಮಾಡಿಸಿದಂತಿದೆ.
ಇನ್ನಷ್ಟು ಪ್ರಿಯಾಂಕ ಅವರ ಫೋಟೋ ಗ್ಯಾಲರಿಗಾಗಿ ಕ್ಲಿಕ್ ಮಾಡಿ: ಪ್ರಿಯಾಂಕ ಅವರ ಫೋಟೋ ಗ್ಯಾಲರಿ

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ಪ್ರಿಯಾಂಕ ಚೋಪ್ರಾರ ಅದ್ಭುತ ಶೂಸ್ ಕಲೆಕ್ಷನ್
ನೀಲಿ ಬಣ್ಣದ ಅಲೆಕ್ಸಾಂಡರ್ ಮೆಕ್ವೀನ್‌ಗೆ ಹೊಂದುವ ಸೊಂಟವನ್ನು ಅಪ್ಪಿದ ಕಪ್ಪು ದಪ್ಪನೆಯ ಬೆಲ್ಟ್ ಇನ್ನಷ್ಟು ಚಿಕ್ ಆಗಿ ಪ್ರಿಯಾಂಕಾಗೆ ತೋರುತ್ತಿತ್ತು. ಬಿಳಿ ಪಂಪ್ಸ್‌ಗಳನ್ನು ಧರಿಸಿದ್ದ ಈ ಬೆಡಗಿ ನೀಲಿ ಡ್ರೆಸ್, ಕಪ್ಪು ಸೊಂಟ ಬೆಲ್ಟ್‌ನಲ್ಲಿ ವಿಭಿನ್ನವಾಗಿ ಕಂಡುಬರುತ್ತಿದ್ದರು.
ಅರ್ಧ ಪಿನ್ ಮಾಡಿಕೊಂಡಿದ್ದ ಪಫ್‌ಡ್ ಹೇರ್ ಸ್ಟೈಲ್ ಅನ್ನು ಮಾಡಿಕೊಂಡಿದ್ದ ಪ್ರಿಯಾಂಕ ಸ್ಟೈಲಿಶ್ ಹಾಗೂ ಬ್ಯೂಟಿಫುಲ್ ಆಗಿದ್ದರು. ಯಾವುದೇ ಆಭರಣಗಳನ್ನು ಧರಿಸದಿದ್ದರೂ ಪ್ರಿಯಾಂಕ ಈ ಲುಕ್‌ನಲ್ಲಿ ಸಿಂಪಲ್ ಹಾಗೂ ಬ್ಯೂಟಿಯಾಗಿದ್ದಾರೆ. ಕೆಂಪು ತುಟಿಗಳು, ಸರಳ ಐ ಮೇಕಪ್ ಮತ್ತು ಗುಲಾಬಿ ಕೆನ್ನೆಗಳು ಈ ಶೋನಲ್ಲಿ ಪ್ರಿಯಾಂಕನ ಪ್ಲಸ್ ಪಾಯಿಂಟ್‌ಗಳಾಗಿವೆ. ಆಕೆಯ ನೀಲಿ ಧಿರಿಸು, ಬಿಳಿ ಹೀಲ್ಡ್, ಕಪ್ಪು ಬೆಲ್ಟ್ ಮತ್ತು ಸುಂದರ ಕೇಶವಿನ್ಯಾಸ ಸರಳ ಮೇಕಪ್ ನಮ್ಮ ಮನವನ್ನು ಕದ್ದದ್ದಂತೂ ನಿಜ.



Click it and Unblock the Notifications
