Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತ್ವಚೆಯನ್ನು ಪೋಷಿಸುವುದರ ಜೊತೆಗೆ ಅಂದವನ್ನೂ ಹೆಚ್ಚಿಸಿಕೊಳ್ಳಬೇಕೇ?
ಒತ್ತಡದಿಂದ ಕೂಡಿದ ಬಿಡುವಿಲ್ಲದ ಜೀವನಶೈಲಿ, ಪರಿಸರ ಮಾಲಿನ್ಯ ಮತ್ತು ಅಸಮತೋಲನ ಹಾಗು ಅನಾರೋಗ್ಯಕಾರಿ ಆಹಾರ ಪದ್ಧತಿಗಳು ನಿಮ್ಮ ತ್ವಚೆಯನ್ನು ಮಂಕಾಗಿ ಕಾಣುವಂತೆ ಮಾಡುತ್ತವೆ. ಹಾಗಾಗಿ ನಾವು ಇಲ್ಲಿ ನೀಡಿರುವ ಸುಲಭವಾದ ತ್ವಚೆಯ ಮಾಸ್ಕ್‌ಗಳನ್ನು ಉಪಯೋಗಿಸಿ ನೋಡಿ.
ತ್ವಚೆಯ ಹೊಳಪು ಹೆಚ್ಚಿಸಿಕೊಳ್ಳಲು ಕೆಮಿಕಲ್ ಮೊರೆ ಹೋಗುವ ಬದಲು ನೈಸರ್ಗಿಕ ದಾರಿ ಹಿಡಿದರೆ ಒಳ್ಳೆಯದು. ನೈಸರ್ಗಿಕ ವಿಧಾನ ಒಂದೇ ರಾತ್ರಿಯಲ್ಲಿ ಫಲಿತಾಂಶ ನೀಡದಿದ್ದರೂ ಉತ್ತಮ ಫಲಿತಾಂಶವಂತೂ ಗ್ಯಾರಂಟಿ.
ಈ ವಿಧಾನವನ್ನು ನಿರಂತರವಾಗಿ ಅನುಸರಿಸಿದರೆ ಕೆಲವೇ ವಾರಗಳಲ್ಲಿ ಬದಲಾವಣೆಯನ್ನು ನೀವೇ ಕಂಡುಕೊಳ್ಳುತ್ತೀರ.
ಚಿರ ಯೌವನದಿಂದ ಕಂಗೊಳಿಸಬೇಕೆ? ಇಲ್ಲಿದೆ ಟಿಪ್ಸ್

ಸೌತೆಕಾಯಿ ಫೇಸ್ ಮಾಸ್ಕ್:
ಸೌತೆಕಾಯಿಯನ್ನು ಸೌಂದರ್ಯವರ್ಧಕವಾಗಿ ಬಳಸುವುದು ಸಾಮಾನ್ಯ. ಇದು ಮುಖದ ಕಾಂತಿ ಹೆಚ್ಚಿಸುವುದು. ಇದರ ಮತ್ತೊಂದು ವಿಶೇಷವೆಂದರೆ ಎಲ್ಲಾ ರೀತಿಯ ತ್ವಚೆಯವರು ಸೌತೆಕಾಯಿ ಫೇಸ್ ಮಾಸ್ಕ್ ಬಳಸಬಹುದು.

ಸ್ಟ್ರಾಬರಿ ಫೇಸ್ ಮಾಸ್ಕ್:
ಸ್ಟ್ರಾಬರಿಯನ್ನು ಪೇಸ್ಟ್ ಮಾಡಿ ಅದಕ್ಕೆ ಆಲೀವ್ ಎಣ್ಣೆಯನ್ನು ಸೇರಿಸಿ ಮುಖಕ್ಕೆ ಹಚ್ಚಿದರೆ ಮುಖದ ಹೊಳಪು ಹೆಚ್ಚುವುದು.

ನಿಂಬೆ ಹಣ್ಣು ಮತ್ತು ಮೊಸರಿನ ಮಾಸ್ಕ್:
ಸ್ವಲ್ಪ ಮೊಸರಿಗೆ 2-3 ಹನಿ ನಿಂಬೆರಸ ಹಾಕಿ ದಿನವೂ ಮುಖಕ್ಕೆ ಹಚ್ಚ ಒಳ್ಳೆಯದು. ಮುಖವನ್ನು ಕಡೆ ಹಿಟ್ಟಿನಿಂದ ತೊಳೆದರೆ ತ್ವಚೆಗೆ ಮತ್ತಷ್ಟು ಒಳ್ಳೆಯದು.

ಟೊಮೆಟೊ ಮಾಸ್ಕ್:
ಟೊಮೆಟೊ ಜ್ಯೂಸ್ ಅನ್ನು ದಿನವೂ 15 ನಿಮಿಷ ಮುಖಕ್ಕೆ ಹಚ್ಚುವುದು ಕಲೆಗಳು ಕಡಿಮೆಯಾಗುವುದು ಮತ್ತು ಬಿಸಿಲಿಗೆ ತ್ವಚೆ ಬೇಗನೆ ತನ್ನ ಬಣ್ಣ ಕಳೆದುಕೊಳ್ಳುವುದಿಲ್ಲ.

ಪಪ್ಪಾಯಿ ಫೇಸ್ ಮಾಸ್ಕ್:
ಒಂದು ಬಟ್ಟಲಿಗೆ ಪಪ್ಪಾಯಿ ತುಂಡುಗಳನ್ನು ಹಾಕಿ, ಅದನ್ನು ಹಿಸುಕಿ ಪೇಸ್ಟ್ ರೀತಿ ಮಾಡಿ. ಈಗ 1 ಚಮಚ ಗಂಧದ ಪುಡಿ ಅಥವಾ ಮುಲ್ತಾನಿ ಮಿಟಿ ಸೇರಿಸಿ, ನಂತರ 1 ಚಮಚ ಜೇನು ಸೇರಿಸಿ. ಈಗ ಮಿಶ್ರಣವನ್ನು ಚೆನ್ನಾಗಿ ಕಲೆಸಿ. ಫೇಸ್ ಮಾಸ್ಕ್ ರೆಡಿ. ಫೇಸ್ ಮಾಸ್ಕ್ ರೆಡಿಯಾದ ನಂತರ ನಿಮ್ಮ ಮುಖವನ್ನು ಫೇಸ್ ಮಾಸ್ಕ್ ಮಾಡಲು ರೆಡಿ ಮಾಡಿ. ಅದಕ್ಕಾಗಿ ನೀವು ಮಾಡಬೇಕಾದದು,ಮುಖವನ್ನು ತೊಳೆದು ಟವಲ್ ನಿಂದ ಮೆಲ್ಲನೆ ಒರೆಸಿ ಇನ್ನು ಫೇಸ್ ಮಾಸ್ಕ್ ಹಚ್ಚಿ 20 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ವಿಧಾನ ನಿಮ್ಮ ಮುಖದ ಹೊಳಪನ್ನು ಹೆಚ್ಚಿಸುತ್ತದೆ.

ಮಾವು ಮೊಸರಿನ ಫೇಸ್ ಮಾಸ್ಕ್:
ಸೂರ್ಯನಿಂದ ಉಂಟಾಗುವ ಕಂದುಬಣ್ಣವನ್ನು ತೆಗೆಯಲು ಈ ಫೇಶಿಯಲ್ ಅನ್ನು ದಿನವೂ ಹಚ್ಚ ಬಹುದು ಅಥವಾ ವಾರಕ್ಕೆ ಮೂರು ಬಾರಿಯಾದರೂ ಬಳಸಬಹುದು. ಒಂದು ಮಾವನ್ನು ಹಿಸುಕಿ, 1 ಚಿಕ್ಕ ಚಮಚ ಮೊಸರು ಹಾಗೂ ನಿಂಬೆ ರಸಗಳನ್ನು ಚನ್ನಾಗಿ ಬೆರೆಸಿ,ಈ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿರಿ. ನೀವು ಇದನ್ನು ತೋಳು ಹಾಗೂ ಇತರೆ ಹೊರ ತೆರೆಯಲ್ಪಟ್ಟ ಚರ್ಮದ ಕಂದು ಬಣ್ಣ ನಿವಾರಣೆಗಾಗಿ ಬಳಸಬಹುದು. ಈ ಬೇಸಿಗೆ ಹಣ್ಣಿನ ಮುಖವಾಡವನ್ನು ಸುಮಾರು 15 ನಿಮಿಷಗಳವರೆಗೆ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಬೇಕು.

ಆಲೂ ಸ್ಕ್ರಬ್:
ಆಲೂಗಡ್ಡೆ ತ್ವಚೆಗೆ ಅತ್ಯುತ್ತಮ ಬ್ಲೀಚಿಂಗ್ ಮತ್ತು ವಯಸ್ಸಾದ ಚಿಹ್ನೆಗಳನ್ನು ಕಡಿಮೆಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಪ್ರತಿ ದಿನ ನಿಮ್ಮ ಮುಖಕ್ಕೆ ಆಲೂಗಡ್ಡೆ ಸ್ಲೈಸ್ ಬಳಸಿಕೊಂಡು ಮಸಾಜ್ ಮಾಡಿದರೆ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆಲೂಗಡ್ಡೆ ಅನ್ನು ಮಾಸ್ಕ್ ಆಗಿಯೂ ಬಳಸಬಹುದು.

ಬಾಳೆಹಣ್ಣು ಮತ್ತು ಕ್ಯಾರೇಟ್ ಮಾಸ್ಕ್:
ಈ ಸಂಯೋಜನೆಯು ಸ್ವಲ್ಪ ವಿಲಕ್ಷಣದಂತೆ ಕಂಡರೂ ತ್ವಚೆಯ ಮೇಲೆ ಪವಾಡವನ್ನುಂಟು ಮಾಡುತ್ತದೆ. ಬಾಳೆಹಣ್ಣು ಮತ್ತು ಕ್ಯಾರೆಟ್ ಎರಡೂ ಚರ್ಮದ ಬಿಗಿಗೊಳಿಸುವ ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಈ ಪ್ಯಾಕ್ ಅನ್ನು ಒಂದು ಬಾಳೆಹಣ್ಣು ಮತ್ತು ಒಂದು ಕ್ಯಾರೆಟ್ ಪೇಸ್ಟ್ ಮಾಡಿ ತಯಾರಿಸಿ. ಈ ಪೇಸ್ಟ್ ಅನ್ನು ಚೆನ್ನಾಗಿ ಮಿಶ್ರಣಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷವರೆಗೆ ಹಾಗೆಯೇ ಇಟ್ಟು ನಂತರ ತುಸು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮೊಟ್ಟೆಯಲ್ಲಿನ ಲೋಳೆ ಅಂಶ:
ಮೊಟ್ಟೆಯಲ್ಲಿನ ಲೋಳೆ ಅಂಶ ವಯಸ್ಸಾದ ಚಿಹ್ನೆಗಳನ್ನು ಹೋಗಲಾಡಿಸುವ ಗುಣಗಳನ್ನು ಹೊಂದಿದೆ. ಕ್ರೀಮ್, ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡಲು ಅತ್ಯಗತ್ಯ. ಈ ಮಾಸ್ಕ್ ನ್ನು ಒಂದು ಮೊಟ್ಟೆ ಮತ್ತು ಅರ್ಧ ಬೌಲ್ ಕ್ರೀಮ್ ಮಿಶ್ರಣ ಮಾಡಿ ತಯಾರಿಸಿ. ಈ ಮಿಶ್ರಣಕ್ಕೆ ಲಿಂಬೆ ಹನಿಗಳನ್ನು ಸೇರಿಸಿ. ಈ ಮಾಸ್ಕ್ ನ್ನು ತ್ವಚೆಗೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ. ಈ ಪೇಸ್ ಪ್ಯಾಕ್ ನಿಯಮಿತವಾಗಿ ಬಳಸುವುದರಿಂದ ಸಾಕಷ್ಟು ಪರಿಣಾಮಕಾರಿಯಾಗಿದೆ.

ನಿಂಬೆ ಮತ್ತು ಟೊಮೆಟೊ ಪ್ಯಾಕ್:
ಮೂರ್ನಾಲ್ಕು ಚಮಚಗಳಷ್ಟು ಟೊಮೆಟೊ ರಸಕ್ಕೆ ಒಂದೆರಡು ಚಮಚ ನಿಂಬೆ ರಸ ಮತ್ತು ಮೂರ್ನಾಲ್ಕು ಚಮಚದಷ್ಟು ಓಟ್ ಮೀಲ್ ಪುಡಿಯನ್ನು ಬೆರೆಸಿ ಗಂಟಿಲ್ಲದಂತೆ ಕಲುಕಿರಿ. ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ 10 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್, ತ್ವಚೆಯ ಮೇಲಿನ ಕಲೆಗಳು ಹಾಗು ಗಾಯ ಅಥವಾ ಗುಳ್ಳೆಗಳ ಗುರುತುಗಳನ್ನು ನಿವಾರಿಸುತ್ತದೆ.ಒಟ್ಟಿನಲ್ಲಿ ನಿಂಬೆ ಸೌಂದರ್ಯಕ್ಕೂ ಸೈ, ಆರೋಗ್ಯಕ್ಕೂ ಸೈ. ಚರ್ಮ ರೋಗ ನಿವಾರಣೆಯಲ್ಲಿ ನಿಂಬೆಯ ಪಾತ್ರ ದೊಡ್ಡದು. ಯಾವುದೇ ಅಡ್ಡ ಪರಿಣಾಮವೂ ಇಲ್ಲ. ನಿಮ್ಮ ತ್ವಚೆ ಕೇಳುವ ಪ್ಯಾಕ್ ಬಳಸಿ. ಆರೋಗ್ಯವಂತ ತ್ವಚೆಯೊಂದಿಗೆ ನಿಮ್ಮ ಸೌಂದರ್ಯ ಇಮ್ಮಡಿಯಾಗಲಿ.

ನಿಂಬೆ ಮತ್ತು ಮುಲ್ತಾನಿ ಮಣ್ಣಿನ ಪ್ಯಾಕ್:
ಎರಡು ಚಮಚಗಳಷ್ಟು ಮುಲ್ತಾನಿ ಮಣ್ಣು ಮತ್ತು ಒಂದು ಚಮಚದಷ್ಟು ನಿಂಬೆರಸವನ್ನು ತೆಗೆದುಕೊಂಡು ಚನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಸರಿಯಾಗಿ ಮುಖ್ದ ತುಣ್ಬೆಲಾ ಲೇಪಿಸಿಕೊಳ್ಳಿ. 10-15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಎಣ್ಣೆಯುಕ್ತ ತ್ವಚೆಯವರಿಗೆ ಇದು ಅತ್ಯುತ್ತಮ ಫೇಸ್ ಪ್ಯಾಕ್.

ನಿಂಬೆ ಮತ್ತು ಸೌತೆಕಾಯಿ ಪ್ಯಾಕ್:
ಒಂದು ಚಮಚ ತಾಜಾ ಸೌತಿಕಾಯಿ ರಸ ಮತ್ತು ಒಂದು ಚಮಚ ನಿಂಬೆ ರಸವನ್ನು ತೆಗೆದು ಕೊಂಡು ಚನಾಗಿ ಬೆರೆಸಿ. ಒಂದು ಹತ್ತಿಯ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ, ಮುಖ್ದ ಮೇಲೆ ವೃತ್ತಾಕಾರದಲ್ಲಿ ನಯವಾಗಿ ಉಜ್ಜಿರಿ. ಮುಂದಿನ 5 ನಿಮಿಷಗಳವರೆಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. 5 ನಿಮಿಷಗಳ ನಂತರ ತಂಪಾದ ನೀರಿನಿಂದ ಮುಖ ತೊಳೆಯಿರಿ . ಇದು ಎಣ್ಣೆಯುಕ್ತ ತ್ವಚೆಯಲ್ಲಿನ ಎಣ್ಣೆಯನ್ನು ತೆಗೆದುಹಾಕುವುದು.

ನಿಂಬು ಮತ್ತು ಜೇನು:
ಇದನ್ನು ವಾರದಲ್ಲಿ ಒಮ್ಮೆ ಉಪಯೋಗಿಸಬಹುದು.
*1 ಚಮಚ ಜೇನು
*1/2 ಚಮಚ ಕ್ರೀಂ
*1 ಚಮಚ ನಿಂಬೆ ಹಣ್ಣಿನ ರಸ
ವಿಧಾನ: ಮೇಲೆ ಹೇಳಿದವನ್ನು ಚೆನ್ನಾಗಿ ಮಿಕ್ಸ್ ಮಾಡಿ, ಮುಖಕ್ಕೆ ಹಚ್ಚಿಕೊಳ್ಳಿ. ಒಣಗಲು ಬಿಡಿ ನಂತರ ಬಿಸಿ ನೀರಿನಲ್ಲಿ ಮುಖ ತೊಳೆಯಿರಿ.

ಚಿಟಕಿ ಅರಿಶಿನ ಪುಡಿ:
ಒಂದೆರಡು ಹನಿ ನಿಂಬು ರಸ ಹಾಗೂ ಸ್ವಲ್ಪ ರೋಸ್ ವಾಟರ್
ವಿಧಾನ: ಮೇಲೆ ಹೇಳಿದ ಪದಾರ್ಥಗಳನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಒಣಗಿದ ನಂತರ ಬಿಸಿ ನೀರಿನಿಂದ ತೊಳೆದುಕೊಳ್ಳಬೇಕು.

ಹಾಲು ಹಾಗು ನಿಂಬೆ ಹಣ್ಣಿನ ರಸ:
2 ಚಮಚ ಹಾಲು ಹಾಗೂ ಒಂದು ಚಮಚ ನಿಂಬೆ ಹಣ್ಣಿನ ರಸ
ವಿಧಾನ: ಇದನ್ನು ಮಿಕ್ಸ್ ಮಾಡಿ ಆಗ ಪೇಸ್ಟ್ ಆಗುತ್ತದೆ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ, ಮತ್ತು ಸ್ವಲ್ಪ ಹೊತ್ತಿನ ನಂತರ ಹದವಾದ ಬಿಸಿ ನೀರಿನಿಂದ ಮುಖ ತೊಳೆಯಿರಿ.

ಗಂಧದ ಪುಡಿ:
2 ಚಮಚ ಗಂಧದ ಪುಡಿ
2 ಚಮಚ ನಿಂಬೆ ಹಣ್ಣಿನ ರಸ
2 ಚಮಚ ಸೌತೆಕಾಯಿ ರಸ
1 ಚಮಚ ಟೊಮೇಟೊ ರಸ
ವಿಧಾನ: ಮೇಲೆ ಹೇಳಿದ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ಮುಖಕ್ಕೆ ಹಚ್ಚಿಕೊಳ್ಳಿ. ಒಣಗಲು ಬಿಡಿ, ನಂತರ ಬಿಸಿನೀರಿನಿಂದ ತೊಳೆಯಿರಿ.

ಸ್ಟ್ರಾಬರಿ ಹಾಗೂ ಜೇನು:
2-3 ಚಮಚ ಸ್ಟ್ರಾಬರಿ ಪೇಸ್ಟ್ ಗೆ ಒಂದು ಚಮಚ ಜೇನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ಮಾಸ್ಕ್ ನಲ್ಲಿ ಜೇನಿನ ಬದಲು ಮೊಸರು, ನಿಂಬೆ ರಸ ಬಳಸಬಹುದು.

ಬೆಣ್ಣೆ ಹಣ್ಣು:
ಬೆಣ್ಣೆ ಹಣ್ಣನ್ನು ಹಿಸುಕಿ ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ನಿಮ್ಮ ಮುಖದ ಕಾಂತಿ ಹೆಚ್ಚುವುದು.

ಸೇಬು:
ಸೇಬಿನ ಸಿಪ್ಪೆ ಮತ್ತು ಅದರ ತಿರುಳನ್ನು ಹಾಕಿ ನುಣ್ಣನೆ ರುಬ್ಬಿ ಮುಖಕ್ಕೆ ಹಚ್ಚಿಕೊಂಡರೆ ಮುಖದಲ್ಲಿರುವ ಕಪ್ಪು ಕಲೆಗಳು ಕಡಿಮೆಯಾಗುವುದು.

ಬಾಳೆ ಹಣ್ಣು:
ಬಾಳೆ ಹಣ್ಣನ್ನು ಪೇಸ್ಟ್ ರೀತಿ ಅದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಮುಖ ತೊಳೆದರೆ ಮುಖದ ಬಿಳುಪು ಹೆಚ್ಚುವುದು.

ಮೊಸರು:
ಮೊಸರಿಗೆ ಸ್ವಲ್ಪ ನಿಂಬೆ ರಸ ಹಿಂಡಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ಮುಖದಲ್ಲಿರುವ ಎಣ್ಣೆಯಂಶವನ್ನು ಹೋಗಲಾಡಿಸಬಹುದು.

ಐಸ್ ಪ್ಯಾಕ್ :
ಐಸ್ ಪ್ಯಾಕ್ ಕೂಡ ತ್ವಚೆಗೆ ತುಂಬಾ ಒಳ್ಳೆಯದು. ಬಿಸಿಲಿಗೆ ಹೊರಗಡೆ ಹೋಗಿ ಬಂದ ನಂತರ ಒಂದು ತುಂಡು ಐಸ್ ಅನ್ನು ಕರ್ಚೀಪ್ ನಲ್ಲಿ ಹಾಕಿ ಮೆಲ್ಲನೆ ಮುಖವನ್ನು ಉಜ್ಜಿ. ಈ ರೀತಿ ಮಾಡಿದರೆ ಮುಖ ಕಪ್ಪಾಗುವುದಿಲ್ಲ.

ಪುದೀನಾ:
ಮೊಡವೆ ಇರುವವರು ಪುದೀನಾವನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ನಿಂಬೆರಸ ಹಿಂಡಿ ಹಚ್ಚಿದರೆ ಉತ್ತಮ ಪ್ರಯೋಜನವನ್ನು ಪಡೆಯಬಹುದು.

ಮೊಟ್ಟೆಯ ಬಿಳಿ ಭಾಗ:
ಮೊಟ್ಟೆಯ ಬಿಳಿ ಕೂಡ ಉತ್ತಮವಾದ ಫೇಸ್ ಮಾಸ್ಕ್ ಆಗಿದೆ. ಈ ಫೇಸ್ ಮಾಸ್ಕ್ ಬಳಸಿದರೆ ಮುಖದಲ್ಲಿರುವ ರಂಧ್ರಗಳು ಕಡಿಮೆಯಾಗುತ್ತದೆ, ಮುಖವೂ ಶುಭ್ರವಾಗಿ ಕಾಣುವುದು.

ಕಹಿ ಬೇವಿನ ಎಲೆ:
ಕಹಿ ಬೇವಿನ ಎಲೆಯನ್ನು ಅರೆದು ಮುಖಕ್ಕೆ ಹಚ್ಚಿದರೆ ಮೊಡವೆ ಸಮಸ್ಯೆ ಕಂಡು ಬರುವುದಿಲ್ಲ. ಈ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿದರೆ ಇವು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ.

ಓಟ್‍ಮೀಲ್ ಫೇಸಿಯಲ್:
ಓಟ್‍ಮೀಲ್‍ನಲ್ಲಿ ಅಮೈನೋ ಆಮ್ಲಗಳು ಯಥೇಚ್ಛವಾಗಿರುತ್ತವೆ. ಇದೊಂದು ಹೈಪೊಅಲ್ಲರ್ಜೆನಿಕ್ ಆಗಿದ್ದು, ಸೂಕ್ಷ್ಮ ತ್ವಚೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಸೂಕ್ತವಾಗಿರುತ್ತದೆ. ಇದು ತರಚು ಗಾಯಗಳನ್ನು, ಮೊಡವೆಗಳನ್ನು, ಕಜ್ಜಿಯನ್ನು ಮತ್ತು ರೋಸಾಸಿಯಗಳಿಗೆ ಉತ್ತಮ ಮುಲಾಮಾಗಿ ವರ್ತಿಸುತ್ತದೆ. ಹೀಗಾಗಿ ಇದು ಒಂದು ನೈಸರ್ಗಿಕ ಎಕ್ಸ್‌ಫೋಲಿಯೇಟರಾಗಿ ಕೆಲಸ ಮಾಡುತ್ತದೆ.
ವಿಧಾನ:
*ಒಂದು ಕಪ್ ಹಾಲಿನೊಂದಿಗೆ ಎರಡು ಚಮಚ ಅನ್‍ಫ್ಲೇವರ್ಡ್ ಓಟ್‍ಮೀಲ್ ಅನ್ನು ಬೆರೆಸಿ.
*ಪೇಸ್ಟ್ ರೀತಿಯಾಗುವಂತೆ ಇದನ್ನು ಚೆನ್ನಾಗಿ ಕುದಿಸಿ.
*ನಂತರ ಒಲೆಯ ಮೇಲಿನಿಂದ ಇದನ್ನು ಕೆಳಗಿ ಇಳಿಸಿ, ಎರಡು ಚಮಚ ಆಲೀವ್ ಎಣ್ಣೆಯನ್ನು ಬೆರೆಸಿ.
*ಈ ಮಿಶ್ರಣ ತಣ್ಣಗಾದ ಮೇಲೆ ಮುಖಕ್ಕೆ ಲೇಪಿಸಿ.



Click it and Unblock the Notifications