Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಹೊಳಪಿನ ತ್ವಚೆಗೆ ಮೇಕಪ್ ಟಿಪ್ಸ್
ಸುಂದರ, ಹೊಳೆಯುವ ಚರ್ಮ ಯಾವುದೇ ಮಹಿಳೆಗೆ ಒಂದು ಆಸ್ತಿ ಎಂದೇ ಪರಿಗಣಿಸಲಾಗುತ್ತದೆ. ಮತ್ತು, ನಾವು ಮಹಿಳೆಯರು ಮೇಕಪ್ ಇಲ್ಲದೆ ಅದ್ಭುತ ಚರ್ಮವನ್ನು ಹೊಂದಲು ಮತ್ತು ಏರ್ ಬ್ರಷ್ ಮಾಡೆಲ್‌ಗಳಂತೆ ಕಾಣಲು ಬಯಸುತ್ತೇವೆ. ಆದರೆ ಮೇಕಪ್ ಇಲ್ಲದೆ ಎಲ್ಲರೂ ಸುಂದರವಾಗಿ ಕಾಣಲು ಸಾಧ್ಯವಿಲ್ಲ.
ಅದರ ಜೊತೆಗೆ ನಮ್ಮ ತ್ವಚೆಯನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಳ್ಳುವುದೂ ಅಷ್ಟೇ ಮುಖ್ಯ. ನಮ್ಮ ಮುಖವನ್ನು ನಾವು ಸ್ವಚ್ಛಗೊಳಿಸಿದಷ್ಟು ಯಾವ ಮೇಕಪ್ ಕೂಡ ತಾಜಾ ತ್ವಚೆಯನ್ನು ನೀಡಲು ಸಾಧ್ಯವಿಲ್ಲ. ಆದರೆ ನಿಮ್ಮ ತ್ವಚೆಗೆ ಹೊಳಪನ್ನು ನೀಡುವಂತಹ ಕೆಲವು ಮೇಕಪ್ ಟಿಪ್ಸ್ ಗಳನ್ನು ನಾವು ನಿಮಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಯಾಸಗೊಂಡ ಕಣ್ಣುಗಳ ತ್ವರಿತ ಮೇಕಪ್
ಮುಖಕ್ಕೆ ಬೇಕು ಪ್ರೈಮರ್ ಕೋಟ್ !
ಒಂದು ನೈಸರ್ಗಿಕ ಹೊಳಪನ್ನು ನಿಮ್ಮ ಮುಖಕ್ಕೆ ನೀಡಲು ಮೇಕಪ್ ಮಾಡುವಾಗ ಮೊದಲು ನೀವು ಮಾಡಬೇಕಾದದ್ದು ಪ್ರೈಮರ್ ಕೋಟ್ ! ನಿಮ್ಮ ಬಳಿ ಪ್ರೈಮರ್ ಇಲ್ಲದಿದ್ದರೆ ಮಾಯಿಶ್ಚರೈಸರ್ ಅಥವಾ ಲೋಷನ್ ಕೂಡ ಬಳಸಬಹುದು. ಮುಖಕ್ಕೆ ಪ್ರೈಮರ್ ಅನ್ವಯಿಸುವುದರಿಂದ ಪ್ರಯೋಜನವೆಂದರೆ ಇದು ಮುಖದಲ್ಲಿರುವ ಸೂಕ್ಷ್ಮ ರೇಖೆಗಳನ್ನು ಹೋಗಲಾಡಿಸುತ್ತದೆ.
ಚರ್ಮದ ಮೇಲ್ಮೈಯನ್ನು ಮೃದುವಾಗಿಸುತ್ತದೆ, ಆದ್ದರಿಂದ ಮಾಯಿಶ್ಚರೈಸರ್‌ನ್ನು ತೆಳುವಾಗಿ ಮುಖಕ್ಕೆ ಲೇಪಿಸಿ. ನಮಗೆ ಅತ್ಯಂತ ಚಿಂತೆಯೆಂದರೆ ದಿನದ ಕೊನೆಯಲ್ಲಿ ನಮ್ಮ ಮುಖದಿಂದ ಮೇಕಪ್ ಮಾಯವಾಗಿ ಕೊಳೆ ಕಾಣಿಸುತ್ತದೆಯೋ ಎಂಬುದು. ಆದರೆ, ಆದರೆ, ಕೈಯಲ್ಲಿ ಒಂದು ಪ್ರೈಮರ್ ನಿಮ್ಮ ಜೊತೆಯಿದ್ದರೆ ಅದನ್ನು ನಿಮ್ಮ ಮುಖಕ್ಕೆ ಮತ್ತು ಕುತ್ತಿಗೆ ಭಾಗಕ್ಕೂ ಲೇಪಿಸಿ, ಪ್ರೈಮರ್ ನಿಮ್ಮ ಮೇಕಪ್ ನ್ನು ಬಹಳ ಹೊತ್ತು ಹಾಗೆಯೇ ಉಳಿಯುವಂತೆ ಮಾಡುವ ನಿಮ್ಮ ಉತ್ತಮ ಸಂಗಾತಿಯಾಗಬಹುದು.
ಬೇಸ್ ಕೋಟ್ ಅನ್ವಯಿಸಿ
ಪ್ರೈಮರ್ ನಿಮ್ಮ ಮುಖದ ಎಲ್ಲಾ ಭಾಗಗಳಿಗೂ ಸರಿಯಾಗಿ ಹಚ್ಚಿದ ನಂತರ ಬೆರಳ ತುದಿಯಲ್ಲಿ ಒಂದು ಹನಿ ಪೌಂಡೇಶನ್ ನ್ನು ತೆಗೆದುಕೊಂಡು ಮೆದುವಾಗಿ ಮುಖದ ಎಲ್ಲಾ ಭಾಗಗಳಿಗೆ ಲೇಪಿಸಿ. ನಿಮಗೆ ಮಾರುಕಟ್ಟೆಯಲ್ಲಿ ಅಗತ್ಯ ವಿರುವ ವಿವಿಧ ಪೌಂಡೇಶನ್ ಗಳು ಲಭ್ಯ. ನೀವು ನಿಮಗೆ ಬೇಕಾದ ಪೌಂಡೇಶನ್ ನ್ನು ಆಯ್ಕೆ ಮಾಡಿಕೊಳ್ಳಿ. ಜೊತೆಗೆ ಇದು ಸೂರ್ಯನ ನೇರಳಾತೀತ ಕಿರಣಗಳು ನಿಮ್ಮ ಮುಖಕ್ಕೆ ತೊಂದರೆಯನ್ನು ಉಂಟು ಮಾಡದೇ ಇರುವ ಹಾಗೆ ರಕ್ಷಣೆ ಮಾಡುವ ಅಂಶಗಳು (SPF ) ಇವೆಯೋ ಇಲ್ಲವೂ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಕನ್ಸಿಲರ್ ಬಳಸಿ
ಪ್ರೈಮರ್ ನಿಮ್ಮ ಮುಖದಲ್ಲಿರುವ ವಯಸ್ಸಿನ ಚಿಹ್ನೆಯನ್ನು ಅಡಗಿಸಿಟ್ಟರೆ, ಕನ್ಸಿಲರ್ ನ ಸ್ವರ್ಶ ನಿಮ್ಮ ಮುಖದಲ್ಲಿ ಅದ್ಭುತಗಳನ್ನು ಉಂಟುಮಾಡುತ್ತದೆ. ನಿಮಗೆ ಈ ವಿಷಯ ತಿಳಿಯದೆಯೂ ಇರಬಹುದು, ಪ್ರೈಮರ್ ಕೂಡ ಮರೆಮಾಚಲಾಗದ ಚರ್ಮದ ಮೇಲೆ ಗುಪ್ತ ಕಠಿಣ ತಾಣಗಳನ್ನೂ ಸಹ ಕನ್ಸಿಲರ್ ಮರೆಮಾಚುತ್ತದೆ.
ಇದು ಕಣ್ಣಿನ ಅಡಿಯಲ್ಲಿ ಗಾಢ ಕಪ್ಪು ಕಲೆ, ಕೆಂಪು ಕಲೆಗಳು, ಮೊಡವೆ ಮೊದಲಾದವುಗಳನ್ನೂ ಮರೆಮಾಚುತ್ತದೆ. ಕನ್ಸಿಲರ್ ಗಳು ಟ್ಯೂಬ್ ಗಳು ಮತ್ತು ಸ್ಟಿಕ್ ಗಳು ಕ್ರೀಮ್ ಗಳು ಮೊದಲಾದ ರೂಪದಲ್ಲಿ ದುರೆಯುತ್ತದೆ. ನೀವು ಕನ್ಸಿಲರ್ ಕೊಳ್ಳುವಾಗ ನಿಮ್ಮ ಮುಖಕ್ಕೆ ಹಚ್ಚಿ ಪ್ರಯೋಗ ಮಾಡಿ ನಂತರ ನಿಮ್ಮ ಮುಖಕ್ಕೆ ಸರಿಹೊಂದುವಂತಹ ಕನ್ಸಿಲರ್ ನ್ನು ಕೊಂಡುಕೊಳ್ಳಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸುಂದರ ಕಣ್ಣಿಗಾಗಿ ಮೇಕಪ್‌ನ ಸ್ಪರ್ಶ
ಅಂತಿಮವಾಗಿ ಪೌಡರ್ ಲೇಪಿಸಿ
ಹೊರಡುವ ಮುನ್ನ ಮುಖಕ್ಕೆ ಹೊಳಪನ್ನು ನೀಡಲು ಅಂತಿಮವಾಗಿ ಮುಖಕ್ಕೆ ಪೌಡರ್ ನ್ನು ಹಚ್ಚಿ. ಪೌಡರ್ ಚರ್ಮವು ಎಲ್ಲಾ ಮೇಕಪ್ ಗೂ ಸರಿಹೊಂದಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮವನ್ನು ಆದಷ್ಟು ನೈಸರ್ಗಿಕವಾಗಿ ಕಾಣುವಂತೆ ಮಾಡುತ್ತದೆ. ವಾಸ್ತವವಾಗಿ, ಯಾರೂ ನೀವು ಮುಖಕ್ಕೆ ಮೇಕಪ್ ಮಾಡಿದ್ದೀರಿ ಎಂದು ಊಹಿಸಲೂ ಕೂಡ ಸಾಧ್ಯವಿಲ್ಲ. ಯಾವುದೇ ಪೌಡರ್ ಬಳಸುವಾಗ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ: ಪೌಡರ್ ನಲ್ಲಿ ಎರಡು ವಿಧ: ಲೂಸ್ ( ಸಡಿಲ) ಪೌಡರ್ ಮತ್ತು ಪ್ರೆಸ್ ಪೌಡರ್. ಆದ್ದರಿಂದ ಇವುಗಳಲ್ಲಿ ಯಾವುದು ನಿಮ್ಮ ತ್ವಚೆಗೆ ಸರಿಹೊಂದುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಮೇಕಪ್ ನ್ನು ಮಾಡುವುದರಿಂದ ಅನೇಕ ಪ್ರಯೋಜನಗಳು ಇರುವುದರಿಂದ, ಮಾರುಕಟ್ಟೆಯಲ್ಲಿ ಇಂತಹ ಸಾಕಷ್ಟು ಉತ್ಪನ್ನಗಳು ಲಭ್ಯವಿವೆ. ಆದ್ದರಿಂದ ನೀವು ಯಾವುದೇ ಮೇಕಪ್ ವಸ್ತುಗಳನ್ನು ಖರೀದಿಸುವಾಗ ನಿಮ್ಮ ತ್ವಚೆಗೆ ಸರಿಹೊಂದುವಂತದ್ದನ್ನು ನೋಡಿ, ಪರೀಕ್ಷಿಸಿ ಆನಂತರವೇ ಕೊಂಡುಕೊಳ್ಳಿ. ಯಾವುದೇ ಅಡ್ಡ ಪರಿಣಾಮಗಳನ್ನೂ ಉಂಟುಮಾಡದಂತಹ ಉತ್ಪನ್ನಗಳ ಬಗ್ಗೆ ಗಮನವಿಟ್ಟು ಖರೀದಿಸಿ.
ಬುದ್ಧಿವಂತ ಆಯ್ಕೆ ನಿಮ್ಮದಾಗಲಿ, ನಿಮ್ಮ ತ್ವಚೆ ಇನ್ನಷ್ಟು ಕಂಗೊಳಿಸುವಂತಾಗಲಿ.



Click it and Unblock the Notifications