Latest Updates
-
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು
ಮದರಂಗಿ ಬಣ್ಣ ಮಾಸದಿರಲು ಒಂದಿಷ್ಟು ಸಲಹೆಗಳು
ನಮ್ಮಲ್ಲಿ ಯಾವುದೇ ಶುಭ ಸಮಾರಂಭಗಳಿರಲಿ ಹೆಣ್ಣು ಮಕ್ಕಳಲ್ಲಿ ಮೆಹಂದಿ ಹಚ್ಚುವ ಸಂಭ್ರಮ ಅಂತೂ ಇದ್ದೇ ಇರುತ್ತದೆ. ಮದುವೆ ಮತ್ತೆ ಕೆಲವೊಂದು ಸಮಾರಂಭಗಳಲ್ಲಿ ಮೆಹಂದಿ ಹಚ್ಚುವ ಶಾಸ್ತ್ರ ಕೂಡ ಇದೆ. ಕೈ ಮತ್ತು ಕಾಲಿಗೆ ಆಕರ್ಷಕ ವಿನ್ಯಾಸ ಮೆಹಂದಿ ಹಚ್ಚಿ, ನಂತರ ಮೆಹಂದಿ ಬಣ್ಣ ಗಾಢವಾಗಿ ಬಂದರೆ ಅದನ್ನು ತನ್ನ ಗೆಳತಿಯರಿಗೆ ತೋರಿಸಿ ಸಂತೋಷ ಪಡುವಾಗ, ಅದನ್ನು ನೋಡುವವರಿಗೆ ತಾವೂ ಮೆಹಂದಿ ಹಾಕಿಸಬೇಕೆಂದು ಅನಿಸುವುದು ಸಹಜ.
ಆದರೆ ಈಗ ಬರುವ ಮೆಹಂದಿಯಲ್ಲಿ ಕೆಲವು ರಾಸಾಯನಿಕ ವಸ್ತುಗಳ ಮಿಶ್ರಣವಿರುವುದರಿಂದ ಮೆಹಂದಿ ಹಚ್ಚಿದ ಎರಡೇ ದಿನದಲ್ಲಿ ಹೊರಟು ಹೋಗುತ್ತದೆ. ಮೆಹಂದಿಯನ್ನು ಸುರಕ್ಷಿತವಾಗಿ ಬಹಳ ದಿನ ಇಟ್ಟುಕೊಳ್ಳಲು ಇಲ್ಲಿವೆ ಒಂದಿಷ್ಟು ಸಲಹೆಗಳು. ಮೆಹಂದಿ ಎಲೆಗಳ ಆರೋಗ್ಯಯುತ ಪ್ರಯೋಜನಗಳು
ಮೆಹಂದಿ ಹಚ್ಚುವ ಮುನ್ನ

ಮೆಹಂದಿ ಹಚ್ಚುವ ಮುನ್ನ ಕೈಯನ್ನು ತೊಳೆದು, ಹಚ್ಚುವ ಭಾಗಕ್ಕೆ ಟೋನರ್ ಅಥವಾ ಆಸ್ಟ್ರೋಜೆಂಟ್ ಹಚ್ಚಿ. ಇದು ಕೈಯಲ್ಲಿರುವ ಎಣ್ಣೆಯಂಶ ತೆಗೆದು ಕೈಗೆ ಮೆಹಂದಿ ಚೆನ್ನಾಗಿ ಹಿಡಿಯುವಂತೆ ಮಾಡುತ್ತದೆ.
ಮೆಹಂದಿ ಹಚ್ಚಿ ಬೇಗನೆ ತೆಗೆಯಬೇಡಿ
ಮೆಹಂದಿ ಹಚ್ಚಿ ಬೇಗನೆ ತೆಗೆಯಬೇಡಿ, ಅದು ಸಂಪೂರ್ಣ ಒಣಗಿದ ಮೇಲೆ ಮೆಹಂದಿಯನ್ನು ತೊಳೆಯಿರಿ. ಇದರಿಂದ ಮೆಹಂದಿ ಕೈಗೆ ಚೆನ್ನಾಗಿ ಹಿಡಿಯುತ್ತದೆ. ಆದ್ದರಿಂದ ಮೆಹಂದಿ ಹಚ್ಚುವಾಗ ಸ್ವಲ್ಪ ಪುರುಸೊತ್ತು ಮಾಡಿಕೊಂಡು ಹಚ್ಚುವುದು ಒಳ್ಳೆಯದು.
ಹಚ್ಚಿದ ಬಳಿಕ ಈ ರೀತಿ ಮಾಡಿ
ಸಕ್ಕರೆ ಮತ್ತು ನಿಂಬೆರಸವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಸ್ವಲ್ಪ ಬಿಸಿ ಮಾಡಿ ತಣ್ಣಗಾಗಲು ಇಡಿ, ಮೆಹಂದಿ ಹಚ್ಚಿದ ನಂತರ ಮೆಹಂದಿ ಸ್ವಲ್ಪ ಒಣಗುವಾಗ ಈ ದ್ರಾವಣವನ್ನು ಕೈ ಮೇಲೆ ಚಿಮುಕಿಸಿ. ದ್ರಾವಣ ತುಂಬಾ ಗಟ್ಟಿಯಾಗಿದ್ದರೆ ಸ್ವಲ್ಪ ನಿಂಬೆ ರಸ ಹಿಂಡಿ ಮಿಕ್ಸ್ ಮಾಡಿ ಹಚ್ಚಿ. ಪ್ರತೀ 30 ನಿಮಿಷಕ್ಕೆ ಈ ರೀತಿ ಮಾಡಿ.
ಮೆಹಂದಿ ತೆಗೆದ ಬಳಿಕ
ಮೆಹಂದಿಯನ್ನು ಹಚ್ಚಿದ ನಂತರ 2 ಗಂಟೆಗಳವರೆಗೆ ಅದನ್ನು ತೆಗೆಯಬೇಡಿ. ನಂತರ ಮೆಹಂದಿಯನ್ನು ಮೊದಲು ಕೈಯಿಂದ ಕೆರೆದು ತೆಗೆದು ನಂತರ ತೆಂಗಿನೆಣ್ಣೆ ಹಚ್ಚಿ.



Click it and Unblock the Notifications



