Latest Updates
-
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ವರಮಹಾಲಕ್ಷ್ಮಿ ಹಬ್ಬದ ತಯಾರಿ: ಕುಟುಂಬದೊಂದಿಗೆ ಜಗಳವಿಲ್ಲದೆ, ಶಾಂತಿಯುತವಾಗಿ ಹಬ್ಬ ಆಚರಿಸುವುದು ಹೇಗೆ? -
ನಾಲ್ಕನೇ ಓಣಂ ಸಂಭ್ರಮ: ಪೂಕಳಂ ಸ್ಪರ್ಧೆಗೆ ಕ್ವಿಕ್ ಟಿಪ್ಸ್ ಮತ್ತು ಝೀರೋ-ವೇಸ್ಟ್ ಹ್ಯಾಕ್ಸ್! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ: ಇನ್ಮುಂದೆ ಕ್ಯಾನ್ ಮೇಲೆ ಈ ಹೆಸರು ಇರಲ್ಲ, FSSAI ಹೊಸ ರೂಲ್ಸ್! -
ರಕ್ಷಾಬಂಧನ 2026: ಚಂದ್ರಗ್ರಹಣದ ಭಯ ಬೇಡ, ರಾಖಿ ಕಟ್ಟಲು ಬೆಸ್ಟ್ ಟೈಮ್ ಇಲ್ಲಿದೆ! -
ಉರಿ ಬಿಸಿಲು, ತೇವಾಂಶದ ಕಾಟ: ಎಸಿ ಇಲ್ಲದಿದ್ದರೂ ಫಿಟ್ ಆಗಿರಲು 12 ನಿಮಿಷದ ಸರಳ ವರ್ಕೌಟ್! -
ರಕ್ಷಾಬಂಧನ ಶಾಪಿಂಗ್ ಎಚ್ಚರ: ನಿಮ್ಮ ಹಣ ಕದಿಯಲು ಕಾಯುತ್ತಿದ್ದಾರೆ ಸೈಬರ್ ವಂಚಕರು! -
ಭಾರಿ ಮಳೆ, ಬಿರುಗಾಳಿ ಎಚ್ಚರಿಕೆ: ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ 30 ನಿಮಿಷದ ಪ್ಲಾನ್ ಫಾಲೋ ಮಾಡಿ -
ಮುಂಬೈನಲ್ಲಿ ಮೋಮೋಸ್ ತಿಂದ 16 ಮಂದಿಗೆ ಫುಡ್ ಪಾಯಿಸನಿಂಗ್: ಹೊರಬಂತು ಶಾಕಿಂಗ್ ಸತ್ಯ, ಸುರಕ್ಷಿತವಾಗಿರುವುದು ಹೇಗೆ?
ಇಡೀ ದಿನ ಮೇಕಪ್ ಉಳಿಸಿಕೊಳ್ಳುವ ಬಗೆ ಹೇಗೆ?
ಮೇಕಪ್ ಅನ್ನು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಉಳಿಸಿಕೊಳ್ಳುವುದು ಏನು ರಾಕೆಟ್ ವಿಜ್ಞಾನವಲ್ಲ. ಇದಕ್ಕೆಲ್ಲ ನಿಮಗೆ ಬೇಕಾಗಿರುವುದು ಸರಿಯಾದ ಆಯ್ಕೆಗಳು ಅಷ್ಟೇ. ನಿಮ್ಮ ತ್ವಚೆಗೆ ಸರಿಹೊಂದುವ ಸರಿಯಾದ ಕಾಸ್ಮೆಟಿಕ್ ಉತ್ಪನ್ನಗಳನ್ನು ಖರೀದಿಸುವುದು ನಿಮ್ಮ ಮೊದಲ ಹೆಜ್ಜೆಯಾಗಿರಬೇಕು. ಏಕೆಂದರೆ ನಾವೆಲ್ಲರು ವಿವಿಧ ಬಗೆಯ ತ್ವಚೆಗಳನ್ನು ಹೊಂದಿರುತ್ತೇವೆ. ಅದಕ್ಕೆ ಸರಿ ಹೊಂದುವಂತಹ ಕಾಸ್ಮೆಟಿಕ್ ಬ್ರ್ಯಾಂಡ್‍ಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು.
ಮಳೆಗಾಲದ ಮದುವಣಗಿತ್ತಿಗಾಗಿ ಅದ್ಭುತ ಶೃಂಗಾರ ಸಲಹೆಗಳು
ಇದಕ್ಕೆ ಮೊದಲು ನೀವು ಯಾವ ತ್ವಚೆಯನ್ನು ಹೊಂದಿದ್ದೀರಿ ಎಂದು ಅರ್ಥ ಮಾಡಿಕೊಳ್ಳಬೇಕು. ಒಣ ತ್ವಚೆಯನ್ನು ಹೊಂದಿರುವ ನಿಮ್ಮ ಸ್ನೇಹಿತರಿಗೆ ಸರಿಯಾಗಿ ತೋರುವ ಕಾಸ್ಮೆಟಿಕ್ ಎಣ್ಣೆ ಚರ್ಮವನ್ನು ಹೊಂದಿರುವ ನಿಮಗೆ ಸರಿ ಹೊಂದದೆ ಇರಬಹುದು. ಇದರ ಬಗ್ಗೆ ನಿಮಗೆ ಸಂದೇಹಗಳಿದ್ದಲ್ಲಿ, ಮೊದಲು ನಿಮ್ಮ ಸ್ಕಿನ್ ಎಕ್ಸ್‌ಪರ್ಟ್‌ರವರನ್ನು ಭೇಟಿ ಮಾಡಿ. ಮೇಕಪನ್ನು ಇಡೀ ದಿನ ಇಡುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಮುಂದೆ ಇದೆ ಓದಿ:

ಸ್ವಚ್ಛತೆ
ಸ್ವಚ್ಛತೆಯು ತ್ವಚೆಗೆ ಅತ್ಯಗತ್ಯವಾಗಿ ಬೇಕಾಗಿರುತ್ತದೆ ಎಂಬುದನ್ನು ಮರೆಯಬಾರದು. ಅದರಲ್ಲಿ ಬೆಳಗೆಯಿಂದ ಸಂಜೆಯವರೆಗೆ ಮೇಕಪನ್ನು ಉಳಿಸಿಕೊಳ್ಳುವಂತಹ ಸಾಹಸಕ್ಕೆ ಕೈಹಾಕಿದಾಗ ಇದರ ಅಗತ್ಯ ಎಂದಿಗಿಂತ ಹೆಚ್ಚಾಗಿರುತ್ತದೆ. ಏಕೆಂದರೆ ಕೊಳೆಯಾದ ಮುಖದಲ್ಲಿ ಮೇಕಪ್ ತುಂಬಾ ಹೊತ್ತು ನಿಲ್ಲುವುದಿಲ್ಲ. ತ್ವಚೆಯಲ್ಲಿರುವ ಹೆಚ್ಚಿನಂಶ ಜಿಡ್ಡನ್ನು ತೆಗೆಯುವಷ್ಟರ ಮಟ್ಟಕ್ಕೆ ಕ್ಲೀನ್ಸರ್ ಇರಬೇಕು. ಇದರ ಜೊತೆಗೆ ರಾತ್ರಿ ಮಲಗುವ ಮುನ್ನ ಮೇಕಪನ್ನು ತೆಗೆದು ಮಲಗುವ ಅಭ್ಯಾಸ ಸಹ ತಪ್ಪದೆ ಇರಿಸಿಕೊಳ್ಳಬೇಕು. ಇದರಿಂದ ತ್ವಚೆಗೆ ಸ್ವಲ್ಪ ಆರಾಮ ದೊರೆತು ನಾಳೆ ಇನ್ನೂ ಕಳೆಯಿಂದ ಕೂಡುತ್ತದೆ.
ಎಕ್ಸ್‌ಫೋಲಿಯೇಟ್
ನಮ್ಮ ತ್ವಚೆಯು ಸದಾ ನವೀಕರಣ ಕಾರ್ಯಕ್ಕೆ ಒಳಪಡುತ್ತಲೆ ಇರುತ್ತದೆ. ಹಳೆಯ ತ್ವಚೆಯು ಹೋಗಿ, ಹೊಸ ತ್ವಚೆಯು ಬರುತ್ತ ಇರುತ್ತದೆ. ಆದ್ದರಿಂದ ಹಳೆಯ ತ್ವಚೆಯನ್ನು ತೆಗೆಯುವ ಎಕ್ಸ್‌ಫೋಲಿಯೆಟ್ ಮಾಡುವ ಸ್ಕ್ರಬ್ ನಮಗೆ ಅತ್ಯಾವಶ್ಯಕ. ಮೃದುವಾದ ತ್ವಚೆಯ ಮೇಲು ಸಹ ಇದನ್ನು ಮಾಡುವುದರಿಂದ ಮೇಕಪ್ ದೀರ್ಘ ಕಾಲ ಉಳಿಯುತ್ತದೆ. ವಾರಕ್ಕೆ ಎರಡರಿಂದ ಮೂರು ಬಾರಿ ಎಕ್ಸ್‌ಫೋಲಿಯೇಟ್ ಮಾಡಿ.
ಪ್ರೈಮರ್
ಪ್ರೈಮರ್‌ಗೆ ಹಣವನ್ನು ನೀಡುವುದರಿಂದ ಇಡೀ ದಿನ ಮೇಕಪನ್ನು ಉಳಿಸಿಕೊಳ್ಳಲು ಅನುಕೂಲವಾಗುತ್ತದೆ. ಇದು ಮೇಕಪ್‍ಗೆ ಒಂದು ಬೇಸ್ ಒದಗಿಸುತ್ತದೆ. ಏಕೆಂದರೆ ಪ್ರೈಮರ್ ನಿಮ್ಮ ತ್ವಚೆಯ ಬಣ್ಣವನ್ನು ಸುಧಾರಿಸಲು ನೆರವಾಗುವುದರ ಜೊತೆಗೆ, ತ್ವಚೆಯಲ್ಲಿರುವ ಕಲೆಗಳನ್ನು ಮುಚ್ಚಿ ಹಾಕುತ್ತದೆ. ಜೊತೆಗೆ ಇದು ಮೇಕಪ್‍ಗೆ ಬೇಕಾದ ತಯಾರಿಯನ್ನು ಸಹ ಮಾಡುತ್ತದೆ. ಮೇಕಪ್ ಮಾಡುವಾಗ ಕಣ್ಣುಗಳನ್ನು ಮುಚ್ಚುವ ಮುಚ್ಚಳಿಕೆಗಳು ಎಷ್ಟು ಅಗತ್ಯವೋ, ಅಷ್ಟೇ ಅಗತ್ಯ ಈ ಪ್ರೈಮರ್ ಎಂಬುದನ್ನು ಮರೆಯಬಾರದು.



Click it and Unblock the Notifications