Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಹಿಳಾ ಅವಾರ್ಡ್ಸ್ 2014: ಶ್ವೇತ ಸುಂದರಿಯರು
ಮಹಿಳಾ ಅವಾರ್ಡ್ಸ್ ಗಲ್ಫ್‌ನಲ್ಲಿ ಇತ್ತೀಚೆಗೆ ನೆರವೇರಿತು. ದುಬೈನ ಮರಳಲ್ಲಿ ನಮ್ಮ ದೇಶದ ನಟ ನಟಿಯರ ಕಮಾಲ್ ಝಲಕ್ ಕಂಡುಬಂದಿದ್ದು ಟಿವಿ ಸೆಲೆಬ್ರಿಟಿಗಳು ತಮ್ಮ ಒನಪು ವಯ್ಯಾರ ಪ್ರದರ್ಶಿಸಿದರು.
ಶ್ರಿಯಾ ಶರಣ್ ನಿಂದ ಹಿಡಿದು ಕಂಗನಾ ರಾಣಾವತ್ ವರೆಗೆ ಜಿಆರ್‌ಟಿ ವುಮೆನ್ ಅವಾರ್ಡ್ಸ್‌ಗೆ ತಾರೆಗಳ ದಂಡೇ ನುಗ್ಗಿಬಂದಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಈ ಇಬ್ಬರೂ ನಟಿಯರು ಶ್ವೇತ ಸುಂದರಿಗಳಾಗಿದ್ದರು.
ಕಂಗನಾ ರಾಣಾತ್ ಜಿಆರ್‌ಟಿ ವುಮನ್ ಅವಾರ್ಡ್ಸ್‌ನಲ್ಲಿ ಬಿಳಿಯ ಗೌನ್ ಅನ್ನು ಧರಿಸಿದ್ದರೆ, ಶ್ರಿಯಾ ಶರಣ್ ಅಮ್ಮನಿಂದ ಬಳುವಳಿಯಾಗಿ ಬಂದ ಬಿಳಿ ಸೀರೆಯಲ್ಲಿ ಅಪ್ಸರೆಯಾಗಿದ್ದರು. ಎರಡೂ ಉಡುಗೆಗೆಳು ವಿಭಿನ್ನವಾಗಿದ್ದರೂ ಕಣ್ಣಿಗೆ ಹಬ್ಬವನ್ನುಂಟು ಮಾಡಿದ್ದಂತೂ ಸುಳ್ಳಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ ಋತುವಿನಲ್ಲಿನ ಲಿಪ್ ಕಲರ್ ಟ್ರೆಂಡ್ಸ್
ಕಂಗಾನಾ ರಾಣಾ ವತ್ ಧರಿಸಿದ್ದ ತೋಳಿಲ್ಲದ ಬಿಳಿ ಗೌನ್ ಅದ್ಭುತವಾಗಿತ್ತು. ಬಿಳಿ ಗೌನ್ ಬರ್ಬರಿ ಪ್ರೊಸಮ್‌ನಿಂದ ಬಂದಿರುವ ವಿದೇಶಿ ಲಕ್ಸುರಿಯಾಗಿದೆ. ಗೌನ್‌ನ ಕೆಳಭಾಗದಲ್ಲಿ ಲೇಯರ್‌ಗಳಿದ್ದು ನೆಲಕ್ಕೆ ಮುತ್ತಿಕ್ಕುತ್ತಿತ್ತು. ಗೌನ್‌ನಲ್ಲಿ ಸ್ಲಿಟ್ ತೊಡೆಯವರೆಗೆ ಇರದೆ ಕಂಗಾನಾರ ಬಿಳಿಯ ಪಾದುಕೆಯನ್ನು ತೋರಿಸುವಂತಿತ್ತು.
ಕಂಗಾನಾ ಈ ಬಾರಿ ಆಭರಣಗಳಿಲ್ಲದೆ ಪರ್ಸ್ ಅನ್ನು ತಮ್ಮೊಂದಿಗೆ ಒಯ್ದಿದ್ದಾರೆ. ಆಕೆಯ ಬಬಲ್ - ಚರ್ಮದ ಪರ್ಸ್ ತಿಳಿ ಗ್ರೇ ಬಣ್ಣದಲ್ಲಿದ್ದು ಔಟ್‌ಫಿಟ್‌ಗೆ ಸರಿಜೋಡಿಯಾಗಿತ್ತು. ಕಂಗಾನಾರ ಕೂದಲು ಸ್ವಾಭಾವಿಕವಾಗಿ ಗುಂಗುರಾಗಿದ್ದು ಸಡಿಲವಾಗಿ ಆಕೆ ಅದನ್ನು ಬಿಟ್ಟಿದ್ದರು. ತಮ್ಮ ತುಟಿಗೆ ಕೆಂಪು ಬಣ್ಣದ ಲಿಪ್‌ಸ್ಟಿಕ್ ಧರಿಸಿದ್ದ ಕಂಗನಾ ಸರಳವಾದ ಕಣ್ಣಿನ ಮೇಕಪ್ ಅನ್ನು ಮಾಡಿದ್ದರು.
ಶ್ರಿಯಾ ಶರಣ್ ಜಿಆರ್‌ಟಿ ವುಮೆನ್ ಅವಾರ್ಡ್ಸ್‌ನಲ್ಲಿ ನೆರೆದಿದ್ದವರ ಮನದಲ್ಲಿ ಕಿಚ್ಚು ಹಚ್ಚಿದ್ದರು. ಪಾರದರ್ಶಕ ಪಾಲೆ ಬಿಳಿ ಸೀರೆಯನ್ನು ಶ್ರಿಯಾ ತೊಟ್ಟಿದ್ದು, ಸೀರೆಯು ತನ್ನ ತಾಯಿಯ ಬಳುವಳಿಯಾಗಿದೆ ಎಂದಾಕೆ ಹೇಳಿಕೊಂಡಿದ್ದಾರೆ.
ಶಿಫಾನ್ ಸೀರೆ ಅಂಚು ಮತ್ತು ಸೆರಗಿನಲ್ಲಿ ಸಿಲ್ವರ್ ಎಂಬ್ರಾಯಿಡರಿಯನ್ನು ಹೊಂದಿತ್ತು. ಸೀರೆಗೆ ಹೊಂದಿಕೆಯಾಗುವ ಸಣ್ಣ ಸ್ಲೀವ್‌ನ ಸಿಲ್ವರ್ ರವಿಕೆಯನ್ನು ತೊಟ್ಟಿದ್ದರು. ಸುಂದರವಾದ ಸಿಲ್ವರ್ ಆಭರಣಗಳನ್ನು ಶ್ರಿಯಾ ತೊಟ್ಟಿದ್ದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸೊಂಪಾದ ಕೂದಲಿಗಾಗಿ 'ಹೇರ್ ಡಯಟ್'
ಸಿಲ್ವರ್ ಕಿವಿಯಾಭರಣವಾದ ಜುಮುಕಿಯನ್ನು ಶ್ರಿಯಾ ತೊಟ್ಟಿದ್ದು ಅದನ್ನಿಲ್ಲಿ ನೆನಪಿಸಿಕೊಳ್ಳಲೇಬೇಕು. ಪ್ಲೇನ್ ಸಿಲ್ವರ್ ಬಳೆಗಳು ಸೀರೆಗೆ ಪರ್ಫೆಕ್ಟ್ ಮ್ಯಾಚ್ ಎಂದು ಹೇಳಲಡ್ಡಿಯಿಲ್ಲ. ಶ್ರಿಯಾ ಒಂದು ಬದಿಗೆ ತನ್ನ ಜಡೆಯನ್ನು ಹೆಣೆದುಕೊಂಡಿದ್ದು ಸ್ಟೈಲಿಶ್ ನೋಟವನ್ನು ಅವರಿಗೆ ನೀಡಿದೆ.
ಫ್ರೆಂಚ್ ಬ್ರೈಡ್‌ನ ಲೂಸ್ ವಿನ್ಯಾಸದಲ್ಲಿದ್ದ ಶ್ರಿಯಾರ ಹೇರ್‌ಸ್ಟೈಲ್ ಮನಮೋಹಕವಾಗಿತ್ತು. ಸೀರೆಗೆ ಸಾಂಪ್ರದಾಯಿಕವಾಗಿ ಕೆಂಪು ಬಿಂದಿಯನ್ನು ತೊಟ್ಟಿದ್ದ ಆಕೆ ತನ್ನ ಕಣ್ಣುಗಳನ್ನು ಎದ್ದುಗಾಣಿಸಲು ಗಾಢ ಕಪ್ಪು ಕಾಡಿಗೆಯನ್ನು ಹಚ್ಚಿಕೊಂಡಿದ್ದರು. ತುಟಿಗೆ ಹಚ್ಚಿದ್ದ ಕೆಂಪು ಬಣ್ಣದ ಲಿಪ್‌ಸ್ಟಿಕ್ ಆಕೆಯ ಅಲಂಕಾರವನ್ನು ಪೂರ್ಣಗೊಳಿಸಿತ್ತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತ್ವಚೆಯ ಅಂದ ಕಾಪಾಡುವ antioxidants ಆಹಾರಗಳು
ಈ ಇಬ್ಬರೂ ಲಲನಾ ಮಣಿಯರು ಜಿಆರ್ ಟಿ ವುಮೆನ್ ಅವಾರ್ಡ್ಸ್‌ನಲ್ಲಿ ಶ್ವೇತ ಸುಂದರಿಗಳಾಗಿದ್ದರು. ಯಾರು ನಿಮಗೆ ಅಂದವಾಗಿ ಕಾಣುತ್ತಿದ್ದರು ಎಂಬುದನ್ನು ತಿಳಿಸಲು ಮರೆಯದಿರಿ?



Click it and Unblock the Notifications
