Latest Updates
-
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ?
ಸವ್ಯಸಾಚಿ ಔಟ್‌ಫಿಟ್‌ನಲ್ಲಿ ಸುಂದರಿ ಐಶ್ವರ್ಯಾ ರೈ
ಐಶ್ ಆರಾಧ್ಯ ತಾಯಿಯಾದ ನಂತರ ಆಕೆಯ ಡ್ರೆಸ್ಸಿಂಗ್ ಸ್ಟೈಲ್ ಮತ್ತು ರೂಪ ಸಂಪೂರ್ಣ ಮಾರ್ಪಾಡುಗಳು ಕಂಡುಬಂದಿದೆ. ಗರ್ಭಿಣಿಯಾದ ನಂತರ ಗರ್ಭಾವಸ್ಥೆಯ ಹೆಚ್ಚು ತೂಕವನ್ನು ಇಳಿಸುವುದೆಂದರೆ ಪ್ರಯಾಸದ ಕೆಲಸವೇ ಸರಿ. ಆದ್ದರಿಂದ ತಮ್ಮ ಹೆಚ್ಚಿನ ತೂಕವನ್ನು ಮರೆಮಾಚುವುದಕ್ಕಾಗಿ ಅವರು ಅನಾರ್ಕಲಿ ಗೌನ್ ಹಾಗೂ ಸೂಟ್‌ಗಳಲ್ಲಿ ಹೆಚ್ಚಾಗಿ ಕಂಡುಬಂದಿದ್ದರು. ಈ ದಿರಿಸುಗಳನ್ನು ಧರಿಸುವಾಗ ಅವರು ಮುಖ್ಯವಾಗಿ ತಮ್ಮ ಗಮನ ಹರಿಸಿದ್ದು ಸವ್ಯಸಾಚಿ ವಿನ್ಯಾಸದ ಗೌನ್ ಕಡೆಗಾಗಿತ್ತು.
ನಾವು ಹೆಚ್ಚಿನ ಸಮಾರಂಭಗಳಲ್ಲಿ ಐಶ್‌ರನ್ನು ಸವ್ಯಸಾಚಿ ವಿನ್ಯಾಸದ ಸೀರೆ ಮತ್ತು ಗೌನ್‌ಗಳಲ್ಲಿ ಕಂಡಿದ್ದೇವೆ. ಅದರಲ್ಲೂ ಐಶ್ ಆಯ್ಕೆ ಮಾಡುವ ಬಣ್ಣ ಕಪ್ಪಾಗಿದೆ. ಐಶ್ ಧರಿಸುವ ಅನಾರ್ಕಲಿ ಗೌನ್ ಮತ್ತು ಸೂಟ್‌ಗಳು ವೈವಿಧ್ಯಮವಾಗಿದ್ದು ಒಂದೊಂದು ಸ್ಟೈಲ್‌ನಲ್ಲಿದೆ. ರಾಣಿ ಮುಖರ್ಜಿ ಮತ್ತು ವಿದ್ಯಾರ ಮೆಚ್ಚಿನ ವಿನ್ಯಾಸಕಾರರಾಗಿರುವ ಸವ್ಯಸಾಚಿ ಬಚ್ಚನ್ ಕುಟುಂಬದ ಮೆಚ್ಚಿನ ಡಿಸೈನರ್ ಎಂದು ಹೇಳಿದರೂ ತಪ್ಪಾಗಲಾರದು.
ಹಾಗಿದ್ದರೆ ಬಚ್ಚನ್ ಮನೆತನದ ಸೊಸೆ ಐಶ್ವರ್ಯಾ ಧರಿಸಿರುವ ಸವ್ಯಸಾಚಿ ಗೌನ್‌ಗಳನ್ನು ಈ ಬಾರಿ ನಿಮ್ಮೆದುರಿಗೆ ತೋರಿಸಲಿದ್ದು ಪ್ರತಿಯೊಂದು ತಮ್ಮ ಬೇರೆ ಬೇರೆ ವಿನ್ಯಾಸಗಳಿಂದ ಹೇಗೆ ಭಿನ್ನವಾಗಿದೆ ಎಂಬುದನ್ನು ಕಂಡುಕೊಳ್ಳಿ.

ಕಪ್ಪು ಮತ್ತು ಕೆಂಪು ಸೂಟ್
ಕಪ್ಪು ಬಣ್ಣದ ಕೆಂಪು ಎಂಬ್ರಾಯಿಡರಿ ಕುಸುರಿ ಕೆಲಸವನ್ನು ಹೆಚ್ಚು ಹೊಂದಿರುವ ಗೌನ್ ಅನ್ನು ಐಶ್ ಧರಿಸಿದ್ದಾರೆ. ಕಾಶ್ಮೀರಿ ಸೂಟ್ ವರ್ಕ್‌ನಂತೆ ಕಂಡುಬರುವ ಕೆಲಸ ಸೂಟ್‌ನಲ್ಲಿ ಕಂಡುಬಂದಿದ್ದು ಹೆಚ್ಚು ಅತ್ಯಾಕರ್ಷಕವಾಗಿದೆ.

ಕಪ್ಪು ಮತ್ತು ಬಿಳಿ ಲೇಸ್ ಅನಾರ್ಕಲಿ
ಈ ಕಪ್ಪು ಮತ್ತು ಬಿಳಿ ಅನಾರ್ಕಲಿ ಲೇಸ್ ಮಾದರಿಯಲ್ಲಿದ್ದು ಐಶ್‌ನ ಮೆಚ್ಚಿನ ದಿರಿಸುಗಳಲ್ಲಿ ಒಂದಾಗಿದೆ. ಗೌನ್‌ನ ಮೇಲೆ ಮಾಡಿರುವ ಕೆಲಸವನ್ನು ನಾವು ಮೆಚ್ಚಿಕೊಂಡಿದ್ದು ಪಾರದರ್ಶಕ ಶಾಲು ಕೂಡ ಸುಂದರವಾಗಿದೆ.

ಕೆಂಪು ಲೆಹೆಂಗಾ
ಐಶ್ ಸವ್ಯಸಾಚಿ ವಿನ್ಯಾಸದಲ್ಲಿ ಬಹಳಷ್ಟು ಬಾರಿ ಕಂಡುಬಂದಿದ್ದಾರೆ. ಕೆಂಪು ಲೆಹಂಗಾದಲ್ಲಿ ಐಶ್ ಇನ್ನಷ್ಟು ಮುದ್ದಾಗಿ ಕಂಡುಬಂದಿದ್ದು ಲೆಹೆಂಗಾ ತ್ರಿ ಫೋರ್ತ್ ಸ್ಲೀವ್‌ನಲ್ಲಿ ಕಂಡುಬಂದಿದೆ.

ಲೇಸ್ ಸೀರೆ
ಐಶ್ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಯಾವಾಗಲೂ ಹಾಜರಿರುತ್ತಾರೆ. ಈ ಚಿತ್ರದಲ್ಲಿ ಐಶ್ ಲೇಸ್ ವೆಲ್ವೇಟ್ ಸೀರೆಯನ್ನು ಉಟ್ಟಿದ್ದು ಕೇನ್ಸ್‌ನಲ್ಲಿ ಇದೊಂದು ಮರೆಯಲಾರದ ನೋಟವಾಗಿ ಕಂಡುಬಂದಿದೆ.

ಕಪ್ಪು ಮತ್ತು ಗೋಲ್ಡನ್ ಅನಾರ್ಕಲಿಯಲ್ಲಿ
ಕಲ್ಯಾಣ್ ಜ್ಯುವೆಲ್ಲರ್ಸ್ ಆರಂಭೋತ್ಸವದಲ್ಲಿ ಐಶ್ ಕಪ್ಪು ಮತ್ತು ಗೋಲ್ಡನ್ ಬಣ್ಣದ ಅನಾರ್ಕಲಿಯಲ್ಲಿ ಕಂಡುಬಂದಿದ್ದು ಇನ್ನಷ್ಟು ಸುಂದರಿಯಾಗಿದ್ದಾರೆ.

ಬಿಳಿ ಸೀರೆಯಲ್ಲಿ
ಲೈಫ್ ಸೆಲ್ ಜಾಹೀರಾತಿನಲ್ಲಿ ಐಶ್ ಈ ಲೈಟ್ ಬಿಳಿ ಸೀರೆಯಲ್ಲಿ ಸುಂದರಿಯಾಗಿ ಕಂಡುಬಂದಿದ್ದಾರೆ.

ಗೋಲ್ಡನ್ ಸ್ಕ್ವಿನ್ ಅನಾರ್ಕಲಿ
ದುಬೈನಲ್ಲಿ ನಡೆದ ಕಲ್ಯಾಣ್ ಜ್ಯುವೆಲ್ಲರ್ಸ್ ಓಪನಿಂಗ್‌ನಲ್ಲಿ ಐಶ್ ಗೋಲ್ಡನ್ ಸ್ಕ್ವಿನ್ ಅನಾರ್ಕಲಿಯಲ್ಲಿ ಕಂಡುಬಂದಿದ್ದು ಮುದ್ದಾಗಿದ್ದಾರೆ.

ಕೆಂಪು ಬಿಳಿ ಮತ್ತು ಕಪ್ಪು ಅನಾರ್ಕಲಿ
ಪೂಣೆಯಲ್ಲಿ ನಡೆದ ಈವೆಂಟ್ ಒಂದರಲ್ಲಿ ಐಶ್ವರ್ಯಾ ಕೆಂಪು ಬಿಳಿ ಮತ್ತು ಕಪ್ಪು ಮಿಶ್ರಣವುಳ್ಳ ಅನಾರ್ಕಲಿಯಲ್ಲಿ ಇನ್ನಷ್ಟು ಸ್ಟೈಲಿಶ್ ಮತ್ತು ಸುಂದರಿಯಾಗಿ ಕಂಡುಬಂದಿದ್ದಾರೆ.

ಕಪ್ಪು ಮತ್ತು ಗೋಲ್ಡನ್ ಸೀರೆಯಲ್ಲಿ
ಕಪ್ಪು ಮತ್ತು ಗೋಲ್ಡನ್ ಬಣ್ಣದ ಸೀರೆಯಲ್ಲಿ ಐಶ್ ಎಲ್ಲರನ್ನೂ ಮಂತ್ರಮುದ್ಧಗೊಳಿಸಿದ್ದಾರೆ. ಪೂರ್ಣ ಸ್ಲೀವ್ ಡ್ರೆಸ್ ಅನ್ನು ಧರಿಸಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ್ದಂತೂ ನಿಜ.

ಎಲೆ ಬಣ್ಣದ ಅನಾರ್ಕಲಿಯಲ್ಲಿ
ಟೋಯ್ಫಾ 2013, ರಲ್ಲಿ ಐಶ್ ಎಲೆ ಬಣ್ಣದ ಅನಾರ್ಕಲಿಯಲ್ಲಿ ಕಂಡುಬಂದಿದ್ದು ತಮ್ಮ ಸೌಂದರ್ಯಕ್ಕೆ ಕಲಶವಿಟ್ಟಂತೆ ಇನ್ನಷ್ಟು ಗ್ಲಾಮರಸ್ ಆಗಿದ್ದಾರೆ.

ಕೆಂಪು ವೆಲ್ವೇಟ್‌ನಲ್ಲಿ
ಕಲ್ಯಾಣ್ ಜ್ಯುವೆಲ್ಲರ್ಸ್ ಈವೆಂಟ್‌ನಲ್ಲಿ, ಐಶ್ ಕೆಂಪು ವೆಲ್ವೇಟ್ ಅನಾರ್ಕಲಿಯಲ್ಲಿ ಕಂಡುಬಂದಿದ್ದು ಸುಂದರಿ ಎಂಬುದನ್ನು ಇನ್ನೊಮ್ಮೆ ಸಾಬೀತುಪಡಿಸಿದ್ದಾರೆ.

ಕಪ್ಪು ಗೋಲ್ಡ್ ಲೆಹೆಂಗಾ
ಐಶ್ ಕಪ್ಪು ಬಣ್ಣದ ಗೋಲ್ಡನ್ ಎಂಬ್ಲಿಶ್‌ಮೆಂಟ್ ಇರುವ ಗೌನ್ ಅನ್ನು ಧರಿಸಿ ಸ್ಟೈಲಿಶ್ ಆಗಿ ಕಂಡುಬಂದಿದ್ದಾರೆ.



Click it and Unblock the Notifications
