Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೇಲ್ ಪಾಲಿಶ್‌ನ ಏಳು ಜನಪ್ರಿಯ ಕಲರ್ ಕಾಂಬಿನೇಶನ್
ನೀವು ನಿಮ್ಮ ಲುಕ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೀರಿ ಮತ್ತು ಸುಂದರವಾಗಿ,ಎಲ್ಲರ ಗಮನ ಸೆಳೆಯುವಂತೆ ಇರಬೇಕು ಎಂದರೆ ಮೇಕಪ್,ಉಡುಗೆ,ಉಗುರು ಹೀಗೆ ಎಲ್ಲಾ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಕೂಡ ಗಮನಹರಿಸಬೇಕಾಗುತ್ತದೆ.
ಅಂದಗೊಳಿಸಲ್ಪಟ್ಟ ಮತ್ತು ಪಾಲಿಶ್ ಮಾಡಲ್ಪಟ್ಟ ಉಗುರುಗಳು ಸುಂದರವಾಗಿ ಕಾಣಿಸುತ್ತವೆ.ಆದ್ದರಿಂದ ಈಗಿನ ಟ್ರೆಂಡ್ ಪಾಲಿಸುವ ಮೂಲಕ ಬೇರೆಬೇರೆ ರೀತಿಯ ಬಣ್ಣ ಸೇರಿಸಿ ಬಳಸಿದರೆ ಉಗುರಿನ ಅಂದ ಇನ್ನಷ್ಟು ಹೆಚ್ಚುತ್ತದೆ ಎನ್ನಬಹುದು.ನೀವು ನೋಡಿರಬಹುದು ಸಾಕಷ್ಟು ಮಹಿಳೆಯರು ಉಗುರಿಗೆ ವಿವಿಧ ಬಣ್ಣಗಳನ್ನು ಬಳಸಿರುತ್ತಾರೆ.
ಉದಾಹರಣೆಗೆ ಒಂದು ಉಗುರಿಗೆ ಕಪ್ಪು ಬಣ್ಣ ಬಳಸಿದರೆ ಉಳಿದ ಉಗುರುಗಳಿಗೆ ಬಿಳಿ ಬಣ್ಣ ಬಳಸಿರುತ್ತಾರೆ.ಆಯ್ದ ಬಣ್ಣಗಳನ್ನು ಬಳಸುವುದು ಈಗಿನ ಹೊಸ ಟ್ರೆಂಡ್.ಈ ರೀತಿ ಬೇರೆಬೇರೆ ಬಣ್ಣಗಳನ್ನು ಬಳಸುವುದು ಇತರ ರೀತಿಯಲ್ಲಿ, ಅಂದರೆ ಉದ್ದ ಗೆರೆ ಎಳೆಯುವುದು ಅಥವಾ ಡಾಟ್ ಇಡುವುದನ್ನು ಕೂಡ ನೀವು ನೋಡಿರಬಹುದು.ನಿಮಗೂ ಕೂಡ ಈ ರೀತಿ ಅಲಂಕಾರ ಮಾಡಿಕೊಳ್ಳುವುದರಲ್ಲಿ ಆಸಕ್ತಿ ಇದ್ದರೆ ನಾವು ಈ ಕೆಳಗೆ ನೀಡಿರುವ ಕಾಂಬಿನೇಶನ್ ಬಳಸಿ,ಇದು ಸುಂದರವಾಗಿ ಕಾಣಿಸುತ್ತದೆ.
ಟ್ರೆಂಡ್ ನಲ್ಲಿರುವ 10 ಹಾಟ್ ಲುಕ್ ನೇಲ್ ಪಾಲೀಷ್

1.ಕಪ್ಪು ಮತ್ತು ಗುಲಾಬಿ:-
ಈ ಎರಡು ಬಣ್ಣಗಳನ್ನು ಒಟ್ಟಿಗೆ ಬಳಸಿದಾಗ ಅದ್ಬುತವಾಗಿ ಕಾಣಿಸುತ್ತದೆ.ನೀವು ನಿಮ್ಮ ಉಳಿದ ಉಗುರುಗಳಿಗೆ ಗುಲಾಬಿ ಬಣ್ಣ ಬಳಸಿ,ಒಂದಕ್ಕೆ ಮಾತ್ರ ಕಪ್ಪು ಬಣ್ಣ ಬಳಸಿದರೆ ಸೊಗಸಾಗಿರುತ್ತದೆ.ಇದು ಎಲ್ಲಾ ರೀತಿಯ ಬಣ್ಣದ ಬಟ್ಟೆಗಳಿಗೂ ಹೊಂದಿಕೆಯಾಗುತ್ತದೆ.ನಿಮ್ಮ ಸ್ಟೈಲ್ ಅನ್ನು ಆಗಾಗ ಬದಲಾಯಿಸಿಕೊಳ್ಳಲು ಇದು ಒಳ್ಳೆಯ ಅವಕಾಶ ನೀಡುತ್ತದೆ.ಜೊತೆಗೆ ನಿಮ್ಮ ಉಗುರು ಕೂಡ ಸುಂದರವಾಗಿ ಕಾಣಿಸುತ್ತದೆ.

2.ಕಪ್ಪು ಮತ್ತು ಬಿಳಿ ಬಣ್ಣ:-
ಎಂಟು ಉಗುರುಗಳಿಗೆ ಬಿಳಿ ಬಣ್ಣ ಮತ್ತು ಎರಡು ಉಗುರುಗಳಿಗೆ ಕಪ್ಪು ಬಣ್ಣ ಬಳಸಬೇಕು.ಇದು ಒಂದು ರೀತಿಯ ಶಾಸ್ತ್ರೀಯ ಲುಕ್ ನೀಡುವುದರಿಂದ ಇದನ್ನು ಆಫೀಸ್ ಗೆ ಕೂಡ ಬಳಸಬಹುದು.

3.ತಿಳಿ ನೀಲಿ ಮತ್ತು ಸಿಲ್ವರ್ ಬಣ್ಣ :-
ಉಗುರುಗಳು ಹೊಳೆಯುವಂತೆ ಮಾಡಲು ಬೆಳ್ಳಿ ಬಣ್ಣ ಸೂಕ್ತವಾದುದು.ಆದಾಗ್ಯೂ ನೀವು ಇದನ್ನು ಅಧಿಕವೆನಿಸುವಂತೆ ಬಳಸಬಾರದು.ಎರಡು ಸಿಲ್ವರ್ ಬಣ್ಣ ಬಳಸಿ ಉಳಿದವು ನೀಲಿಯಾಗಿದ್ದರೆ ಸುಂದರವಾಗಿರುತ್ತದೆ.

4.ಕೇಸರಿ ಮತ್ತು ಗುಲಾಬಿ:-
ನಮ್ಮಲ್ಲಿ ಸಾಕಷ್ಟು ಜನರಿಗೆ ಕೇಸರಿ ಮತ್ತು ಗುಲಾಬಿ ಬಣ್ಣಗಳು ಬೇಸಿಗೆಯ ಸಂತೋಷ ಭಾವನೆಗಳಿಗೆ ಸ್ಪೂರ್ತಿ ಎನಿಸುತ್ತದೆ.ಆದ್ದರಿಂದ ಬೇಸಿಗೆ ದಿನಗಳಲ್ಲಿ ನಿಮ್ಮ ಮೂಡ್ ಅನ್ನು ಸುಂದರವಾಗಿರಿಸಿಕೊಳ್ಳಲು ಈ ಬಣ್ಣಗಳು ಸಹಾಯಕ ಎನ್ನಬಹುದು.ಈ ಎರಡೂ ಬಣ್ಣಗಳು ನಿಮಗೆ ಮೃದು ಮತ್ತು ತಾಜಾ ಅನುಭವ ನೀಡುತ್ತದೆ.ಇದರ ಜೊತೆಗೆ ನಿಮ್ಮ ಬೇಸಿಗೆಯ ವಿವಿಧ ಉಡುಗೆಗಳಿಗೆ ಇದು ಸೂಕ್ತವಾದುದು.

5.ಘಾಡ ಕೆಂಪು ಮತ್ತು ಬೂದು ಬಣ್ಣ:-
ನೀವು ಘಾಡ ಕೆಂಪು ಜೊತೆಗೆ ಬೂದು ಬಣ್ಣವನ್ನು ಬಳಸಿದರೆ ನಿಮ್ಮ ಉಗುರುಗಳು ಎಲ್ಲರನ್ನೂ ಆಕರ್ಷಿಸುತ್ತದೆ.ನಿಮ್ಮ ಉಂಗುರ ಬೆರಳನ್ನು ಬಿಟ್ಟು ಉಳಿದವುಗಳಿಗೆಲ್ಲ ಬೂದು ಬಣ್ಣವನ್ನು ಹಚ್ಚಿ,ಅಥವಾ ಎಲ್ಲಾ ಬೆರಳುಗಳಿಗೆ ಘಾಡ ಕೆಂಪು ಬಣ್ಣ ಹಚ್ಚಿ,ಉಂಗುರ ಬೆರಳಿಗೆ ಬೂದು ಬಣ್ಣ ಬಳಸಿ.ಎರಡೂ ರೀತಿಯಲ್ಲೂ ಕೈ ಬೆರಳುಗಳು ಸುಂದರವಾಗಿ ಕಾಣಿಸುತ್ತದೆ.

6.ವೈಡೂರ್ಯ ಮತ್ತು ಹಳದಿ :-
ನೀವು ನಿಮ್ಮ ಉಗುರನ್ನು ಗೆರೆ ಎಳೆದು ಅಥವಾ ಹೂವುಗಳನ್ನು ಬಿಡಿಸಿ ಅಲಂಕರಿಸಬಹುದು.ಇತರ ಉಡುಗೆ ಅಥವಾ ಎಲ್ಲವನ್ನೂ ಹಳದಿ ಅಥವಾ ರತ್ನ ವೈಡೂರ್ಯದ ಬಣ್ಣ ಬಳಸಬೇಡಿ.ಕೆಲವು ಆಭರಣಗಳನ್ನು ಅದೇ ಬಣ್ಣದಲ್ಲಿ ಬಳಸಬಹುದು.

7.ನೇರಳೆ ಮತ್ತು ಗುಲಾಬಿ ಬಣ್ಣ :-
ನೀವು ನೇರಳೆ ಮತ್ತು ಗುಲಾಬಿ ಬಣ್ಣವನ್ನು ಬಳಸಲು ಇಷ್ಟಪಡುವವರಾದರೆ ಇದು ಸ್ವಲ್ಪ ಬಾಲಿಶ ಬಣ್ಣ ಎನಿಸಬಹುದು ಎಂಬುದನ್ನು ನೆನಪಿಡಿ.ಆದ್ದರಿಂದ ಈ ಬಣ್ಣಗಳನ್ನು ಅತಿಯಾಗಿ ಬಳಸಬೇಡಿ.ನಿಮ್ಮ ಬೆರಳುಗಳಿಗೆ ಫ್ರೆಂಚ್ ಲುಕ್ ನೀಡಬೇಕು ಎಂದಿದ್ದರೆ ನೇರಳೆ ಮತ್ತು ಗುಲಾಬಿ ಬಣ್ಣ ಸೂಕ್ತ.



Click it and Unblock the Notifications
