Latest Updates
-
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಹದಿಹರೆಯದ ಹೆಣ್ಣಿನ ತುಟಿಗಳಿಗೆ ಐದು ಸೂಕ್ತ ವರ್ಣಗಳು
ಹುಡುಗರಿಗೆ ನೀಲಿ, ಹುಡುಗಿಯರಿಗೆ ಗುಲಾಬಿ ಬಣ್ಣ ಎಂದು ಜಗತ್ತು ಒಪ್ಪಿಕೊಂಡು ಬಿಟ್ಟಿದೆ. ಮಕ್ಕಳ ಬಟ್ಟೆಬರೆಯಿಂದ ಹಿಡಿದು ಆಟಿಕೆ, ಪುಸ್ತಕಗಳೆಲ್ಲಾ ಈ ಬಣ್ಣಗಳನ್ನು ಆಧರಿಸಿಯೇ ತಯಾರಾಗುತ್ತವೆ. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಹದಿಹರೆಯದಲ್ಲಿ ಮೂಡುವ ಸೌಂದರ್ಯಪ್ರಜ್ಞೆ ತನ್ನನ್ನು ಸುಂದರವಾಗಿಸಿಕೊಳ್ಳುವತ್ತ ಪ್ರೇರಣೆ ನೀಡುತ್ತದೆ. ಅದರಲ್ಲೂ ಕೇಶ ಮತ್ತು ವದನದ ಸೌಂದರ್ಯಕ್ಕೆ ಹೆಚ್ಚಿನ ಕಾಳಜಿ ಮೀಸಲು. ಅಲ್ಲದೆ ಮುಖ್ಯಪಾತ್ರ ವಹಿಸುವ ತುಟಿಗಳ ಬಣ್ಣದ ಆಯ್ಕೆಯಂತೂ ತುಂಬಾ ಜಟಿಲವಾಗಿದೆ.
ಅಂದು ಉಟ್ಟ ಬಟ್ಟೆ, ಸಂದರ್ಶಿಸಬೇಕಾದ ಸ್ಥಳ, ಕಾಲ ಮೊದಲಾದವುಗಳನ್ನು ಆಧರಿಸಿ ಈ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ಗುಲಾಬಿ ಬಣ್ಣವನ್ನು ಬಹಳ ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕಾಗುತ್ತದೆ. ಹಾಲಿವುಡ್ ತಾರೆಯರಾದ ಎಮ್ಮಾ ಸ್ಟೋನ್ ಮತ್ತು ಜಮೀ ಚಂಗ್ ಈ ಗುಲಾಬಿ ಬಣ್ಣದ ತುಟಿಬಣ್ಣದಿಂದ ಹೆಚ್ಚು ಪ್ರಚಲಿತರಾಗಿದ್ದಾರೆ.
ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾವಿರಾರು ಬಣ್ಣಗಳಲ್ಲಿ ಸೂಕ್ತ ಬಣ್ಣವನ್ನು ಆಯ್ಕೆ ಮಾಡುವುದೇ ದೊಡ್ಡ ಸವಾಲಾಗಿದೆ. huffingtonpost.com ತಾಣದ ಪ್ರಕಾರ ಈ ಕೆಳಗಿನ ಐದು ಬಣ್ಣಗಳಲ್ಲಿ ಒಂದನ್ನು ಸಂದರ್ಭಾನುಸಾರ ಆಯ್ಕೆ ಮಾಡಿಕೊಳ್ಳುವ ಮೂಲಕ ಈ ಇಬ್ಬಂದಿಯಿಂದ ಪಾರಾಗಬಹುದು.

ನಿಮ್ಮ ಅವಧಿ ಮುಗಿದ ಮೇಕಪ್‌ನಿಂದ ದಯವಿಟ್ಟು ದೂರವಿರಿ!
ಕೆನ್ನೇರಿಳೆ ಬಣ್ಣ
ಹಾಲಿವುಡ್ ತಾರೆ ಹಾಗೂ ಬರ್ಡ್ ಮ್ಯಾನ್ ಚಿತ್ರದ ಅಭಿನೇತ್ರಿ ಎಮ್ಮಾ ಸ್ಟೋನ್ ಈ ರಂಗನ್ನು ಉಪಯೋಗಿಸಿದ ಬಳಿಕ ಅವರ ವದನದಲ್ಲಿ ಮೂಡಿದ ಕಾಂತಿ ಆ ಪಾತ್ರಕ್ಕೆ ವಿಶೇಷ ಕಳೆ ನೀಡಿದೆ. ಕಣ್ಣಿಗೆ ಕಪ್ಪು ಮಸ್ಕಾರಾ, ಬದನೆ ಬಣ್ಣದ ಕಣ್ಣಿನ ಕೆಳಭಾಗದ ಅಲಂಕಾರ ವಿಶಿಷ್ಟ ಸೌಂದರ್ಯವನ್ನು ಸೂಸುತ್ತಿತ್ತು. ಅತ್ತ ತುಂಬಾ ಗಾಢವೂ ಅಲ್ಲದ, ತುಂಬಾ ಕಡಿಮೆಯೂ ಅಲ್ಲದ ಗುಲಾಬಿ ಬಣ್ಣವಾದ ಕೆನ್ನೇರಿಳೆ ಬಣ್ಣ ನಿಮ್ಮ ತುಟಿಗಳ ಸೌಂದರ್ಯವನ್ನು ಎತ್ತಿ ತೋರುವುದು.
ಎಳೆಗುಲಾಬಿ
ಗುಲಾಬಿಯಲ್ಲಿಯೇ ಅತ್ಯಂತ ಕಡಿಮೆ ವರ್ಣವನ್ನು ಹೊಂದಿರುವ ಈ ಬಣ್ಣ ತುಟಿಗಳ ನೈಸರ್ಗಿಕ ರೂಪವನ್ನು ತೋರಲು ಸೂಕ್ತವಾಗಿದೆ. ಹಗಲಿನ ಕಾರ್ಯಕ್ರಮಗಳಲ್ಲಿ ಹಾಗೂ ತೆರೆದ ಮೈದಾನಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಈ ಬಣ್ಣ ಸೂಕ್ತವಾಗಿದೆ. ಏಕೆಂದರೆ ಈ ಬಣ್ಣವನ್ನು ಹಚ್ಚಿಕೊಂಡು ತಯಾರಾಗಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಚಿಕ್ಕಪುಟ್ಟದಾಗಿ ಹೆಚ್ಚು ಕಡಿಮೆಯಾಗಿರುವುದು ಗಮನಕ್ಕೆ ಬರುವುದಿಲ್ಲ. ಒಣಗಿದ ಬಳಿಕ ತುಟಿಗೆ ಹೊಳಪು ನೀಡುವ ಅದೇ ಬಣ್ಣದ (ಲಿಪ್ ಗ್ಲಾಸ್/ಲಿಪ್ ಟಿಂಟ್) ಉಪಯೋಗಿಸುವ ಮೂಲಕ ಅದ್ಭುತವಾದ ಸೌಂದರ್ಯವನ್ನು ಪಡೆಯಬಹುದು.
ಹವಳ ಗುಲಾಬಿ
ಸಾಧಾರಣವಾಗಿ ವೇದಿಕೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಥವಾ ಗೆಳತಿಯರೊಂದಿಗೆ ಹೊರಗೆ ತಿರುಗಾಡಲು ಹೋಗುವಾಗ ತುಂಬಾ ಗಾಢವೂ ಅಲ್ಲದ, ಮಧ್ಯಮ ವರ್ಣದ ಗುಲಾಬಿ ಬಣ್ಣದ ಆಯ್ಕೆ ಸೂಕ್ತವಾಗಿದೆ.
ಕೆನ್ನೀಲಿ (Mauve)
ನಾಟಕ, ಕಾರ್ಯಕ್ರಮ ನಿರೂಪಣೆ ಮೊದಲಾದ ಸಂದರ್ಭದಲ್ಲಿ ವೇದಿಕೆಯ ಪ್ರಖರ ಪ್ರಕಾಶ ಮೊಗದ ಮೇಲೆ ಬೀಳುವಂತಹ ಸಂದರ್ಭದಲ್ಲಿ ಕೆನ್ನೀಲಿ ಗುಲಾಬಿ ಬಣ್ಣದ ಆಯ್ಕೆ ಸಮಂಜಸವಾಗಿದೆ. ವ್ಯವಹಾರ ನಿಮಿತ್ತ ಹಲವು ಜನರನ್ನು ಭೇಟಿಯಾಗುವ ಸಮಯದಲ್ಲಿ ಅಥವಾ ಗೆಳತಿಯರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಈ ವರ್ಣದ ಆಯ್ಕೆ ಸೂಕ್ತವಾಗಿದೆ. ಈ ವರ್ಣದ ಮೂಲಕ ನಟಿ ಲೀ ಮಿಶೆಲ್ ರವರ ಸೌಂದರ್ಯ ಇಮ್ಮಡಿಯಾಗಿದ್ದುದು ಇದಕ್ಕೆ ಸಾಕ್ಷಿಯಾಗಿದೆ.
ಮೃದು ಕೂದಲಿಗಾಗಿ 9 ಪರಿಣಾಮಕಾರಿ ವಿಧಾನಗಳು
ಹೂಗುಲಾಬಿ (Rose pink)
ಮೊಗದ ತುಂಟತನವನ್ನು ಬಿಂಬಿಸುವ ಹಾಗೂ ತೇವವಾಗಿರುವ ಅಧರಗಳ ಅನುಭೂತಿಗೆ ಹೂಗುಲಾಬಿ ಅತ್ಯುತ್ತಮ ಆಯ್ಕೆಯಾಗಿದೆ. ಹೆಚ್ಚಿನ ಯುವತಿಯರು ಈ ಬಣ್ಣವನ್ನೇ ಬಯಸುತ್ತಾರೆ. ನಸುವಾಗಿ ಗುಂಗುರಾದ ಕೂದಲು, ಕಂಚಿನ ವರ್ಣದ ಕಣ್ಣಿನ ಕೆಳಭಾಗದ ಬಣ್ಣ ಹಾಗೂ ಹೂಗುಲಾಬಿ ಬಣ್ಣದ ತುಟಿಗಳೊಂದಿಗೆ ನಟಿ ಮೋರಾನ್ ಆಟಿಯಾಸ್ ಅದ್ಭುತವಾಗಿ ಕಾಣಿಸಿಕೊಂಡರೆ ಅದರಲ್ಲಿ ಅವರ ತುಟಿಯವರ್ಣ ಪ್ರಮುಖ ಪಾತ್ರ ವಹಿಸಿದೆ.



Click it and Unblock the Notifications