Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಆ್ಯಲಿಸ್ ಒಲಿವಿಯ ತರಿಯಾನ್ ಡ್ರೆಸ್ಸಿನಲ್ಲಿ ತಾರೆಯರು
ಸೋನಾಕ್ಷಿ ಸಿನ್ಹಾ ಕಡೆಗೂ ಬೇರೆ ಬಣ್ಣದ ಬಟ್ಟೆ ಹಾಕಿಕೊಳ್ಳಲು ಮನಸ್ಸು ಮಾಡಿದಳು. ಈ ನಟಿಯನ್ನು ಗಾಢ ಕಪ್ಪು ಬಣ್ಣದ ಬಟ್ಟೆಗಳಲ್ಲೇ ನಾವು ಹೆಚ್ಚಾಗಿ ನೋಡಿರುವುದು. ಅಪರೂಪಕ್ಕೊಮ್ಮೆ ಈಕೆ ಬೇರೆ ಬಣ್ಣದ ಬಟ್ಟೆ ತೊಟ್ಟಿದ್ದುಂಟು. ಒಮ್ಮೆ ತೆಳು ಹಳದಿ ಮಿಶ್ರಿತ ತಿಳಿ ಹಸಿರು ಬಣ್ಣದ ಬಟ್ಟೆಯ ಮೇಲೆ ಪ್ರಿಂಟ್ಗಳನ್ನು ಹೊಂದಿದ್ದ ಬಟ್ಟೆಯನ್ನು ಈಕೆ ಧರಿಸಿದ್ದಳು. ಆಕೆಯ ಮೈಮಾಟಕ್ಕೆ ಇದು ಒಪ್ಪುತ್ತಿತ್ತು ಕೂಡ. ಇದನ್ನು ವಿನ್ಯಾಸ ಮಾಡಿದ್ದು ಮಸಾಬಾ. ಈ ಸಾರಿ ಸೋನಾಕ್ಷಿ ನಿಯಾನ್ ಕ್ಯಾನರಿ ಹಳದಿ ಬಣ್ಣದ ಬಟ್ಟೆಯನ್ನು ತೊಟ್ಟಿದ್ದು ವಿಶೇಷವಾಗಿ ಗಮನಸೆಳೆಯುವ ಹಾಗಿತ್ತು. 'ಬುಲೆಟ್ ರಾಜ' ಪತ್ರಿಕಾ ಗೋಷ್ಠಿಗೆ ಈಕೆ ಆ್ಯಲಿಸ್ ಮತ್ತು ಒಲಿವಿಯ ಡ್ರೆಸ್ ತೊಟ್ಟು ಬಂದಿದ್ದಳು. ಸೋನಾಕ್ಷಿಗೆ ಮಂಡಿಯವರೆಗಿನ ಈ ಡ್ರೆಸ್ ಹೆಚ್ಚು ಸ್ಟೈಲಿಶ್ ಲುಕ್ ತಂದುಕೊಟ್ಟಿತ್ತು. ಕ್ಯಾಪ್ ತೋಳು ಹೊಂದಿದ ಈ ಡ್ರೆಸ್ ನಲ್ಲಿ ಚುಮ್ಕಿಯಕುಸುರಿ ಇದ್ದಿದ್ದರಿಂದ ಬೆಳಕಿಗೆ ಹೊಳೆಯುತ್ತಿತ್ತು. ಮೈಗಂಟಿದ್ದಂತಿದ್ದ ಈ ಡ್ರೆಸ್ ಗೆ ಹಿಂಭಾಗದಲ್ಲಿ ಜಿಪ್ ಇದೆ. ಇದರ ಕತ್ತಿನ ಸುತ್ತಲೂ ಆಭರಣದ ನೆಕ್ ಲೈನ್ ಹೊಂದಿದೆ. ಈ ಡ್ರೆಸ್ಸಿಗೆ ಆಕೆ ಫೆರ್ಗಾಮೋ ಶೂ ತೊಟ್ಟಿದ್ದಳು. ಹೆಬ್ಬೆರಳು ಇಣುವಂತಿದ್ದ ಈ ಶೂಗಳು ಅದು ಕಿಟನ್ ಹೀಲ್ಸ್ ಇರಬಹುದೇನೋ ಅನ್ನಿಸುವಂತಿತ್ತು. ಆಕೆ ಈ ಡ್ರೆಸ್ ನೊಂದಿಗೆ ಕ್ಯೂರಿಯೋ ಕಾಟೇಜ್ ನ ಚಿನ್ನದಾಭರಣಗಳನ್ನು ತೊಟ್ಟೆದ್ದಳು. ಕೋರಲ್ ಬಣ್ಣದ ಲಿಪ್ ಸ್ಟಿಕ್, ಅದಕ್ಕೊಪ್ಪುವ ಕಣ್ಣಿನ ಮೇಕಪ್ ಮತ್ತು ಬೈತಲೆ ತೆಗೆದ ಅಲೆ ಅಲೆಯಾದ ಕೂದಲು ಆಕೆಯ ಅಲಂಕಾರ ನೋಡುಗರ ಕಣ್ಣಿಗೆ ಹಬ್ಬವಾಗಿತ್ತು.
ಆ್ಯಲಿಸ್ ಒಲಿವಿಯ ತರ್ಯಾನ್ ಈ ಬಿಗಿಉಡುಪು ಸ್ಪ್ರಿಂಗ್ 2013ರ ಕಲೆಕ್ಷನ್ ಸಿದ್ಧಪಡಿಸಿದ್ದು. ಕಣ್ ಸೆಳೆವ ಇದರ ವಸಂತದ ಬಣ್ಣ ಮತ್ತು ಈ ಉಡುಪು ಎಲ್ಲ ಸೆಲೆಬ್ರಿಟಿಗಳ ವಾರ್ಡರೋಬಿನಲ್ಲಿ ಜಾಗಪಡೆಯಿತು! ಎಲ್ಲರೂ ಸಾಮಾನ್ಯವಾಗಿ ಈ ಉಡುಪನ್ನು ವಸಂತದಲ್ಲಿ ಧರಿಸಲು ಇಷ್ಟಪಡುತ್ತಾರೆ. ಆದರೆ ಸೋನಾಕ್ಷಿಯ ಪ್ರಯೋಗಶೀಲ ಧೈರ್ಯ ಮೆಚ್ಚಬೇಕಾದದ್ದೆ. ಈಕೆ ಈ ಉಡುಪನ್ನು ನವಂಬರ್ ನ ಮಧ್ಯಭಾಗದಲ್ಲಿ ಮೈ ನಡುಗಿಸುವ ಚಳಿ ಆರಂಭವಾಗಿರುವ ಈ ಸಮಯದಲ್ಲಿ ತೊಟ್ಟಿದ್ದಾಳೆ. ಅದೇನೇ ಇರಲಿ ಸೋನಾಕ್ಷಿ ಈ ಉಡುಪನ್ನು ಅದಕ್ಕೊಪ್ಪುವ ಅಲಂಕಾರದೊಂದಿಗೆ ಧರಿಸಿ ಅದಕ್ಕೊಂದು ಸ್ಟೈಲಿಶ್ ಕಳೆ ತಂದುಕೊಟ್ಟಿದ್ದು ಸುಳ್ಳಲ್ಲ. ಇದೇ ಆ್ಯಲಿಸ್ ತರ್ಯಾನ್ ಚುಮ್ಕಿ ಅಲಂಕೃತ ಉಡುಪು ಧರಿಸಿದ ಇನ್ನೊಂದಿಷ್ಟು ಮಂದಿ ಸೆಲೆಬ್ರಿಟಿಗಳು ಇಲ್ಲಿದ್ದಾರೆ ನೋಡಿ.

ಸೋನಾಕ್ಷಿ ಸಿನ್ಹಾ
ಈಕೆ ಇತ್ತೀಚೆಗೆ ಈ ಉಡುಪು ತೊಟ್ಟ ಸೆಲೆಬ್ರಿಟಿ. ಈಕೆ ತಾನು ತೊಟ್ಟಿದ್ದ ಹಳದಿ ಬಟ್ಟೆಗೆ ಒಪ್ಪುವಂತಹ ಕಪ್ಪು ಫರ್ರಗಾಮೊ ಟೋ ಹೀಲ್ಸ್ ಮತ್ತು ಕ್ಯುರಿಯೊ ಕಾಟೇಜ್ ಆಭರಣಗಳನ್ನು ತೊಟ್ಟಿದ್ದಳು.

ವನೆಸ್ಸಾ ಹುಡ್ಗೆನ್ಸ್
ಡಿಸ್ನಿಯ ಮಾಜಿ ತಾರೆ ಮತ್ತು ಸ್ಪ್ರಿಂಗ್ ಬ್ರೇಕರ್ಸ್ ನ ನಟಿ ಇದೇ ಹಳದಿ ಬಣ್ಣದ ಆ್ಯಲಿಸ್ ಮತ್ತು ಒಲಿವಿಯಾ ಉಡುಪಿನಲ್ಲಿ ಈ ಮುಂಚೆ ಕಾಣಿಸಿಕೊಂಡಿದ್ದಳು. ರೂಸೋನ 'ಪಾಪ್' ಗೋಲ್ಡ್ ಮಿರರ್ ಲೆದರ್ ಚಪ್ಪಲಿಗಳು ಮತ್ತು ಕಾರ್ಟಿಯರ್ ಲವ್ ಬ್ರೆಸ್ ಲೇಟ್ ತೊಟ್ಟಿದ್ದಳು.

ಕ್ಯಾಥರಿಯಾನ್ ವಿನ್ನಿಕ್
ಫೆಬ್ರವರಿ 2013ರಲ್ಲಿ ಕ್ಯಾಥರಿಯಾನ್ ಈ ಚುಮ್ಕಿ ಅಲಂಕೃತ ಉಡುಪನ್ನು ಚರ್ಮದ ಬಣ್ಣದ ಶೂಗಳೊಂದಿಗೆ ತೊಟ್ಟಿದ್ದಳು. ಇದರೊಂದಿಗೆ ಆಕೆ ಲಿ ವಿಯಾನ್ ಆಭರಣ ತೊಟ್ಟು ಗುಂಗುರಾಗಿಸಿದ ಕೂದಲನ್ನು ಒಂದೆಡೆ ಇಳಿಬಿಟ್ಟಿದ್ದಳು. ಇದು ಆಕೆಯ ಅಂದವನ್ನು ಹೆಚ್ಚಿಸಿತ್ತು.

ಜೆಸ್ಸಿಕಾ ವೈಟ್
ಅಮೆರಿಕಾದ ಮಾಡೆಲ್ ಮತ್ತು ನಟಿ ಈ ಉಡುಪಿನಲ್ಲಿ ಸೆಕ್ಸಿಯಾಗಿ ಕಾಣುತ್ತಿದ್ದಳು. ಆಕೆ ಕ್ರಿಶ್ಚಿಯನ್ ಲ್ಯೊಬೌಟಿನ್ ಫ್ಲೋ ನ ಹೆಬ್ಬೆರಳು ಇಣುಕುತ್ತಿದ್ದ ಹೀಲ್ಡ್ ಶೂ ತೊಟ್ಟಿದ್ದಳು.

ಚೆಲ್ಸಿಯ ಕಾನೆ
ಚೆಲ್ಷಿಯ ಕಾನೆ ಆ್ಯಲಿಸ್ ಒಲಿವಿಯ ಹಳದಿ ಉಡುಪನ್ನು ಐರನ್ ಮ್ಯಾನ್ 3ರ ಪ್ರಿಮಿಯರ್ ಶೋನ ರೆಡ್ ಕಾರ್ಪೆಟ್ ಸಮಾರಂಭದಲ್ಲಿ ಧರಿಸಿದ್ದಳು. ಪಂಪ್ ಶೂಗಳು, ಡೊರೊನ್ ಪಲೊಮದ ವಜ್ರದ ಡವ್ಸ್ ರಿಂಗ್ ಮತ್ತು ಕಬಾನ ವಜ್ರ ಮತ್ತು ಒಪಾಲ್ ಕಿವಿಯೋಲೆ ಧರಿಸಿದ್ದಳು.



Click it and Unblock the Notifications