Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬ್ಲ್ಯಾಕ್ ಬ್ಯೂಟಿಯರಿಗೆ ಮೇಕಪ್ ಟಿಪ್ಸ್
ನಿಮ್ಮ ತ್ವಚೆ ಆರೋಗ್ಯಕರವಾಗಿರುವಷ್ಟು ಕಾಲ ನೀವು ಸುಂದರವಾಗಿ ಕಾಣುತ್ತೀರಿ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಮೇಕಪ್ ವಿಷಯಕ್ಕೆ ಬಂದಾಗ ತ್ವಚೆ ಬಣ್ಣವನ್ನೂ ಗಮನದಲ್ಲಿಟ್ಟು ಮೇಕಪ್ ಮಾಡಿದರೆ ಹೆಚ್ಚು ಆಕರ್ಷಕವಾಗಿ ಕಾನಬಹುದು. ನಿಮ್ಮ ತ್ವಚೆಗೆ ನೀವು ಮಾಡುವ ಮೇಕಪ್ ಸೂಕ್ತವಾಗದಿದ್ದರೆ ನಿಮ್ಮ ಸಂಪೂರ್ಣ ಲುಕ್ ಹಾಳು ಮಾಡುವುದರಲ್ಲಿ ಯಾವುದೇ ಸಂಶಯ ಬೇಡ.
ಅದರಲ್ಲೂ ಗೋಧಿ ಬಣ್ಣ ಹಾಗೂ ಕೃಷ್ಣ ವರ್ಣದ ಮೇಕಪ್ ಹೊಂದಿರುವವರು ಮೇಕಪ್ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ತಮ್ಮ ಸೌಂದರ್ಯದ ಸೊಬಗನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಇಲ್ಲಿ ನಾವು ಕೃಷ್ಣ ವರ್ಣದವರಿಗೆ ಮೇಕಪ್ ಟಿಪ್ಸ್ ನೀಡಿದ್ಧೇವೆ. ಬ್ಲ್ಯಾಕ್ ಬ್ಯೂಟಿಯ ಚೆಲುವು ಹೆಚ್ಚಿಸುವ ಸೀಕ್ರೆಟ್ ನೋಡಿ ಇಲ್ಲಿದೆ.

ಪೌಂಡೇಷನ್
ಪೌಂಡೇಷನ್ ಮುಖಕ್ಕೆ ಹಚ್ಚಿದರೆ ಇರುವ ಬಣ್ಣಗಿಂತ ಸ್ವಲ್ಪ ಹೆಚ್ಚಿನ ಬಿಳುಪಿನಿಂದ ಕಾಣಬಹುದು. ಆದರೆ ಈ ಪೌಂಡೇಷನ್ ನಲ್ಲಿ ಅನೇಕ ಬಗೆಗಳಿವೆ. ಕೃಷ್ಣ ಮತ್ತು ಗೋಧಿ ಬಣ್ಣದ ಸುಂದರಿಯರು ಲಿಕ್ವಿಡ್ ಪೌಂಡೇಷನ್ ಬಳಸುವುದು ಒಳ್ಳೆಯದು. ಅದರಲ್ಲೂ ಪೌಂಡೇಷನ್ ತುಂಬಾ ತೆಳುವಾಗಿ ಹಚ್ಚಿ.

ಪೌಡರ್
ನಿಮ್ಮದು ಎಣ್ಣೆ ತ್ವಚೆಯಾಗಿದ್ದರೆ ಪೌಡರ್ ಹಚ್ಚಲು ಮರೆಯಬೇಡಿ.

ಬ್ಲಷರ್
ತೆಳು ಬಣ್ಣದ ಬ್ಲಷರ್ ಬಳಸುವುದು ಒಳ್ಳೆಯದು. ಬ್ಲಷರ್ ನಲ್ಲಿ ರೀಮ್ ರೀತಿಯ ಬ್ಲಷರ್ ಕೂಡ ಹಚ್ಚಬಹುದು.

ತುಟಿಗೆ ಬಣ್ಣ
ತುಂಬಾ ತೆಳು ಬಣ್ಣದ ಲಿಪ್ ಸ್ಟಿಕ್ ಹಚ್ಚದಿರುವುದು ಒಳ್ಳೆಯದು. ವೈನ್ , ಬ್ರೌನ್ , ಪ್ಲಮ್ ಬಣ್ಣದ ಲಿಪ್ ಸ್ಟಿಕ್ ಆಕರ್ಷಕವಾಗಿ ಕಾಣುವುದು.

ಐ ಶ್ಯಾಡೋ
ಐ ಶ್ಯಾಡೋ ಆಯ್ಕೆ ಮಾಡುವಾಗ ನಿಮಗೆ ಸುಕ್ತವಾದ ಬಣ್ಣವನ್ನು ಆರಿಸಿ. ತಾಮ್ರ ಬಣ್ಣದ್ದು, ಕಂದು, ನೆವಿ ಬ್ಲೂ ಬಣ್ಣದ ಐ ಶ್ಯಾಡೋ ತುಂಬಾ ಆಕರ್ಷಕವಾಗಿ ಕಾಣುವುದು.

ಐ ಬ್ರೋ
ಐ ಬ್ರೋವನ್ನು ಶೇಪ್ ನಲ್ಲಿಡುವುದು ಒಳ್ಳೆಯದು. ಮೈ ಬಣ್ಣ ಕಪ್ಪು ಇರುವವರಿಗೆ ತೆಳ್ಳಗಿನ ಐ ಬ್ರೋ ಆಕರ್ಷಕವಾಗಿ ಕಾಣುವುದು.

ಐ ಲೈನರ್
ಕಾಜಲ್ ಹಚ್ಚದಿರುವುದು ಒಳ್ಳೆಯದು. ಬ್ಲ್ಯಾಕ್ ಅಥವಾ ಬ್ಲೂ ಬಣ್ಣದ ಐ ಲೈನರ್ ಬಳಸಬಹುದು. ಅದರಲ್ಲೂ ಐ ಲೈನರ್ ಅನ್ನು ಗಾಢವಾಗಿ ಹಚ್ಚಿದರೆ ಆಕರ್ಷಕವಾಗಿ ಕಾಣುವುದು.

ನೇಲ್ ಪಾಲೀಷ್
ಗಾಢವಾದ ಬಣ್ಣದ ನೇಲ್ ಪಾಲೀಷ್ ಹಚ್ಚುವುದಕ್ಕಿಂತ ತೆಳು ಬಣ್ಣದ ನೇಲ್ ಪಾಲೀಷ್ ಹಚ್ಚುವುದು ಒಳ್ಳೆಯದು. ತೆಳು ನೇರಳೆ ಬಣ್ಣ, ತಾಮ್ರ ಬಣ್ಣ, ಹಸಿರು ಬಣ್ಣ ಈ ರೀತಿಯ ನೇಲ್ ಪಾಲೀಷ್ ಹಚ್ಚಿದರೆ ಬೆರಳಿನ ಅಂದ ಹೆಚ್ಚುವುದು.

ಕೂದಲಿಗೆ ಬಣ್ಣ
ಕೂದಲಿಗೆ ಬಣ್ಣ ಹಚ್ಚಿಸಬೇಕೆಂದು ಬಯಸುವುದಾದರೆ ಗಾಢ ಬಣ್ಣವನ್ನು ಹಚ್ಚಿಸುವುದು ಒಳ್ಳೆಯದು.



Click it and Unblock the Notifications
