Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಳಿಗಾಲದ ಮೇಕಪ್ ಟಿಪ್ಸ್
ಚಳಿಗಾಲ ಬಂತೆಂದರೆ ತ್ವಚೆಯ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಸ್ವಲ್ಪ ಹೆಚ್ಚಾಗೇ ಕಾಳಜಿವಹಿಸಬೇಕಾಗುತ್ತದೆ. ನಿಮ್ಮಸ್ವೆಟರ್ ಗಳು, ಶಾಲ್ ಗಳು, ಟೋಪಿಗಳು, ಶೂಗಳು ಎಲ್ಲವೂ ಮೆಲ್ಲಗೆ ನಿಮ್ಮ ವಾರ್ಡರೋಬಿನಿಂದ ಚಳಿಗಾಲದಲ್ಲಿ ಹೊರಗಿಣಕಲು ಆರಂಭಿಸುತ್ತವೆ. ಆದಷ್ಟು ದೇಹ ಬೆಚ್ಚಗಿಟ್ಟುಕೊಳ್ಳುವ ಕಡೆಯೇ ನಮ್ಮೆಲ್ಲರ ಗಮನವಿರುತ್ತದೆ. ಅದರಂತೆ, ನಮ್ಮ ಮೇಕಪ್ ನಲ್ಲೂ ಕೂಡ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ.

ಯಾವ ರೀತಿಯ ಬದಲಾವಣೆ ? ಹೇಗೆ ಮಾಡಿಕೊಳ್ಳಬೇಕು ? ಎಂಬಿತ್ಯಾದಿಗಳ ಬಗ್ಗೆ ಮಾಹಿತಿ ಇಲ್ಲಿದೆ.
ತೇವ ಮತ್ತು ಸ್ವಚ್ಛತೆ - ತ್ವಚೆಯ ಒಣಗುವಿಕೆ ಮತ್ತು ಸಿಪ್ಪೆಸುಲಿಯುವುದನ್ನು ತಪ್ಪಿಸಬೇಕಾದರೆ, ತ್ವಚೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗು ಅದರ ತೆವಾಂಶವನ್ನು ಕಾಪಾಡುವುದು ತುಂಬಾ ಮುಖ್ಯ. ಚರ್ಮ ಮೃದುವಾಗಿದ್ದರೆ ಬಿರುಕುಗಳ ಬಾಧೆ ಹತ್ತಿರವೂ ಸುಳಿಯುವುದಿಲ್ಲ. ಬೆಸ್ ಅಥವಾ ಫೌಂಡೇಷನ್ ಕ್ರೀಮ್ ಬಳಕೆ - ಫೌಂಡೇಷನ್ ಪೌಡರ್ ಗಿಂತ ಕ್ರೀಮ್ ಬಳಸುವುದು ಉತ್ತಮ. ಹಾಗೇ ಅದನ್ನು ಚನ್ನಾಗಿ ಕಲಸಿ(ಬ್ಲೆಂಡ ಮಾಡಿ) ಬಳಸಬೇಕು. ಒಂದೇ ಬಣ್ಣದ ಕ್ರೀಮನ್ನು ಬಳಸುವ ಬದಲು, ನಿಮ್ಮ ತ್ವಚೆಯ ವರ್ಣಕ್ಕೆ ಹೋಲುವ ಎರಡು ಬಣ್ಣಗಳನ್ನು ಬೆರೆಸಿ ಬಳಸಿದರೆ ಆಕರ್ಷಣೀಯವಾಗಿ ಕಾಣುವಿರಿ.
ಕಣ್ಣುಗಳ ಸೌಂದರ್ಯ - ಚಳಿಗಾಲದಲ್ಲಿ ಸ್ವರ್ಣ ವರ್ಣ ಅಥವಾ ಯಾವುದಾದರೂ ಲೋಹ ವರ್ಣವನ್ನು ಕಣ್ಣಿಗೆ ಲೇಪಿಸಿಕೊಳ್ಳಬೇಕು. ಇದು ತಟಸ್ಥವಾಗಿದ್ದರೂ ಉತ್ಕೃಷ್ಟವಾಗಿ ಕಾಣುತ್ತದೆ. ಸಂಜೆಯ ಔತಣಕೂಟದಲ್ಲಿ ಲೋಹವರ್ಣದ ಸಿಂಗಾರ ಹೊಂದಿದ ನಯನಗಳು ನಶೆ ಏರಿಸುತ್ತವೆ. ಕೊಹ್ಲ್, ಐ-ಲೈನರ್ ಮತ್ತು ಮಸ್ಕಾರಾಗಳನ್ನು ತಪ್ಪದೆ ಲೇಪಿಸಿರಿ.
ತುಟಿಗಳ ಅಲಂಕಾರ - ಚಳಿಗಾಲದಲ್ಲಿ ಸೌಮ್ಯವಾದ ಹಾಗು ಹೊಳೆಯುವ ಈ ಎರಡೂ ಬಗೆಯ ತುಟಿಗಳನ್ನೂ ಹೊಂದಬಹುದು. ತುಟಿಗಳ ಬಿರುಕುಗಳನ್ನು ತಪ್ಪಿಸಲು ಮತ್ತು ಅವುಗಳಲ್ಲಿ ತೆವವನ್ನು ಉಳಿಸುವಲ್ಲಿ ಲಿಪ್-ಬಾಮ್ ಗಳು ಸಹಾಯಕಾರಿ. ಘಾಡ ವರ್ಣವು ನಿಮ್ಮ ಮುಖಕ್ಕೆ ಹೊಳಪನ್ನು ತರುವದಲ್ಲದೆ ಚಳಿಯ ವಾತಾವರಣದಲ್ಲಿ ಅತ್ಯುತ್ತಮ ಕಾಣುತ್ತದೆ.
ಬ್ಲಶ್ - ಚಳಿಗಾಲದಲ್ಲಿ ಬ್ಲಶ್ ಮಾಡುವದು ತುಂಬಾ ಅಗತ್ಯ. ಇದು ನಿಮ್ಮ ಕೆನ್ನೆಯೆಲುಬುಗಳ ಸ್ಪಷ್ಟತೆಯನ್ನು ತೋರಿಸುವದಲ್ಲದೆ ನಿಮಗೆ ತಾಜಾ ನೋಟವನ್ನು ನೀಡುತ್ತದೆ
ಕೂದಲು - ಕೂದಲು ಮತ್ತು ಚರ್ಮ ಎರಡಕ್ಕೂ ಚಳಿಗಾಲದಲ್ಲಿ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಆದ್ದರಿಂದ ತಲೆತೊಳೆಯುವಾಗ ಬಿಸಿ ನೀರಿನ ಬದಲಿಗೆ ಉಗುರು ಬೆಚ್ಚಗಿನ ನೀರು ಬಳಸುವುದು ಒಳ್ಳೆಯದು. ಕ್ರೀಮ್ ಆಧಾರಿತ ಉತ್ಪನ್ನಗಳನ್ನೇ ಬಳಸಿರಿ ಹಾಗೂ ಯಾವಾಗಲೂ ನಿಮ್ಮ ಕೂದಲಿಗೆ ಕಂಡೀಷನ್ ಮಾಡಿಕೊಳ್ಳುತ್ತಿರಿ. ಚಳಿಗಾಲವು ಶುಷ್ಕತೆ
ಹೆಚ್ಚಿರುವದರಿಂದ ನಿಮ್ಮ ಕೂದಲುಗಳಿಗೆ ತೈಲ ಲೇಪಿಸುವದು ಅತ್ಯಗತ್ಯ.



Click it and Unblock the Notifications
