Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಹಜವಾಗಿರಿ ಸುಂದರವಾಗಿ ಕಾಣಿರಿ
ನಾವೆಲ್ಲ ತಾರೆಗಳು ಸಮಾರಂಭದಲ್ಲಿ ಮೇಕಪ್ ನೊಂದಿಗೆ ಕಂಗೊಳಿಸುವುದನ್ನು ನೋಡಿದ್ದೇವೆ. ಆದರೆ ಕೆಲಸಮಯಗಳಲ್ಲಿ ಅವರು ಕೂಡ ಮೇಕಪ್ ಇಲ್ಲದೆ ಸಹಜವಾಗಿ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಈವತ್ತು ಬೋಲ್ಡ್ ಸ್ಕೈ ಅಂತಹ ಕೆಲವರ ಸಹಜ ಸೌಂದರ್ಯವನ್ನು ನಿಮಗಾಗಿ ತಂದಿದೆ. ನೀವು ಮೇಕಪ್ ಇಲ್ಲದೆ ಸಹಜವಾಗಿದ್ದಷ್ಟು ಹುಡುಗರನ್ನು ಸೆಳೆಯಬಲ್ಲಿರಿ ನಿಮಗಿದು ಗೊತ್ತೆ? ಹುಡುಗರಿಗೆ ಹೆಚ್ಚು ಮೇಕಪ್ ಬಳಸದ ಅಥವ ಸಹಜವಾಗಿರುವ ಹುಡುಗಿಯರು ಇಷ್ಟವಾಗುತ್ತಾರೆ. ಅಂದರೆ ಸಹಜ ಸೌಂದರ್ಯದಲ್ಲಿ ಎಂತಹ ಆಕರ್ಷಣೆಯಿದೆ ಎಂದು ತಿಳಿಯಿರಿ.
ಈ ಸೆಲೆಬ್ರಿಟಿಗಳನ್ನು ನೋಡಿ ನಾವು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತದೆ. ಆದ್ದರಿಂದ ವಾರದಲ್ಲಿ ಒಮ್ಮೆಯಾದರೂ ಮೇಕಪ್ ಗೆ ರಜೆ ನೀಡಿ ಸಹಜವಾಗಿ ಕಾಣಿಸಿಕೊಳ್ಳಿ. ಮೇಕಪ್ ಇಲ್ಲದೆ ನಾವು ಹೇಗೆ ಕಾಣುತ್ತಿವೋ ಅನ್ನೋ ಆತಂಕ ಬೇಡ. ಮೇಕಪ್ ಇಲ್ಲದೆ ಮಿಂಚುವುದೇ ಇಂದಿನ ಹೊಸ ಟ್ರೆಂಡ್.
ಬನ್ನಿ ನಾವು ನಿಮಗೆ ಮೇಕಪ್ ಇಲ್ಲದೆ ಅಥವ ಸ್ವಲ್ಪ ಮೇಕಪ್ ನೊಂದಿಗೆ ಇರುವುದು ಹೇಗೆ ಅನ್ನುವುದನ್ನು ತಿಳಿಸುತ್ತೇವೆ:

ಕಿಮ್ ಕರ್ದಾಶಿಯಾನ್
ಈಕೆಯನ್ನು ನೋಡಿ ಈಕೆ ಅನೇಕ ಸಂದರ್ಭಗಳಲ್ಲಿ ಸ್ವಲ್ಪ ಮೇಕಪ್ ಬಳಸಿ ಅಥವ ಹಲವು ವೇಳೆ ಮೇಕಪ್ ಇಲ್ಲದೆ ಕೂಡ ಹೋದ ಸಂದರ್ಭಗಳುಂಟು. ಆದರೂ ಆಕೆ ಸುಂದರವಾಗಿ ಕಾಣುತ್ತಿದ್ದಾಳೆ ಅಲ್ಲವೆ. ಆಕೆಯ ಕಪ್ಪು ವೃತ್ತಗಳು ಎದ್ದುಕಾಣುತ್ತಿವೆ. ಆದರೆ ಅದನ್ನು ಗುಣಪಡಿಸಬಹುದು.

ಮಿಲಿ ಸೈರಸ್
ಈ ಯುವ ಗಾಯಕಿಯನ್ನು ಮೇಕಪ್ ನಲ್ಲಿ ನೀವು ನೋಡಿರಬಹುದು. ಇಲ್ಲಿ ನೋಡಿ ಮೇಕಪ್ ಇಲ್ಲದ ಆಕೆಯ ಸ್ನಿಗ್ಧ ಸೌಂದರ್ಯ. ಟೀನೇಜ್ ಹುಡುಗಿಯರೇ ಇದನ್ನು ಗಮನಿಸಿ. ಮೇಕಪ್ ಇಲ್ಲದಿದ್ದಾಗಲೇ ನೀವು ಹೆಚ್ಚು ಆಕರ್ಷಕರಾಗಿ ಕಾಣುವಿರಿ.

ಸೆಲಿನ ಗೊಮೆಜ್
ಈಕೆಯದು ಕೂಡ ಮುಗ್ಧ ಸೌಂದರ್ಯ. ಮೇಕಪ್ ಇಲ್ಲದೆ ಕೂಡ ಈಕೆಯ ಅಂದ ಮನಸೆಳೆಯುವಂತಿದೆ. ಮೇಕಪ್ ಇಲ್ಲದೆ ಕೂಡ ಅಂದವಾಗಿ ಕಾಣಲು ಒಂದು ಟಿಪ್ಸ್ ಎಂದರೆ ಒದ್ದೆ ಕೂದಲಿನೊಂದಿಗೆ ಹೋಗುವುದು.

ಏಂಜಲಿನ ಜೊಲಿಯೆ
ಏಂಜಲಿನಾಳ ಸುಕ್ಕಿಲ್ಲದ ಚರ್ಮದ ಅಂದ ಮೇಕಪ್ ಇಲ್ಲದ ವೇಳೆ ಕೂಡ ಹೊಳೆಯುತ್ತದೆ. ಇದು ಆಕೆಯ ಸೌಂದರ್ಯದ ಹೆಚ್ಚುಗಾರಿಕೆ ಕೂಡ ಹೌದು.

ಕ್ರಿಸ್ಟೆನ್ ಸ್ಟೆವರ್ಟ್
ಈ ಯುವ ತಾರೆ ಮೇಕಪ್ ಇಲ್ಲದೆಯೇ ಹೆಚ್ಚು ಆಕರ್ಷಕವಾಗಿ ಕಾಣುತ್ತಾಳೆ. ಹಲವು ಸಾರಿ ಈಕೆ ಕೇವಲ ಲಿಪ್ ಗ್ಲಾಸ್ ಮಾತ್ರ ಹಾಕುತ್ತಾಳೆ. ಇದು ಆಕೆಯ ಸೌಂದರ್ಯದ ಮೆರುಗನ್ನು ಹೆಚ್ಚಿಸುತ್ತದೆ.

ರಿಹಾನ
ರಿಹಾನ ಕೂಡ ಹಲವು ವೇಳೆ ಸಾನ್ಸ್ ಮೇಕಪ್ ಇಷ್ಟಪಡುತ್ತಾಳೆ. ಮೇಕಪ್ ಬಳಸದ ಸಮಯದಲ್ಲಿ ಈಕೆ ತನ್ನ ನಗುವಿಗೆ ತಿಳಿ ಬಣ್ಣದ ಗ್ಲಾಸ್ ನ ಸಾಥ್ ನೀಡಿರುತ್ತಾಳೆ.

ಗಾಗ
ಇತ್ತೀಚೆಗೆ ನೀವು ಗಾಯಕಿ ಗಾಗ ಭಾಗವಹಿಸಿದ್ದ ಸಮಾರಂಭಗಳನ್ನು ನೋಡಿದ್ದರೆ ನಿಮಗೆ ತಿಳಿದಿರುತ್ತದೆ. ಈಕೆ ಹಲವು ಸಂದರ್ಭಗಳಲ್ಲಿ ಬಿಜರೆ ಮೇಕಪ್ ಬಳಸುತ್ತಾಳೆ. ನೀವು ಬಹಳ ಕಡಿಮೆ ಸಂದರ್ಭಗಳಲ್ಲಿ ಆಕೆಯನ್ನು ಮೇಕಪ್ ಇಲ್ಲದೆ ನೋಡಿರುತ್ತೀರಿ.

ಕಟೆ ಮೊಸ್
ಮುಖದ ಮೇಲೆ ಫ್ರೆಕ್ಲೆಸ್ ಗಳಿದ್ದರೆ ಅದೃಷ್ಟವಂತೆ. ಹಾಗಾಗಿ ನೀವು ಕೂಡ ಕಟೆ ಮೊಸ್ ಳ ಹಾಗೆ ಮೇಕಪ್ ಇಲ್ಲದೆ ಅವುಗಳನ್ನು ಮುಚ್ಚಿಡದೆ ಪ್ರದರ್ಶಿಸಿ.

ಟೈಲರ್ ಸ್ವಿಫ್ಟ್
ನಿಮ್ಮ ತ್ವಚೆ ಸುಂದರವಾಗಿ ಉಳಿಯಬೇಕೆಂದಿದ್ದರೆ ಆದಷ್ಟು ಮೇಕಪ್ ನಿಂದ ದೂರವಿರಿ. ಆಹ ಟೈಲರ್ ಳ ಹಾಗೆ ಸ್ನಿಗ್ಧ ಸೌಂದರ್ಯದ ಒಡತಿಯರಾಗುವಿರಿ.

ನಿಕಿ ಮಿನಾಜ್
ಗಾಯಕಿ ನಿಕಿ ಹೆಚ್ಚಾಗಿ ಪಿಂಕ್ ಬಣ್ಣವನ್ನು ಬಳಸುತ್ತಾಳೆ. ಸ್ಯಾನ್ಸ್ ಮೇಕಪ್ ನಿಂದ ಈಕೆ ಹೆಚ್ಚು ಸುಂದರವಾಗಿ ಕಾಣುತ್ತಾಳೆ. ಮೇಕಪ್ ಇಲ್ಲದ ಸಂದರ್ಭದಲ್ಲಿ ನಿಮ್ಮ ಕೂದಲನ್ನು ಹಾರಲು ಬಿಡಿ. ಇದು ಸೌಂದರ್ಯಕ್ಕೆ ಕಳೆ ತರುತ್ತದೆ.

ಜೆನಿಫರ್ ಲಾರೆನ್ಸ್
ಜೆನಿಫರ್ ಸ್ವಲ್ಪ ಗ್ಲಾಸ್ ಬಳಸಿ ತನ್ನ ನಗುವಿಗೆ ರಂಗು ತುಂಬಿಕೊಳ್ಳುತ್ತಾಳೆ. ಇದು ಅವಳ ಸಹಜ ಸೌಂದರ್ಯಕ್ಕೆ ಪೂರಕವಾಗಿ ಗಮನ ಸೆಳೆಯುತ್ತದೆ.

ಜೆನಿಫರ್ ಲೊಪೆಜ್
ಈಕೆ ಉಳಿದ ಹೊಸ ಅಮ್ಮಂದಿರ ಹಾಗೆ ಮಗುವಿನ ಪಾಲನೆಯಲ್ಲಿ ಸ್ವಲ್ಪ ಬಳಲಿದ ಹಾಗೆ ಕಾಣುತ್ತಾಳೆ. ಆದರೂ ಆಕೆಯ ಸುಕ್ಕಿಲ್ಲದ ಚರ್ಮ ನೋಡಿ. ಆದ್ದರಿಂದ ಸುಕ್ಕಿಲ್ಲದ ಚರ್ಮ ಪಡೆಯಲು ಸ್ಯಾನ್ಸ್ ಮೇಕಪ್ ಒಂದು ವಾರ ಕಾಲ ಬಳಸಿ.

ಡೆಮಿ ಲೊವಟೊ
ಈ ಸ್ನಿಗ್ಧ ಸುಂದರಿಯನ್ನು ನೋಡಿ ವಾಹ್! ಎನ್ನದಿರಲು ಸಾಧ್ಯವೇ? ನೀವು ಸಹಜವಾಗಿಯೇ ಸುಂದರವಾಗಿದ್ದಾಗ ಮೇಕಪ್ ನಿಮ್ಮ ಸೌಂದರ್ಯವನ್ನು ಹಾಳುಮಾಡುವ ಸಾಧ್ಯತೆಯಿರುತ್ತದೆ ನೆನಪಿರಲಿ.

ಸ್ಕಾರ್ಲೆಟ್ ಜಾನ್ಸನ್
ನೀವು ಕೂಡ ಈಕೆಯಷ್ಟೇ ಸುಂದರವಾಗಿ ಕಾಣಬಲ್ಲಿರಿ. ಮೇಕಪ್ ಬಳಸದೆ ವಿಶಿಷ್ಟ ಕೇಶವಿನ್ಯಾಸಗಳೊಂದಿಗೆ ಪ್ರಯತ್ನಿಸಿ ನೋಡಿ.

ಅಡ್ರಿಯಾನ ಲಿಮ
ದಿ ವಿಕ್ಟೋರಿಯ ಸಿಕ್ರೇಟ್ ಮಾಡೆಲ್ ಅಡ್ರಿಯಾನ ಲಿಮ ಮೇಕಪ್ ಇಲ್ಲದ ಸರಳ ಸುಂದರಿ. ನೀವು ಕೂಡ ಅಪರೂಪಕ್ಕೊಮ್ಮೆ ಮೇಕಪ್ ಬಳಸಿ ಈ ಬಗೆಯ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ. ಇದರಿಂದ ನಿಮ್ಮ ಚರ್ಮ ಹೆಚ್ಚು ಹೊಳಪನ್ನು ಪಡೆದುಕೊಳ್ಳುತ್ತದೆ.



Click it and Unblock the Notifications
