Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಈ ಋತುವಿನಲ್ಲಿನ ಲಿಪ್ ಕಲರ್ ಟ್ರೆಂಡ್ಸ್
ಬದಲಾಗುತ್ತ ಸಾಗುವ ಫ್ಯಾಷನ್ ಟ್ರೆಂಡ್ ಗೆ ತಕ್ಕಂತೆ ಬದಲಾಗಲು ನೀವು ಸದಾ ಅದನ್ನು ಗಮನಿಸುತ್ತಿರಬೇಕು. ಬಣ್ಣಗಳಿಂದ ಹಿಡಿದು ಚಿತ್ತಾರಗಳವರೆಗೆ ಎಲ್ಲವೂ ಬದಲಾಗುತ್ತಿರುತ್ತದೆ. ಇವು ಕೇವಲ ಉಡುಪಿಗೆ, ಶೂ ಮೊದಲಾದ ವಿಷಯಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ.
ತುಟಿ ಬಣ್ಣಗಳು ಈ ಬದಲಾವಣೆಗೆ ಹೊರತಾಗಿಲ್ಲ. ಕೆಲ ಸಮಯದ ಹಿಂದೆ ಕ್ಲಾಸಿ ಗಾಢ ಕೆಂಪು ಬಣ್ಣ ಫ್ಯಾಷನ್ ಆಗಿತ್ತು. ಈಗಲೂ ಕೆಂಪು ಬಣ್ಣದ ವಿವಿಧ ಶೇಡ್ ಗಳನ್ನು ಕಾಣಬಹುದು.
ಕೆಂಪಿನ ಹೊರತಾಗಿ ಇನ್ನೂ ಹಲವು ಬಣ್ಣದ ಲಿಪ್ ಸ್ಟಿಕ್ ಗಳು ನಂತರ ಫ್ಯಾಷನ್ ಲೋಕದಲ್ಲಿ ಚಾಲ್ತಿಗೆ ಬಂದವು. ಬಬ್ಬಲ್ ಗಂ ಪಿಂಕ್ ನಿಂದ ಹಿಡಿದು ಬ್ರೌನ್ ಬಣ್ಣದವರೆಗೆ ವಿವಿಧ ಬಣ್ಣಗಳನ್ನು ಸಂದರ್ಭ ಸನ್ನಿವೇಶಕ್ಕೆ ತಕ್ಕಂತೆ ಬಳಸಬಹುದು. ಉದಾಹರಣೆಗೆ ಕಪ್ಪು ಅಥವ ನಿಯಾನ್ ಬಣ್ಣದ ಬಟ್ಟೆಗೆ ನ್ಯೂಡಿಶ್ ಬ್ರೌನ್ ಬಣ್ಣದ ತುಟಿ ಬಣ್ಣ ಹೆಚ್ಚು ಸೂಕ್ತವಾಗಿರುತ್ತದೆ. ಇದು ಸರಳವಾಗಿ ಮತ್ತು ಸುಂದರವಾಗಿ ಕಾಣುತ್ತದೆ. ಸಂಜೆಯ ಸಮಾರಂಭವಾಗಿದ್ದು ನೀವು ಹೆಚ್ಚು ಬ್ರೈಟ್ ಮತ್ತು ಬೋಲ್ಡ್ ಆಗಿ ಕಾಣಬೇಕೆಂದಿದ್ದರೆ ಕೆಂಪು ಬಣ್ಣವನ್ನು ಬಳಸಿ. ಕೆಂಪಿನ ವಿವಿಧ ಶೇಡ್ ಗಳನ್ನು ನೀವು ನೋಡಬಹುದು. ಚೆರಿ ಕೆಂಪಿನಿಂದ ಹಿಡಿದು ರಕ್ತದ ಕೆಂಪಿನವರೆಗೆ ವಿವಿಧ ಕೆಂಪನ್ನು ಕಾಣಬಹುದು. ಬಣ್ಣಗಳು ಬದಲಾಗುತ್ತವೆ ಮತ್ತು ಇವು ನಿಮ್ಮ ಅಲಂಕಾರಕ್ಕೆ ಸ್ಟೈಲಿಶ್ ಹೊಳಪನ್ನು ತಂದುಕೊಡುತ್ತವೆ.
ಇತ್ತೀಚೆಗೆ ಹಲವು ಸೆಲೆಬ್ರಿಟಿಗಳು ಕ್ಲಾಸಿಕ್ ಬಣ್ಣ ಕೆಂಪನ್ನು ಬಳಸಿದ್ದನ್ನು ನೋಡಬಹುದು. ಬ್ರೌನ್ ಬಣ್ಣದ ಟ್ರೆಂಡ್ ಕೂಡ ಈಗ ಕಾಣಿಸಿಕೊಳ್ಳುತ್ತಿದೆ. ರಿಹಾನ ಇಂದ ಕರೀನಾ ಕಪೂರ್ ವರೆಗೆ ಹಲವು ಸೆಲೆಬ್ರಿಟಿಗಳು ನ್ಯೂಡ್ ಬಣ್ಣಗಳನ್ನು ಸರಳ ಮತ್ತು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಬಳಸುತ್ತಿದ್ದಾರೆ.
ಸೆಲೆಬ್ರಿಟಿಗಳು ಯಾವಾಗಲೂ ಟ್ರೆಂಡ್ ಹುಟ್ಟುಹಾಕುವಂತಹವರು. ನಾವಿಲ್ಲಿ ಆ ರೀತಿಯ ಈ ಋತುವಿನ ತುಟಿ ಬಣ್ಣಗಳನ್ನು ನಿಮಗಾಗಿ ತಂದಿದ್ದೇವೆ.

ಪಿಂಕ್
ಪಿಂಕ್ ಈ ಋತುವಿನಲ್ಲಿ ಕಾಣಿಸಿಕೊಂಡ ಬೋಲ್ಡ್ ಮತ್ತು ಸ್ಟೈಲಿಶ್ ಬಣ್ಣಗಳಲ್ಲಿ ಒಂದು. ಇದು ಹೆಚ್ಚು ಗಾಢ ಬಣ್ಣವಾದ್ದರಿಂದ ನಿಮ್ಮ ಮೇಕಪ್ ಗೆ ತಕ್ಕಂತೆ ಹಚ್ಚಿಕೊಳ್ಳಬೇಕು. ಹೆಚ್ಚು ಗಾಢವಾಗಿ ಹಚ್ಚಿಕೊಂಡರೆ ನಿಮ್ಮ ಅಂದವನ್ನು ಹಾಳುಗೆಡುವುವ ಸಾಧ್ಯತೆಯಿರುತ್ತದೆ.

ನ್ಯೂಡ್ ಬ್ರೌನ್
ಸಂಜೆ ಹೊತ್ತಿನ ಸಮಾರಂಭಗಳಿಗೆ ಈ ತುಟಿ ಬಣ್ಣವನ್ನು ಬಳಸಬಹುದು.

ನ್ಯೂಡ್ ಪಿಂಕ್
ಗುಲಾಬಿ ಬಣ್ಣದ ತುಟಿಗಳು ಪ್ರತಿ ಹೆಣ್ಣಿನ ಕನಸು. ಈ ತುಟಿ ಬಣ್ಣವನ್ನು ಹಚ್ಚಿಕೊಳ್ಳುವ ಮೂಲಕ ಇಂತಹ ತುಟಿಗಳನ್ನು ಪಡೆಯಬಹುದು.

ನ್ಯೂಡ್ ಲಿಪ್ ಸ್ಟಿಕ್
ಈ ಬಣ್ಣ ದಿನಕ್ಕೆ ಹೆಚ್ಚು ಹೊಂದುತ್ತದೆ. ಇದು ಹೆಚ್ಚು ಸಹಜವಾಗಿ ಕಾಣುತ್ತದೆ.

ಲೈಟ್ ಬ್ರೌನ್
ಇದು ಈ ಋತುವಿನಲ್ಲಿ ಕಾಣಿಸಿಕೊಳ್ಳುತ್ತಿರುವ ತುಟಿ ಬಣ್ಣ. ಇದು ಸ್ವಲ್ಪ ಒರಟಾಗಿ ಕಾಣಿಸಿದರೂ ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ.

ಲೈಟ್ ರೆಡ್
ಇದು ಗಾಢ ಕೆಂಪಲ್ಲ. ಆದರೆ ಇದು ಮ್ಯಾಟೆ ಲಿಪ್ ಸ್ಟಿಕ್ ಬಣ್ಣವಾಗಿರುವಂತೆ ನೋಡಿಕೊಳ್ಳಿ. ಇದರಿಂದ ನಿಮ್ಮ ಅಂದ ಹೆಚ್ಚುತ್ತದೆ.

ಬ್ಲಡ್ ರೆಡ್
ಗಾಢ ರಕ್ತದ ಬಣ್ಣದ ಈ ಕೆಂಪು ಸಂಜೆಯ ಸಮಾರಂಭಗಳಲ್ಲಿ ಹೆಚ್ಚು ಬೋಲ್ಡ್ ಮತ್ತು ವೈಲ್ಡ್ ಆಗಿ ಕಾಣುವಂತೆ ಮಾಡುತ್ತದೆ. ಇದು ಕೂಡ ಈ ಋತುವಿನಲ್ಲಿ ಕಾಣಿಸಿಕೊಂಡ ಬಣ್ಣಗಳಲ್ಲಿ ಒಂದು ಆದರೆ ಹೆಚ್ಚಲ್ಲ.

ಬ್ರೌನ್
ಗ್ಲಾಸಿ ಬ್ರೌನ್ ವಿಭಿನ್ನ ಮತ್ತು ಅನನ್ಯ. ರಿಹಾನಳನ್ನು ನೋಡಿ ನಾವಿದನ್ನು ಏಕೆ ಹೇಳುತ್ತಿದ್ದೇವೆ ಎಂದು ತಿಳಿಯುತ್ತದೆ.

ಚೆರಿ ರೆಡ್
ಈ ಬಣ್ಣ ಗಾಢ ಬಣ್ಣದ ಬಟ್ಟೆಗಳಿಗೆ ಹೆಚ್ಚು ಹೊಂದಿಕೊಳ್ಳುತ್ತದೆ.

ಗ್ಲಾಸಿ ಪಿಂಕ್
ಗ್ಲಾಸಿ ಪಿಂಕ್ ಯಾವಾಗಲೂ ಫ್ಯಾಶನ್ ಲೋಕದಲ್ಲಿ ಜನಪ್ರಿಯವಾಗಿದೆ. ಇದನ್ನು ಎಲ್ಲ ಋತುವಿನಲ್ಲೂ ಕಾಣಬಹುದು.

ನ್ಯೂಡ್ ಗ್ಲಾಸ್
ಚಿರನೂತನವಾದ ಮತ್ತೊಂದು ಬಣ್ಣ ನ್ಯೂಡ್ ಗ್ಲಾಸ್. ಇದು ಯಾವುದೇ ರೀತಿಯ ಅಲಂಕಾರಕ್ಕೆ ಒಪ್ಪುತ್ತದೆ. ಇದು ಹೆಚ್ಚು ತಿಳಿಯಾದ ಬಣ್ಣಗಳನ್ನು ಇಷ್ಟಪಡುವವರಿಗೆ ಹೇಳಿ ಮಾಡಿಸಿದ್ದು.

ವ್ಯಾಂಪೈರ್ ರೆಡ್
ವ್ಯಾಂಪೈರ್ ರೆಡ್ ಮ್ಯಾಟೆ ಲಿಪ್ ಸ್ಟಿಕ್ ಕೂಡ ಹೆಚ್ಚು ಗಾಢವಾದದ್ದು ಮತ್ತು ಗಮನ ಸೆಳೆಯುವಂತದ್ದು. ನೀವು ಡಲ್ ಕಲರ್ ಬಟ್ಟೆಗಳನ್ನು ಹಾಕಿಕೊಂಡಿದ್ದಲ್ಲಿ ಈ ತುಟಿ ಬಣ್ಣವನ್ನು ಬಳಸಿ.

ಬೆರಿ ರೆಡ್
ಇದು ಮತ್ತೊಂದು ಸೆಕ್ಸಿಯಾಗಿ ಸ್ಟೈಲಿಶ್ ಆಗಿ ಕಾಣಿಸುವಂತಹ ಬಣ್ಣ. ಇದನ್ನು ದಿನ ಮತ್ತು ರಾತ್ರಿ ಎರಡೂ ಹೊತ್ತಿನಲ್ಲಿ ಬಳಸಬಹುದು.

ಪ್ಲಂಪ್ ಪಿಂಕ್
ನ್ಯೂಡಿಶ್ ಪಿಂಕ್ ಬಣ್ಣವನ್ನು ಒಮ್ಮೆ ಪ್ರಯತ್ಸಿಸಿನೋಡಿ. ಇದು ನಿಮ್ಮ ತುಟಿಗೆ ಬೇರೆಯದೇ ಅಂದವನ್ನು ತಂದು ಕೊಡುತ್ತದೆ.



Click it and Unblock the Notifications