Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಸೀರೆಯಲ್ಲಿ ಹಾಲಿವುಡ್ ತಾರೆಯರು!
ಭಾರತೀಯ ಉಡುಪುಗಳಲ್ಲೇ ಅತ್ಯಂತ ಸುಂದರವಾದದ್ದು ಸೀರೆ. ಇದು ಸಾಂಪ್ರದಾಯಿಕ ಉಡುಗೆ ಮಾತ್ರವಲ್ಲ. ಹುಡುಗಿಯರ ಅಂದವನ್ನು ಎತ್ತಿ ತೋರುವಂತದ್ದು. ಪ್ರಪಂಚದಾದ್ಯಂತ ಸೀರೆಗೆ ಅಭಿಮಾನಿಗಳಿದ್ದಾರೆ. ನಾವಿಲ್ಲಿ ಸೀರೆಯ ಅಭಿಮಾನಿಗಳಾದ ಹಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಹೇಳುತ್ತಿದ್ದೇವೆ. ನಾವೆಲ್ಲ ನೋಡಿರುವ ಹಾಗೆ ಹಲವು ವರ್ಷಗಳಿಂದ ಹಾಲಿವುಡ್ ತಾರೆಯರು ರೆಡ್ ಕಾರ್ಪೆಟ್ ನಂತಹ ಸಮಾರಂಭಗಳಲ್ಲಿ ಸೀರೆ ಉಟ್ಟು ಮಿಂಚು ಹರಿಸುತ್ತಲೇ ಬಂದಿದ್ದಾರೆ. ಭಾರತೀಯ ಉದ್ಯಮಿ ಅರುಣ್ ನಾಯರ್ ನನ್ನು 2007ರಲ್ಲಿ ಎಲಿಜೆಬತ್ ಹುರ್ಲೆ ಮದುವೆಯಾದಾಗ ಸೀರೆ ಉಟ್ಟಿದ್ದಳು.
ಅದೇ ರೀತಿ ಹಾಲಿವುಡ್ ತಾರೆಯರು ಭಾರತಕ್ಕೆ ಭೇಟಿ ನೀಡಿದಾಗ ಇಲ್ಲಿನ ಸಾಂಪ್ರದಾಯಿಕ ಉಡುಗೆಯಾದ ಸೀರೆ ಉಡುತ್ತಾರೆ. ಅಂತಹ ಕೆಲವರವನ್ನು ನಾವಿಲ್ಲಿ ನಿಮಗೆ ಪರಿಚಯಿಸುತ್ತಿದ್ದೇವೆ. ಅವರು ಸೀರೆಯಲ್ಲಿ ಮಿಂಚುತ್ತಿರುವುದನ್ನು ನೋಡಿ ನೀವು ದಂಗಾಗಿ ಬಿಡುವಿರಿ.
ಬೋಲ್ಡ್ ಸ್ಕೈ ಅಂತಹ ಕೆಲವು ಹಾಲಿವುಡ್ ತಾರೆಯರ ಸೀರೆಯ ಅಂದವನ್ನು ನಿಮಗಾಗಿ ಸೆರೆ ಹಿಡಿದು ತಂದಿದೆ. ನೋಡಿ ಆನಂದಿಸಿ.

ಅನ್ನಾ ಕೌರ್ನಿಕೋವ
ಟೆನ್ನಿಸ್ ಆಟಗಾರ್ತಿಯಾದ ಅನ್ನಾ ಕೌರ್ನಿಕೊವ ಕಸೂತಿ ಮಾಡಿದ ನೀಲಿ ಸೀರೆಯಲ್ಲಿ ಅಪ್ಸರೆಯ ಹಾಗೆ ಕಾಣುತ್ತಿದ್ದರು. ಇದನ್ನು ಆಕೆ ದುಬೈನಲ್ಲಿ ಟೆನ್ನಿಸ್ ಪ್ರದರ್ಶನಕ್ಕೆ ಭೇಟಿ ಕೊಟ್ಟಾಗ ಉಟ್ಟಿದ್ದಳು.

ವಿಕ್ಟೋರಿಯ ಬೇಕಂ
ಹಾಲಿವುಡ್ಡಿನ ಸೆಕ್ಸಿ ತಾರೆ ವಿಕ್ಟೋರಿಯ ಬೇಕಂ ಸೀರೆ ಉಟ್ಟ ಫೋಟೋ ವೊಗ್ಯೂ ಇಂಡಿಯಾ ಮ್ಯಾಗಝೀನ್ ನ ಮುಖಪುಟದಲ್ಲಿ ಪ್ರಕಟವಾಗಿತ್ತು. ಈಕೆ ತರುಣ್ ತಹಿಲಾನಿ ವಿನ್ಯಾಸಗೊಳಿಸಿದ ಸೀರೆ ಉಟ್ಟಿದ್ದಳು.

ನೋಮಿ ಕ್ಯಾಂಪ್ ಬೆಲ್
ಮಾಡೆಲ್ ನೋಮಿ ಕ್ಯಾಂಪ್ ಬೆಲ್ ವಸ್ತ್ರವಿನ್ಯಾಸಕಾರ ಸವ್ಯಸಾಚಿ ಮುಖರ್ಜಿ ವಿನ್ಯಾಸ ಮಾಡಿದ ಕಪ್ಪು ಬಣ್ಣದ ನೆಟ್ ಸೀರೆ ಉಟ್ಟು ರಾಂಪಿನ ಮೇಲೆ ಮಿಂಚಿದರು. ಸೀರೆಗೆ ಒಪ್ಪುವಂತಹ ಅಲಂಕಾರ ಮಾಡಿಕೊಂಡಿದ್ದ ಈಕೆ ಈ ಮುನ್ನ ಸಹ ಭಾರತದಲ್ಲಿ ಸಮಾರಂಭಗಳಲ್ಲಿ ಭಾಗವಹಿಸಲು ಬಂದಾಗ ಸೀರೆ ಉಟ್ಟಿದ್ದಳು.

ಕಮೆರೊನ ಡಿಯಾಜ್
ನವಿಲಿನ ಚಿತ್ತಾರದ ಈ ಸುಂದರ ಕಪ್ಪು ಸೀರೆಯಲ್ಲಿನ ಸ್ನಿಗ್ಧ ಸೌಂದರ್ಯದ ಖನಿ ಕಮೆರೋನ ಡಿಯಾಜ್ ಳನ್ನು ನೋಡಿ ಆಹಾ! ಎಂದು ಉದ್ಗರಿಸದೆ ಇರಲು ಸಾಧ್ಯವಿಲ್ಲ ಅಲ್ಲವೇ?

ಎಲಿಜಬೆತ್ ಹರ್ಲಿ
ಭಾರತೀಯ ಉದ್ಯಮಿ ಅರುಣ್ ನಾಯರ್ ನ ಮಾಜಿ ಪತ್ನಿ ಎಲಿಜಬೆತ್ ಹರ್ಲಿ. ಸುಮಾರು ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಂದರ್ಭಗಳಲ್ಲಿ ಈಕೆ ಸೀರೆಯನ್ನು ಉಡುತ್ತಾಳೆ. ಈಕೆ ಉಡುವ ಸುಂದರ ಸೀರೆಗಳು ಈಕೆಯ ಅಂದಕ್ಕೆ ಇನ್ನಷ್ಟು ಮೆರುಗನ್ನು ತಂದುಕೊಡುತ್ತವೆ.

ಆ್ಯಶ್ಲಿ ಜುಡ್
ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿರುವ ಈಕೆಯನ್ನು ವರ್ಣಿಸಲು ಇರುವುದು ಒಂದೇ ಪದ "ವಾಹ್!" ಈ ನಟಿ ಯೂತ್ ಏಡ್ಸ್ ಬೆನಿಫಿಟ್ ಗಾಲಾದಲ್ಲಿ ಭಾಗವಹಿಸಿದಾಗ ಈ ಸೀರೆ ಉಟ್ಟು ಬಂದಿದ್ದಳು.

ನಿಕೊಲೆ ಶೇರ್ಜಿಂಗರ್
ಸೀರೆಯಲ್ಲಿನ ಈಕೆಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಇಲ್ಲ. ಈ ಗಾಯಕಿ ರೆಡ್ ಕಾರ್ಪೆಟ್ ಸಮಾರಂಭಕ್ಕೆ ಸೀರೆ ಉಟ್ಟು ಬಂದಿದ್ದಳು. ಈ ಸೀರೆಯ ಬಣ್ಣಗಳ ಕಾಂಬಿನೇಷನ್ ಸುಂದರವಾಗಿತ್ತು.

ಪಮೆಲ ಆ್ಯಂಡರ್ಸನ್
ಬಿಗ್ ಬಾಸ್ ಸೀಸನ್ 6 ಕ್ಕೆ ಅತಿಥಿಯಾಗಿ ಆಗಮಿಸಿದಾಗ ಪಮೆಲ ಬಿಳಿ ಬಣ್ಣದ ನೆಟ್ ಸೀರೆಯನ್ನು ಉಟ್ಟು ಬಂದಿದ್ದಳು. ಈ ಸೀರೆಯಲ್ಲಿ ಆಕೆಯ ಸೌಂದರ್ಯವನ್ನು ನೋಡಿ ಹಲವರ ಹೃದಯ ಬಾಯಿಗೆ ಬಂದಂತಾಗಿತ್ತು.

ಪ್ಯಾರಿಸ್ ಹಿಲ್ಟನ್
ಭಾರತೀಯ ಸೀರೆಯುಡುಗಿಯಲ್ಲಿ ಹೆಚ್ಚು ಸುಂದರವಾಗಿ ಕಂಡದ್ದು ಪ್ಯಾರಿಸ್ ಹಿಲ್ಟನ್. ಬೇಬಿ ಪಿಂಕ್ ಬಣ್ಣದ ಸೀರೆಯುಟ್ಟು ಈಕೆ ಮುಂಬಯಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಳು.

ಪ್ಯಾರಿಸ್ ಹಿಲ್ಟನ್ ಮ್ಯಾರಿ ಕ್ಲಾರಿ ಮುಖಪುಟದಲ್ಲಿ...
ಮ್ಯಾರಿ ಕ್ಲಾರಿ ಮ್ಯಾಗಝೀನಿನ ಮುಖಪುಟದಲ್ಲಿ ಪ್ಯಾರಿಸ್ ಹಿಲ್ಟನ್ ಕಾಣಿಸಿಕೊಂಡಿದ್ದು ಹೀಗೆ. ಸಮುದ್ರ ಹಸಿರು ಬಣ್ಣದ ಸೀರೆಯುಟ್ಟ ಈ ನೀರೆಯ ಸೌಂದರ್ಯಕ್ಕೆ ಮರುಳಾಗದವರೇ ಇಲ್ಲ.

ಅನ್ನಾ ಹತಾವೆ
ಭಾರತೀಯ ಸಾಂಪ್ರದಾಯಿಕ ಆಭರಣ ಮತ್ತು ಸುಂದರ ಕೇಶವಿನ್ಯಾಸದೊಂದಿಗೆ ಅನ್ನಾ ಕಂಗೊಳಿಸಿದಳು.

ಒಪ್ರ ವಿನ್ಫ್ರೆ
ಒಪ್ರ ಭಾರತಕ್ಕೆ ಭೇಟಿ ನೀಡಿದಾಗಲೆಲ್ಲ ಆಕೆ ಅತ್ಯುತ್ತಮ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುತ್ತಾಳೆ. ಈಕೆಯ ಸೀರೆಗಳನ್ನು ವಿನ್ಯಾಸ ಮಾಡಿದ್ದು ಸವ್ಯಸಾಚಿ. ಸಿಂಧೂರದೊಂದಿಗೆ ಸೀರೆಗೆ ಈಕೆ ದೇಶಿಯತೆಯ ಮೆರುಗನ್ನು ನೀಡುತ್ತಾಳೆ. ನಿಮಗೆ ಇಷ್ಟವಾಯಿತೆ?

ಜೆಸ್ಸಿಕಾ ಅಲ್ಬಾ
ಕಿತ್ತಳೆ ಮತ್ತು ಚಿನ್ನದ ಬಣ್ಣದ ಸೀರೆಯಲ್ಲಿ ಹಾಲಿವುಡ್ಡಿನ ಮೋಹಕ ತಾರೆ ಜೆಸ್ಸಿಕಾ ಅಲ್ಬಾ ಮನಸೆಳೆದಳು.

ಲೇಡಿ ಗಾಗಾ
ಗಾಯಕಿ ಲೇಡಿ ಗಾಗಾ ತರುಣ್ ತಹಿಲಿಯಾನಿ ವಿನ್ಯಾಸ ಮಾಡಿದ ಸೀರೆ ಉಟ್ಟಿದ್ದಳು. ಪಿಸ್ಟಾ ಹಸಿರು ಬಣ್ಣದ ಸೀರೆ ಈಕೆಯ ಸೌಂದರ್ಯವನ್ನು ಹೆಚ್ಚಿಸಿತ್ತು.

ಹಲ್ಲೆ ಬೆರಿ
ಕೆಂಪು ಮತ್ತು ಚಿನ್ನದ ಬಣ್ಣದ ಸೀರೆಯುಟ್ಟು ಈಕೆ ತನ್ನ ಚಿತ್ರವೊಂದರ ಪ್ರಚಾರಕ್ಕೆ ಬಂದಿದ್ದಳು.



Click it and Unblock the Notifications