Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಕಣ್ಣಿಗೆ 10 ಬಗೆಯಾಗಿ ಕಾಜಲ್ ಹಚ್ಚುವ ವಿಧಾನ
ಕಾಡಿಗೆ ಹಚ್ಚಿದ ಹೆಣ್ಣಿನ ಕಣ್ಣನ್ನು ನೋಡುವುದೇ ಚೆಂದ. ಕಾಡಿಗೆ ಹಚ್ಚುವುದು ಇಂದು, ನೆನ್ನೆಯ ಫ್ಯಾಷನ್ ಅಲ್ಲ, ಪುರಾತನ ಕಾಲದಿಂದಲೂ ಇದೆ. ಕಾಡಿಗೆಯನ್ನೂ ಅನೇಕ ರೀತಿಯಲ್ಲಿ ಹಚ್ಚಬಹುದು.
ಒಂದೊಂದು ವಿಧಾನವೂ ನಿಮಗೆ ಭಿನ್ನ ಲುಕ್ ನಿಡುವುದು. ಇವತ್ತು ನಾನು ಸ್ವಲ್ಪ ಡಿಫರೆಂಟ್ ಲುಕ್ ನಿಂದ ಕಾಣಬೇಕೆಂದು ಬಯಸಿದ ದಿನ ಈ ಡಿಫರೆಂಟ್ ಸ್ಟೈಲ್ ನ ಕಾಜಲ್ ನಿಮ್ಮ ಸಹಾಯಕ್ಕೆ ಬರುವುದು. ನೀವು ಸಾಂಪ್ರದಾಯಕವಾಗಿ ಕಾಣಬೇಕೆಂದರೆ ಯಾವ ರೀತಿಯಲ್ಲಿ ಕಾಡಿಗೆ ಹಚ್ಚಬೇಕು, ಮಾಡರ್ನ್ ಲುಕ್ ಯಾವ ರೀತಿಯಲ್ಲಿ ಕಾಡಿಗೆ ಅಲಂಕಾರ ಮಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳಲು ಮುಂದೆ ಓದಿ:

ಬೇಸಿಕ್ ಕಜಲ್
ಈ ರೀತಿಯ ಕಾಜಲ್ ನಿಮಗೆ ಸಾಂಪ್ರದಾಯಕವಾದ ಲುಕ್ ನೀಡುತ್ತದೆ. ಈ ರೀತಿ ಕಾಜಲ್ ಹಾಕಿದರೆ ವಿಶೇಷ ಅನಿಸದಿದ್ದರೂ ನಿಮ್ಮ ಮುಖಕ್ಕೆ ವಿಶೇಷ ಕಳೆಯನ್ನು ನೀಡುವುದಂತು ನಿಜ.

ಕಣ್ಣಿನ ಮೇಲ್ಭಾಗಕ್ಕೆ ಮಾತ್ರ ಕಾಜಲ್
ಈ ರೀತಿ ಕಾಜಲ್ ಹಚ್ಚಿದರೆ ಅದು ನಿಮಗೆ ಫಾರ್ಮಲ್ ಲುಕ್ ನೀಡುವುದು. ಫಾರ್ಮಲ್ ಡ್ರೆಸ್ ಧರಿಸಿದಾಗ ಕಾಜಲ್ ಅನ್ನು ಈ ರೀತಿಯಲ್ಲಿ ಹಾಕುವುದೇ ಸೂಕ್ತ.

ಕಣ್ಣಿನ ಕೆಳ ಭಾಗಕ್ಕೆ ಸ್ವಲ್ಪ ಗಾಢವಾಗಿ ಹಾಕುವುದು
ಹೆಚ್ಚೇನು ಮೇಕಪ್ ಮಾಡದೆ ಆಕರ್ಷಕವಾಗಿ ಕಾಣಬೇಕೆಂದು ಬಯಸುವುದಾದರೆ ಈ ರೀತಿಯಲ್ಲಿ ಕಾಡಿಗೆ ಹಚ್ಚಿ, ಕಣ್ಣಿನ ರೆಪ್ಪೆಗಳಿಗೂ eyelashes ಹಚ್ಚಿದರೆ ಆಕರ್ಷಕವಾಗಿ ಕಾಣುವಿರಿ.

ಸ್ಮೋಕಿ ಲುಕ್
ಈ ಲುಕ್ ಕಣ್ಣಿನ ಮೇಲ್ಭಾಗಕ್ಕೆ ಐ ಲೈನರ್ ಹಚ್ಚಿ, ನಂತರ ಸ್ವಲ್ಪ ಪೆಟ್ರೋಲಿಯಂ ಜೆಲ್ಲಿ ತೆಗೆದು ಸ್ಕ್ರಬ್ ಮಾಡಿದರೆ ಸ್ಮೋಕಿ ಲುಕ್ ನಿಮ್ಮದಾಗುವುದು.

ಸ್ಟಾರ್ಕ್ ಲುಕ್
ನಿಮ್ಮ ಕಣ್ಣುಗಳು ಎದ್ದು ಕಾಣುವಂತೆ ಮಾಡಲು ಈ ರೀತಿಯಲ್ಲಿ ಕಾಜಲ್ ಹಚ್ಚಿ. ಕಣ್ಣಿನ ಮೇಲ್ಭಾಗಕ್ಕೆ ಮತ್ತು ಕೆಳ ಭಾಗಕ್ಕೆ ಸ್ವಲ್ಪ ಡಾರ್ಕ್ ಆಗಿ ಕಾಜಲ್ ಹಚ್ಚಿದರೆ ನಿಮ್ಮ ಕಣ್ಣಿನ ಆಕರ್ಷಣೆ ಹೆಚ್ಚುವುದು.

ಸ್ಟೈಲೀಶ್ ಲುಕ್ ಆಗಿ
ಕಣ್ಣಿನ ಕಾಡಿಗೆ ಕಪ್ಪಗೆ ಎದ್ದು ಕಾಣುವಂತೆ ಮಾಡಲು 2-3 ಬಾರಿ ಕಾಜಲ್ ಹಚ್ಚಬೇಕು, ಆಗ ಮಾತ್ರ ಕಣ್ಣು ಡಾರ್ಕ್ ಆಗಿ ಆಕರ್ಷಕವಾಗಿ ಕಾಣುವುದು.

ಗೋಥಿಕ್ ಲುಕ್
ಗೋಥಿಕ್ ಲುಕ್ ನಿಮ್ಮದಾಗಬೇಕಾದರೆ ಕಾಜಲ್ ಅನ್ನು ಡಾರ್ಕ್ ಆಗಿ ಹಚ್ಚಿ, ಡಾರ್ಕ್ ಬಣ್ಣದ ಐ ಶ್ಯಾಡೋ ಹಚ್ಚಬೇಕು. ಮಾಡರ್ನ್ ಡ್ರೆಸ್ ಗೆ ಈ ರೀತಿಯ ಕಣ್ಣಿನ ಮೇಕಪ್ ತುಂಬಾ ಆಕರ್ಷಕವಾಗಿ ಕಾಣುವುದು.

ವಿಂಗ್ಡ್ ಲುಕ್
ಈ ಐ ಫ್ಯಾಷನ್ ಮರುಕಳಿಸುತ್ತಿದೆ. ಕಣ್ಣಿಗೆ ಗಾಢವಾಗಿ ಕಾಜಲ್ ಹಚ್ಚಿ, ಐ ಲ್ಯಾಶಶ್ ಬಳಸಿ, ಕಣ್ಣಿನ ರೆಪ್ಪೆಗಳನ್ನು ಸ್ವಲ್ಪ ಮೇಲ್ಮುಖವಾಗಿರುವಂತೆ ಮಾಡುವುದು.

ಡಾಯಿ ಕಣ್ಣುಗಳು
ಈ ರೀತಿಯ ಕಣ್ಣಿನ ಅಲಂಕಾರ 70-80 ದಶಕದಲ್ಲಿ ತುಂಬಾ ಫೇಮಸ್ ಆಗಿತ್ತು. ಈಗ ಈ ಫ್ಯಾಷನ್ ಮತ್ತೆ ಟ್ರೆಂಡ್ ನಲ್ಲಿದ್ದು ಸ್ವಲ್ಪ u ರೀತಿಯಲ್ಲಿ ಹಚ್ಚುವ ಈ ಕಾಜಲ್ ನಿಮಗೆ ಆಕರ್ಷಕ ಲುಕ್ ನೀಡುವುದು.

ಮೇಲ್ಮುಖ ಮತ್ತು ಕೆಳ ಮುಖವಾಗಿ ಕಣ್ಣು ರೆಪ್ಪೆಗಳ ಅಲಂಕಾರ
ಈ ಅಲಂಕಾರದಲ್ಲಿ ಕಣ್ಣಿನ ಮೇಲ್ಭಾಗದ ರೆಪ್ಪೆಯನ್ನು ಮೇಲ್ಮುಖಕ್ಕೆ ಮತ್ತು ಕಣ್ಣಿನ ಕೆಳ ಭಾಗದ ರೆಪ್ಪೆಯನ್ನು ಕೆಲ ಭಾಗಕ್ಕೆ ಸ್ವಲ್ಪ ಸುರುಳಿಯಾಕಾರದಲ್ಲಿ ಮಾಡಲಾಗುವುದು. ನಿಮ್ಮ ಸಾಂಪ್ರದಾಯಕವಾದ ಲುಕ್ ಈ ರೀತಿಯ ಕಣ್ಣಿನ ಅಲಂಕಾರದಿಂದ ಮತ್ತಷ್ಟು ಹೆಚ್ಚುವುದು.



Click it and Unblock the Notifications