Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಇಷ್ಟವಾಯಿತು ಎಂದು ನೇಲ್ ಪಾಲಿಷ್ ಕೊಳ್ಳಬೇಡಿ!

ಆದ್ದರಿಂದ ನೇಲ್ ಪಾಲಿಷ್ ಕೊಳ್ಳುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
1. ತ್ವಚೆ ಬಣ್ಣ: ಆಕರ್ಷಕವಾಗಿ ಕಾಣಬೇಕೆಂದರೆ ತ್ವಚೆ ಬಣ್ಣಕ್ಕೆ ಸರಿಹೊಂದುವ ನೇಲ್ ಪಾಲಿಷ್ ಕೊಳ್ಳಬೇಕು. ಬಿಳಿ ಮೈ ಬಣ್ಣದವರಿಗೆ ಗಾಢವಾದ ಬಣ್ಣದ ನೇಲ್ ಪಾಲಿಷ್ ಆಕರ್ಷಕವಾಗಿ ಕಾಣುತ್ತದೆ. ಅದರಲ್ಲೂ ಸ್ವಲ್ಪ ನೀಲಿ ಅಥವಾ ಮೋಡ ಬಣ್ಣವಿರುವ ನೇಲ್ ಪಾಲಿಷ್ ಆಕರ್ಷಕವಾಗಿ ಕಾಣುತ್ತದೆ. ಸಾಧಾರಣ ಮೈ ಬಣ್ಣ ಇರುವವರೆಗೆ ಕೆಂಪು, ಮೆರೋನ್ ಬಣ್ಣದ ನೇಲ್ ಪಾಲಿಷ್ ಆಕರ್ಷಕವಾಗಿ ಕಾಣುತ್ತದೆ. ಕೃಷ್ಣ ಮೈ ಬಣ್ಣದವರು ಕಪ್ಪು ಬಣ್ಣದ ನೇಲ್ ಪಾಲಿಷ್ ಹೊರತು ಪಡಿಸಿ ಯಾವುದೇ ಬಣ್ಣದ ನೇಲ್ ಹಾಕಬಹುದು, ಆದರೆ ತುಂಬಾ ತೆಳು ಬಣ್ಣದ ನೇಲ್ ಪಾಲಿಷ್‌ಗಿಂತ ಸ್ವಲ್ಪ ಗಾಢ ಬಣ್ಣದ ನೇಲ್ ಪಾಲಿಷ್ ಆಕರ್ಷಕವಾಗಿ ಕಾಣುವುದು.
2. ಡ್ರೆಸ್ಸಿಂಗ್: ಕೆಲ ಸೌಂದರ್ಯ ತಜ್ಞರು ಧರಿಸಿರುವ ಬಟ್ಟೆಯ ಬಟ್ಟೆಯ ಬಣ್ಣದ್ದೇ ನೇಲ್ ಪಾಲಿಷ್ ಹಾಕಿದರೆ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ ಎಂಬ ಅಭಿಪ್ರಾಯ ಹೇಳಿದರೆ ಮತ್ತೆ ಕೆಲವರು ಡ್ರೆಸ್ ಬಣ್ಣದ ನೇಲ್ ಪಾಲಿಷ್ ಕೂಡ ಲುಕ್ ಕೊಡುತ್ತದೆ ಎಂದು ಹೇಳುತ್ತಾರೆ. ಚಪ್ಪಲಿಗೆ ಹೊಂದುವ ಬಣ್ಣದ ಅಥವಾ ಟಾಪ್ ಅಥವಾ ಶರ್ಟ್ ಗೆ ಹೊಂದುವ ಬಣ್ಣದ ನೇಲ್ ಪಾಲಿಷ್ ಆಕರ್ಷಕವಾಗಿ ಕಾಣುವುದು.
5. ಮೇಕಪ್: ಒಂದೇ ಬಣ್ಣದ ಮೇಕಪ್ ಮತ್ತು ಲಿಪ್‌ಸ್ಟಿಕ್ ಬಳಸದಿರುವುದು ಒಳ್ಳೆಯದು. ಅದರಲ್ಲೂ ಈಗೀನ ಟ್ರೆಂಡ್ ನಂತೆ ನೇಲ್ ಪಾಲಿಷ್ ನಲ್ಲಿ ಆಕರ್ಷಕ ವಿನ್ಯಾಸ ಮಾಡಿದರೆ ಮತ್ತಷ್ಟು ಫ್ಯಾಷನೇಬಲ್ ಆಗಿ ಕಾಣುವುದು.
5. ಸಮಯ-ಸಂದರ್ಭ: ಪಾರ್ಟಿಗಳಿಗೆ ಹೋಗುವುದಾದರೆ ಅಥವಾ ಪಿಕ್‌ನಿಕ್ ಹೋಗುವುದಾದರೆ ನಿಮಗೆ ಇಷ್ಟವಾದ ಬಣ್ಣದ ನೇಲ್ ಪಾಲಿಷ್ ನಲ್ಲಿ ನಿಮಗೆ ಇಷ್ಟ ಬಂದ ವಿನ್ಯಾಸದಲ್ಲಿ ಹಾಕಿ ಕೊಂಡು ಹೋಗಬಹುದು. ರಾತ್ರಿ ಪಾರ್ಟಿಗೆಯಾದರೆ ಕೆಂಪು, ಮೆರೋನ್ ಬಣ್ಣದ ನೇಲ್ ಪಾಲಿಷ್ ಆಕರ್ಷಕವಾಗಿ ಕಾಣುತ್ತದೆ. ಆಪೀಸ್ ಗೆ ಹೋಗುವಾಗ , ಮೀಟಿಂಗ್ ಗೆ ಹೋಗುವಾಗ ತುಂಬಾ ಗಾಢವಾದ ಬಣ್ಣದ ನೇಲ್ ಪಾಲಿಷ್ ಬಳಸದಿರುವುದು ಒಳ್ಳೆಯದು.
6. ಕಾಲಗಳು: ಕಾಲಕ್ಕೆ ತಕ್ಕಂತೆ ನೇಲ್ ಪಾಲಿಷ್ ಬಳಸಬೇಕು ಎಂಬ ವಿಷಯ ನಿಮಗೆ ಗೊತ್ತೇ? ಚಳಿಗಾಲಕ್ಕೆ ಗಾಢ ಬಣ್ಣದ ನೇಲ್ ಪಾಲಿಷ್, ಬೇಸಿಗೆಯಲ್ಲಿ ಹೊಳೆಯುವ ಗಾಢ ಬಣ್ಣದ ನೇಲ್ ಪಾಲಿಷ್, ಮಳೆ ಕಾಲಕ್ಕೆ ಕಂದು, ಕೆಂಪು ಹಾಗೂ ಕೆಲವೊಂದು ಸಾಧಾರಣ ಬಣ್ಣದ ನೇಲ್ ಪಾಲಿಷ್ ಹಾಕಿದರೆ ಆಕರ್ಷಕವಾಗಿ ಕಾಣುವುದು.
7. ಯಾವುದನ್ನು ಕೊಳ್ಳಬಾರದು: ಯಾವ ರೀತಿಯ ನೇಲ್ ಪಾಲಿಷ್ ಕೊಳ್ಳಬೇಕು ಎಂಬ ಹಾಗೆ ಯಾವ ಬಣ್ಣದ ನೇಲ್ ಪಾಲಿಷ್ ಸೂಕ್ತವಲ್ಲ ಎಂಬ ಅಂಶತಿಳಿದಿರಬೇಕು. ಬಿಳಿ ಬಣ್ಣದವರು ತುಂಬಾ ಕಡು ಬಣ್ಣದ ನೇಲ್ ಪಾಲಿಷ್ ಹಾಕಲು ಹೋಗಬಾರದು, ಅಗಲ ಉಗುರಿನವರು ತುಂಬಾ ತೆಳು ಬಣ್ಣದ ನೇಲ್ ಪಾಲಿಷ್ ಬಳಸದಿರುವುದು ಒಳ್ಳೆಯದು.
8. ನಿಮ್ಮ ಮೆಚ್ಚಿನ ಬಣ್ಣ: ಈ ಮೇಲಿನ ಅಂಶಗಳನ್ನು ನೋಡಿದ ಮೇಲೆ ಯಾವ ಬಣ್ಣ ನಿಮಗೆ ಸೂಕ್ತ ಎಂದು ತಿಳಿದಿರುತ್ತದೆ. ಒಂದು ವೇಳೆ ಈ ನೇಲ್ ಪಾಲಿಷ್ ನಿಯಮದಲ್ಲಿ ನಿಮಗೆ ತುಂಬಾ ಇಷ್ಟವಿರುವ ಬಣ್ಣವನ್ನೇ ನಿಮಗೆ ಸೂಕ್ತವಾಗದ ಬಣ್ಣ ಹೇಳಿದ್ದರೆ ಚಿಂತೆ ಮಾಡಬೇಡಿ! ನಿಮ್ಮ ಇಷ್ಟದ ನೇಲ್ ಪಾಲಿಷ್ ಹಾಕಿ ಅದಕ್ಕೆ ನಿಮಗೆ ಸೂಕ್ತವಾಗುವ ಬಣ್ಣದಿಂದ ತೆಳುವಾದ ಶೇಡ್ ಕೊಡಿ. ಅಥವಾ ಇಷ್ಟದ ಬಣ್ಣ ಹಚ್ಚಿ ಸ್ಪಾರ್ಕಲ್ ಹಾಕಿದರೆ ಆಕರ್ಷಕವಾಗಿ ಕಾಣುತ್ತದೆ.



Click it and Unblock the Notifications