Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೆಳ್ಳಗೆ ಕಾಣ ಬಯಸುವುದಾದರೆ ಡ್ರೆಸ್ಸಿಂಗ್ ಹೀಗಿರಲಿ
ದೇಹದ ಆಕಾರ ಹೇಗಿರುತ್ತದೆ ಅದರಂತೆ ನಾವು ದಪ್ಪ ಅಥವಾ ಸಣ್ಣಗೆ ಕಾಣಿಸುತ್ತೇವೆ. ಆದರೆ ಕೆಲವೊಂದು ಡ್ರೆಸ್ ಧರಿಸಿದರೆ ನಿಮಗೆ ಅನಿಸಬಹುದು ಈ ಡ್ರೆಸ್‌ನಲ್ಲಿ ಸಣ್ಣ ಕಾಣುಸುತ್ತಿದ್ದೇನೆ ಮತ್ತೊಂದು ಡ್ರೆಸ್‌ನಲ್ಲಿ ತುಂಬಾ ದಪ್ಪ ಕಾಣಿಸುತ್ತಿದ್ದೇನೆ ಅಂತ ಅನಿಸುತ್ತಿರುತ್ತದೆ. ಹೌದು ಡ್ರೆಸ್‌ಗಳ ವಿನ್ಯಾಸವು ಕೂಡ ನಿಮ್ಮನ್ನು ದಪ್ಪಗೆ ಅಥವಾ ಸಣ್ಣಗೆ ಕಾಣಿಸುವಂತೆ ಮಾಡುತ್ತದೆ. ಹೆಚ್ಚಿನವರು ಸಪೂರ ಸುಂದರಿ ಅನ್ನಿಸಿಕೊಳ್ಳಬೇಕೆಂದು ಇಷ್ಟಪಡುತ್ತಾರೆ.
ಆದ್ದರಿಂದ ತೆಳ್ಳಗೆ ಕಾಣಿಸಬೇಕೆಂದು ಬಯಸುವವರು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.

1. ಉದ್ದ ಗೆರೆಯಿರುವ ಡ್ರೆಸ್ : ಉದ್ದ ಗೆರೆಯಿರುವ ಡ್ರೆಸ್ ಧರಿಸಿದರೆ ನಿಮ್ಮನ್ನು ಎತ್ತರ ಮತ್ತು ತೆಳ್ಳಗೆ ಕಾಣಿಸುವಂತೆ ಮಾಡಿಸುತ್ತದೆ. ಸ್ವಲ್ಪ ಬಿಗಿಯಾಗಿರುವ ಉದ್ದ ಗೆರೆಯಿರುವ ಶರ್ಟ್ ಮತ್ತು ಪ್ಯಾಂಟ್ ಧರಿಸಿದರೆ ತೆಳ್ಳಗೆ ಮತ್ತು ಸ್ಟೈಲಿಷ್ ಆಗಿ ಕಾಣುವಿರಿ. ಆಕರ್ಷಕ ಡ್ರೆಸ್ ಮತ್ತು ಕುತ್ತಿಗೆಗೆ ಸ್ಟೈಲಿಷ್ ಸರ ಧರಿಸಿದರೆ ನೋಡುಗರ ಗಮನ ನಿಮ್ಮ ಅಲಂಕಾರದ ಮೇಲೆ ಹೋಗುತ್ತದೆ.
2. ಅಡ್ಡ ಗೆರೆ : ಅಡ್ಡ ಗೆರೆಯಿರುವ ಡ್ರೆಸ್‌ಗೆ ಕಾಲರ್ ಇದ್ದರೆ ಆ ಡ್ರೆಸ್ ಧರಿಸಿದರೆ ದಪ್ಪವಾಗಿ ಕಾಣುವಿರಿ. ಆದರೆ ಅಡ್ಡ ಗೆರೆಯ v ಶೇಪ್ ನೆಕ್ ವಿನ್ಯಾಸವಿರುವ ಗೌನ್ ಹಾಕಿ ಎತ್ತರದ ಚಪ್ಪಲಿ ಧರಿಸಿದರೆ ತೆಳ್ಳಗೆ ಕಾಣಿಸುವಿರಿ. ಫ್ಯಾಬ್ರಿಕ್ ಬಟ್ಟೆಯ ಅಡ್ಡ ಗೆರೆಯಿರುವ ಡ್ರೆಸ್ ಧರಿಸಿದರೆ ದಪ್ಪ ಕಾಣಿಸುವುದಿಲ್ಲ.
3. ಓರೆ ಗೆರೆ: ಓರೆಯಾಗಿ ಗೆರೆಯಿರುವ ಡ್ಎರಸ್ ಧರಿಸಿದರೆ ಕೂಡ ತೆಳ್ಳಗೆ ಕಾಣಸಬಹುದು. ಈ ತರಹದ ಡ್ರೆಸ್ ಗಳಲ್ಲಿ ಉದ್ದ ಮತ್ತು ಅಡ್ಡ ಗೆರೆಯಿರುವ ಡ್ರೆಸ್ ಕೂಡ ಆಕರ್ಷಕವಾಗಿ ಕಾಣುವುದು. ಫ್ಯಾಬ್ರಿಕ್ ಬಟ್ಟೆಗಳನ್ನು ಧರಿಸಿದರೆ ತೆಳ್ಳಗೆ ಕಾಣಿಸಿಬಹುದು.
4. ದೊಡ್ಡ ವಿನ್ಯಾಸವಿರುವ ಡ್ರೆಸ್ : ದೊಡ್ಡ ಹೂಗಳಿರುವ ಅಥವಾ ದೊಡ್ಡದಾದ ವಿನ್ಯಾಸವಿರುವ ಡ್ರೆಸ್ ಧರಿಸಿದರೆ ಮತ್ತಷ್ಟು ದಪ್ಪವಾಗಿ ಕಾಣುವಿರಿ. ಆದ್ದರಿಂದ ಚಿಕ್ಕ ವಿನ್ಯಾಸವಿರುವ ಡ್ರೆಸ್ ಗಳನ್ನು ಧರಿಸಿದರೆ ತೆಳ್ಳಗೆ ಕಾಣಿಸಿಬಹುದು.
ಸಲಹೆ: ಗೆರೆಯಿರುವ ಡ್ರೆಸ್‌ಗಳನ್ನು ಕೊಳ್ಳುವಾಗ ತುಂಬಾ ದಪ್ಪದ ಗೆರೆಯಿರುವ ಡ್ರೆಸ್ ಕೊಂಡರೆ ಅಗಲವಾಗಿ ಕಾಣುವಿರಿ. ಆದ್ದರಿಂದ ಸಣ್ಣಗೆ ಕಾಣಬೇಕೆಂದರೆ ಸಣ್ಣ ಗೆರೆಯಿರುವ ಡ್ರೆಸ್ ಗಳ ಆಯ್ಕೆ ಒಳ್ಳೆಯದು.



Click it and Unblock the Notifications
