Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಸ್ಕರಾ ಹಚ್ಚುವ ಕಲೆ ಗೊತ್ತಿದೆಯೇ?

ಈ ರಗಳೆ ಬೇಡವೆಂದು ಹೆಚ್ಚಿನವರು ಹಚ್ಚಲು ಹೋಗುವುದೇ ಇಲ್ಲ. ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಮಸ್ಕರಾ ಹಚ್ಚಿದಾಗ ಅದು ಹರಡದೆ ಮುಖದ ಅಂದ ಹೆಚ್ಚಿಸುವಂತೆ ಮಾಡುವುದು.
1. ಮಸ್ಕರಾ ಹಚ್ಚುವ ಮೊದಲು ಬೇರೆ ಮೇಕಪ್ ಮಾಡಿರಬೇಕು. ಮುಖಕ್ಕೆ ಪೌಂಡೇಶನ್ ಕ್ರೀಮ್, ಐಶ್ಯಾಡೊ, ಐಲೈನರ್ ಎಲ್ಲಾ ಹಾಕಿರಬೇಕು. ನಂತರ ಮಸ್ಕರಾ ಹಚ್ಚುವ ಮೊದಲು ಕೈಯಿಂದ ಕಣ್ಣಿನ ರೆಪ್ಪೆಯನ್ನು ಸ್ವಲ್ಪ ಸುರುಳಿ ಮಾಡಿ.
2. ಈಗ ಮಸ್ಕರಾವನ್ನು ಸರಿಯಾಗಿ ಅಲುಗಾಡಿಸಿ ನಂತರ ಅದನ್ನು ಓಪನ್ ಮಾಡಿ ಅದರೊಳಗಿನಿಂದ ಬ್ರೆಷ್ ತೆಗೆಯಬೇಕು. ಹೀಗೆ ತೆಗೆಯುವಾಗ ಅಧಿಕವಿರುವ ಮಸ್ಕರಾವನ್ನು ಮಸ್ಕರಾ ಡಬ್ಬಿಗೆ ಉಜ್ಜಬೇಕು.
3. ಈಗ ಕನ್ನಡಿ ಮುಂದೆ ನಿಂತು ಮಸ್ಕರಾದಿಂದ ಕಣ್ಣು ರೆಪ್ಪೆಗೆ ಹಚ್ಚಬೇಕು. ಹೀಗೆ ಹಚ್ಚುವಾಗ ಕಣ್ಣಿನ ಮೇಲ್ಬಾಗಕ್ಕೆ ಹಚ್ಚಿ. ಪ್ರತಿಯೊಂದು ಕಣ್ಣಿನ ರೆಪ್ಪೆಗೆ ಮಸ್ಕರಾ ತಾಗಿರಬೇಕು.
4. ನಂತರ ಕಣ್ಣು ರೆಪ್ಪೆ ಬಾಚಲು ಸಿಗುವ ಚಿಕ್ಕ ಬ್ರೆಷ್ ನಿಂದ ಬಾಚಬೇಕು.
5. ಈಗ ಮಸ್ಕರಾವನ್ನು ಲಂಬಾಕಾರವಾಗಿ ಹಿಡಿದು ಕಣ್ಣಿನ ರೆಪ್ಪೆಯ ಮೇಲೆ ಹಚ್ಚಬೇಕು. ಆಗ ಕಣ್ಣಿನ ರೆಪ್ಪೆ ಗಾಢವಾಗಿ ಆಕರ್ಷಕವಾಗಿ ಕಾಣುವುದು.
6. ನಂತರ ಮೇಕಪ್ ರಿಮೋವರ್ ಗೆ ಕಿವಿಗೆ ಹಾಕು ಹತ್ತಿಯ ಬಡ್ಸ್ ನಿಂದ ಅಧಿಕ ಮಸ್ಕರಾವನ್ನು ತೆಗೆದು ಕೈಬೆರಳಿನಿಂದ ಮೆಲ್ಲನೆ ಕಣ್ಣು ರೆಪ್ಪೆಗಳನ್ನು ಸ್ವಲ್ಪ ಮೇಲ್ಭಾಗಕ್ಕೆ ಮಾಡಿದರೆ ಮಸ್ಕರಾ ಹರಡುವುದಿಲ್ಲ ಮತ್ತು ಮುಖದ ಚೆಲುವನ್ನು ಹೆಚ್ಚಿಸುತ್ತದೆ.
ಪಾರ್ಟಿಗಳಿಗೆ ಹೋಗುವ ಮಸ್ಕರಾದಿಂದ ನಿಮ್ಮ ಅಂದ ಹೆಚ್ಚಿಸಿಕೊಳ್ಳಬಯಸಿದರೆ ಇಲ್ಲಿ ಹೇಳಿರುವಂತೆ ಹಚ್ಚಿದೆರ ಆಕರ್ಷಕವಾಗಿ ಕಾಣುವಿರಿ.



Click it and Unblock the Notifications
