Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೀವೆ ತಯಾರಿಸಬಹುದು ಗುಣಮಟ್ಟದ ಲಿಪ್ ಗ್ಲೋಸ್
ತುಟಿಗೆ ಲಿಪ್ ಗ್ಲೋಸ್ ಹಚ್ಚಿದಾಗ ತುಟಿ ಹೊಳೆಯುವುದರಿಂದ ಮುಖ ಆಕರ್ಷಕವಾಗಿ ಕಾಣುತ್ತದೆ. ಈ ರೀತಿಯ ಲಿಪ್ ಗ್ಲೋಸ್ ಕೊಳ್ಳುವಾಗ ಉತ್ತಮ ಬ್ರಾಂಡ್ನ ಲಿಪ್ ಗ್ಲೋಸ್ ಕೊಳ್ಳಬೇಕು. ಕಡಿಮೆ ಬೆಲೆಯಲ್ಲಿ ದೊರೆಯುವ ಲಿಪ್ ಗ್ಲೋಸ್ ಬಳಸಿದರೆ ತುಟಿ ಹಾಳಾಗುವುದು. ತುಂಬಾ ಬೆಲೆ ತೆತ್ತು ಕೊಳ್ಳಲು ಇಷ್ಟವಿಲ್ಲದಿದ್ದರೆ ಉತ್ತಮ ಗುಣಮಟ್ಟದ ಲಿಪ್ ಗ್ಲೋಸ್ಯನ್ನು ಮನೆಯಲ್ಲಿಯೆ ತಯಾರಿಸಬಹುದು. ತಯಾರಿಸುವ ವಿಧಾನ ನೋಡಿ ಇಲ್ಲಿದೆ.

1. 1/2 ಬೀಟ್ರೂಟ್ಯನ್ನು ಚೆನ್ನಾಗಿ ಮಿಕ್ಸಿಯಲ್ಲಿ ಅರೆದು ಅದರ ರಸವನ್ನು ಸೋಸಿಡಬೇಕು.
2. 2 ಚಮಚ ಜೇನಿನ ಮೇಣವನ್ನು ಕರಗಿಸಬೇಕು. ಮೇಣವನ್ನು ಬಿಸಿ ಮಾಡುವಾಗ ಗಟ್ಟಿಯಾಗದಂತೆ ಕರಗಿಸುತ್ತಾ ಇರಬೇಕು. ಜೇನಿನ ಮೇಣ ಚೆನ್ನಾಗಿ ಕರಗಿದ ಮೇಲೆ ಉರಿಯಿಂದ ತೆಗೆಯಬೇಕು.
3. ಇದಕ್ಕೆ 1 ಚಮಚ ಹರಳೆಣ್ಣೆ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
4. ಈಗ ಬೀಟ್ರೂಟ್ ರಸವನ್ನು ಮೇಣದ ಮಿಶ್ರಣದ ಬಿಸಿಯಾಗಿರುವಾಗಲೆ ಬೆರೆಸಬೇಕು. ಹೀಗೆ ಮಾಡಿದರೆ ಗುಣಮಟ್ಟದ ಲಿಪ್ ಗ್ಲೋಸ್ ರೆಡಿ.
5. ನಂತರ ಅದನ್ನು ಒಂದು ಚಿಕ್ಕ ಡಬ್ಬದಲ್ಲಿ ಶೇಖರಿಸಿಟ್ಟು ಬಳಸಬಹುದು.
ಸಲಹೆ: * ಜೇನು ಮತ್ತು ವೆನಿಲ್ಲಾ ರಸ ಸೇರಿಸಿದರೆ ಒಳ್ಳೆಯ ವಾಸನೆ ಕೂಡ ಇರುತ್ತದೆ.
*ಜೇನಿನ ಮೇಣ ಸಿಗದಿದ್ದರೆ ಪೆಟ್ರೋಲಿಯಂ ಜೆಲ್ಲಿಯಿಂದ ಕೂಡ ತಯಾರಿಸಬಹುದು.



Click it and Unblock the Notifications
