Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಖದ ಅಂದ ಹೆಚ್ಚಿಸಲು ಐಲೈನರ್ ಇದ್ದರೆ ಸಾಕು

ಈ ರೀತಿ ಕಣ್ಣು ಮತ್ತು ಉಬ್ಬಿನ ಮೇಕಪ್ ಗೆ ಅನೇಕ ಸಾಧನಗಳಿವೆ. ಆದರೆ ಇವುಗಳೆನ್ನೆಲ್ಲಾ ದೂರ ಪ್ರಯಾಣ ಮಾಡುವಾಗ ಎಲ್ಲಾ ಮೇಕಪ್ ಕಿಟ್ಸ್ ಜೊತೆಯಲ್ಲಿಯೆ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮುಖಕ್ಕೆ ಹಚ್ಚುವ ಕ್ರೀಮ್ ಮತ್ತು ಐಲೈನರ್ ಮಾತ್ರ ಬಳಸಿ ಮುಖದ ಅಂದ ಹೆಚ್ಚಿಸಬಹುದು. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ.
ಕಣ್ಣಿಗೆ ಮಸ್ಕರಾ ರೀತಿ ಬಳಸಬಹುದು: ಐಲೈನರ್ ಬಳಸಿ ಕಣ್ಣಿನ ಮೇಕಪ್ ಮುಗಿಸಬಹುದು. ಇದನ್ನು ಕಣ್ಣು ರೆಪ್ಪೆಗಳ ಅಲಂಕಾರಕ್ಕೆ ಮಸ್ಕರಾ ರೀತಿ ಉಪಯೋಗಿಸಬಹುದು. ಕಾಜಲ್ ರೀತಿ ಕೂಡ ಬಳಸಬಹುದು.
ಬಿಂದಿ: ಐಲೈನರ್ ಬಳಸಿ ಆಕರ್ಷಕವಾದ ಬಿಂದಿಗಳನ್ನು ಹಾಕಬಹುದು. ಐಲೈನರ್ ಬಳಸಿ ಬಿಂದಿ ಹಾಕಿದರೆ ಅದು ಹರಡುತ್ತದೆ ಎಂಬ ಭಯವಿರುವುದಿಲ್ಲ.
ಹುಬ್ಬುಗಳ ಅಲಂಕಾರ: ತೆಳುವಾದ ಹುಬ್ಬುಗಳಿದ್ದರೆ ಐಲೈನರ್ ಅನ್ನು ಹುಬ್ಬುಗಳಿಗೆ ತೆಳುವಾಗಿ ಹಚ್ಚಬೇಕು. ಗಾಢವಾಗಿ ಹಚ್ಚಿದರೆ ವಿಚಿತ್ರವಾಗಿ ಕಾಣಬಹುದು. ಆದ್ದರಿಂದ ಹಚ್ಚುವಾಗ ಸ್ವಲ್ಪ ಜಾಗ್ರತೆವಹಿಸಿ ಹಚ್ಚಬೇಕು.
ಬಿಳಿ ಕೂದಲನ್ನು ಮರೆಮಾಚಲು: 3-4 ನಾಲ್ಕು ಬಿಳಿ ಕೂದಲಿದ್ದರೆ ಅದಕ್ಕಾಗಿ ಡೈ ಹಚ್ಚಲು ಇಷ್ಟವಾಗುವುದಿಲ್ಲ, ಆ ಕೂದಲನ್ನು ಕಿತ್ತು ಹಾಕಬಾರದು, ಏಕೆಂದರೆ ಬಿಳಿಕೂದಲನ್ನು ಕೀಳುತ್ತಾ ಹೋದರೆ ಕೂದಲಿಗೆ ಹಾನಿಯಾಗುತ್ತದೆ. ಈ ಸಮಯದಲ್ಲಿ ಐಲೈನರ್ ಬಳಸಿ ಆ ಬಿಳಿ ಕೂದಲನ್ನು ಮರೆ ಮಾಚಬಹುದು.
ಮುಖಕ್ಕೆ ಅಲಂಕಾರ ಮಾಡಿಕೊಳ್ಳುವಾಗ ಮುಖ್ಯವಾಗಿ ಕಣ್ಣಿನ ಅಲಂಕಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ಕಣ್ಣಿಗೆ ಅಲಂಕಾರ ಮಾಡಿ ತುಟಿಗೆ ಮಾಡದಿದ್ದರೂ ಆಕರ್ಷಕವಾಗಿ ಕಾಣಬಹುದು.



Click it and Unblock the Notifications
