Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಪಾರ್ಟಿ ಲುಕ್ ನೀಡುತ್ತೆ ಮೆಟಲ್ ಮೇಕಪ್

ಹಾಗಂತ ತುಂಬಾ ಗಾಢವಾದ ಮೇಕಪ್ ಮಾಡಿದರೆ ಮೇಕಪ್ ರಾಣಿ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆ! ಪಾರ್ಟಿಗೆ ತಕ್ಕ ಮೇಕಪ್ ಮಾಡಬೇಕು, ಆದರೆ ಅದು ಆಕರ್ಷಕವಾಗಿ ಕಾಣಬೇಕೆಂದು ಬಯಸುವುದಾದರೆ ಮೆಟಲ್ ಮೇಕಪ್ ಮಾಡಬಹುದು. ಈ ಮೆಟಲ್ ಮೇಕಪ್ ಮಾಡುವ ವಿಧಾನವನ್ನು ಇಲ್ಲಿ ಹೇಳಲಾಗಿದೆ ನೋಡಿ:
ಮೆಟಲ್ ಮೇಕಪ್
ಹೈಲೈಟರ್: ತುಂಬಾ ಜನರಿಗೆ ಹೈ ಲೈಟರ್ ಅನ್ನು ಹೇಗೆ ಉಪಯೋಗಿಸಬೇಕೆಂದು ಸಹ ಗೊತ್ತಿರುವುದಿಲ್ಲ. ಹೈಲೈಟರ್ ಅನ್ನು ಮೇಕಪ್ ಅನ್ನು ಹೈಲೈಟ್ ಮಾಡಲು ಬಳಸುತ್ತೇವೆ. ಮುಖದಲ್ಲಿ ಕೆನ್ನೆ ಆಕರ್ಷಕವಾಗಿ ಎದ್ದು ಕಾಣಲು ಈ ಹೈಲೈಟರ್ ಬಳಸಬಹುದು.
ಐ ಲೈನರ್: ಕಣ್ಣಿನ ಅಂದ ಹೆಚ್ಚಿಸುವಲ್ಲಿ ಐಲೈನರ್ ತುಂಬಾ ಪಾತ್ರವಹಿಸುತ್ತದೆ. ಅದರಲ್ಲೂ ಮೆಟಾಲಿಕ್ ಐ ಲೈನರ್ ಪಾರ್ಟಿಗಳಿಗೆ ಹೋಗುವಾಗ ಹಾಕಲು ಸೂಕ್ತವಾದ ಐ ಲೈನರ್ ಆಗಿದೆ. ಕಪ್ಪು ಬಣ್ಣದ ಐಲೈನರ್ ಹಾಕಿದ ಮೇಲೆ ಅದರ ಮೇಲೆ ಸಿಲ್ವರ್ (ಬೆಳ್ಳಿ) ಬಣ್ಣದ ಐಲೈನರ್ ಹಾಕಿದರೆ ಕಣ್ಣು ತುಂಬಾ ಆಕರ್ಷಕವಾಗಿ ಕಾಣುವುದು.
ಐ ಶ್ಯಾಡೊ: ಮೆಟಾಲಿಕ್ ಐ ಶ್ಯಾಡೊ ಬಳಸಬಹುದು, ಒಂದು ವೇಳೆ ಮೆಟಾಲಿಕ್ ಈ ಲೈನರ್ ಬಳಸದ್ದರೆ ಮೆಟಾಲಿಕ್ ಐಶ್ಯಾಡೊ ಬಳಸಬೇಡಿ. ಈ ಮೆಟಾಲಿಕ್ ಐಶ್ಯಾಡೊವನ್ನು ತುಂಬಾ ತೆಳುವಾಗಿ ಹಚ್ಚಿ. ಇಲ್ಲದಿದ್ದರೆ ನಾಟಕ ಮಾಡಲು ಹೊರಟಂತೆ ಕಾಣುವುದು.
ನೇಲ್ ಪಾಲೀಷ್: ಸಿಲ್ವರ್ ವೈಟ್ ಅಥವಾ ಗ್ರೇ (ಬಿಳಿ ಮಿಶ್ರಿತ ಬೆಳ್ಳಿ ಬಣ್ಣ) ಬಣ್ಣದ ನೇಲ್ ಪಾಲೀಷ್ ಬಳಸುವುದು ಈಗ ಫ್ಯಾಷನ್ ಆಗಿದ್ದು ಪಾರ್ಟಿಗೆ ಹೋಗುವಾಗ ಈ ರೀತಿಯ ನೇಲ್ ಪಾಲೀಷ್ ಹಾಕಿದರೆ ಆಕರ್ಷಕವಾಗಿ ಕಾಣಬಹುದು.
ಶಿಮ್ಮರ್ ಅಂಡ್ ಶೈನ್: ಒಂದು ವೇಳೆ ನಿಮಗೆ ಮೆಟಾಲಿಕ್ ಮೇಕಪ್ ವಿಧಾನ ಬಳಸಲು ಇಷ್ಟವಿಲ್ಲದಿದ್ದರೆ ಶಿಮ್ಮರ್ ಮತ್ತು ಶೈನ್ ಮೇಕಪ್ ಮಾಡಬಹುದು: ಸ್ವಲ್ಪ ಚಿನ್ನದ ಬಣ್ಣದ ಶಿಮ್ಮರ್ ಪೌಡರ್ ಸಿಗುತ್ತದೆ. ಮೇಕಪ್ ಆದ ಮೇಲೆ ಮುಖಕ್ಕೆ ಈ ಶಿಮ್ಮರ್ ಪೌಡರ್ ಹಚ್ಚಿದರೆ ತುಂಬಾ ಆಕರ್ಷಕವಾಗಿ ಕಾಣುವಿರಿ.



Click it and Unblock the Notifications
