Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಾಫ್ಟ್ ಐ ಮೇಕಪ್ -ಈಗೀನ ಟ್ರೆಂಡ್
ಕಣ್ಣಿಗೆ ಮೇಕಪ್ ಮಾಡಿದರೆ ಆಕರ್ಷಕವಾಗಿ ಕಾಣುವುದು. ಈ ರೀತಿ ಕಣ್ಣಿಗೆ ಮೇಕಪ್ ಮಾಡುವಾಗ ಯಾವ ರೀತಿಯ ಮೇಕಪ್ ನಮಗೆ ಸರಿಹೊಂದುತ್ತದೆ ಎಂದು ತಿಳಿದುಕೊಳ್ಳಬೇಕು. ಕೆಲವರಿಗೆ ಗಾಢ ಮೇಕಪ್ ಆಕರ್ಷಕವಾಗಿ ಕಂಡರೆ ಮತ್ತೆ ಕೆಲವರಿಗೆ ತೆಳು ಮೇಕಪ್ ಮಾಡಿದರೆ ಮಾತ್ರ ಆಕರ್ಷಕವಾಗಿ ಕಾಣುವುದು.
ಅದರಲ್ಲಿ ಈಗೀನ ಯುವತಿಯರು ಸಾಫ್ಟ್ ಕಣ್ಣಿನ ಮೇಕಪ್ ಮಾಡಲು ಇಷ್ಟ ಪಡುತ್ತಾರೆ. ಈ ಮೇಕಪ್ ಸ್ಟೈಲ್ ಅನ್ನು 60ನೇ ದಶಕದಲ್ಲಿ ಹೆಚ್ಚಾಗಿ ಮಾಡುತ್ತಿದ್ದರು. ಇದೀಗ ಈ ಮೇಕಪ್ ಪುನಃ ಟ್ರೆಂಡ್ ಆಗಿದೆ. ಸಾಫ್ಟ್ ಐ ಮೇಕಪ್ ಮಾಡುವುದು ಹೇಗೆ ಎಂದು ಇಲ್ಲಿ ಹೇಳಲಾಗಿದೆ ನೋಡಿ:

ಸಾಫ್ಟ್ ಐ ಮೇಕಪ್ ಗೆ ಟಿಪ್ಸ್:
* ಈ ಮೇಕಪ್ ನಲ್ಲಿ ಮೊದಲು ಮಸ್ಕರಾ ಬಳಸಬೇಕು. ಮಸ್ಕರಾದಿಂದ ಮೇಲಿನ ಕಣ್ಣಿನ ರೆಪ್ಪೆಗಳನ್ನು ತುಂಬಾ ಡಾರ್ಕ್ ಆಗಿ ಮಾಡಬೇಕು.
* ಹಾಗಂತ ತುಂಬಾ ಹಚ್ಚಬೇಡಿ ಹಾಗೂ ಮಸ್ಕರಾ ಹರಡದಂತೆ ಎಚ್ಚರವಹಿಸಿ. ನಂತರ ಬ್ರೆಷ್ ಬಳಸಿ ರೆಪ್ಪೆಯನ್ನು ಸ್ವಲ್ಪ ಮೇಲಕ್ಕೆ ಬಾಚಬೇಕು. ಆಗ ಮೇಲ್ಭಾಗಕ್ಕೆ ಸ್ವಲ್ಪ ಸುರುಳಿಯಾಗಿ ನಿಲ್ಲುತ್ತದೆ.
* ನಂತರ ಕಣ್ಣಿನ ಮೇಲಿನ ರೆಪ್ಪೆಗೆ ಐ ಲೈನರ್ ನಿಂದ ತೆಳ್ಳನೆಯ ಗೆರೆ ಎಳೆದು ನಂತರ ಕಣ್ಣಿನ ತದಿಗೆ ಬರುವಾಗ ಸ್ವಲ್ಪ ದಪ್ಪಮಾಡಬೇಕು.
* ಹೀಗೆ ಹಚ್ಚಲು ಐ ಲೈನರ್ ಪೆನ್ಸಿಲ್ ಬಳಸಿ, ಐ ಲೈನರ್ ಲಿಕ್ವಿಡ್ ಬೇಡ.
* ಐ ಲೈನರ್ ಪೆನ್ಸಿಲ್ ಲೈಟ್ ಬ್ರೌನ್ ಅಥವಾ ಕಾಫಿ ಬಣ್ಣದ್ದಾಗಿರಲಿ. ಐ ಲೈನರ್ ಪೆನ್ಸಿಲ್ ಅನ್ನು ಕಣ್ಣಿನ ಕೆಳ ಭಾಗಕ್ಕೆ ಹಚ್ಚಬೇಡಿ.
* ನಂತರ ನ್ಯೂಡ್ ಕಲರ್ ನ ಐ ಶ್ಯಾಡೋ ಬಳಸಿ. ಈ ಐ ಮೇಕಪ್ ಮುಖಕ್ಕೆ ಸಾಫ್ಟ್ ಲುಕ್ ನೀಡುತ್ತದೆ. ಈ ಐ ಮೇಕಪ್ ಮಾಡರ್ನ್ ಡ್ರೆಸ್ ಗೆ ಹಾಗೂ ಸಾಂಪ್ರದಾಯಕವಾದ ಉಡುಗೆಗೂ ಚೆನ್ನಾಗಿ ಒಪ್ಪುತ್ತದೆ.



Click it and Unblock the Notifications
