Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬಿಳಿ ಸೀರೆ ಆಕರ್ಷಕವಾಗಿ ಉಡುವ ರೀತಿ ಗೊತ್ತಿದೆಯೇ?
ಬಿಳಿ ಅನ್ನುವುದು ಶುಭದ ಸೂಚಕ. ಆದರೆ ಮದುವೆಯಾದ ಬಳಿಕ ಬಿಳಿ ಸೀರೆ ಧರಿಸಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಗಂಡನಿದ್ದರೆ ಬಿಳಿ ಸೀರೆ ಕಟ್ಟಬಾರದೆಂದು ಹಿರಿಯರ ಕಟ್ಟಪ್ಪಣೆ ಇರುತ್ತದೆ. ಆದರೆ ಆಕರ್ಷಕ ವಿನ್ಯಾಸ ಹೊಂದಿರುವ ಶುಭ್ರವಾದ ಬಿಳಿ ಸೀರೆಯನ್ನು ನೋಡುವಾಗ ಪ್ರತಿ ಹೆಣ್ಣಿನ ಮನಸ್ಸು ಶ್ವೇತಾಂಬರಿಯಾಗಿ ಕಾಣಲು ಇಷ್ಟಪಡುತ್ತದೆ. ಮುತ್ತೈದೆಯರು ಬರೀ ಬಿಳಿ ಸೀರೆ ಉಡಬಾರದು, ಆದರೆ ವಿನ್ಯಾಸವನ್ನು ಹೊಂದಿರುವ ಸೀರೆಯನ್ನು ಧರಿಸಬಹುದಾಗಿದೆ. ಬಿಳಿ ಸೀರೆಯನ್ನು ಉಡುವ ಕಲೆ ಗೊತ್ತಿರಬೇಕು. ಇಲ್ಲದಿದ್ದರೆ ನರ್ಸ್ ಗಳನ್ನು ನೋಡಿದಂತೆ ಕಾಣುವುದು. ಹಾಗಾದರೆ ಶ್ವೇತ ಸುಂದರಿಯಾಗಿ ಕಾಣಲು ಏನು ಮಾಡಬೇಕು ಎಂದು ತಿಳಿಯಲು ಮುಂದೆ ಓದಿ.

1. ಬಿಳಿ ಮತ್ತು ಚಿನ್ನದ ಬಣ್ಣ: ಬಿಳಿ ಮತ್ತು ಗೋಲ್ಡನ್ ಬಣ್ಣ ಮಿಶ್ರವಿದ್ದರೆ ಸೀರೆ ಅಂದವಾಗಿ ಕಾಣುವುದು ಮಾತ್ರವಲ್ಲ, ನಾರಿಯ ಅಂದ ಹೆಚ್ಚುವುದು. ಬಿಳಿ ಬಣ್ಣದ ಕಾಟನ್ ಸೀರೆಯಲ್ಲಿ, ಗೋಲ್ಡನ್ ವಿನ್ಯಾಸವಿರುವ ಸೀರೆ ಹೆಚ್ಚಾಗಿ ಕೇರಳದವರ ಸಾಂಪ್ರದಾಯಕವಾದ ಉಡುಗೆಯಾಗಿದೆ. ಈ ಸೀರೆ ಉಡುವಾಗ ಅದಕ್ಕೆ ಕೆಂಪು ಅಥವಾ ಅದೇ ಬಣ್ಣದ ಬ್ಲೌಸ್ ಉತ್ತಮವಾದ ಮ್ಯಾಚಿಂಗ್ ಆಗಿದೆ. ಈ ರೀತಿ ಸೀರೆ ಉಟ್ಟು ಚಿನ್ನದ ಆಭರಣ ಧರಿಸಿದರೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು.
2. ಬಿಳಿ ಬಣ್ಣದ ಶಿಫೋನ್ ಸೀರೆ: ತೆಳು ಬಣ್ಣದ ಶಿಪೋನ್ ಸೀರೆ ತುಂಬಾ ಫ್ಯಾಷನೇಬಲ್ ಆಗಿರುತ್ತದೆ. ಈ ರೀತಿ ರೀತಿ ಸ್ಯಾರಿ ಧರಿಸಿದರೆ ಸರಳವಾದ ಆಭರಣಗಳನ್ನು ಧರಿಸಬೇಕು. ಈ ಸೀರೆ ಯುವತಿಯರಿಗೆ ಹೆಚ್ಚು ಆಕರ್ಷಕವಾಗಿ ಕಾಣುವುದು. ಈ ಸೀರೆ ಉಟ್ಟು ಕೂದಲನ್ನು ಸಡಿಲವಾಗಿ ಬಿಟ್ಟು ಸರಳವಾದ ಅಲಂಕಾರ ಮಾಡಿದರೆ , ಸೀರೆ ಮತ್ತು ಮೇಕಪ್ ನಿಮ್ಮ ಚೆಲುವನ್ನು ಇಮ್ಮಡಿಸುತ್ತದೆ.
3. ಬಿಳಿ ಮತ್ತು ಕಪ್ಪು: ಬಿಳಿ ಮತ್ತು ಕಪ್ಪು ತುಂಬಾ ಒಳ್ಳೆಯ ಕಾಂಬಿನೇಷನ್ ಆಗಿದೆ. ಬಿಳಿ ಬಣ್ಣದ ಸೀರೆಗೆ ಕಪ್ಪು ಬಣ್ಣದ ಬ್ಲೌಸ್ ಧರಿಸಿದರೆ ತುಂಬಾ ಆಕರ್ಷಕವಾಗಿ ಮತ್ತು ಸಾಂಪ್ರದಾಯಕವಗಿ ಕಾಣಬಹುದು. ಬ್ಲೌಸ್ ಅನ್ನು ಮೆಗಾ ಸ್ಲೀವ್ ಬ್ಲೌಸ್ ಆಗಿ ಅಥವಾ ಮೊಣ ಕೈ ಉದ್ದವಿರುವ ಬ್ಲೌಸ್ ಕೂಡ ಧರಿಸಬಹುದು. ಈ ರೀತಿ ಸೀರೆ ಉಟ್ಟಾಗ ಸಾಂಪ್ರದಾಯಕವಾಗಿ ಅಲಂಕಾರ ಮಾಡಬೇಕು.
4. ಬಿಳಿ, ಗೋಲ್ಡನ್ ಮತ್ತು ಹಸಿರು: ಬಿಳಿ ಸೀರೆಯಲ್ಲಿ ಹಸಿರು ಬಾರ್ಡರ್ ಮತ್ತು ಗೋಲ್ಡನ್ ವಿನ್ಯಾಸವಿರುವ ಬ್ಲೌಸ್ ಧರಿಸಿ, ಸಾಂಪ್ರದಾಯಕವಾಗಿ ಅಲಂಕಾರ ಮಾಡಿದರೆ ಶ್ವೇತ ಸುಂದರಿಯಾಗಿ ಕಾಣಬಹುದು.
ಬಿಳಿ ಸೀರೆ ಎಲ್ಲಾ ರೀತಿಯ ಮೈ ಬಣ್ಣದವರಿಗೆ ಒಪ್ಪುವುದರಿಂದ, ಆಕರ್ಷಕ ವಿನ್ಯಾಸದ ಬಿಳಿ ಸೀರೆ ಮಹಿಳೆಯ ಚೆಲುವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.



Click it and Unblock the Notifications
