Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ನಿಮ್ಮ ತುಟಿಯ ಮೇಲಿನ ಹೊಳಪು ಶಾಶ್ವತವಾಗಿರಲಿ!
ಲಿಪ್ ಗ್ಲೋಸ್ ಹಚ್ಚಿದರೆ ತುಟಿ ಹೊಳಪಿನಿಂದ ಕಾಣುವುದರಿಂದ ಮುಖದ ಅಂದ ಹೆಚ್ಚುವುದು. ಆದರೆ ಸಮಸ್ಯೆಯೆಂದರೆ ಲಿಪ್ ಗ್ಲೋಸ್ ಹಚ್ಚಿದ ಸ್ವಲ್ಪ ಹೊತ್ತಿಗೆ ಲಿಪ್ ಗ್ಲೋಸ್ ತುಟಿಯಲ್ಲಿ ಕಾಣುವುದಿಲ್ಲ, ಬೇಗನೆ ಹರಡುತ್ತದೆ ಹಾಗೂ ತುಟಿ ಒಣಗಿದಂತೆ ಕಾಣುವುದು. ಆದ್ದರಿಂದ ಆಗಾಗ ಬಳಸಬೇಕಾಗುತ್ತದೆ. ತುಟಿಗೆ ಹಚ್ಚಿದ ಲಿಪ್ ಗ್ಲೋಸ್ ಹೊಳಪು ತುಂಬಾ ಹೊತ್ತು ಇರಲು ಈ ಕೆಳಗೆ ಹೇಳಿದಂತೆ ಮಾಡಿ. ಇದರಿಂದ ಮುಖ ತಾಜಾತನದ ಚೆಲುವನ್ನು ಪಡೆಯುವುದು.
ಲಿಪ್ ಗ್ಲೋಸ್ ತುಂಬಾ ಹೊತ್ತು ಇರಲು ಟಿಪ್ಸ್:
1. ಕಡಿಮೆ ಹಚ್ಚಬೇಕು: ಲಿಪ್ ಗ್ಲೋಸ್ ಹಚ್ಚುವುದರ ಉದ್ದೇಶ ತುಟಿ ಆಕರ್ಷಕವಾಗಿ ಕಾಣಬೇಕು, ಇದರಿಂದ ಮುಖದ ಅಂದ ಹೆಚ್ಚಬೇಕು. ಇದಕ್ಕಾಗಿ ಲಿಪ್ ಗ್ಲೋಸ್ ಅನ್ನು ತುಂಬಾ ಹಚ್ಚ್ಬೇಕಾಗಿಲ್ಲ, ಸ್ವಲ್ಪ ಹಚ್ಚಿದರೂ ಸಾಕು ತುಟಿ ಆಕರ್ಷಕವಾಗಿ ಕಾಣುವುದು. ಲಿಪ್ ಗ್ಲೋಸ್ ಹಚ್ಚುವಾಗ ತುಟಿಯ ಅಂಚಿನವರೆಗೆ ಹಚ್ಚಬೇಡಿ.

2. ಸ್ಕಿನ್ ಪೌಂಡೇಶನ್: ತುಟಿಗೆ ಲಿಪ್ ಸ್ಟಿಕ್ ಅಥವಾ ಲಿಪ್ ಗ್ಲೋಸ್ ಹಚ್ಚುವ ಮೊದಲು ಸ್ಕಿನ್ ಪೌಂಡೇಶನ್ ಹಚ್ಚಿ ನಂತರ ಲಿಪ್ ಗ್ಲೋಸ್ ಹಚ್ಚಿದರೆ ಲಿಪ್ ಗ್ಲೋಸ್ ತುಂಬಾ ಹೊತ್ತಿನವರೆಗೆ ಇರುತ್ತದೆ.
3. ಪೌಡರ್: ಲಿಪ್ ಗ್ಲೋಸ್ ಹಚ್ಚುವ ಮೊದಲು ತುಟಿಯ ಸುತ್ತ ಪೌಡರ್ ಹಚ್ಚಿ ನಂತರ ಹಚ್ಚಿದರೆ ತುಟಿಯಲ್ಲಿ ಲಿಪ್ ಗ್ಲೋಸ್ ತುಂಬಾ ಹೊತ್ತು ಇರುತ್ತದೆ ಹಾಗೂ ತುಟಿಯಿಂದ ಹೊರಗೆ ಹರಡುವುದಿಲ್ಲ.
4. ಲಿಪ್ ಲೈನರ್: ಲಿಪ್ ಗ್ಲೋಸ್ ಹಚ್ಚುವ ಮೊದಲು ತುಟಿಗೆ ಲಿಪ್ ಲೈನರ್ ಬಳಸಿ, ನಂತರ ಲಿಪ್ ಗ್ಲೋಸ್ ಹಚ್ಚಿದರೆ ತುಟಿಯ ಶೇಪ್ ಆಕರ್ಷಕವಾಗಿ ಕಾಣುವುದು.



Click it and Unblock the Notifications
