Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕಡು ಕೆಂಪಿನ ಮೆಹಂದಿ ಬಣ್ಣಕ್ಕಾಗಿ 6 ಸಲಹೆಗಳು
ಕೈಗೆ ಮೆಹಂದಿ ಹಚ್ಚುವುದು ಎಂದರೆ ಹೆಚ್ಚಿನ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟವಾಗುವುದು. ಅಲ್ಲದೆ ಮದುವೆ ಸಮಾರಂಭಗಳಲ್ಲಿ ಮೆಹಂದಿ ಹಚ್ಚುವುದು ನಮ್ಮ ಸಂಪ್ರದಾಯ ಕೂಡ. ಮದುವೆಯ ಹಿಂದಿನ ದಿನ ಮೆಹಂದಿ ಶಾಸ್ತ್ರ ಅಂತ ಮಾಡಲಾಗುವುದು. ಮದು ಮಗಳು ಅಂದ ಮೇಲೆ ಅವಳ ಕೈಯಲ್ಲಿ ಮೆಹಂದಿಯ ಅಲಂಕಾರ ಇದ್ದರೆ ಮಾತ್ರ ನೋಡಲು ಆಕರ್ಷಣೆ.
ಅದಲ್ಲದೆ ಹಬ್ಬಗಳ ಸಮಯದಲ್ಲಿ, ಫ್ರೆಂಡ್ಸ್ ಮದುವೆಗೆ ಹೋಗುವಾಗ ಕೈಗೆ ಮೆಹಂದಿ ಅಲಂಕಾರ ಮಾಡಿಕೊಳ್ಳುತ್ತೇವೆ. ಆದರೆ ಹೀಗೆ ಮೆಹಂದಿ ಹಚ್ಚಿದಾಗ ಮೆಹಂದಿಯ ಬಣ್ಣ ಸರಿಯಾಗಿ ಕೈಗೆ ಹಿಡಿಯದಿದ್ದರೆ ಕೈ ಆಕರ್ಷಕವಾಗಿ ಕಾಣುವುದಿಲ್ಲ. ಕಡು ಕೆಂಪು ಬಣ್ಣ ಪಡೆದರೆ ಮಾತ್ರ ಆಕರ್ಷಕವಾಗಿ ಕಾಣುವುದು. ಮೆಹಂದಿಯಿಂದ ಬರೆದ ಆಕರ್ಷಕವಾದ ವಿನ್ಯಾಸ ಕಡು ಕೆಂಪಾಗಿ ಕಾಣಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು:

1. ಮೆಹಂದಿ ಎಲೆ ಅಥವಾ ಮೆಹಂದಿ ಪುಡಿಯನ್ನು ಟೀಯಲ್ಲಿ ಹಾಕಿ ಒಂದು ರಾತ್ರಿಯಿಟ್ಟು ಮಾರನೇಯ ದಿನ ಹಾಕಿದರೆ ಮೆಹಂದಿ ಕೈಯಲ್ಲಿ ಚೆನ್ನಾಗಿ ಹಿಡಿದು ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತದೆ.
2. ಮೆಹಂದಿಯ ಬಣ್ಣ ಕಾಫಿ ಬ್ರೌನ್ ಕಲರ್ ಬರಬೇಕೆಂದರೆ ಮೆಹಂದಿ ಪುಡಿ ಜೊತೆ ಸ್ವಲ್ಪ ಕಾಫಿ ಪುಡಿ ಹಾಕಿ ಒಂದು ರಾತ್ರಿಯಿಟ್ಟು ಮಾರನೆಯ ದಿನ ಬೆಳಗ್ಗೆ ಇಟ್ಟರೆ ಸಾಕು.
3. ನಿಂಬೆರಸ ಹಾಗೂ ಸಕ್ಕರೆಯನ್ನು ಹಾಕಿ ಸಿರಪ್ ರೀತಿ ಮಾಡಿ ಅದನ್ನು ಮೆಹಂದಿ ಪುಡಿಗೆ ಹಾಕಿದರೆ ಮೆಹಂದಿ ಕೈಗೆ ಹಾಕಿದಾಗ ಬೇಗನೆ ಕೆಂಪಾಗುತ್ತದೆ.
4. ಮೆಹಂದಿ ಹಾಕಿ ಕೈಯಲ್ಲಿ 2 ಗಂಟೆಗಳವರೆಗೆ ಇಟ್ಟರೆ ಸಾಕು, ಮೆಹಂದಿ ಒಣಗುವಾಗ ಸ್ವಲ್ಪ ನಿಂಬೆ ರಸ ಹಿಂಡಿದರೆ ಸಾಕು. ಈ ರೀತಿ ಮಾಡಿದರೆ ಮೆಹಂದಿ ಬಣ್ಣ ಚೆನ್ನಾಗಿ ಕೈಗೆ ಹಿಡಿಯುತ್ತದೆ.
5. ಕೈಗೆ ನೋವು ನಿವಾರಕ ಕ್ರೀಮ್ ಹಚ್ಚಿ ನಂತರ ಮೆಹಂದಿ ಹಚ್ಚಿದರೆ ಕೈ ತುಂಬಾ ಕೆಂಪಗಾಗುತ್ತದೆ.
6. ಮೆಹಂದಿ ಹಚ್ಚಿ ತೊಳೆದ ನಂತರ ಕೈಗೆ ಕೊಬ್ಬರಿ ಎಣ್ಣೆ ಹಚ್ಚಿದರೆ ಮೆಹಂದಿಯ ಬಣ್ಣ ಮತ್ತಷ್ಟು ಕೆಂಪಾಗಿ ಆಕರ್ಷಕವಾಗಿ ಕಾಣುವುದು.



Click it and Unblock the Notifications
