Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನೀವು ಫೇಸ್ ಕ್ರೀಮ್ ಹಚ್ಚುವ ವಿಧಾನ ಸರಿಯಾಗಿದೆಯೇ?

ಮುಖಕ್ಕೆ ಸ್ವಲ್ಪ ಪ್ರಮಾಣದಲ್ಲಿ ಕ್ರೀಮ್ ಹಚ್ಚಬೇಕು, ತುಂಬಾ ಕ್ರೀಮ್ ಹಚ್ಚಿದರೆ ಅದರಿಂದ ಯಾವ ಪ್ರಯೋಜ ದೊರೆಯುವುದಿಲ್ಲ, ಅದಲ್ಲದೆ ಅದನ್ನು ಹಚ್ಚುವ ವಿಧಾನ ಸರಿಯಾಗಿರಬೇಕು. ಆಗ ಮುಖ ತಾಜಾತನದಿಂದ ಹೊಳೆಯುವುದು ಅಲ್ಲದೆ ಕ್ರೀಮ್ ನ ಪ್ರಯೋಜವನ್ನು ಪರಿಪೂರ್ಣವಾಗಿ ಪಡೆಯಬಹುದು.
ಕ್ರೀಮ್ ಅನ್ನು ಸರಿಯಾಗಿ ಹಚ್ಚುವ ವಿಧಾನ ಹೇಗೆ ಎಂದು ಇಲ್ಲಿ ಹೇಳಲಾಗಿದೆ ನೋಡಿ.
1. ಕೈಯ ಮಧ್ಯ ಬೆರಳಿಗೆ ಕ್ರೀಮ್ ಹಾಕಿ ಅದನ್ನು ಮುಖಕ್ಕೆ ಹಚ್ಚಬೇಕು.
2. ಕ್ರೀಮ್ ಹಚ್ಚುವಾಗ ಕೆನ್ನೆಯ ಮಧ್ಯಭಾಗದಿಂದ ಹಚ್ಚಬೇಕು ಹಾಗೂ ಮೇಲ್ಮುಖವಾಗಿ ಹಚ್ಚಬೇಕು.
3. ನಂತರ ಹಣೆಯ ಮಧ್ಯಕ್ಕೆ ಕ್ರೀಮ್ ಹಚ್ಚಿ ಅದನ್ನು ಹುಬ್ಬಿನ ಕಡೆಗೆ ಹಚ್ಚಬೇಕು. ಈ ರೀತಿ ಹಚ್ಚುವಾಗ ವೃತ್ತಾಕಾರವಾಗಿ ಹಚ್ಚಿ. ನಂತರ ಹುಬ್ಬಿನ ನಡುವಿನಿಂದ ಕೈಯನ್ನು ಮೂಗಿನ ಕಡೆಗೆ ಸರಿಸಬೇಕು.
4. ನಂತರ ಮೂಗಿನ ಮೇಲ್ಭಾಗದಿಂದ ಕೆಳಭಾಗಕ್ಕೆ ಕ್ರೀಮ್ ನಿಂದ ಮಸಾಜ್ ಮಾಡಬೇಕು. ನಂತರ ಮೂಗಿನ ಕೆಳಭಾಗದಲ್ಲಿ ಹಚ್ಚಿ ಹಾಗೇ ಕೈಯನ್ನು ಗಲ್ಲದ ಕಡೆಗೆ ಸರಿಸಬೇಕು. ನಂತರ ಗಲ್ಲವನ್ನು ಕೆಳಮ್ಮುಖವಾಗಿ ಮಸಾಜ್ ಮಾಡಬೇಕು. ನಂತರ ಕುತ್ತಿಗೆಯನ್ನು ಕ್ರೀಮ್ ನಿಂದ ಮಸಾಜ್ ಮಾಡಬೇಕು.
ಈ ವಿಧಾನದಲ್ಲಿ ಮಸಾಜ್ ಮಾಡಿದರೆ ಮುಖಕ್ಕೆ ಲೈಟ್ ಮಸಾಜ್ ಸಿಗುತ್ತದೆ, ಇದರಿಂದ ಮುಖದಲ್ಲಿ ರಕ್ತಸಂಚಲಕ್ಕೆ ಸಹಕಾರಿಯಾಗುವುದು ಇದರಿಂದ ಅಕಾಲಿಕ ನೆರಿಗೆ ಬೀಳುವುದಿಲ್ಲ ಹಾಗೂ ಮುಖದ ಹೊಳಪು ಹೆಚ್ಚುವುದು.



Click it and Unblock the Notifications
