Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕನ್ನಡಕ ಧರಿಸಿ ಆಕರ್ಷಕವಾಗಿ ಕಾಣಲು ಕೆಲ ಸಲಹೆಗಳು

1. ಸರಿಯಾದ ಫ್ರೇಂ ಇರುವ ಕನ್ನಡಕವನ್ನುಆರಿಸಿಕೊಳ್ಳಬೇಕು: ಫ್ರೇಂ (ಕನ್ನಡಕದ ಚೌಕಟ್ಟು) ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶವೆಂದರೆ ಅದು ನಿಮ್ಮ ಮುಖದ ಆಕಾರಕ್ಕೆ ಒಪ್ಪುತ್ತದೆಯೇ ಎಂದು ಪರೀಕ್ಷಿಸಿ ತೆಗೆದುಕೊಳ್ಳಬೇಕು. ಪ್ರತಿಫಲನವಲ್ಲದ ಕೋಟಿಂಗ್ ಇರುವ ಫ್ರೇಂ ಬಳಸುವುದು ತ್ವಚೆಗೆ ಒಳ್ಳೆಯದು. ಮಂದ ಬಣ್ಣ ಇರುವ ಸನ್ ಗ್ಲಾಸ್ ಕಪ್ಪು ಬಣ್ಣದ ತ್ಚಚೆಯವರಿಗೆ ಮತ್ತು ಬಿಳಿ ಬಣ್ಣದ ಅಥವಾ ಸ್ವಲ್ಪ ಹೊಳೆಯುವ ಬಣ್ಣದ ಫ್ರೇಂ ಬಿಳಿ ತ್ವಚೆಯವರಿಗೆ ಚೆನ್ನಾಗಿ ಕಾಣಿಸುವುದು.
2. ಕನ್ನಡಕದ ಬಣ್ಣ ನಿಮ್ಮ ಸೌಂದರ್ಯದ ಪ್ರಭಾವ ಬೀರುತ್ತೆ: ನಿಮಗೆ ಹಳದಿ ಬಣ್ಣದ ಫ್ರೇಂ ಇರುವ ಕನ್ನಡಕ ತುಂಬಾ ಇಷ್ಟವಾಗಿದೆ ಅಂತ ಕೊಳ್ಳುವ ಮೊದಲು ಅದನ್ನು ಧರಿಸಿದರೆ ನಿಮ್ಮ ಮುಖಕ್ಕೆ ಚೆಂದ ಕಾಣುತ್ತದೆಯೇ ಎಂದು ನೋಡಿ ತೆಗೆದುಕೊಳ್ಳಬೇಕು. ಆದ್ದರಿಂದ ಕನ್ನಡಕ ಧರಿಸಿದಾಗ ಮುಖದ ಅಂದ ಹೆಚ್ಚಿಸುವಂತಹ ಕನ್ನಡಕದ ಆಯ್ಕೆ ಒಳ್ಳೆಯದು.
3. ಕನ್ಸೀಲರ್ ಧರಿಸಬೇಕು: ಕನ್ನಡಕ ಧರಿಸುವುದರಿಂದ ಕಣ್ಣಿನ ಸುತ್ತ ಕಪ್ಪು ಬೀಳುವುದು. ಅದನ್ನು ಮರೆ ಮಾಚಲು ಕನ್ಸೀಲರ್ ಬಳಸಬೇಕು. ಕನ್ಸೀಲರ್ ಅನ್ನು ಮೂಗಿಗೆ ಹಚ್ಚಿಕೊಳ್ಳುವುದಿಂದ ಮೂಗು ಆಕರ್ಷಕವಾಗಿ ಎದ್ದು ಕಾಣುವುದು.
4. ಕಣ್ಣು ರೆಪ್ಪೆಗಳ ಅಲಂಕಾರ: ಸನ್ ಗ್ಲಾಸ್ ಧರಿಸುವುದಾದರೆ ಕಣ್ಣು ರೆಪ್ಪೆಗಳಿಗೆ ಅಲಂಕಾರ ಬೇಕಾಗಿಲ್ಲ. ಆದರೆ ದೃಷ್ಟಿ ದೋಷಕ್ಕೆ ಅಥವಾ ತಲೆನೋವಿಗೆ ಬಳಸುವ ಕನ್ನಡಕವಾದರೆ ಕಣ್ಣಿನ ಅಲಂಕಾರ ಮಾಡಿದರೆ ಮುಖ ಆಕರ್ಷಕವಾಗಿ ಕಾಣುವುದು.
5. ಅಪ್ಪರ್ ಐಶ್ಯಾಡೊ: ಕನ್ನಡಕ ಧರಿಸುವುದರ ಮೊದಲು ಐ ಶ್ಯಾಡೊದಿಂದ ಕಣ್ಣಿನ ಮೇಲಿನ ರೆಪ್ಪೆಗಳಿಗೆ ಅಲಂಕಾರ ಮಾಡಿದರೆ ಆಕರ್ಷಕವಾಗಿ ಕಾಣುವುದು. ಈ ರೀತಿ ಹಚ್ಚುವಾಗ ಸ್ವಲ್ಪ ಗಾಢ ಬಣ್ಣದ ಐ ಶ್ಯಾಡೊ ಹಚ್ಚಿದರೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು.



Click it and Unblock the Notifications
