Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ತುಂಬಾ ಕಂಫರ್ಟ್ ಅನಿಸುವ 7 ಕೇಶವಿನ್ಯಾಸಗಳು
ಹಬ್ಬದ ಸಮಯದಲ್ಲಿ ಸ್ವಲ್ಪ ವಿಶೇಷ ಕಾಳಜಿಯಿಂದ ಮೇಕಪ್ ಮಾಡುತ್ತೇವೆ. ಮನೆಗೆ ನೆಂಟರಿಷ್ಟರು ಬರುವಾಗ ಹೊಸ ಡ್ರೆಸ್ ಹಾಕಿ ಅಲಂಕಾರ ಮಾಡಿಕೊಂಡು ಸಂಬ್ರಮದಿಂದ ಓಡಾಡುತ್ತೇವೆ.ಹಬ್ಬದ ಸಮಯದಲ್ಲಿ ಹೆಂಗಸರಿಗೆ ಉಳಿದ ದಿನಕ್ಕಿಂತ ಸ್ವಲ್ಪ ಕೆಲಸ ಅಧಿಕವೇ ಇರುತ್ತದೆ. ಅಲ್ಲದೆ ಮನೆಗೆ ಬಂದ ನೆಂಟರುಗಳನ್ನು ಉಪಚರಿಸಬೇಕು. ಆದ್ದರಿಂದ ಡ್ರೆಸ್ಸಿಂಗ್ ಹಾಗೂ ಮೇಕಪ್ ಕಡೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.
ಹಬ್ಬದ ಸಮಯದಲ್ಲಿ ಸಾಂಪ್ರದಯಕವಾದ ಉಡುಗೆಗಳನ್ನು ಧರಿಸಲಾಗುವುದು. ಈ ಉಡುಗೆಗೆ ತಕ್ಕಂತೆ ಹೇರ್ ಸ್ಟೈಲ್ ಮಾಡಿದರೆ ಹೆಚ್ಚು ಆಕರ್ಷಕವಾಗಿ ಕಾಣುವುದು.. ಈ ಲೇಖನದಲ್ಲಿ 8 ಬಗೆಯೆ ಹೇರ್ ಸ್ಟೈಲ್ ಬಗ್ಗೆ ಹೇಳಲಾಗಿದೆ. ಈ ಹೇರ್ ಸ್ಟೈಲ್ ಮಾಡಿದರೆ ನೋಡಲು ಆಕರ್ಷಕವಾಗಿ ಕಾಣುವಿರಿ ಹಾಗೂ ಕೂದಲು ಕಣ್ಣಿಗೆ ಅಡ್ಡ ಬರದೆ ಕೆಲಸ ಕಾರ್ಯಗಳನ್ನು ಮಾಡುವುದು ಸಲಭವಾಗುವುದು. ಈ ಹಬ್ಬಕ್ಕೆ ಈ ಕೆಳಗಿನ ಹೇರ್ ಸ್ಟೈಲ್ ಗಳನ್ನು ಟ್ರೈ ಮಾಡಬಹುದು.

ಜಡೆ:
ಸ್ವಲ್ಪ ಉದ್ದ ಕೂದಲಿರುವವರು ಸೀರೆ ಅಥವಾ ಚೂಡಿದಾರ್ ಹಾಕಿ ಜಡೆಯನ್ನು ಚೆನ್ನಾಗಿ ಬಾಚಿ ಸಡಿಲವಾಗಿ ಜಡೆ ಹೆಣಿದು ಹೂ ಮುಡಿದರೆ ತುಂಬಾ ಲಕ್ಷಣವಾಗಿ ಕಾಣುವಿರಿ. ಹಬ್ಬದಲ್ಲಿ ಕೂದಲನ್ನು ಗಾಳಿಗೆ ಹಾರಾಡಲು ಬಿಡುವುದಕ್ಕಿಂತ ಹೀಗೆ ಬಾಚುವುದು ಸೂಕ್ತ.

2.ರೋಸ್ ಬಾಲ್:
ಕೂದಲನ್ನು ಚಿತ್ರದಲ್ಲಿ ಕಾಣಿವಂತೆ ಕಟ್ಟಬೇಕು. ನಂತರ ಗುಲಾಬಿ ಹೂಗಳನ್ನು ಮುಡಿಯಬೇಕು ಈ ಹೆರ್ ಸ್ಟೈಲ್ ಅನ್ನು ಫಂಕ್ಷನ್ ಗೆ ಹೋಗುವಾಗಲೂ ಬಳಸಬಹುದು. ಈ ರೀತಿ ಬಾಚಿದರೆ ತುಂಬಾ ಕಂಪರ್ಟ್ ಅನಿಸುವುದು ಹಾಗೂ ನೋಡಲು ಆಕರ್ಷಕವಾಗಿ ಕಾಣುವುದು.

3.ಪಾರ್ಟಡ್ ಬನ್:
ಈ ಕೂದಲಿನ ವಿನ್ಯಾಸ ಸ್ಯಾರಿಗೆ ತುಂಬಾ ಆಕರ್ಷಕವಾಗಿ ಕಾಣುವುದರ ಜೊತೆಗೆ ನಿಮ್ಮ ಮುಖಕ್ಕೆ ಲಕ್ಷ್ಮಿ ಕಳೆಯನ್ನು ನೀಡುತ್ತದೆ. ಈ ಕೇಶ ವಿನ್ಯಾಸವನ್ನು ಸುಲಭದಲ್ಲಿ ಮಾಡಬಹುದಾಗಿದ್ದು ಕೂದಲನ್ನು ತುರುಬು ರೀತಿಯಲ್ಲಿ ಸುತ್ತಿ ಅದಕ್ಕೆ ಕ್ಲಿಪ್ ಹಾಕಿದರೆ ಸಾಕು.

ಹೂವಿನ ತುರುಬು:
ಕೂದಲನ್ನು ಬಾಚಿ ಗಟ್ಟಿಯಾಗಿ ತುರುಬು ಸುತ್ತಿ ಅದಕ್ಕೆ ಹೂವಿನಿಂದ ಅಲಂಕಾರ ಮಾಡಿದರೆ ಸಾಕು. ಈ ಕೇಶ ವಿನ್ಯಾಸ ಎಲ್ಲಾ ರೀತಿಯ ಮುಖದ ಶೇಪ್ ಗೂ ಒಪ್ಪುತ್ತದೆ.

ಗುಂಗುರು ಮಾಡಿ ಕಟ್ಟುವುದು:
ಕೂದಲನ್ನು ಗುಂಗುರು ಮಾಡಿ ಎತ್ತಿ ಉದ್ದದ ಕ್ಲಿಪ್ ಬಳಸಿ ಕೂದಲನ್ನು ಬಿಗಿಯಬೇಕು. ಈ ಕೇಶ ವಿನ್ಯಾಸ ಚೂಡಿ ಅಥವಾ ಕುರ್ತಾಕ್ಕೆ ಚೆನ್ನಾಗಿ ಒಪ್ಪುತ್ತದೆ.

ನೆಟ್ ಬಳಸಿ ಕಟ್ಟುವುದು:
ಕೂದಲನ್ನು ತುರುಬು ಕಟ್ಟಿ ಅದಕ್ಕೆ ಕೂದಲಿಗೆ ಹಾಕುವ ನೆಟ್ ಬಳಸಿ ಕಟ್ಟಿದರೆ ಆಕರ್ಷಕವಾಗಿ ಕಾಣುವುದರ ಜೊತೆಗೆ ಕೂದಲು ಬಿಚ್ಚಿ ಬರುವುದಿಲ್ಲ.

7.ಕೂದಲನ್ನು ಬಿಗಿದು ಕಟ್ಟುವುದು:
ಸ್ವಲ್ಪ ಗಿಡ್ಡ ಕೂದಲಿನವರಿಗೆ ಜಡೆ ಹಾಕಿದರೆ ಚೆಂದ ಕಾಣುವುದಿಲ್ಲ, ಇನ್ನು ತುರುಬು ಕಟ್ಟಲು ಸಾಧ್ಯವಾಗುವುದಿಲ್ಲ. ಅಂತಹವರು ಕೂದಲನ್ನು ಬಾಚಿ ಬ್ಯಾಂಡ್ ನಿಂದ ಬಿಗಿದು ಕಟ್ಟಿದರೆ ಆಕರ್ಷಕವಾಗಿ ಕಾಣುವಿರಿ ಜೊತೆಗ ಕೆಲಸ ಮಾಡುವಾಗ ಕಂಫರ್ಟ್ ಅನಿಸುವುದು.



Click it and Unblock the Notifications
