Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನೇಲ್ ಪಾಲಿಷ್ ದೀರ್ಘ ಕಾಲ ಬಾಳಿಕೆ ಬರಲು 6 ಟಿಪ್ಸ್
ನೇಲ್ ಪಾಲಿಷ್ ಆಯ್ಕೆ ಮಾಡುವುದರಿಂದ ಹಿಡಿದು ಅದನ್ನು ಸಂಗ್ರಹಿಸಿಡುವವರೆಗೆ ಸ್ವಲ್ಪ ಜಾಗೃತಿವಹಿಸಬೇಕಾಗುತ್ತದೆ. ಏಕೆಂದರೆ ನಮಗೆ ಯಾವ ಬಣ್ಣದ ನೇಲ್ ಪಾಲಿಷ್ ಚೆನ್ನಾಗಿ ಕಾಣುತ್ತದೆ ಎಂದು ನೋಡಿ ತೆಗೆದುಕೊಳ್ಳದಿದ್ದರೆ ಹಾಕಿದಾಗ ವಿಚಿತ್ರವಾಗಿ ಕಾಣುತ್ತದೆ. ಚೆನ್ನಾಗಿರುವ ನೇಲ್ ಪಾಲಿಷ್ ಅನ್ನು ಕೊಂಡು ತಂದು ಅದನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿಡದಿದ್ದರೆ ಅದು ಹಾಳಾಗುತ್ತದೆ. ಆದ್ದರಿಂದಲೇ ನೇಲ್ ಪಾಲಿಷ್ ವಿಷಯದಲ್ಲಿ ಸ್ವಲ್ಪ ಜಾಗೃತಿವಹಿಸಬೇಕೆಂದು ಹೇಳಿದ್ದು.
ನೇಲ್ ಪಾಲಿಷ್ ಕೊಂಡು ತಂದರೆ ಅವುಗಳೆನ್ನೆಲ್ಲಾ ಬೇಗನೆ ಖಾಲಿ ಮಾಡಲು ಆಗುವುದಿಲ್ಲ. ಆದ್ದರಿಂದ ಬೆರಳುಗಳಿಗೆ ಹಾಕಿ ತೆಗೆದಿಡುತ್ತೇವೆ. ಹೀಗೆ ತೆಗೆದಿಡುವಾಗ ಸರಿಯಾದ ಕ್ರಮ ಅನುಸರಿಸದಿದ್ದರೆ ನೇಲ್ ಪಾಲಿಷ್ ಗಟ್ಟಿಯಾಗಿ ಹಾಳಾಗುವುದು. ಆದ್ದರಿಂದ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಅವುಗಳನ್ನು ಪಾಲಿಸಿದರೆ ನೇಲ್ ಪಾಲಿಷ್ ಅನ್ನು ದೀರ್ಘ ಕಾಲದವರೆಗೆ ಇಡಬಹುದು.

ಸಲಹೆಗಳು:
1. ನೇಲ್ ಪಾಲಿಷ್ ಅನ್ನು ಪ್ರಿಜ್ ನಲ್ಲಿ ಕೂಡ ಇಡಬಹುದು. ಆದರೆ ಒಂದು ತಿಂಗಳಿಗಿಂತ ಹೆಚ್ಚು ಕಾಲ ಇಟ್ಟರೆ ಗಟ್ಟಿಯಾಗುವುದು.
2. ನೇಲ್ ಪಾಲಿಷ್ ಅನ್ನು ಬಿಸಿಲು ಬೀಳದ ಪ್ರದೇಶದಲ್ಲಿಟ್ಟರೆ ತುಂಬಾ ಕಾಲ ಬಾಳಿಕೆ ಬರುತ್ತದೆ.
3. ನೇಲ್ ಪಾಲಿಷ್ ಅನ್ನು ಕೊಳ್ಳುವಾಗ ಗುಣಮಟ್ಟದ್ದು ತೆಗೆದುಕೊಂಡರೆ ಬಗನೆ ಗಟ್ಟಿಯಾಗುವುದಿಲ್ಲ, ನಂತರ ಫ್ಯಾನ್ ಹಾಕಿ ಅದರ ಕೆಳಗ್ಗೆ ಕೂತು ನೇಲ್ ಪಾಲಿಷ್ ಹಾಕಬೇಡಿ. ಹೀಗೆ ಮಾಡಿದರೆ ಬೇಗನೆ ಒಣಗುತ್ತದೆ.
4. ನೇಲ್ ಪಾಲಿಷ್ ಒಣಗಿದ್ದರೆ ಅದಕ್ಕೆ ಸ್ವಲ್ಪ ನೇಲ್ ಪಾಲಿಷ್ ತಿನ್ನರ್ ಹಾಕಿ ಬಳಕೆ ಮಾಡಬಹುದು.
5. ಅಲ್ಲದಿದ್ದರೆ ಗಟ್ಟಿಯಾದ ನೇಲ್ ಪಾಲಿಷ್ ಗೆ ಪೆಟ್ರೋಲಿಯಂ ಜೆಲ್ ಹಾಕಿ ಚೆನ್ನಾಗಿ ಅಲುಗಾಡಿಸಿದರೆ ನೇಲ್ ಪಾಲಿಷ್ ಅನ್ನು ಬಳಕೆ ಮಾಡಬಹುದು.
6. ನೇಲ್ ಪಾಲಿಷ್ ನ ಮುಷ್ಷಳ ತೆಗೆಯಲು ಸಾಧ್ಯವಾಗದಿದ್ದರೆ ಅದರ ಸುತ್ತ ಸ್ವಲ್ಪ ನೇಲ್ ಪಾಲಿಷ್ ರಿಮೋವರ್ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟಬೇಕು. ಈ ರೀತಿ ಮಾಡಿದರೆ ನೇಲ್ ಪಾಲಿಷ್ ಮುಚ್ಚಳನ್ನು ಸುಲಭದಲ್ಲಿ ಬಿಚ್ಚಬಹುದು.



Click it and Unblock the Notifications
