Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತುಟಿಗೆ ಮಾತ್ರವಲ್ಲ, ಮುಖದ ಮೇಕಪ್‌ಗೂ ಲಿಪ್‌ಸ್ಟಿಕ್!
ತುಟಿಯ ಅಂದ ಹೆಚ್ಚಿಸಲು ಲಿಪ್‌ಸ್ಟಿಕ್ ಬಳಸುವುದು ಸಹಜ. ಮುಖಕ್ಕೆ ಕ್ರೀಮ್, ಬ್ಲಷರ್ , ಬಿಂದಿ ಅಂತ ಹಾಕಿ ಮೇಕಪ್ ಪೂರ್ಣವಾದ ಮೇಲೆ ಲಿಪ್‌ಸ್ಟಿಕ್ ಟಚ್ ಕೊಡುತ್ತೇವೆ. ಮೇಕಪ್ ಮಾಡಿ ಲಿಪ್‌ಸ್ಟಿಕ್ ಹಾಕದೇ ಹೋದರೂ ನಡೆಯುತ್ತೆ. ಆದರೆ ಲಿಪ್‌ಸ್ಟಿಕ್ ಹಾಕಿ ಮೇಕಪ್ ಮಾಡದಿದ್ದರೆ ಮುಖದಲ್ಲಿ ಮೇಕಪ್ ಅಪೂರ್ಣವಾದಂತೆ ಕಾಣುವುದು.
ಕೆಲವೊಮ್ಮೆ ಪಾರ್ಟಿಗೆ ಅಂತ ದೂರದ ಸಂಬಂಧಿಕರಲ್ಲಿಗೆ ಹೋಗಿರುತ್ತೇವೆ. ಆದರೆ ಮೇಕಪ್ ಸಾಧನಗಳಾದ ಬ್ಲಷರ್, ಬಿಂದಿಯೆಲ್ಲಾ ತರುವುದಕ್ಕೆ ಮರೆತು ಹೋಗಿರುತ್ತದೆ, ಬ್ಯಾಗಿನಲ್ಲಿ ಲಿಪ್‌ಸ್ಟಿಕ್ ಮಾತ್ರ ಇರುತ್ತದೆ. ಈ ಸಮಯದಲ್ಲಿ ಅಯ್ಯೋ ಮೇಕಪ್ ಇಲ್ಲದೆ ಹೇಗಪ್ಪಾ ಪಾರ್ಟಿಗೆ ಹೋಗುವುದು ಅಂತ ಚಿಂತಿಸಬೇಡಿ. ಏಕೆಂದರೆ ಲಿಪ್‌ಸ್ಟಿಕ್ ಒಂದಿದ್ದರೆ ಸಾಕು, ಮುಖದ ಅಂದ ಹೆಚ್ಚಿಸಬಹುದು. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ.

1. ಬ್ಲಷರ್: ಸಂಬಂಧಿಕರ ಮನೆಗೆ ಪಾರ್ಟಿಗೆ, ಅವರ ಮನೆಯಲ್ಲಿ ಹೋಗಿ ಮೇಕಪ್ ಮಾಡುವ ಅಂತ ಬೇಗನೆ ಹೊರಟು ಬಂದಿರುತ್ತೀರಿ. ಆದರೆ ಅಲ್ಲಿ ಹೋಗಿ ಮೇಕಪ್ ಬಾಕ್ಸ್ ನೋಡುವಾಗ ಬ್ಲಷರ್ ತಂದಿಲ್ಲ ಅಂತ ಗೊತ್ತಾಗುತ್ತದೆ. ಈ ಸಂದರ್ಭದಲ್ಲಿ ಬ್ಲಷರ್ ಇಲ್ಲದೆ , ಲಿಪ್‌ಸ್ಟಿಕ್‌ನಿಂದ ಬ್ಲಷರ್ ಲುಕ್ ಕೊಡಬಹುದು. ಅದಕ್ಕಾಗಿ ಲಿಪ್‌ಸ್ಟಿಕ್ ಅನ್ನು ಹೆಬ್ಬೆರಳಿಗೆ ತೆಳುವಾಗಿ ಉಜ್ಜಿ , ಅದನ್ನು ಕೆನ್ನೆಗೆ ಉಜ್ಜಬೇಕು. ಈ ರೀತಿ ಮಾಡಿದರೆ ಕೆನ್ನೆ ಬ್ಲಷರ್ ಹಾಕಿದ ಚೆಲುವನ್ನು ಪಡೆಯುವುದು.
2. ಐ ಶ್ಯಾಡೊ: ಲಿಪ್ ಸ್ಟಿಕ್ ಅನ್ನು ಐ ಶ್ಯಾಡೊ ಆಗಿ ಕೂಡ ಬಳಸಬಹುದು. ಈ ರೀತಿ ಬಳಸುವಾಗ ಮೊದಲು ನ್ಯೂಡ್ ಕಲರ್ ಲಿಪ್‌ಸ್ಟಿಕ್ ಅನ್ನು ಮೊದಲು ಹಚ್ಚಿ , ನಂತರ ತೆಳು ಕೆಂಪು ಅಥವಾ ಕಂದು ಬಣ್ಣದ ಲಿಪ್‌ಸ್ಟಿಕ್ ಅನ್ನು ಐ ಶ್ಯಾಡೊವಾಗಿ ಬಳಸಬಹುದು.
3. ಬಿಂದಿ: ಲಿಪ್‌ಸ್ಟಿಕ್ ಹಚ್ಚಿ ಅದೇ ಬಣ್ಣದ ಬಿಂದಿ ಹಚ್ಚಿದರೆ ತುಂಬಾ ಆಕರ್ಷಕವಾಗಿ ಕಾಣುವುದು. ಲಿಪ್‌ಸ್ಟಿಕ್‌ನಿಂದ ಚುಕ್ಕಿ ಹಾಕಬಹುದೇ ಹೊರತು, ಅದರಿಂದ ವಿನ್ಯಾಸ ಮಾಡಲು ಹೋಗಬಾರದು.
4. ಬಿಳಿ ಕೂದಲನ್ನು ಮರೆಮಾಚಲು: ಪಾರ್ಟಿಗೆ ಹೋಗಬೇಕೆಂದು ಅಲಂಕಾರ ಮುಗಿಸಿ ಕನ್ನಡಿ ಮುಂದೆ ನಿಂತಾಗ ಬಿಳಿ ಕೂದಲೊಂದು ಮಿಂಚುತ್ತಿದ್ದರೆ ನಿರಾಸೆ ಆಗುತ್ತದೆ. ಹಾಗಂತ ಆ ಕೂದಲನ್ನು ಕೀಳಬೇಡಿ, ಅದರ ಬದಲು ಕಂದು ಬಣ್ಣದ ಲಿಪ್‌ಸ್ಟಿಕ್ ನಿಂದ ಆ ಕೂದಲನ್ನು ಉಜ್ಜಿದರೆ ಸಾಕು ಬಿಳಿ ಕೂದಲು ಮರೆಮಾಚುವುದು.



Click it and Unblock the Notifications
