Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಾರಿಯ ಅಂದ ಹೆಚ್ಚಿಸುವ ನಾಸಿಕದ ಮೇಕಪ್

ಆದರೆ ಮೂಗಿನ ಅಂದ ಹೆಚ್ಚಿಸಲು ಮೇಕಪ್ ಶೇಡ್ಸ್ ಇವೆ. ಅವುಗಳನ್ನು ಬಳಸಿ ನಿಮ್ಮ ಮುಖದ ಅಂದ ಹೆಚ್ಚಿಸುವ ರೀತಿಯಲ್ಲಿ ಮೂಗಿನ ಮೇಕಪ್ ಮಾಡುವುದು ಹೇಗೆ ತಿಳಿಯಲು ಮುಂದೆ ಓದಿ.
1. ಸ್ವಲ್ಪ ಅಗಲವಾದ ಮೂಗು: ಸ್ವಲ್ಪ ಅಗಲವಾದ ಮೂಗು ಹೊಂದಿದ್ದರೆ ಮುಖದಲ್ಲಿ ಮೂಗೇ ಎದ್ದು ಕಾಣುತ್ತದೆ. ಆದ್ದರಿಂದ ಅಂತಹವರು ಮೇಕಪ್ ಮಾಡುವಾಗ ಈ ರೀತಿ ಮಾಡಿದರೆ ಒಳ್ಳೆಯದು.
ಮೇಕಪ್ ಶೇಡ್ಸ್ ಫೌಂಡೇಶನ್ ಅನ್ನು ಗಾಢವಾಗಿ ಮೂಗಿಗೆ ಹಚ್ಚಬೇಕು. ಈ ಫೌಂಡೇಶನ್ ಹಚ್ಚುವಾಗ ಮೂಗಿನ ಎರಡು ಬದಿಯಲ್ಲಿ ಇಂಗ್ಲೀಷ್ ಅಕ್ಷರ 'c' ಆಕಾರದಲ್ಲಿ ಹಚ್ಚಬೇಕು. ಫೌಂಡೇಶನ್ ಅನ್ನು ಕಣ್ಣಿನ ಕೆಳಭಾಗದಿಂದ ಮೂಗಿನ ತುದಿಯವರೆಗೆ ಹಚ್ಚಬೇಕು. ಈ ರೀತಿ ಹಚ್ಚಿದರೆ ಮೂಗು ಅಗಲವಾಗಿ ಕಾಣುವುದಿಲ್ಲ.
2. ಸಪೂರ ಮೂಗು: ಉದ್ದದ ಮೂಗಿನವರು ಅಗಲದ ಮೂಗಿನವರಿಗೆ ವಿರುದ್ಧವಾದ ಮೇಕಪ್ ಮಾಡಬೇಕು. ಗಾಢವಾದ ಶೇಡ್ಸ್ ಬಳಸಿ ಮೂಗಿನ ಮಧ್ಯ ಭಾಗಕ್ಕೆ ಹಚ್ಚಬೇಕು. ನಂತರ ಸುತ್ತಲೂ ತೆಳುವಾದ ಫೌಂಡೇಶನ್ ಹಚ್ಚಬೇಕು. ಈ ರಿತಿ ಮಾಡಿದರೆ ಮೂಗು ಸ್ವಲ್ಪ ದಪ್ಪವಾಗಿ ಕಾಣುವುದು.
3. ಚಪ್ಪಟೆ ಮೂಗು: ಈ ರೀತಿ ಮೂಗು ಹೊಂದಿರುವವರು ಮೂಗಿನ ಮಧ್ಯ ಭಾಗದಲ್ಲಿ ಗಾಢವಾದ ಶೇಡ್ಸ್ ಬಳಸಿ ಮೇಕಪ್ ಮಾಡುವುದರಿಂದ ಮೂಗು ಮುಖದಲ್ಲಿ ಎದ್ದು ಕಾಣುವುದು.
4. ಉದ್ದದ ಮೂಗು: ಉದ್ದದ ಮೂಗು ಹೊಂದಿರುವವರು ಕನ್ಸೀಲರ್ ಅಥವಾ ಫೌಂಡೇಶನ್ ಮೂಗಿನ ತುದಿಯಲ್ಲಿ ಮಾತ್ರ ಹಚ್ಚಬೇಕು. ಈ ಫೌಂಡೇಶನ್ ನಿಮ್ಮ ತ್ವಚೆ ಬಣ್ಣಕ್ಕಿಂತ ಸ್ವಲ್ಪ ಗಾಢವಾದ ಬಣ್ಣವನ್ನು ಹೊಂದಿರಬೇಕು. ನಂತರ ಸಾಮಾನ್ಯವಾದ ಮೇಕಪ್ ವಿಧಾನ ಅನುಸರಿಸಿದರೆ ಮೂಗು ಹೆಚ್ಚು ಉದ್ದವಾಗಿ ಕಾಣುವುದಿಲ್ಲ.
ಸಲಹೆ: ಈ ರೀತಿ ಮೇಕಪ್ ಮಾಡುವಾಗ ಮಾಯಿಶ್ಚರೈಸರ್ ಬಳಸಬಾರದು.
ಫೌಂಡೇಶನ್ ಪೌಡರ್ ಅನ್ನು ಪರ್ಸ್ ನಲ್ಲಿಯೆ ಇಟ್ಟುಕೊಳ್ಳುವುದು ಒಳ್ಳೆಯದು. ಇದರಿಂದ ಆಗಾಗ ಮೇಕಪ್ ಟಚ್ ಕೊಡಬಹುದು.



Click it and Unblock the Notifications
